ಮನೆಸಾರ್ ಸೇರಿದಂತೆ ಮೂರು ಘಟಕಗಳಲ್ಲೂ ಕಾರು ಉತ್ಪಾದನೆ ಶುರು ಮಾಡಿದ ಮಾರುತಿ ಸುಜುಕಿ

ಇಡೀ ವಿಶ್ವವನ್ನೇ ಆತಂಕಕ್ಕೆ ತಳ್ಳಿರುವ ಮಾಹಾಮಾರಿ ಕರೋನಾ ವೈರಸ್ ಮಟ್ಟ ಹಾಕುವುದಕ್ಕಾಗಿ ಸದ್ಯ ಮೂರನೇ ಹಂತದ ಲಾಕ್‌ಡೌನ್ ವಿಧಿಸಿರುವ ಕೇಂದ್ರ ಸರ್ಕಾರವು ಆರ್ಥಿಕ ಪುನಶ್ಚೇತನಕ್ಕಾಗಿ ಕೈಗಾರಿಕಾ ವಲಯಕ್ಕೆ ಷರತ್ತುಬದ್ದ ವಿನಾಯ್ತಿಗಳನ್ನು ಘೋಷಿಸಿದ್ದು, ಆಟೋ ಕಂಪನಿಗಳು ಕೂಡಾ ಹೊಸ ಮಾರ್ಗಸೂಚಿ ಅನುಸಾರವಾಗಿ ವಾಹನ ಉತ್ಪಾದನೆ ಮತ್ತು ಮಾರಾಟಕ್ಕೆ ಚಾಲನೆ ನೀಡಿವೆ.

ಮನೆಸಾರ್ ಸೇರಿದಂತೆ ