ಐಸಿಐಸಿಐ ಬ್ಯಾಂಕಿನೊಂದಿಗೆ ಕೈಜೋಡಿಸಿದ ಮಾರುತಿ ಸುಜುಕಿ ಕಂಪನಿ

ತನ್ನ ಗ್ರಾಹಕರಿಗೆ ಉತ್ತಮ ಹಣಕಾಸು ಸೌಲಭ್ಯವನ್ನು ಒದಗಿಸಲು ಐಸಿಐಸಿಐ ಬ್ಯಾಂಕಿನೊಂದಿಗೆ ಕೈಜೋಡಿಸಲಾಗಿದೆ ಎಂದು ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಪ್ರಕಟಿಸಿದೆ.

ಐಸಿಐಸಿಐ ಬ್ಯಾಂಕಿನೊಂದಿಗೆ ಕೈಜೋಡಿಸಿದ ಮಾರುತಿ ಸುಜುಕಿ ಕಂಪನಿ

ಇದರಿಂದಾಗಿ ಐಸಿಐಸಿಐ ಬ್ಯಾಂಕ್ ಪ್ರಸ್ತುತ ಆರ್ಥಿಕ ಸಂಕಷ್ಟದ ಸಮಯದಲ್ಲಿ ಮಾರುತಿ ಸುಜುಕಿಯ ಗ್ರಾಹಕರಿಗೆ ಅನುಕೂಲವಾಗುವಂತಹ ಹಣಕಾಸು ಯೋಜನೆಯನ್ನು ಒದಗಿಸಲಿದೆ. ಮೂಲಗಳ ಪ್ರಕಾರ, ಈ ಯೋಜನೆಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.

ಐಸಿಐಸಿಐ ಬ್ಯಾಂಕಿನೊಂದಿಗೆ ಕೈಜೋಡಿಸಿದ ಮಾರುತಿ ಸುಜುಕಿ ಕಂಪನಿ

1. ಫ್ಲೆಕ್ಸಿ ಇಎಂಐ ಯೋಜನೆ:

ಈ ಯೋಜನೆಯಡಿಯಲ್ಲಿ ಗ್ರಾಹಕರಿಗೆ ಕಡಿಮೆ ಇಎಂಐ ಪಾವತಿಸಲು ಅವಕಾಶ ನೀಡಲಾಗುತ್ತದೆ. ಇದರಿಂದಾಗಿ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀರುವುದಿಲ್ಲ. ರೂ.1 ಲಕ್ಷ ಸಾಲಕ್ಕೆ ಮೊದಲ 3 ತಿಂಗಳವರೆಗೆ ರೂ.899 ಇಎಂಐ ಪಾವತಿಸಬೇಕಾಗುತ್ತದೆ. ಇದಾದ ನಂತರ ಇಎಂಐ ಹೆಚ್ಚಾಗಲಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಐಸಿಐಸಿಐ ಬ್ಯಾಂಕಿನೊಂದಿಗೆ ಕೈಜೋಡಿಸಿದ ಮಾರುತಿ ಸುಜುಕಿ ಕಂಪನಿ

2. ಬಲೂನ್ ಇಎಂಐ ಯೋಜನೆ:

ಈ ಯೋಜನೆಯಡಿಯಲ್ಲಿ ಸಾಲದ ಅವಧಿ ಮುಗಿಯುವವರೆಗೆ ಗ್ರಾಹಕರು ಪ್ರತಿ ಲಕ್ಷಕ್ಕೆ ರೂ.1,797 ಇಎಂಐ ಪಾವತಿಸಬೇಕಾಗುತ್ತದೆ. ಕಡಿಮೆ ಇಎಂಐ ಪಾವತಿಸಲು ಬಯಸುವವರಿಗೆ ಈ ಯೋಜನೆಯಿಂದ ಉಪಯೋಗವಾಗಲಿದೆ.

ಐಸಿಐಸಿಐ ಬ್ಯಾಂಕಿನೊಂದಿಗೆ ಕೈಜೋಡಿಸಿದ ಮಾರುತಿ ಸುಜುಕಿ ಕಂಪನಿ

3. ಸೆಟ್ ಅಪ್ ಇಎಂಐ ಯೋಜನೆ:

ಈ ಯೋಜನೆಯಲ್ಲಿ ಗ್ರಾಹಕನು ತನ್ನ ಆದಾಯ ಹೆಚ್ಚಿದಂತೆ ಪ್ರತಿ ವರ್ಷ ತನ್ನ ಇಎಂಐ ಪಾವತಿಯನ್ನು 10%ನಷ್ಟು ಹೆಚ್ಚಿಸಿಕೊಳ್ಳ ಬಹುದು. ಈ ಯೋಜನೆಯಲ್ಲಿ ಪ್ರತಿ ಲಕ್ಷಕ್ಕೆ ರೂ.1,752 ಇಎಂಐ ಪಾವತಿಸಬೇಕಾಗುತ್ತದೆ. ಮೊದಲ ವರ್ಷದ ನಂತರ ಪ್ರತಿ ವರ್ಷದ ಅವಧಿಯು 10%ನಷ್ಟು ಹೆಚ್ಚಾಗುತ್ತದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಐಸಿಐಸಿಐ ಬ್ಯಾಂಕಿನೊಂದಿಗೆ ಕೈಜೋಡಿಸಿದ ಮಾರುತಿ ಸುಜುಕಿ ಕಂಪನಿ

ಇದರ ಜೊತೆಗೆ ಐಸಿಐಸಿಐ ಬ್ಯಾಂಕ್ ಮಾರುತಿ ಸುಜುಕಿ ಕಾರುಗಳ ಮೇಲೆ 100%ನಷ್ಟು ಆನ್-ರೋಡ್ ಹಣವನ್ನು ಒದಗಿಸಲಿದೆ. ಪ್ರಗತಿ-ಅಂದಾಜು ಆದಾಯ ಯೋಜನೆಯಡಿಯಲ್ಲಿ ಮಾರುತಿ ಸುಜುಕಿ ಗ್ರಾಹಕರಿಗೆ ಹಣಕಾಸು ಸೌಲಭ್ಯಗಳನ್ನು ಸಹ ಐಸಿಐಸಿಐ ಬ್ಯಾಂಕ್ ನೀಡಲಿದೆ.

ಐಸಿಐಸಿಐ ಬ್ಯಾಂಕಿನೊಂದಿಗೆ ಕೈಜೋಡಿಸಿದ ಮಾರುತಿ ಸುಜುಕಿ ಕಂಪನಿ

ಕರೋನಾ ವೈರಸ್‌ನಿಂದ ಉಂಟಾಗಿರುವ ಬಿಕ್ಕಟ್ಟಿನ ವಿರುದ್ಧ ಹೋರಾಡುವಾಗ ಗ್ರಾಹಕರಿಗೆ ಆಕರ್ಷಕ ಹಣಕಾಸು ಸೌಲಭ್ಯವನ್ನು ನೀಡಬೇಕಾಗಿದೆ. ಇದಕ್ಕಾಗಿ ನಾವು ಈ ಎಲ್ಲಾ ಯೋಜನೆಗಳನ್ನು ಪರಿಚಯಿಸುತ್ತಿದ್ದೇವೆ ಎಂದು ಮಾರುತಿ ಸುಜುಕಿ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಾನ್ಶಿಕ್ ಶ್ರೀವಾಸ್ತವ ಹೇಳಿದರು.

Article Published On: Tuesday, May 26, 2020, 19:33 [IST]
English summary
Maruti Suzuki finance schemes in partnership with ICICI bank. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+