ಮತ್ತೆರಡು ಹೊಸ ನಗರಗಳಲ್ಲಿ ಕಾರ್ ಲೀಸ್ ಆಯ್ಕೆ ತೆರೆದ ಮಾರುತಿ ಸುಜುಕಿ

ಕರೋನಾ ವೈರಸ್‌ನಿಂದಾಗಿ ಸ್ವಂತ ವಾಹನ ಬಳಕೆ ಹೆಚ್ಚುತ್ತಿರುವುದು ಕಾರು ಉತ್ಪಾದನಾ ಕಂಪನಿಗಳಿಗೆ ವರವಾಗಿ ಪರಿಣಮಿಸಿದೆ. ಆದರೆ ಸಂಕಷ್ಟದ ಸಮಯದಲ್ಲಿ ವಾಹನ ಖರೀದಿಯೂ ಕೂಡಾ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡುತ್ತದೆ. ಈ ಹಿನ್ನಲೆಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ವಾಹನಗಳನ್ನು ಲೀಸ್ ಪಡೆದುಕೊಳ್ಳುವ ಪ್ರಕ್ರಿಯೆಯು ಜೋರಾಗುತ್ತಿದೆ.

ಮತ್ತೆರಡು ಹೊಸ ನಗರಗಳಲ್ಲಿ ಕಾರ್ ಲೀಸ್ ಆಯ್ಕೆ ತೆರೆದ ಮಾರುತಿ ಸುಜುಕಿ

ಹೊಸ ಕಾರ್ ಲೀಸ್ ಯೋಜನೆ ಅಡಿ ಮಾರುತಿ ಸುಜುಕಿ ಕಂಪನಿಯು ಕೂಡಾ ವಿವಿಧ ಕಾರುಗಳ ಮೇಲೆ ನಿಗದಿತ ಅವಧಿಗೆ ಇಂತಿಷ್ಟು ಪ್ರಮಾಣದ ದರ ನಿಗದಿ ಮಾಡಿದ್ದು, ಕಾರು ಮಾದರಿಗಳು ಮತ್ತು ಲೀಸ್ ಅವಧಿಯ ಮೇಲೆ ದರವನ್ನು ನಿಗದಿ ಮಾಡಲಾಗುತ್ತದೆ. ಇದು ಸದ್ಯಕ್ಕೆ ಇಳಿಕೆಯಾಗಿರುವ ಹೊಸ ವಾಹನಗಳ ಮಾರಾಟ ಪ್ರಮಾಣವನ್ನು ಸುಧಾರಿಸಲು ನೇರವಾಗಲಿದ್ದು, ಮಾರುತಿ ಸುಜುಕಿ ಸೇರಿದಂತೆ ಹಲವು ಕಂಪನಿಗಳು ಲೀಸ್ ಆಯ್ಕೆಗೆ ಚಾಲನೆ ನೀಡಿವೆ.

ಮತ್ತೆರಡು ಹೊಸ ನಗರಗಳಲ್ಲಿ ಕಾರ್ ಲೀಸ್ ಆಯ್ಕೆ ತೆರೆದ ಮಾರುತಿ ಸುಜುಕಿ

ಕಳೆದ ತಿಂಗಳು ದೆಹಲಿ, ಮುಂಬೈ ಮತ್ತು ಬೆಂಗಳೂರು ಮಾಹಾನಗರಗಳಲ್ಲಿ ಲೀಸ್ ಕಾರುಗಳ ಆಯ್ಕೆಗೆ ಚಾಲನೆ ನೀಡಿದ್ದ ಮಾರುತಿ ಸುಜುಕಿಯು ಇದೀಗ ಹೈದ್ರಾಬಾದ್ ಮತ್ತು ಪುಣೆ ನಗರಗಳಿಗೂ ವಿಸ್ತರಣೆ ಮಾಡಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ದೇಶದ ಪ್ರಮುಖ ನಗರಗಳಿಗೂ ಹೊಸ ಯೋಜನೆಯನ್ನು ಪರಿಚಯಿಸಲಿದೆ.

ಮತ್ತೆರಡು ಹೊಸ ನಗರಗಳಲ್ಲಿ ಕಾರ್ ಲೀಸ್ ಆಯ್ಕೆ ತೆರೆದ ಮಾರುತಿ ಸುಜುಕಿ

ಮಾರುತಿ ಸುಜುಕಿಯು ಆರಂಭಿಸಿರುವ ಸಬ್‌ಸ್ಕೈಬ್‌ ಹೆಸರಿನ ಲೀಸ್ ಕಾರುಗಳ ಯೋಜನೆಯು ಕಾರು ಮಾದರಿಗಳಿಗೆ ಅನುಗುಣವಾಗಿ ಅರೆನಾ ಮತ್ತು ನೆಕ್ಸಾ ಎರಡು ಮಾದರಿಯ ಕಾರು ಮಾರಾಟ ಮಳಿಗೆಗಳಲ್ಲೂ ಲೀಸ್ ಆಯ್ಕೆ ಲಭ್ಯವಿದೆ.

ಮತ್ತೆರಡು ಹೊಸ ನಗರಗಳಲ್ಲಿ ಕಾರ್ ಲೀಸ್ ಆಯ್ಕೆ ತೆರೆದ ಮಾರುತಿ ಸುಜುಕಿ

ಅರೆನಾ ಕಾರು ಮಳಿಗೆಗಳಲ್ಲಿ ಸ್ವಿಫ್ಟ್, ಡಿಜೈರ್, ವಿಟಾರಾ ಬ್ರೆಝಾ ಮತ್ತು ಎರ್ಟಿಗಾ ಕಾರುಗಳ ಮೇಲೆ ಲೀಸ್ ಆಯ್ಕೆ ಲಭ್ಯವಿದ್ದಲ್ಲಿ ನೆಕ್ಸಾ ಕಾರು ಮಾರಾಟ ಮಳಿಗೆಗಳಲ್ಲಿ ಸಿಯಾಜ್, ಬಲೆನೊ ಮತ್ತು ಎಕ್ಸ್ಎಲ್6 ಕಾರುಗಳನ್ನು ಲೀಸ್ ಪಡೆಯಬಹುದಾಗಿದೆ.

ಮತ್ತೆರಡು ಹೊಸ ನಗರಗಳಲ್ಲಿ ಕಾರ್ ಲೀಸ್ ಆಯ್ಕೆ ತೆರೆದ ಮಾರುತಿ ಸುಜುಕಿ

ಆಕರ್ಷಕ ಬೆಲೆಗಳಲ್ಲಿ ಲೀಸ್ ಕಾರುಗಳು..!

ಮಾರುತಿ ಸುಜುಕಿಯು ಪ್ರತಿ ದಿನಕ್ಕೆ ಕನಿಷ್ಠ ರೂ.700ರಿಂದ ಗರಿಷ್ಠ ರೂ.1200 ದರ ಅನ್ವಯವಾಗುವಂತೆ ಲೀಸ್ ಕಾರುಗಳ ದರವನ್ನು ನಿಗದಿಪಡಿಸಿದ್ದು, ಹೊಸ ಲೀಸ್ ಕಾರಿಗೆ ನೋಂದಣಿ ಮಾಡಿದ 15 ದಿನದೊಳಗಾಗಿ ಕಾರಿನ ಮಾಲೀಕತ್ವವನ್ನು ಹಸ್ತಾಂತರ ಮಾಡಲಿದೆ.

