ಆಗಸ್ಟ್ ತಿಂಗಳಿನಲ್ಲಿ ಭರ್ಜರಿ ಏರಿಕೆ ಕಂಡ ಮಾರುತಿ ಇಗ್ನಿಸ್ ಮಾರಾಟ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಫೆಬ್ರವರಿ ಆರಂಭದಲ್ಲಿ ನಡೆದ 2020ರ ಆಟೋ ಎಕ್ಸ್‌ಪೋದಲ್ಲಿ ಇಗ್ನಿಸ್ ಫೇಸ್‌ಲಿಫ್ಟ್ ಕಾರನ್ನು ಪರಿಚಯಿಸಿತು. ಈ ಹೊಸ ಮಾರುತಿ ಇಗ್ನಿಸ್ ಕಾರನ್ನು ಭಾರತದಲ್ಲಿ ನೆಕ್ಸಾ ಪ್ರೀಮಿಯಂ ಡೀಲರ್ ಗಳ ಮೂಲಕ ಮಾರಾಟ ಮಾಡಲಾಗುತ್ತದೆ.

ಆಗಸ್ಟ್ ತಿಂಗಳಿನಲ್ಲಿ ಭರ್ಜರಿ ಏರಿಕೆ ಕಂಡ ಮಾರುತಿ ಇಗ್ನಿಸ್ ಮಾರಾಟ

ಬಿಡುಗಡೆಯಾದ ಆರಂಭದಲ್ಲಿ ಇಗ್ನಿಸ್ ಕಾರು ಬಲೆನೊ ಹ್ಯಾಚ್‌ಬ್ಯಾಕ್‌ನಷ್ಟು ದೊಡ್ಡ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ನಂತರದ ದಿನಗಳಲ್ಲಿ ಇಗ್ನಿಸ್ ಫೇಸ್‌ಲಿಫ್ಟ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿತು. ಇನ್ನು 2020ರ ಆಗಸ್ಟ್ ತಿಂಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಇಗ್ನಿಸ್ ಮಾದರಿಯ 3,262 ಯುನಿಟ್‌ಗಳು ಮಾರಾಟ ಮಾಡಿದೆ.

ಆಗಸ್ಟ್ ತಿಂಗಳಿನಲ್ಲಿ ಭರ್ಜರಿ ಏರಿಕೆ ಕಂಡ ಮಾರುತಿ ಇಗ್ನಿಸ್ ಮಾರಾಟ

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಇಗ್ನಿಸ್ ಮಾದರಿಯ 1,322 ಯುನಿಟ್‌ಗಳು ಮಾರಾಟವಾಗಿತ್ತು. ಕಳೆದ ವರ್ಷದ ಆಗಸ್ಟ್ ತಿಂಗಳ ಮಾರಾಟವನ್ನು ಈ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಶೇ.146.74 ರಷ್ಟು ಹೆಚ್ಚಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಆಗಸ್ಟ್ ತಿಂಗಳಿನಲ್ಲಿ ಭರ್ಜರಿ ಏರಿಕೆ ಕಂಡ ಮಾರುತಿ ಇಗ್ನಿಸ್ ಮಾರಾಟ

ಇನ್ನು ತಿಂಗಳಿಗೊಮ್ಮೆ, ಮಾರುತಿ ಇಗ್ನಿಸ್ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ. 2020ರ ಜುಲೈ ತಿಂಗಳ ಮಾರಾಟವನ್ನು ಹೋಲಿಸಿದರೆ ಆಗಸ್ಟ್ ತಿಂಗಳಲ್ಲಿ ಶೇ.47.369 ರಷ್ಟು ಹೆಚ್ಚಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಭರ್ಜರಿ ಏರಿಕೆ ಕಂಡ ಮಾರುತಿ ಇಗ್ನಿಸ್ ಮಾರಾಟ

