ಮಾರುತಿ ಸುಜುಕಿ ಕಂಪನಿ ನೀಡುತ್ತಿದೆ ರಿಪಬ್ಲಿಕ್ ಡೇ ಸರ್ವಿಸ್
ಭಾರತದ ಅಗ್ರಗಣ್ಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತಾನು ನೀಡುವ ಸೇವೆಗಾಗಿ ಹೆಸರುವಾಸಿಯಾಗಿದೆ. ಮಾರುತಿ ಸುಜುಕಿ ಕಂಪನಿಯು ದೇಶಾದ್ಯಂತವಿರುವ ತನ್ನ ಗ್ರಾಹಕರಿಗಾಗಿ ರಿಪಬ್ಲಿಕ್ ಡೇ ಸರ್ವಿಸ್ ಕ್ಯಾಂಪ್‍ಗಳನ್ನು ಆಯೋಜಿಸಿದೆ.

ಈ ಸರ್ವಿಸ್ ಕ್ಯಾಂಪ್‍ಗಳು ಜನವರಿ 15ರಿಂದ 31ರವರೆಗೆ ನಡೆಯಲಿವೆ. ಈ ಕ್ಯಾಂಪ್‍ನಲ್ಲಿ ಮಾರುತಿ ಸುಜುಕಿ ಕಂಪನಿಯು ತನ್ನ ಗ್ರಾಹಕರಿಗೆ ಸರ್ವಿಸ್ ಸೇರಿದಂತೆ ಹಲವಾರು ಆಫರ್‍ಗಳನ್ನು ನೀಡಲಿದೆ. 71ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಕಂಪನಿಯು ತನ್ನ ಗ್ರಾಹಕರಿಗೆ ಲೇಬರ್ ಚಾರ್ಜ್, ಬಿಡಿಭಾಗಗಳು ಹಾಗೂ ವಾರಂಟಿಗಳ ಮೇಲೆ ಆಫರ್‍ಗಳನ್ನು ನೀಡಲಿದೆ.

ಈ ಮೂಲಕ ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿದೆ. ಮಾರುತಿ ಸುಜುಕಿ ಕಂಪನಿಯು ಕಾಲ ಕಾಲಕ್ಕೆ ಈ ರೀತಿಯ ಆಫರ್‍ಗಳನ್ನು ನೀಡುತ್ತಲೇ ಇರುತ್ತದೆ. ಮಾರುತಿ ಸುಜುಕಿ ಕಂಪನಿಯು ಸದ್ಯಕ್ಕೆ ದೇಶಾದ್ಯಂತ 3800ಕ್ಕೂ ಹೆಚ್ಚು ಸರ್ವಿಸ್ ಟಚ್ ಪಾಯಿಂಟ್‍ಗಳನ್ನು ಹೊಂದಿದೆ.

ಈ ಸರ್ವಿಸ್ ಕೇಂದ್ರಗಳಲ್ಲಿ ಪ್ರತಿದಿನ 45,000ಕ್ಕೂ ಹೆಚ್ಚು ಕಾರುಗಳನ್ನು ಸರ್ವಿಸ್ ಮಾಡಲಾಗುತ್ತದೆ. ಗ್ರಾಹಕರ ಆದ್ಯತೆಗಳು ಬದಲಾಗುವ ಹಿನ್ನೆಲೆಯಲ್ಲಿ ಹೊಸದಾಗಿ ರಿಪಬ್ಲಿಕ್ ಡೇ ಸರ್ವಿಸ್ ಕ್ಯಾಂಪ್ ಆಫರ್ ನೀಡಲಾಗುತ್ತಿದೆ ಎಂದು ಮಾರುತಿ ಸುಜುಕಿ ಕಂಪನಿಯು ತಿಳಿಸಿದೆ.

ರಿಪಬ್ಲಿಕ್ ಡೇ ಸರ್ವಿಸ್ ಕ್ಯಾಂಪ್ ನಮ್ಮ ಗ್ರಾಹಕರ ಕಡೆಗೆ ನಾವು ಹೊಂದಿರುವ ಬದ್ದತೆಯನ್ನು ತೋರಿಸುತ್ತದೆ. ಈ ಕ್ಯಾಂಪ್‍ನಲ್ಲಿಯೂ ಸಹ ನಮ್ಮ ಟೆಕ್ನಿಷಿಯನ್‍ಗಳು ಪ್ರತಿಯೊಂದು ಕಾರುಗಳನ್ನು ಜಾಗರೂಕತೆಯಿಂದ ಪರೀಕ್ಷಿಸಲಿದ್ದಾರೆ ಎಂದು ಮಾರುತಿ ಸುಜುಕಿ ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮಾರುತಿ ಸುಜುಕಿ ಕಂಪನಿಯು ಸದ್ಯಕ್ಕೆ ತನ್ನ ಸರಣಿಯಲ್ಲಿರುವ ಜನಪ್ರಿಯ ಎಸ್‍ಯುವಿಯಾದ ವಿಟಾರ ಬ್ರಿಝಾದ ಫೇಸ್‍ಲಿಫ್ಟ್ ಆವೃತ್ತಿಯನ್ನು ಅಭಿವೃದ್ಧಿಪಡಿಸುತ್ತಿದೆ. ವಿಟಾರ ಬ್ರಿಝಾ ಫೇಸ್‍ಲಿಫ್ಟ್ ಆವೃತ್ತಿಯು ಫೆಬ್ರವರಿ 6ರಂದು ದೆಹಲಿಯಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗಲಿದೆ.

ಕಳೆದ ವರ್ಷ ದೇಶಿಯ ಆಟೋಮೊಬೈಲ್ ಉದ್ಯಮವು ಕುಸಿತವನ್ನು ಕಂಡಿತ್ತು. ಇದರಿಂದಾಗಿ ಮಾರುತಿ ಸುಜುಕಿ ಕಂಪನಿಯು ಸಹ ಕಳೆದ ವರ್ಷ ಮಾರಾಟದಲ್ಲಿ ಹಿನ್ನಡೆಯನ್ನು ಅನುಭವಿಸಿತ್ತು. ಮಾರುತಿ ಸುಜುಕಿ ಕಂಪನಿಯು ಈ ವರ್ಷ ಮಾರಾಟವು ಹೆಚ್ಚಾಗಬಹುದೆಂಬ ನಿರೀಕ್ಷೆಯನ್ನು ಹೊಂದಿದೆ.

ಮಾರುತಿ ಸುಜುಕಿ ಕಂಪನಿಯು ಕೆಲವು ತಿಂಗಳ ಹಿಂದೆ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಸ ಹ್ಯಾಚ್‍ಬ್ಯಾಕ್ ಕಾರ್ ಆದ ಎಸ್ ಪ್ರೆಸ್ಸೊವನ್ನು ಬಿಡುಗಡೆಗೊಳಿಸಿತ್ತು. ಹೊಸ ಎಸ್ ಪ್ರೆಸ್ಸೊ ಕಾರ್ ಅನ್ನು ಮಾರುತಿ ಸುಜುಕಿ ಕಂಪನಿಯ ಹಾರ್ಟ್‍ಟೆಕ್ ಪ್ಲಾಟ್‍ಫಾರಂನಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.


Click it and Unblock the Notifications