ಮತ್ತೆರಡು ಹೊಸ ನಗರಗಳಲ್ಲಿ ಕಾರ್ ಲೀಸ್ ಆಯ್ಕೆ ತೆರೆದ ಮಾರುತಿ ಸುಜುಕಿ

ಲೀಸ್ ಪಡೆದ ಕಾರುಗಳ ದರವನ್ನು ಪ್ರತಿ ತಿಂಗಳು ಪಾವತಿಸಬೇಕಿದ್ದು, ಕನಿಷ್ಠ 24 ತಿಂಗಳು ಲೀಸ್ ಅವಧಿಯನ್ನು ಆಯ್ಕೆಯನ್ನು ಪಡೆದುಕೊಳ್ಳಬೇಕು. ಗ್ರಾಹಕರ ತಮ್ಮ ಆದ್ಯತೆ ಮೇರೆಗೆ ಕಾರುಗಳನ್ನು 24, 36 ಮತ್ತು 48 ತಿಂಗಳಿಗೆ ಲೀಸ್ ಪಡೆದುಕೊಳ್ಳಬಹುದಾಗಿದ್ದು, ಲೀಸ್ ಮೊತ್ತದಲ್ಲೇ ಕಾರಿನ ನಿರ್ವಹಣಾ ವೆಚ್ಚ, ಪಾಲಿಸಿ ಶುಲ್ಕಗಳು ಒಳಗೊಂಡಿರುತ್ತವೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಮತ್ತೆರಡು ಹೊಸ ನಗರಗಳಲ್ಲಿ ಕಾರ್ ಲೀಸ್ ಆಯ್ಕೆ ತೆರೆದ ಮಾರುತಿ ಸುಜುಕಿ

ಲೀಸ್ ಕಾರುಗಳ ಪಟ್ಟಿಯಲ್ಲಿ ಸ್ವಿಫ್ಟ್ ವಿಎಕ್ಸ್ಐ ಮ್ಯಾನುವಲ್ ಮಾದರಿಯು ಪ್ರತಿ ತಿಂಗಳಿಗೆ ಆರಂಭಿಕವಾಗಿ ರೂ.22,591 ದರ ಹೊಂದಿದ್ದಲ್ಲಿ ಹೈ ಎಂಡ್ ಮಾದರಿಯಾದ ಎಕ್ಸ್ಎಲ್6 ಅಲ್ಪಾ ಆಟೋಮ್ಯಾಟಿಕ್ ಆವೃತ್ತಿಯು ರೂ.40,365 ಬೆಲೆ ಹೊಂದಿದೆ.

ಮತ್ತೆರಡು ಹೊಸ ನಗರಗಳಲ್ಲಿ ಕಾರ್ ಲೀಸ್ ಆಯ್ಕೆ ತೆರೆದ ಮಾರುತಿ ಸುಜುಕಿ

ಲೀಸ್ ಕಾರುಗಳಿಗೆ ವಾರ್ಷಿಕವಾಗಿ 18 ಸಾವಿರ ಕಿ.ಮೀ ನಿಗದಿಪಡಿಸಲಾಗಿದ್ದು, ಒಂದು ವರ್ಷದಲ್ಲಿ 18 ಸಾವಿರ ಕಿ.ಮೀ ಗಿಂತಲೂ ಹೆಚ್ಚು ಸಂಚರಿಸಿದ್ದಲ್ಲಿ ಪ್ರತಿ ಕಿ.ಮೀ ಹೆಚ್ಚುವರಿಗಾಗಿ ರೂ.7 ಶುಲ್ಕ ಪಾವತಿ ಮಾಡಬೇಕಾಗುತ್ತದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಮತ್ತೆರಡು ಹೊಸ ನಗರಗಳಲ್ಲಿ ಕಾರ್ ಲೀಸ್ ಆಯ್ಕೆ ತೆರೆದ ಮಾರುತಿ ಸುಜುಕಿ

ಒಂದು ವೇಳೆ ಲೀಸ್ ಪಡೆದುಕೊಂಡ ಅವಧಿಗಿಂತಲೂ ಮೊದಲೇ ಕಾರು ಹಿಂದಿರುಗಿಸುವ ಸಂದರ್ಭ ಎದುರಾದಲ್ಲಿ ಅದಕ್ಕೂ ಅವಕಾಶಗಳನ್ನು ನೀಡಲಾಗಿದ್ದು, ಅವಧಿಗಿಂತಲೂ ಮುಂಚಿತವಾಗಿ ಕಾರು ಹಿಂದಿರುಗಿಸುವುದಾರರೇ ಕೆಲವು ಷರತ್ತುಗಳಿಗೆ ಬದ್ದವಾಗಿರಬೇಕಿರುತ್ತದೆ.

Article Published On: Friday, August 28, 2020, 21:03 [IST]
English summary
Maruti Suzuki Car Subscription Scheme. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+