ಬಿಎಸ್-6 ವೈಶಿಷ್ಟ್ಯತೆಯ ಡಿಜೈರ್ ಟೂರ್ ಎಸ್ ಸಿಎನ್‌ಜಿ ಆವೃತ್ತಿ ಬಿಡುಗಡೆ

ಮಾರುತಿ ಸುಜುಕಿ ಕಂಪನಿಯು ಬಿಎಸ್-6 ವೈಶಿಷ್ಟ್ಯತೆಗೆ ಅನುಗುಣವಾಗಿ ತನ್ನ ಪ್ರಮುಖ ಪ್ಯಾಸೆಂಜರ್ ಕಾರು ಮಾದರಿಗಳನ್ನು ಉನ್ನತೀಕರಿಸಿ ಬಿಡುಗಡೆಗೊಳಿಸಿದ್ದು, ಹೊಸ ಎಂಜಿನ್ ಪ್ರೇರಿತ ಕಾರುಗಳ ಎಂಜಿನ್ ಆಯ್ಕೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದೆ.

ಬಿಎಸ್-6 ವೈಶಿಷ್ಟ್ಯತೆಯ ಡಿಜೈರ್ ಟೂರ್ ಎಸ್ ಸಿಎನ್‌ಜಿ ಆವೃತ್ತಿ ಬಿಡುಗಡೆ

ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡೀಸೆಲ್ ಎಂಜಿನ್ ಆಯ್ಕೆಯನ್ನು ಸ್ಥಗಿತಗೊಳಿಸಿರುವ ಮಾರುತಿ ಸುಜುಕಿಯು ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್, ಸಿಎನ್‌ಜಿ ಕಾರುಗಳ ಎಂಜಿನ್ ಆಯ್ಕೆಯನ್ನು ಹೆಚ್ಚಿಸಿದ್ದು, ಇದೀಗ ಡಿಜೈರ್ ಟೂರ್ ಎಸ್ ಆವೃತ್ತಿಯಲ್ಲಿ ಬಿಎಸ್-6 ವೈಶಿಷ್ಟ್ಯತೆಯ ಸಿಎನ್‌ಜಿ ಪರಿಚಯಿಸಿದೆ. ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.80 ಲಕ್ಷ ಬೆಲೆ ಹೊಂದಿದ್ದು, ಸಾಮಾನ್ಯ ಮಾದರಿಯಲ್ಲೂ ಡಿಜೈರ್ ಕಾರು ಮಾರುಕಟ್ಟೆ ಪ್ರವೇಶಿಸಿದೆ.

ಡಿಜೈರ್ ಟೂರ್ ಎಸ್ ಮಾದರಿಯು ವಿಶೇಷವಾಗಿ ವಾಣಿಜ್ಯ ಬಳಕೆಗಾಗಿ ಅಭಿವೃದ್ದಿಗೊಳಿಸಲಾಗಿದ್ದು, ಟೂರ್ ಎಸ್ ಆವೃತ್ತಿಗಳಲ್ಲಿ ಪ್ರೀಮಿಯಂ ಫೀಚರ್ಸ್‌ಗಳು ಕಡಿಮೆ ಅನ್ನಿಸಿದರೂ ಉತ್ತಮ ಮೈಲೇಜ್ ಮೂಲಕ ರನ್ನಿಂಗಾ ಕಾಸ್ಟ್ ಅನ್ನು ಪರಿಣಾಮಕಾರಿ ತಗ್ಗಿಸಲಾಗಿರುತ್ತದೆ.

ಬಿಎಸ್-6 ವೈಶಿಷ್ಟ್ಯತೆಯ ಡಿಜೈರ್ ಟೂರ್ ಎಸ್ ಸಿಎನ್‌ಜಿ ಆವೃತ್ತಿ ಬಿಡುಗಡೆ

ಇದೀಗ ಬಿಡುಗಡೆಯಾಗಿರುವ ಬಿಎಸ್-6 ಡಿಜೈರ್ ಟೂರ್ ಎಸ್ ಮಾದರಿಯು 1.2-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಯೊಂದಿಗೆ ಹಲವು ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಸದ್ಯಕ್ಕೆ ಹೊಸ ಕಾರಿನಲ್ಲಿ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿಲ್ಲ.

ಬಿಎಸ್-6 ವೈಶಿಷ್ಟ್ಯತೆಯ ಡಿಜೈರ್ ಟೂರ್ ಎಸ್ ಸಿಎನ್‌ಜಿ ಆವೃತ್ತಿ ಬಿಡುಗಡೆ

ಡೀಸೆಲ್ ಎಂಜಿನ್ ಮೂಲಕ ಕಾರು ಮಾರಾಟದಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದ್ದ ಡಿಜೈರ್ ಕಂಪ್ಯಾಕ್ಟ್ ಸೆಡಾನ್ ಕಾರಿನಲ್ಲಿ ಹೊಸ ಎಮಿಷನ್ ನಿಯಮದಂತೆ ಕೇವಲ ಪೆಟ್ರೋಲ್ ಎಂಜಿನ್ ಮಾದರಿಯನ್ನು ಮಾತ್ರವೇ ಬಿಡುಗಡೆಗೊಳಿಸಲಾಗಿದ್ದು, ಬಿಎಸ್-6 ನಿಯಮ ಪಾಲಿಸಲು ಸಾಧ್ಯವಿಲ್ಲದ 1.3-ಲೀಟರ್ ಡೀಸೆಲ್ ಎಂಜಿನ್ ಮಾರಾಟವನ್ನು ಸ್ಥಗಿತಗೊಳಿಸಿರುವುದು ಮಾರುತಿ ಸುಜುಕಿ ಸೇರಿದಂತೆ ಹಲವು ಕಂಪನಿಗಳ ಕಾರಿಗಳಿಗೆ ಭಾರೀ ಹೊಡೆತ ನೀಡಲಿದೆ.

ಬಿಎಸ್-6 ವೈಶಿಷ್ಟ್ಯತೆಯ ಡಿಜೈರ್ ಟೂರ್ ಎಸ್ ಸಿಎನ್‌ಜಿ ಆವೃತ್ತಿ ಬಿಡುಗಡೆ

ಫಿಯೆಟ್ ಕಂಪನಿಯಿಂದ ಎರವಲು ಪಡೆಯಲಾಗುತ್ತಿದ್ದ 1.3-ಡೀಸೆಲ್ ಎಂಜಿನ್ ಮಾದರಿಯು ಹೊಸ ನಿಯಮದಂತೆ ಸಾಕಷ್ಟು ಸುಧಾರಣೆಗೊಳ್ಳಬೇಕಿತ್ತು. ಆದರೆ ಬೆಲೆ ಹೆಚ್ಚಳವಾಗುವ ಕಾರಣದಿಂದ 1.3-ಲೀಟರ್ ಬೂಸ್ಟರ್ ಜೆಟ್ ಡೀಸೆಲ್ ಎಂಜಿನ್ ಅನ್ನು ಉತ್ಪಾದನೆಯಿಂದ ಕೈಬಿಡಲಾಗಿದೆ.1.3-ಲೀಟರ್ ಬೂಸ್ಟರ್ ಜೆಟ್ ಎಂಜಿನ್ ಅನ್ನು ಮಾರುತಿ ಸುಜುಕಿ ಸೇರಿದಂತೆ ಹಲವು ಕಂಪನಿಗಳಿಗೆ ಪೂರೈಕೆ ಮಾಡಿದ್ದ ಫಿಯೆಟ್ ಸಂಸ್ಥೆಯು ಹಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ಎಂಜಿನ್ ಮಾದರಿಯಾಗಿತ್ತು.

ಬಿಎಸ್-6 ವೈಶಿಷ್ಟ್ಯತೆಯ ಡಿಜೈರ್ ಟೂರ್ ಎಸ್ ಸಿಎನ್‌ಜಿ ಆವೃತ್ತಿ ಬಿಡುಗಡೆ

ಆದರೆ ಬೂಸ್ಟರ್ ಜೆಟ್ ಎಂಜಿನ್‌ನಲ್ಲಿ ಬಿಎಸ್-6 ವೈಶಿಷ್ಟ್ಯತೆ ಅಳವಡಿಕೆಯು ಆರ್ಥಿಕವಾಗಿ ಹೊರೆಯಾಗುವ ಕಾರಣಕ್ಕೆ ಮಾರುತಿ ಸುಜುಕಿಯು ಡೀಸೆಲ್ ಎಂಜಿನ್‌ಗೆ ಪರ್ಯಾಯವಾಗಿ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಆಯ್ಕೆಯನ್ನು ಹೆಚ್ಚಿಸಲು ಗಮನಹರಿಸಿದೆ.

ಬಿಎಸ್-6 ವೈಶಿಷ್ಟ್ಯತೆಯ ಡಿಜೈರ್ ಟೂರ್ ಎಸ್ ಸಿಎನ್‌ಜಿ ಆವೃತ್ತಿ ಬಿಡುಗಡೆ

ಮಾಹಿತಿಗಳ ಪ್ರಕಾರ, ಮಾರುತಿ ಸುಜುಕಿಯು ಹೈ ಎಂಡ್ ಕಾರು ಮಾದರಿಗಳಲ್ಲಿ ಮಾತ್ರವೇ ಮುಂಬರುವ ದಿನಗಳಲ್ಲಿ ಹೊಸ ಮಾದರಿಯ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಿದ್ದು, ಇನ್ನುಳಿದಂತೆ ಪೆಟ್ರೋಲ್ ಕಾರುಗಳನ್ನು ಈಗಾಗಲೇ ಸಂಪೂರ್ಣವಾಗಿ ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ಮಾರಾಟ ಮಾಡುತ್ತಿದೆ.

ಬಿಎಸ್-6 ವೈಶಿಷ್ಟ್ಯತೆಯ ಡಿಜೈರ್ ಟೂರ್ ಎಸ್ ಸಿಎನ್‌ಜಿ ಆವೃತ್ತಿ ಬಿಡುಗಡೆ

ಡಿಜೈರ್ ಫೇಸ್‌ಲಿಫ್ಟ್ ಆವೃತ್ತಿಯ ಸದ್ಯಕ್ಕೆ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಾಗಿದ್ದು, ನ್ಯೂ ಜನರೇಷನ್ ಬಲೆನೊ ಕಾರಿನಲ್ಲಿ ಬಳಕೆ ಮಾಡಲಾಗಿರುವ ಕೆ12ಸಿ ಡ್ಯುಯಲ್ ಜೆಟ್ 1.2-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ.

More from DriveSpark

Article Published On: Wednesday, March 25, 2020, 14:00 [IST]
English summary
Maruti Suzuki TourS BS6 launched at Rs 5.80 lakhs details. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+