ಮಾರುತಿ ಸುಜುಕಿ ಸಿಎನ್‌ಜಿ ಕಾರುಗಳಿಗೆ ಹೆಚ್ಚಿದ ಬೇಡಿಕೆ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಕಂಪನಿಯ ಯಾವುದೇ ಕಾರುಗಳ ವಿತರಣೆ ಪಡೆಯಲು ಕಾಯುವ ಅವಶ್ಯಕತೆಯಿಲ್ಲ. ಮಾರುತಿ ಸುಜುಕಿ ಕಂಪನಿಯು ತನ್ನ ಹಲವು ಕಾರುಗಳನ್ನು ಸಿಎನ್‌ಜಿ ಮಾದರಿಯಲ್ಲಿ ಮಾರಾಟ ಮಾಡುತ್ತದೆ.

ಮಾರುತಿ ಸುಜುಕಿ ಸಿಎನ್‌ಜಿ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಮಾರುತಿ ಸುಜುಕಿ ಕಂಪನಿಯ ಸಿಎನ್‌ಜಿ ಕಾರುಗಳಿಗೆ 4ರಿಂದ 5 ತಿಂಗಳ ಕಾಲ ಕಾಯಬೇಕಾಗುತ್ತದೆ ಎಂದು ವರದಿಯಾಗಿದೆ. ಸದ್ಯಕ್ಕೆ ಸಿಎನ್‌ಜಿ ಮಾದರಿಗಳನ್ನು ಪೆಟ್ರೋಲ್, ಡೀಸೆಲ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಎಲೆಕ್ಟ್ರಿಕ್ ಕಾರುಗಳ ಮಾರಾಟ ಪ್ರಮಾಣವು ಹೆಚ್ಚಾಗಿಲ್ಲ. ಜೊತೆಗೆ ಹಲವು ನಗರಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟವನ್ನು ಆರಂಭಿಸಿಲ್ಲ.

ಮಾರುತಿ ಸುಜುಕಿ ಸಿಎನ್‌ಜಿ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಈ ಕಾರಣಕ್ಕೆ ಮಾರುತಿ ಸುಜುಕಿ ಕಂಪನಿಯು ಹೆಚ್ಚು ಸಂಖ್ಯೆಯಲ್ಲಿ ಸಿಎನ್‌ಜಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇದರಿಂದಾಗಿ ಹಬ್ಬದ ವೇಳೆ ಸಿಎನ್‌ಜಿ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಕಾಯುವ ಅವಧಿಯೂ ಹೆಚ್ಚಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮಾರುತಿ ಸುಜುಕಿ ಸಿಎನ್‌ಜಿ ಕಾರುಗಳಿಗೆ ಹೆಚ್ಚಿದ ಬೇಡಿಕೆ

ವ್ಯಾಗನ್ಆರ್ ಸಿಎನ್‌ಜಿಯು ಎರಡು ತಿಂಗಳ ಕಾಯುವ ಅವಧಿಯನ್ನು ಹೊಂದಿದ್ದರೆ, ಎರ್ಟಿಗಾ ಸಿಎನ್‌ಜಿ ನಾಲ್ಕು ತಿಂಗಳ ಕಾಯುವ ಅವಧಿಯನ್ನು ಹೊಂದಿದೆ. ಈ ಕಾಯುವ ಅವಧಿಯು ಕಾರಿನ ಬಣ್ಣವನ್ನು ಅವಲಂಬಿಸಿದೆ. ಎರ್ಟಿಗಾ ಸಿಎನ್‌ಜಿಗೆ ಪರ್ಯಾಯ ವ್ಯವಸ್ಥೆ ಇಲ್ಲವಾದ ಕಾರಣ ಗ್ರಾಹಕರು ಕಾಯಬೇಕಾಗಿದೆ.

ಮಾರುತಿ ಸುಜುಕಿ ಸಿಎನ್‌ಜಿ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಗ್ರಾಹಕರು ವ್ಯಾಗನ್ಆರ್ ಸಿಎನ್‌ಜಿಗೆ ಬದಲಿಗೆ ಸೆಲೆರಿಯೊ ಸಿಎನ್‌ಜಿಯನ್ನು ಆರಿಸಿಕೊಳ್ಳಬಹುದು. ಸೆಲೆರಿಯೊ ಕೇವಲ 15 - 20 ದಿನಗಳ ಕಾಯುವ ಅವಧಿಯನ್ನು ಹೊಂದಿದೆ. ಈ ಕಾರಿನ ಬೆಲೆ ವ್ಯಾಗನ್ಆರ್ ಕಾರಿಗಿಂತ ಸ್ವಲ್ಪ ದುಬಾರಿಯಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮಾರುತಿ ಸುಜುಕಿ ಸಿಎನ್‌ಜಿ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಆದರೆ ಈ ಕಾರು ವ್ಯಾಗನ್ಆರ್ ಕಾರಿನಷ್ಟೇ ಮೈಲೇಜ್ ನೀಡುತ್ತದೆ. ಮಾರುತಿ ಸುಜುಕಿ ಕಂಪನಿಯು ಎಸ್-ಪ್ರೆಸ್ಸೊ ಹಾಗೂ ಆಲ್ಟೊ ಸಿಎನ್‌ಜಿ ಮಾದರಿಗಳನ್ನು ಸಹ ಮಾರಾಟ ಮಾಡುತ್ತದೆ. ಮಾರುತಿ ಸುಜುಕಿ ಮಾತ್ರವಲ್ಲದೇ ಹ್ಯುಂಡೈ ಕಂಪನಿಯು ಸಹ ತನ್ನ ಗ್ರ್ಯಾಂಡ್ ಐ 10 ನಿಯೋಸ್ ಕಾರನ್ನು ಸಿಎನ್‌ಜಿ ಮಾದರಿಯಲ್ಲಿ ಮಾರಾಟ ಮಾಡುತ್ತದೆ.

