ಕರೋನಾ ಭೀತಿ ನಡುವೆಯೂ ಮಾರುತಿ ಇಗ್ನಿಸ್ ಫೇಸ್‍ಲಿಫ್ಟ್ ಖರೀದಿಗಾಗಿ ಭರ್ಜರಿ ಬುಕ್ಕಿಂಗ್
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಇಗ್ನಿಸ್ ಫೇಸ್‍ಲಿಫ್ಟ್ ಕಾರನ್ನು ಭಾರತದಲ್ಲಿ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಗೊಳಿಸಿತು. ಜನಪ್ರಿಯ ಮಾರುತಿ ಸುಜುಕಿ ಕಂಪನಿಯ ಬಹುನಿರೀಕ್ಷಿತ ಇಗ್ನಿಸ್ ಫೇಸ್‍ಲಿಫ್ಟ್ ಅನ್ನು ಹೊಸ ವಿನ್ಯಾಸ ಮತ್ತು ಹೊಸ ಬಣ್ಣಗಳ ಆಯ್ಕೆಯೊಂದಿಗೆ ಬಿಡುಗಡೆಗೊಳಿಸಿದರು.

ಭಾರತೀಯ ಮಾರುಕಟ್ಟೆಯಲ್ಲಿ ಈ ಜನಪ್ರಿಯ ಹ್ಯಾಚ್‍ಬ್ಯಾಕ್ ಗೆ ಉತ್ತಮ ಬೇಡಿಕೆಯನ್ನು ಹೊಂದಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾದ ಈ ಇಗ್ನಿಸ್ ಫೇಸ್‍ಲಿಫ್ಟ್ ಕಾರಿಗೆ ಈಗಾಗಲೇ 5000ಕ್ಕೂ ಅಧಿಕ ಬುಕ್ಕಿಂಗ್ ಅನ್ನು ಪಡೆದುಕೊಂಡಿದೆ. ಈ ಹೊಸ ಇಗ್ನಿಸ್ ಕಾರು ಐಎಂ-4 ಕಾನ್ಸೆಪ್ಟ್ ಆಧರಿಸಿದೆ. ಹಳೆಯ ಮಾದರಿಗೆ ಹೋಲಿಸಿದರೆ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಇದರಲ್ಲಿ ಮಾರುತಿ ಸುಜುಕಿ ಇಗ್ನಿಸ್ ಫೇಸ್‍ಲಿಫ್ಟ್ ಕಾರಿನ ಮುಂಭಾಗ ಹೊಸ ಬಂಪರ್ ಮತ್ತು ಮರುವಿನ್ಯಾಸ ಮಾಡಲಾಗಿರುವ ಫ್ರಂಟ್ ಗ್ರಿಲ್ ಅನ್ನು ಅಳವಡಿಸಲಾಗಿದೆ.

ಇದರೊಂದಿಗೆ ಮುಂಭಾಗದಲ್ಲಿ ಫಾಕ್ಸ್ ಪ್ಲೇಟ್‍ಗಳನ್ನು ಕೂಡ ಅಳವಡಿಸಿದೆ. ಇನ್ನು ಕಾರಿನ ಹೆಡ್‍ಲ್ಯಾಂಪ್ ಮತ್ತು ಪ್ರೊಜೆಕ್ಟರ್ ಹಾಗೆಯೇ ಎಲ್ಇಡಿ ಡಿಆರ್‍ಎಲ್‍ಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹಿಂಭಾಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
MOST READ: ಅನಾವರಣವಾಯ್ತು ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು

ಇದರಲ್ಲಿ ಹೊಸ ಟೇಲ್‍ಲ್ಯಾಂಪ್, ನವೀಕರಿಸಿದ ಬಂಪರ್ ಮತ್ತು ರೂಫ್ ರೂಫ್ ಮೌಂಟೆಡ್ ಸ್ಪಾಯ್ಲರ್ ಜೊತೆಗೆ ರಿಫ್ಲೆಕ್ಟರ್‌ಗಳಿವೆ. ಭಾರತದಲ್ಲಿ ಹೊಸದಾಗಿ ಪ್ರಾರಂಭಿಸಿದ ನೆಕ್ಸಾ ಪ್ರೀಮಿಯಂ ಡೀಲರ್‍ಗಳ ಮೂಲಕ ಈ ಕಾರನ್ನು ಮಾರಾಟ ಮಾಡಲಾಗುತ್ತಿದೆ.

ಹೊಸ ಇಗ್ನಿಸ್ ಕಾರು ಹೊಸ ಬಣ್ಣದ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ ಲ್ಯೂಸೆಂಟ್ ಆರೆಂಜ್ ಮತ್ತು ಟರ್ಕಿಷ್ ಬ್ಲೂ ಬಣ್ಣಗಳಿವೆ. ಇನ್ನೂ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಸ್ಟಾರ್‌ಗೇಜ್ ಬ್ಲೂ ಜೊತೆ ಬ್ಲ್ಯಾಕ್ ರೂಫ್, ಸ್ಟಾರ್‌ಗೇಜ್ ಬ್ಲೂ ಜೊತೆಗೆ ಸಿಲ್ವರ್ ರೂಫ್ ಮತ್ತು ಲ್ಯೂಸೆಂಟ್ ಆರೇಂಜ್ ಜೊತೆಗೆ ಬ್ಲ್ಯಾಕ್ ರೂಫ್ ಬಣ್ಣಗಳಿವೆ.
MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍ಯುವಿ

ಹೊಸ ಇಗ್ನಿಸ್ ಫೇಸ್‍ಲಿಫ್ಟ್ ಕಾರಿನಲ್ಲಿ ಇಂಟಿರಿಯರ್ ಕ್ಯಾಬಿನ್ ಅನ್ನು ನವೀಕರಿಸಲಾಗಿದೆ. ಇದರಲ್ಲಿ 7.0 ಇಂಚಿನ ಟಚ್‍ಸ್ಕ್ರೀನ್ ಜೊತೆಗೆ ಮಾರುತಿಯ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಇನ್ಫೋಟೇನ್‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದರೊಂದಿಗೆ ಆನ್-ಬೋರ್ಡ್ ನ್ಯಾವಿಗೇಷನ್ ಹೊಂದಿದೆ ಮತ್ತು ವಾಯ್ಸ್ ಕಮಾಂಡ್ ಅನ್ನು ಅಳವಡಿಸಲಾಗಿದೆ.

ಹೊಸ ಇಗ್ನಿಸ್ ಫೇಸ್‍ಲಿಫ್ಟ್ ಕಾರು 1.2 ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6,000 ಆರ್‍ಪಿಎಂನಲ್ಲಿ 83 ಬಿಹೆಚ್‍ಪಿ ಪವರ್ ಮತ್ತು 4,200 ಆರ್‍ಪಿಎಂನಲ್ಲಿ 113 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ. ಇದರೊಂದಿಗೆ 5 ಸ್ಪೀಡ್ ಎಎಂಟಿಯನ್ನು ಆಯ್ಕೆಯಾಗಿ ನೀಡಲಾಗಿದೆ.

ಬಜೆಟ್ ಆಧಾರಿತ ಹ್ಯಾಚ್‍ಬ್ಯಾಕ್‍ಗಳಿಂದಾಗಿ ಮಾರುತಿ ಸುಜುಕಿ ಕಂಪನಿಯು ಹೆಚ್ಚು ಹೆಸರುವಾಸಿಯಾಗಿದೆ. ಮಾರುತಿ ಸುಜುಕಿ ಇಗ್ನಿಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕಂಪನಿಯ ಹ್ಯಾಚ್‍ಬ್ಯಾಕ್‍ಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications