ಆಟೋ ಎಕ್ಸ್​ಪೋ 2020: ಪ್ರದರ್ಶನಕ್ಕೆ ಸಜ್ಜಾದ ಮಾರುತಿ ಸುಜುಕಿ ಫ್ಯೂಚರೊ ಕಾನ್ಸೆಪ್ಟ್

ಮಾರುತಿ ಸುಜುಕಿ ಕಂಪನಿಯು ಟೀಸರ್‍‍ವೊಂದನ್ನು ಬಿಡುಗಡೆಗೊಳಿಸಿದೆ. ಈ ಟೀಸರ್‍‍ನಲ್ಲಿ ಫ್ಯೂಚರೊ ಇ-ಕಾರಿನ ವಿನ್ಯಾಸವನ್ನು ತೋರಿಸಲಾಗಿದೆ. ಫ್ಯೂಚರೊ ಇ-ಕಾರು ಕಾಂಪ್ಯಾಕ್ಟ್ ಎಸ್‍‍ಯುವಿಯಾಗಿರಲಿದೆ. ಈ ಕಾರ್ ಅನ್ನು ಮಾರುತಿ ಸುಜುಕಿ ಕಂಪನಿಯ ಫ್ಯೂಚರ್ - ಎಸ್ ಕಾನ್ಸೆಪ್ಟ್ ಕಾರಿನ ಆಧಾರದ ಮೇಲೆ ತಯಾರಿಸಲಾಗುವುದು.

ಆಟೋ ಎಕ್ಸ್​ಪೋ 2020: ಪ್ರದರ್ಶನಕ್ಕೆ ಸಜ್ಜಾದ ಮಾರುತಿ ಸುಜುಕಿ ಫ್ಯೂಚರೊ ಕಾನ್ಸೆಪ್ಟ್

ಈ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರ್ ಅನ್ನು ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ 2020ರ ಆಟೋ ಎಕ್ಸ್​ಪೋದಲ್ಲಿ ಪ್ರದರ್ಶಿಸಲಾಗುವುದು. ಯುವಜನತೆಯನ್ನು ಗುರಿಯಾಗಿಸಿಕೊಂಡು ಈ ಕಾರ್ ಅನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಮಾರುತಿ ಸುಜುಕಿ ಕಂಪನಿಯು ತಿಳಿಸಿದೆ.

ಆಟೋ ಎಕ್ಸ್​ಪೋ 2020: ಪ್ರದರ್ಶನಕ್ಕೆ ಸಜ್ಜಾದ ಮಾರುತಿ ಸುಜುಕಿ ಫ್ಯೂಚರೊ ಕಾನ್ಸೆಪ್ಟ್

ಈಗ ಬಿಡುಗಡೆಗೊಳಿಸಲಾಗಿರುವ ಟೀಸರ್ ಭವಿಷ್ಯದ ಕಾರು ಡಿಸೈನ್ ಬಗ್ಗೆ ಹೇಳುತ್ತದೆ. ಕಾನ್ಸೆಪ್ಟ್ ಫ್ಯೂಚರೋ- ಇ ಕಾರು ಮಾರುತಿ ಸುಜುಕಿ ಕಂಪನಿಯು ಭಾರತದ ಆಟೋಮೊಬೈಲ್ ಉದ್ಯಮದೆಡೆಗೆ ಹೊಂದಿರುವ ದೃಷ್ಟಿಕೋನವನ್ನು ತೋರಿಸುತ್ತದೆ.

ಆಟೋ ಎಕ್ಸ್​ಪೋ 2020: ಪ್ರದರ್ಶನಕ್ಕೆ ಸಜ್ಜಾದ ಮಾರುತಿ ಸುಜುಕಿ ಫ್ಯೂಚರೊ ಕಾನ್ಸೆಪ್ಟ್

ಈ ಕಾನ್ಸೆಪ್ಟ್ ಕಾರಿನ ಮೂಲಕ ಮಾರುತಿ ಸುಜುಕಿ ಕಂಪನಿಯು ಗ್ಲೋಬಲ್ ಡಿಸೈನ್ ಕಾನ್ಸೆಪ್ಟ್ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ. ಈ ಕಾರಿನಲ್ಲಿ ಬಳಸಲಾಗುವ ಕ್ರಾಂತಿಕಾರಿ ವಿನ್ಯಾಸವು ಕಾನ್ಸೆಪ್ಟ್ ಕಾರುಗಳ ಭವಿಷ್ಯವನ್ನು ಬದಲಿಸಲಿದೆ ಎಂದು ಕಂಪನಿಯು ಹೇಳಿದೆ.

ಆಟೋ ಎಕ್ಸ್​ಪೋ 2020: ಪ್ರದರ್ಶನಕ್ಕೆ ಸಜ್ಜಾದ ಮಾರುತಿ ಸುಜುಕಿ ಫ್ಯೂಚರೊ ಕಾನ್ಸೆಪ್ಟ್

ಈ ಕಾನ್ಸೆಪ್ಟ್ ಫ್ಯೂಚರ್ ಕಾರಿನಲ್ಲಿ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಜನಪ್ರಿಯವಾಗಿರುವ ಹೊಸ ಗ್ಲೋಬಲ್ ಡಿಸೈನ್ ಲ್ಯಾಂಗ್ವೇಜ್ ಅನ್ನು ಬಳಸಲಾಗುವುದೆಂದು ಮಾರುತಿ ಸುಜುಕಿ ಕಂಪನಿ ಹೇಳಿದೆ. ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಎಂಜಿನಿಯರಿಂಗ್ ವಿಭಾಗದ ಹಿರಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸಿವಿ ರಾಮನ್‍‍‍ರವರು ಈ ಬಗ್ಗೆ ಮಾತನಾಡಿದ್ದಾರೆ.

