ಜನಪ್ರಿಯ ಕಾರುಗಳ ಫೆಸ್ಟಿವ್ ಎಡಿಷನ್‌ಗಳನ್ನು ಬಿಡುಗಡೆಗೊಳಿಸಿದ ಮಾರುತಿ ಸುಜುಕಿ

ದೀಪಾವಳಿ ಹಬ್ಬದ ಪ್ರಯುಕ್ತ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್ಐಎಲ್) ತನ್ನ ಹೆಚ್ಚು ಮಾರಾಟವಾದ ಆಲ್ಟೋ, ಸೆಲೆರಿಯೊ ಮತ್ತು ವ್ಯಾಗನ್ಆರ್ ಕಾರುಗಳ ಸ್ಪೆಷಲ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಜನಪ್ರಿಯ ಕಾರುಗಳ ಫೆಸ್ಟಿವ್ ಎಡಿಷನ್‌ಗಳನ್ನು ಬಿಡುಗಡೆಗೊಳಿಸಿದ ಮಾರುತಿ ಸುಜುಕಿ

ಈ ಹೊಸ ಮಾದರಿಗಳು ಸ್ಟ್ಯಾಂಡರ್ಡ್ ರೂಪಾಂತರಗಳಲ್ಲಿ ಹೊಸ ಸ್ಟೈಲಿಂಗ್ ಅಂಶಗಳು ಮತ್ತು ಫೀಚರ್ ಗಳನ್ನು ನೀಡುವ ಅಕ್ಸೆಸರೀಸ್ ಗಳನ್ನು ಒಳಗೊಂಡಿವೆ. ಮಾರುತಿ ಸುಜುಕಿ ಆಲ್ಟೋ ಫೆಸ್ಟಿವ್ ಎಡಿಷನ್ ಕಿಟ್ ನಲ್ಲಿ 6 ಇಂಚಿನ ಕೆನ್ವುಡ್ ಸ್ಪೀಕರ್ ಗಳು, ಸೆಕ್ಯೂರಿಟಿ ಸಿಸ್ಟಂ, ಡ್ಯುಯಲ್ -ಟೋನ್ ಸೀಟ್ ಕವರ್ ಮತ್ತು ಸ್ಟೀರಿಂಗ್ ವೀಲ್ ಕವರ್ ಹೊಂದಿರುವ ಪಯೋನೀರ್ ಟಚ್‌ಸ್ಕ್ರೀನ್ ಮ್ಯೂಸಿಕ್ ಸಿಸ್ಟಂ ಅನ್ನು ಒಳಗೊಂಡಿದೆ.

ಜನಪ್ರಿಯ ಕಾರುಗಳ ಫೆಸ್ಟಿವ್ ಎಡಿಷನ್‌ಗಳನ್ನು ಬಿಡುಗಡೆಗೊಳಿಸಿದ ಮಾರುತಿ ಸುಜುಕಿ

ಫೆಸ್ಟಿವ್ ಎಡಿಷನ್ ಗಳ ಬಗ್ಗೆ ಕುರಿತು ಮಾರುತಿ ಸುಜುಕಿ ಮಾರ್ಕೆಟಿಂಗ್ ಮತ್ತು ಸೇಲ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಮಾತನಡಿ, ಎಂಟ್ರಿ ಕಾರು ವಿಭಾಗವು ಈ ವರ್ಷ ಬೇಡಿಕೆಯ ಹೆಚ್ಚಳವಾಗಿದೆ. ಮಾರುತಿ ಸುಜುಕಿಯ ಪ್ರಮುಖ ಮಾದರಿಯಾದ ಆಲ್ಟೋ, ವ್ಯಾಗನ್ಆರ್ ಮತ್ತು ಸೆಲೆರಿಯೊ ಒಟ್ಟಾರೆಯಾಗಿ ಶೇಕಡಾ 75 ರಷ್ಟು ಕೊಡುಗೆ ನೀಡುತ್ತವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಜನಪ್ರಿಯ ಕಾರುಗಳ ಫೆಸ್ಟಿವ್ ಎಡಿಷನ್‌ಗಳನ್ನು ಬಿಡುಗಡೆಗೊಳಿಸಿದ ಮಾರುತಿ ಸುಜುಕಿ

ಪ್ರಸ್ತುತ ಗ್ರಾಹಕರು ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ನೀಡುವ ಆಯ್ಕೆಗಳನ್ನು ಹುಡುಕುತ್ತಿದ್ದಾರೆ. ಹಬ್ಬದ ಉತ್ಸಾಹದಿಂದ ಆಚರಿಸಲು, ನಾವು ಈಗ ಆಲ್ಟೋ, ಸೆಲೆರಿಯೊ ಮತ್ತು ವ್ಯಾಗನ್ಆರ್ ಮಾದರಿಗಳ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆಗೊಳಿಸಲಾಗಿದೆ.