ಮಾರುತಿ ಸುಜುಕಿ ಸಿಎನ್‌ಜಿ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಮಾರುತಿ ಸುಜುಕಿ ಕಂಪನಿಯು ದೀಪಾವಳಿಯ ಸಂದರ್ಭದಲ್ಲಿ ಆಲ್ಟೊ, ಸೆಲೆರಿಯೊ ಹಾಗೂ ವ್ಯಾಗನ್ಆರ್ ಕಾರುಗಳ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಕಂಪನಿಯು ವಿಶೇಷ ಆವೃತ್ತಿಯ ಮಾದರಿಗಳೊಂದಿಗೆ ಪರಿಕರಗಳ ಪ್ಯಾಕೇಜ್ ಅನ್ನು ಸಹ ಬಿಡುಗಡೆ ಮಾಡಿದೆ. ಗ್ರಾಹಕರು ಕಾರನ್ನು ಖರೀದಿಸುವುದರ ಜೊತೆಗೆ ತಮ್ಮ ಆಯ್ಕೆಗೆ ಅನುಸಾರವಾಗಿ ಕಸ್ಟಮೈಸ್ ಮಾಡಿಕೊಳ್ಳಬಹುದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮಾರುತಿ ಸುಜುಕಿ ಸಿಎನ್‌ಜಿ ಕಾರುಗಳಿಗೆ ಹೆಚ್ಚಿದ ಬೇಡಿಕೆ

ವಿಶೇಷ ಆವೃತ್ತಿಯ ಆಲ್ಟೊ ಕಾರನ್ನು ಪಯೋನೀರ್ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂನೊಂದಿಗೆ ಬಿಡುಗಡೆಗೊಳಿಸಲಾಗಿದೆ. ಇದರ ಜೊತೆಗೆ ಕೆನ್ ವುಡ್ ಸ್ಪೀಕರ್, ಹೊಸ ಡ್ಯುಯಲ್ ಟೋನ್ ಸೀಟ್ ಕವರ್, ಸ್ಟೀಯರಿಂಗ್ ವ್ಹೀಲ್ ಕವರ್ ಸೇರಿದಂತೆ ಹಲವು ಹೊಸ ಉಪಕರಣಗಳನ್ನು ಸೇರಿಸಲಾಗಿದೆ. ವಿಶೇಷ ಆವೃತ್ತಿಯ ಮಾರುತಿ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರು ಸೋನಿ ಕಂಪನಿಯ ಡಬಲ್ ಡೀನ್ ಆಡಿಯೊ ಮ್ಯೂಸಿಕ್ ಸಿಸ್ಟಂ ಬ್ಲೂಟೂತ್‌ ಅನ್ನು ಹೊಂದಿದೆ.

ಮಾರುತಿ ಸುಜುಕಿ ಸಿಎನ್‌ಜಿ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಈ ಕಾರು ಹೊಸ ಸೀಟ್ ಕವರ್, ಪಿಯಾನೋ ಬ್ಲ್ಯಾಕ್ ಸೈಡ್ ಮೋಲ್ಡಿಂಗ್ ಹಾಗೂ ಡಿಸೈನರ್ ಮ್ಯಾಟ್‌ಗಳನ್ನು ಹೊಂದಿದೆ. ಈ ವಿಶೇಷ ಕಿಟ್‌ನ ಬೆಲೆಯನ್ನು ಮಾರುತಿ ಸುಜುಕಿ ಕಂಪನಿಯು ಆಲ್ಟೊ ಕಾರಿಗೆ ರೂ.25,490 ಹಾಗೂ ಸೆಲೆರಿಯೊ ಕಾರಿಗೆ ರೂ.25,990 ನಿಗದಿ ಪಡಿಸಿದೆ. ಕಂಪನಿಯು ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯ ಕಾರುಗಳನ್ನು ಮಾರಾಟ ಮಾಡಿತ್ತು. ಈ ತಿಂಗಳು ಸಹ ಇನ್ನಷ್ಟು ಕಾರುಗಳನ್ನು ಮಾರಾಟ ಮಾಡುವ ನಿರೀಕ್ಷೆಯಲ್ಲಿದೆ.

Most Read Articles

Kannada
English summary
Maruti Suzuki CNG cars waiting period increased upto 4 months. Read in Kannada.
Story first published: Friday, November 13, 2020, 15:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X