ಮಾರುತಿ ಸುಜಿಕಿ ಇಗ್ನಿಸ್ ಕಾರಿನ ಆರಂಭಿಕ ಬೆಲೆಯು ರೂ.4.89 ಲಕ್ಷಗಳಾದರೆ, ಟಾಪ್=ಸ್ಪೆಕ್ ಮಾದರಿಯ ಬೆಲೆಯು ರೂ.7.19 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಆಗಸ್ಟ್ ತಿಂಗಳಿನಲ್ಲಿ ಭರ್ಜರಿ ಏರಿಕೆ ಕಂಡ ಮಾರುತಿ ಇಗ್ನಿಸ್ ಮಾರಾಟ

ಇನ್ನು ಮಾರುತಿ ಸುಜುಕಿ ಕಂಪನಿಯು ಇಗ್ನಿಸ್ ಹ್ಯಾಚ್‌ಬ್ಯಾಕ್‌ ಕಾರಿನ ಜೆಟ್ಟಾ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳನ್ನು ಸ್ಮಾರ್ಟ್‌ಪ್ಲೇ ಇನ್ಫೋಟೇನ್‌ಮೆಂಟ್ ಸಿಸ್ಟಂನೊಂದಿಗೆ ಇತ್ತೀಚೆಗೆ ಬಿಡುಗಡೆಗೊಳಿಸಿತು.

ಆಗಸ್ಟ್ ತಿಂಗಳಿನಲ್ಲಿ ಭರ್ಜರಿ ಏರಿಕೆ ಕಂಡ ಮಾರುತಿ ಇಗ್ನಿಸ್ ಮಾರಾಟ

ಮಾರುತಿ ಇಗ್ನಿಸ್ ಕಾರನ್ನು ಮೊದಲ ಬಾರಿಗೆ 2017ರಲ್ಲಿ ಬಿಡುಗಡೆಗೊಳಿಸಲಾಯಿತು. ಈ ಕಾರನ್ನು ಸಿಗ್ಮಾ, ಡೆಲ್ಟಾ, ಜೆಟ್ಟಾ ಮತ್ತು ಆಲ್ಫಾ ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾತ್ತದೆ. ಇಗ್ನಿಸ್ ನೆಕ್ಸಾ ಶೋರೂಂನಿಂದ ಮಾರಾಟವಾದ ಮೊದಲ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಕಾರು ಇದಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಆಗಸ್ಟ್ ತಿಂಗಳಿನಲ್ಲಿ ಭರ್ಜರಿ ಏರಿಕೆ ಕಂಡ ಮಾರುತಿ ಇಗ್ನಿಸ್ ಮಾರಾಟ

ಇಗ್ನಿಸ್ ಫೇಸ್‌ಲಿಫ್ಟ್ ಕಾರಿನಲ್ಲಿ 1.2-ಲೀಟರಿನ ಕೆ 12 ಬಿ ಬಿಎಸ್-6 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 83 ಬಿಹೆಚ್ ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆಗಸ್ಟ್ ತಿಂಗಳಿನಲ್ಲಿ ಭರ್ಜರಿ ಏರಿಕೆ ಕಂಡ ಮಾರುತಿ ಇಗ್ನಿಸ್ ಮಾರಾಟ

ಈ ಮಾರುತಿ ಸುಜುಕಿ ಇಗ್ನಿಸ್ ಫೇಸ್‌ಲಿಫ್ಟ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್-ಇಬಿಡಿ, ಡ್ಯುಯಲ್ ಏರ್‌ಬ್ಯಾಗ್ ಹಾಗೂ ಡ್ರೈವರ್ ಸೇಫ್ಟಿ ಅಲರ್ಟ್ ಗಳನ್ನು ನೀಡಲಾಗಿದೆ. ಫೇಸ್ ಲಿಫ್ಟ್ ಕಾರಿನಲ್ಲಿ ಲೈವ್ ಟ್ರಾಫಿಕ್, ವಾಯ್ಸ್ ರೆಕಗ್ನಿಷನ್, ವೆಹಿಕಲ್ ಇನ್ಫಾರ್ಮೆಷನ್ ಅಲರ್ಟ್ ನಂತಹ ಹೊಸ ಫೀಚರ್ ಗಳನ್ನು ಅಳವಡಿಸಲಾಗಿದೆ.

Most Read Articles

Kannada
English summary
Maruti Ignis Sales Up By Almost 147% In August 2020. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X