ಜನಪ್ರಿಯ ಕಾರುಗಳ ಫೆಸ್ಟಿವ್ ಎಡಿಷನ್‌ಗಳನ್ನು ಬಿಡುಗಡೆಗೊಳಿಸಿದ ಮಾರುತಿ ಸುಜುಕಿ

ಆಲ್ಟೋ, ಸೆಲೆರಿಯೊ ಮತ್ತು ವ್ಯಾಗನ್ಆರ್ ಕಾರುಗಳ ಸ್ಪೆಷಲ್ ಎಡಿಷನ್ ಆಕರ್ಷಕ ಲುಕ್ ನೊಂದಿಗೆ ಪ್ರತಿ ಆವೃತ್ತಿಯು ಅಕ್ಸೆಸರೀಸ್ ಕಿಟ್‌ಗಳನ್ನು ಹೊಂದಿದೆ. ಈ ಹಬ್ಬದ ಸಮಯದಲ್ಲಿ ಗ್ರಾಹಕರು ತಮ್ಮ ಮೆಚ್ಚಿನ ಮಾದರಿಗಳ ಸ್ಪೆಷಲ್ ಎಡಿಷನ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಜನಪ್ರಿಯ ಕಾರುಗಳ ಫೆಸ್ಟಿವ್ ಎಡಿಷನ್‌ಗಳನ್ನು ಬಿಡುಗಡೆಗೊಳಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಸೆಲೆರಿಯೊ ಫೆಸ್ಟಿವಲ್ ಎಡಿಷನ್ ಕಿಟ್‌ನಲ್ಲಿ ಸೋನಿ ಡಬಲ್-ದಿನ್ ಆಡಿಯೊ ಸಿಸ್ಟಂನೊಂದಿಗೆ ಬ್ಲೂಟೂತ್ ಕನೆಕ್ಟಿವಿಟಿ, ಸ್ಟೈಲಿಶ್ ಸೀಟ್ ಕವರ್, ಆಕರ್ಷಕ ಪಿಯಾನೋ ಬ್ಲ್ಯಾಕ್ ಬಾಡಿ ಸೈಡ್ ಮೋಲ್ಡಿಂಗ್ ಮತ್ತು ಡಿಸೈನರ್ ಮ್ಯಾಟ್‌ಗಳಿವೆ.

ಜನಪ್ರಿಯ ಕಾರುಗಳ ಫೆಸ್ಟಿವ್ ಎಡಿಷನ್‌ಗಳನ್ನು ಬಿಡುಗಡೆಗೊಳಿಸಿದ ಮಾರುತಿ ಸುಜುಕಿ

ಕೊನೆಯದಾಗಿ, ಮಾರುತಿ ಸುಜುಕಿ ವ್ಯಾಗನ್ಆರ್ ಫೆಸ್ಟಿವ್ ಎಡಿಷನ್ ಕಿಟ್ ಮುಂಭಾಗ ಮತ್ತು ಹಿಂಭಾಗದ ಬಂಪರ್ ಪ್ರೊಟೆಕ್ಟರ್, ಮುಂಭಾಗದ ಗ್ರಿಲ್ ಕ್ರೋಮ್ ಅಲಂಕರಿಸಲು, ಸೈಡ್ ಸ್ಕರ್ಟ್‌ಗಳು, ಸ್ಟೈಲಿಶ್ ವಿಷಯದ ಸೀಟ್ ಕವರ್, ಇಂಟೀರಿಯರ್ ಸ್ಟೈಲಿಂಗ್ ಕಿಟ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಕಾಸ್ಮೆಟಿಕ್ ನವೀಕರಣಗಳನ್ನು ಪಡೆಯುತ್ತದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಜನಪ್ರಿಯ ಕಾರುಗಳ ಫೆಸ್ಟಿವ್ ಎಡಿಷನ್‌ಗಳನ್ನು ಬಿಡುಗಡೆಗೊಳಿಸಿದ ಮಾರುತಿ ಸುಜುಕಿ

ಆಲ್ಟೋ ಮತ್ತು ಸೆಲೆರಿಯೊದ ಫೆಸ್ಟಿವ್ ಎಡಿಷನ್ ಬೆಲೆಗಳು ಕ್ರಮವಾಗಿ ಕಿಟ್‌ಗಳ ಬೆಲೆ ರೂ.25,490 ಮತ್ತು ರೂ.25,990 ಗಳಾಗಿದೆ. ಈ ಅಕ್ಸೆಸರೀಸ್ ಕಿಟ್‌ಗಳನ್ನು ಮಾರುತಿ ಸುಜುಕಿಯ ಅಧಿಕೃತ ಡೀಲರುಗಳಲಿ ಅಳವಡಿಸಬಹುದು..

ಜನಪ್ರಿಯ ಕಾರುಗಳ ಫೆಸ್ಟಿವ್ ಎಡಿಷನ್‌ಗಳನ್ನು ಬಿಡುಗಡೆಗೊಳಿಸಿದ ಮಾರುತಿ ಸುಜುಕಿ

ಆಲ್ಟೋ ಕಾರು ಸತತ 16 ವರ್ಷಗಳಿಂದ ದೇಶದಲ್ಲಿ ಹೆಚ್ಚು ಮಾರಾಟವಾದ ಕಾರು ಆಗಿದ್ದರೆ, ವ್ಯಾಗನ್ಆರ್ ಎರಡು ದಶಕಗಳಿಂದ ಹೆಚ್ಚು ಮಾರಾಟವಾದ ಕಾರು ಆಗಿದೆ. ಇನ್ನು ಎರಡನೇ ತಲೆಮಾರಿನ ಸೆಲೆರಿಯೊ ಕಾರನ್ನು ಅಭಿವೃದ್ದಿಪಡಿಸಲಾಗುತ್ತಿದೆ.

Most Read Articles

Kannada
English summary
Maruti Suzuki Alto, Celerio & Wagon R Festive Editions Launched In India. Read In Kannada.
Story first published: Thursday, November 12, 2020, 16:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X