ಭಾರತೀಯ ಸೇನೆಗೆ ಜಿಪ್ಸಿ ವಿತರಿಸಿದ ಮಾರುತಿ ಸುಜುಕಿ

ಭಾರತದ ರಸ್ತೆಗಳಲ್ಲಿ 34 ವರ್ಷಗಳ ಕಾಲ ರಾಜನಾಗಿ ಮೆರೆದಿದ್ದ ಮಾರುತಿ ಸುಜುಕಿ ಜಿಪ್ಸಿಯನ್ನು ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಸ್ಥಗಿತಗೊಳಿಸಲಾಗಿತ್ತು. ಮಾರುತಿ ಸುಜುಕಿ ಕಂಪನಿಯ ಈ ಜಿಪ್ಸಿ ಆಫ್ ರೋಡ್ ಪ್ರಿಯರ ಮೆಚ್ಚಿನ ಮಿನಿ ಎಸ್‍ಯುವಿಯಾಗಿತ್ತು.

ಭಾರತೀಯ ಸೇನೆಗೆ ಜಿಪ್ಸಿ ವಿತರಿಸಿದ ಮಾರುತಿ ಸುಜುಕಿ

ಅಪಘಾತಗಳು ಸಂಭವಿಸಿದಾಗ ಹೆಚ್ಚಿನ ಪ್ರಕರಣದಲ್ಲಿ ಪ್ರಾಣ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ವಾಹನಗಳು ಕನಿಷ್ಠ ಸುರಕ್ಷತಾ ಮಾನದಂಡವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಕಾರು ಉತ್ಪಾದಕಾ ಕಂಪನಿಗಳಿಗೆ ಸೂಚಿಸಿತು. ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ಹೊಸ ಸುರಕ್ಷತಾ ಮಾನದಂಡವನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿತು.

ಭಾರತೀಯ ಸೇನೆಗೆ ಜಿಪ್ಸಿ ವಿತರಿಸಿದ ಮಾರುತಿ ಸುಜುಕಿ

ಕನಿಷ್ಠ ಸುರಕ್ಷತಾ ಮಾನದಂಡ ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ಜಿಪ್ಸಿ ಮಿನಿ ಎಸ್‍ಯುವಿಯನ್ನು ಮಾರುತಿ ಸುಜುಕಿ ಕಂಪನಿ ಕೆಲವೊಂದು ಬದಲಾವಣೆ ಮಾಡಿ ರಸ್ತೆಗೆ ಇಳಿಸಲು ಪ್ರಯತ್ನ ನಡೆಸಿತ್ತು. ಆದರೆ ಹೊಸ ರಕ್ಷಣೆ ಮತ್ತು ಕ್ರ್ಯಾಶ್ ಟೆಸ್ಟ್ ನಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಜಿಪ್ಸಿ ಕಾರಿನ ಉತ್ಪಾದನೆಯನ್ನೇ ಸ್ಥಗಿತಗೊಳಿಸಿತು.

MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಭಾರತೀಯ ಸೇನೆಗೆ ಜಿಪ್ಸಿ ವಿತರಿಸಿದ ಮಾರುತಿ ಸುಜುಕಿ

1985ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿ ಬಿಡುಗಡೆಯಾಗಿತ್ತು. ಬಿಡುಗಡೆಯಾದಾಗಿನಿಂದಲೂ ಮಾರುತಿ ಸುಜುಕಿ ಜಿಪ್ಸಿ ತನ್ನ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ 34 ವರ್ಷಗಳ ಕಾಲ ಭಾರತೀಯ ಮಾರುಕಟ್ಟೆಯಲ್ಲಿ ಕಮಾಲ್ ಮಾಡಿತ್ತು.

ಭಾರತೀಯ ಸೇನೆಗೆ ಜಿಪ್ಸಿ ವಿತರಿಸಿದ ಮಾರುತಿ ಸುಜುಕಿ

ಮಾರುತಿ ಜಿಪ್ಸಿಯನ್ನು ಅತಿ ಹೆಚ್ಚು ಖರೀದಿಸುತ್ತಿದ್ದ ಭಾರತೀಯ ಸೇನೆಯು ಅದನ್ನು ಬದಲಾಯಿಸಿ ಟಾಟಾ ಸಫಾರಿ ಸ್ಟ್ರೋಮ್ ಅನ್ನು ಖರೀದಿಸುತ್ತಿದ್ದರು. ಆದರೆ ಮತ್ತೆ ಭಾರತೀಯ ಸೇನೆಯು ಹೊಸದಾಗಿ ಜಿಪ್ಸಿಯನ್ನು ಖರೀದಿಸಲು ಮುಂದಾಗಿ 3,051 ಯುನಿಟ್ ಗಳಿಗಾಗಿ ಆರ್ಡರ್ ನೀಡಿದ್ದರು.

MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಭಾರತೀಯ ಸೇನೆಗೆ ಜಿಪ್ಸಿ ವಿತರಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಭಾರತದ ಸೇನೆಯಿಂದ ಜಿಪ್ಸಿಯ ಆರ್ಡರ್ ಪಡೆದಿರುವುದಕ್ಕೆ ಜಿಪ್ಸಿಯ ಉತ್ಪಾದನೆಯನ್ನು ಪ್ರಾರಂಭಿಸಿದ್ದರು. ಇದರಂತೆ ಜಿಪ್ಸಿಯನ್ನು ಮಾರುತಿ ಸುಜುಕಿ ಕಂಪನಿಯು ಭಾರತೀಯ ಸೇನೆಗೆ ಹಂತ ಹಂತವಾಗಿ ವಿತರಿಸುತ್ತಿದೆ.

ಭಾರತೀಯ ಸೇನೆಗೆ ಜಿಪ್ಸಿ ವಿತರಿಸಿದ ಮಾರುತಿ ಸುಜುಕಿ

ಇದರ ಭಾಗವಾಗಿ ಮೊದಲ ಹಂತದಲ್ಲಿ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಜಿಪ್ಸಿ 70 ಯುನಿ‍ಟ್‍‍ಗಳನ್ನು ವಿತರಿಸಿದೆ. ಇನ್ನು ಎರಡನೇ ಹಂತದಲ್ಲಿ ಕಳೆದ ಜೂನ್ ತಿಂಗಳಲ್ಲಿ 718 ಜಿಪ್ಸಿಯನ್ನು ಭಾರತೀಯ ಸೇನೆಗೆ ಮಾರುತಿ ಸುಜುಕಿ ಕಂಪನಿಯು ವಿತರಿಸಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಭಾರತೀಯ ಸೇನೆಗೆ ಜಿಪ್ಸಿ ವಿತರಿಸಿದ ಮಾರುತಿ ಸುಜುಕಿ

ಆದರೆ ಈ ಐಕಾನಿಕ್ ಆಫ್ ರೋಡರ್ ಜಿಪ್ಸಿ ಕೇವಲ ಭಾರತೀಯ ಸೇನೆಗೆ ಮಾತ್ರ ಸಿಮೀತವಾಗಿರುತ್ತದೆ. ಅದನ್ನು ಇತರ ಗ್ರಾಹಕರಿಗೆ ಮಾರಾಟ ಮಾಡಲಾಗುವುದಿಲ್ಲ. ಮಾರುತಿ ಜಿಪ್ಸಿ ಸುರಕ್ಷತಾ ನಿಯಮಕ್ಕೆ ಅನುಸರವಾಗಿಲ್ಲ ಮತ್ತು ಜಿಪ್ಸಿ ಜಿ13, 1.3 ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸರವಾಗಿ ನವೀಕರಿಸುವಲ್ಲಿ ವಿಫಲವಾಗಿದೆ.

ಭಾರತೀಯ ಸೇನೆಗೆ ಜಿಪ್ಸಿ ವಿತರಿಸಿದ ಮಾರುತಿ ಸುಜುಕಿ

ಆದರೆ ಈ ನಿಯಮಗಳು ಸೈನ್ಯಕ್ಕೆ ನೀಡುವ ವಾಹನದಲ್ಲಿ ಅನುಸರಿಸುವುದಿಲ್ಲ. ಯಾಕೆಂದರೆ ಈ ನಿಯಮಗಳು ಸೈನ್ಯದ ವಾಹನಗಳಿಗೆ ಅನ್ವಯವಾಗುವುದಿಲ್ಲ. ಮಾರುತಿ ಸುಜುಕಿ ಜಿಪ್ಸಿ ಬದಲಾಗಿ ತನ್ನ ಉತ್ತರಾಧಿಕಾರಿ ಎಂದು ಕರೆಯಬಹುದಾದ ಮಾರುತಿ ಸುಜುಕಿ ಜಿಮ್ನಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಯೋಜಿಸಿದೆ.

ಭಾರತೀಯ ಸೇನೆಗೆ ಜಿಪ್ಸಿ ವಿತರಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಜಿಮ್ನಿ ಮಿನಿ-ಎಸ್‌ಯುವಿಯನ್ನು ಇತ್ತೀಚೆಗೆ ನಡೆದ 2020ರ ಆಟೋ ಎಕ್ಸ್​ಪೋದಲ್ಲಿ ಅನಾವಣಗೊಳಿಸಿದ್ದರು. ಮಿನಿ-ಎಸ್‌ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

Article Published On: Saturday, July 11, 2020, 12:16 [IST]
English summary
Maruti Suzuki Delivers 718 Units Of Gypsy To Indian Army. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+