ರಿಕಾಲ್ ಆಗುತ್ತಿದೆ ದೋಷಪೂರಿತ ಮಾರುತಿ ಸುಜುಕಿ ಇಕೋ

ದೇಶದ ಅತಿ ದೊಡ್ಡ ವಾಹನ ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಇಕೋ ಮಾದರಿಯಲ್ಲಿ ಹೆಡ್‌ಲೈಟ್‌ಗಳಲ್ಲಿ ಕೆಲವು ದೋಷ ಕಂಡು ಬಂದ ಹಿನ್ನಲೆಯಲ್ಲಿ ಅವುಗಳನ್ನು ರಿಕಾಲ್ ಮಾಡಲು ಮುಂದಾಗಿದೆ. ಸರಿಸುಮಾರು 40,453 ವಾಹನಗಳನ್ನು ರಿಕಾಲ್ ಮಾಡಲಾಗುತ್ತದೆ.

ರಿಕಾಲ್ ಆಗುತ್ತಿದೆ ದೋಷಪೂರಿತ ಮಾರುತಿ ಸುಜುಕಿ ಇಕೋ

2019ರ ನವೆಂಬರ್ 4 ಮತ್ತು 2020ರ ಫೆಬ್ರವರಿ 25ರ ನಡುವೆ ತಯಾರಾದ ಇಕೋ ವ್ಯಾನ್‌ಗಳಲ್ಲಿ ದೋಷವನ್ನು ಕಂಡು ಬಂದಿದೆ. ಈ ಅಪಾವಾದಗಳನ್ನು ಸರಿಪಡಿಸಲು ದೋಷ ಪೂರಿತ ಮಾದರಿಗಳ ಹೆಡ್‌ಲೈಟ್ ಗಳನ್ನು ಮರುಜೋಡಣೆಯನ್ನು ಮಾಡಲಾಗುತ್ತದೆ. ಈ ವಿಷಯವು ಯಾವುದೇ ತಾಂತ್ರಿಕ ನವೀಕರಣ ಅಥವಾ ಡ್ರೈವ್‌ಟ್ರೇನ್ ಆಫ್ ಎಮಿಷನ್ ಸಿಸ್ಟಮ್‌ನಲ್ಲಿನ ಬದಲಾವಣೆಗೆ ಸಂಬಂಧಿಸಿಲ್ಲ. ಇನ್ನು ದೋಷ ಪೂರಿತ ಮಾದರಿಗಳ ಹೆಡ್‌ಲೈಟ್ ಮರುಜೋಡಣೆಯನ್ನು ಉಚಿತವಾಗಿ ಮಾಡಲಾಗುವುದು ಮತ್ತು ನವೀಕರಿಸಲಾಗುವುದು ಎಂದು ಕಂಪನಿಯು ಖಚಿತಪಡಿಸಿದೆ.

ರಿಕಾಲ್ ಆಗುತ್ತಿದೆ ದೋಷಪೂರಿತ ಮಾರುತಿ ಸುಜುಕಿ ಇಕೋ

ವಾಹನದ ಮಾಲೀಕರು ಮಾರುತಿಯ ಅಧಿಕೃತ ವೆಬ್‌ಸೈಟ್‌ನಲ್ಲಿರುವ 'ಇಂಪ್ ಗ್ರಾಹಕ ಮಾಹಿತಿ' ವಿಭಾಗಕ್ಕೆ ಭೇಟಿ ನೀಡಬಹುದು. ತಮ್ಮ ವಾಹನಗಳ ಚಾಸಿಸ್ ಸಂಖ್ಯೆಯನ್ನು ಭರ್ತಿ ಮಾಡಿ ತಮ್ಮ ವಾಹನವು ರಿಕಾಲ್ ಮಾಡಲು ಒಳಪಟ್ಟಿದೆಯೇ ಎಂದು ಪರಿಶೀಲಿಸಬಹುದು.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ರಿಕಾಲ್ ಆಗುತ್ತಿದೆ ದೋಷಪೂರಿತ ಮಾರುತಿ ಸುಜುಕಿ ಇಕೋ

ಇದನ್ನು ಮಾಡಿದ ಬಳಿಕ ಕಂಪನಿಯು ವೆಬ್‌ಸೈಟ್‌ನಲ್ಲಿ ನೀಡಿರುವ ಸೂಚನೆಗಳನ್ನು ಪಾಲಿಸಬೇಕು ಮತ್ತು ಹತ್ತಿರದ ಅಧಿಕೃತ ಡೀಲರ್ ಗಳನ್ನು ಸಂಪರ್ಕಿಸಬೇಕು. ಅಲ್ಲದೇ ದೋಷ ಪೂರಿತ ವಾಹನಗಳ ಮಾಲೀಕರನ್ನು ಮಾರುತಿ ಸುಜುಕಿ ಅಧಿಕೃತ ಡೀಲರುಗಳು ಸರಿಯಾದ ಸಮಯದಲ್ಲಿ ಸಂಪರ್ಕಿಸುವ ಸಾಧ್ಯತೆಗಳು ಕೂಡ ಇದೆ.