ಆಟೋ ಎಕ್ಸ್​ಪೋ 2020: ಪ್ರದರ್ಶನಕ್ಕೆ ಸಜ್ಜಾದ ಮಾರುತಿ ಸುಜುಕಿ ಫ್ಯೂಚರೊ ಕಾನ್ಸೆಪ್ಟ್

ಫ್ಯೂಚರೊ-ಇ ಕಾನ್ಸೆಪ್ಟ್ ಕಾರು ಮುಂದಿನ ಪೀಳಿಗೆಗೆ ಅತ್ಯಾಕರ್ಷಕ ವಿನ್ಯಾಸಗಳನ್ನು ರಚಿಸುವ ಮಾರುತಿ ಸುಜುಕಿಯ ಬದ್ಧತೆಯನ್ನು ತೋರಿಸುತ್ತದೆ. ಡಿಸೈನ್‍‍ನ ಭವಿಷ್ಯದ ಬಗ್ಗೆ ಒಂದು ಸೂಕ್ಷ್ಮ ನೋಟವನ್ನು ನೀಡುವ ಕಾನ್ಸೆಪ್ಟ್ ಫ್ಯೂಚುರೊ-ಇ ಭಾರತದ ಆಟೋಮೊಬೈಲ್ ಮಾರುಕಟ್ಟೆಯ ಮಾರುತಿ ಸುಜುಕಿಯ ದೃಷ್ಟಿಯನ್ನು ಪ್ರತಿನಿಧಿಸುತ್ತದೆ.

ಆಟೋ ಎಕ್ಸ್​ಪೋ 2020: ಪ್ರದರ್ಶನಕ್ಕೆ ಸಜ್ಜಾದ ಮಾರುತಿ ಸುಜುಕಿ ಫ್ಯೂಚರೊ ಕಾನ್ಸೆಪ್ಟ್

ಜಾಗತಿಕ ಸಂವೇದನೆಗಳನ್ನು ಹೊಂದಿರುವ ಭಾರತೀಯ ಕಾರಿನಂತೆ ಗುರುತಿಸಲ್ಪಟ್ಟ ಕಾನ್ಸೆಪ್ಟ್ ಫ್ಯೂಚುರೊ-ಇ ದೇಶದ ಮಹತ್ವಾಕಾಂಕ್ಷೆಯ ಯುವಕರ ಆಸೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಕಾನ್ಸೆಪ್ಟ್ ಫ್ಯೂಚರೊ-ಇ ಪ್ರಕೃತಿಯ ಜಿಯೊ - ಅರ್ಗ್ಯಾನಿಕ್‍‍ಗಳಿಂದ ಸ್ಫೂರ್ತಿ ಪಡೆಯುತ್ತದೆ ಎಂದು ಹೇಳಿದರು.

ಆಟೋ ಎಕ್ಸ್​ಪೋ 2020: ಪ್ರದರ್ಶನಕ್ಕೆ ಸಜ್ಜಾದ ಮಾರುತಿ ಸುಜುಕಿ ಫ್ಯೂಚರೊ ಕಾನ್ಸೆಪ್ಟ್

ಕಾನ್ಸೆಪ್ಟ್ ಫ್ಯೂಚರೊ - ಇ ಕಾರಿನ ವಿನ್ಯಾಸವನ್ನು ಕೂಪೆ ಹಾಗೂ ಎಸ್‍‍ಯುವಿಗಳ ಮಿಶ್ರಣದಿಂದ ತಯಾರಿಸಲಾಗಿದೆ. ಮಾರುತಿ ಸುಜುಕಿ ಕಂಪನಿಯು ಮೊದಲ ಬಾರಿಗೆ ಫ್ಯೂಚರ್ ಎಸ್ ಕಾನ್ಸೆಪ್ಟ್ ಕಾರ್ ಅನ್ನು 2018ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು.

ಆಟೋ ಎಕ್ಸ್​ಪೋ 2020: ಪ್ರದರ್ಶನಕ್ಕೆ ಸಜ್ಜಾದ ಮಾರುತಿ ಸುಜುಕಿ ಫ್ಯೂಚರೊ ಕಾನ್ಸೆಪ್ಟ್

ಈ ಕಾನ್ಸೆಪ್ಟ್ ಕಾರಿನ ಆಧಾರದ ಮೇಲೆ ಕಳೆದ ವರ್ಷ ಬಿಡುಗಡೆಯಾದ ಮಿನಿ ಎಸ್‍‍ಯುವಿಯಾದ ಎಸ್ - ಪ್ರೆಸ್ಸೊವನ್ನು ತಯಾರಿಸಲಾಗಿದೆ. ಈ ಮಿನಿ ಎಸ್‍‍ಯುವಿ ವಿಟಾರ ಬ್ರಿಝಾದ ನಂತರ ಭಾರತದಲ್ಲಿ ತಯಾರಿಸಲಾದ ಮಾರುತಿ ಸುಜುಕಿ ಕಂಪನಿಯ ಎರಡನೇ ವಾಹನವಾಗಿದೆ. ಈ ಕಾರಿನಲ್ಲಿರುವ ಬಾಕ್ಸಿ ಲುಕ್ ಹಾಗೂ ಬಾನೆಟ್ ಇದನ್ನು ಮಿನಿ ಎಸ್‍‍ಯುವಿಯನ್ನಾಗಿಸುತ್ತವೆ.

Most Read Articles

Kannada
English summary
Maruti Suzuki Futuro e-concept will be showcased at auto expo. Read in Kannada.
Story first published: Wednesday, January 22, 2020, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X