ರಿಕಾಲ್ ಆಗುತ್ತಿದೆ ದೋಷಪೂರಿತ ಮಾರುತಿ ಸುಜುಕಿ ಇಕೋ

2020ರ ಸೆಪ್ಟೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ ಕಂಪನಿಯ ಇಕೋ ಮಾದರಿಯು ಮಾರಾಟದಲ್ಲಿ ಹೊಸ ಮೈಲುಗಲ್ಲು ಸಾಧಿಸಿತು. ಮಾರುತಿ ಸುಜುಕಿ ಕಂಪನಿಯು ಕಳೆದ 10 ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಇಕೋ ಮಾದರಿಯ 7 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ರಿಕಾಲ್ ಆಗುತ್ತಿದೆ ದೋಷಪೂರಿತ ಮಾರುತಿ ಸುಜುಕಿ ಇಕೋ

ಮಾರುತಿ ಸುಜುಕಿ ಕಂಪನಿಯು ಇಕೋ ವ್ಯಾನ್ ಅನ್ನು ಭಾರತದಲ್ಲಿ 2010ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿದ್ದರು. ಮಾರುತಿ ಸುಜುಕಿ ಕಂಪನಿಯು ಕೇವಲ ಎರಡು ವರ್ಷಗಳಲ್ಲಿ ಇಕೋ ಮಾದರಿಯ 1 ಲಕ್ಷ ಯೂನಿಟ್‌ಗಳನ್ನು ಮಾರಾಟ ಮಾಡಿದ್ದರು. 2014ರಲ್ಲಿ ಮಾರುತಿ ಮತ್ತೆ 1 ಲಕ್ಷ ಯುನಿಟ್ ಇಕೋವನ್ನು ಮಾರಾಟ ಮಾಡಿತು.

ರಿಕಾಲ್ ಆಗುತ್ತಿದೆ ದೋಷಪೂರಿತ ಮಾರುತಿ ಸುಜುಕಿ ಇಕೋ

ಬೇಡಿಕೆ ಹೆಚ್ಚಾದಾಗ ಬೇಡಿಕೆಗೆ ತಕ್ಕಂತೆ ಪೂರೈಸಲು ಇಕೋ ಮಾದರಿಯ ಕಾರ್ಗೋ ಎಂಬ ಹೊಸ ರೂಪಾಂತರವನ್ನು ಪರಿಚಯಿಸಿದ್ದರು. ನಂತರ ಮೂರು ವರ್ಷಗಳಲ್ಲಿ ಸತತವಾಗಿ 1 ಲಕ್ಷ ಯೂನಿಟ್ ಇಕೋವನ್ನು ಮಾರಾಟವನ್ನು ಮಾಡಿದ್ದರು.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ರಿಕಾಲ್ ಆಗುತ್ತಿದೆ ದೋಷಪೂರಿತ ಮಾರುತಿ ಸುಜುಕಿ ಇಕೋ

2018ರ ವೇಳೆಗೆ ಮಾರುತಿ ಸುಜುಕಿ ಕಂಪನಿಯು ಒಟ್ಟು 5 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದರು. ಇನ್ನು ಮಾರುತಿ ಸುಜುಕಿ ಕಂಪನಿಯು ತನ್ನ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಒಂದಾದ ಇಕೋ ವ್ಯಾನ್ ಅನ್ನು ಸಿಎನ್‌ಜಿ ಆವೃತ್ತಿಯಲ್ಲಿ ಈ ವರ್ಷದ ಮಾರ್ಚ್ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು.

ರಿಕಾಲ್ ಆಗುತ್ತಿದೆ ದೋಷಪೂರಿತ ಮಾರುತಿ ಸುಜುಕಿ ಇಕೋ

ಈ ಇಕೋ ಮಾದರಿಯಲ್ಲಿ 5ರಿಂದ 7 ಸೀಟುಗಳನ್ನು ಹೊಂದಿದೆ. ಈ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 73 ಬಿಹೆಚ್‌ಪಿ ಮತ್ತು 101 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನಲ್ಲಿ 5 ಸ್ಪೀಡಿನ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ ಅಳವಡಿಸಲಾಗಿದೆ.

ರಿಕಾಲ್ ಆಗುತ್ತಿದೆ ದೋಷಪೂರಿತ ಮಾರುತಿ ಸುಜುಕಿ ಇಕೋ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಜನಪ್ರಿಯ ಒಮ್ನಿ ವ್ಯಾನ್ ಸ್ಥಗಿತಗೊಂಡ ಬಳಿಕ ಮಾರುತಿ ಸುಜುಕಿ ಕಂಪನಿಯ ಇಕೋ ಭಾರತೀಯ ಮಾರುಕಟ್ಟೆಯಲ್ಲಿರುವ ಏಕೈಕ ವ್ಯಾನ್ ಆಗಿದೆ. ಮಾರುತಿ ಸುಜುಕಿ ಕಂಪನಿಯ ಕಾರುಗಳ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ. ಇಕೋ ಭಾರತದ್ಲ್ಲಿ ಮಾರಾಟವಾಗುವ ವಾಹನಗಳ ಟಾಪ್-10 ಪಟ್ಟಿಯಲ್ಲಿ ಸ್ಥಿರವಾಗಿ ಸ್ಥಾನ ಪಡೆದುಕೊಂಡಿದೆ.

Most Read Articles

Kannada
English summary
Maruti Suzuki Eeco Recalled For An Update In The Headlight Assembly. Read In Kannada.
Story first published: Thursday, November 5, 2020, 18:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X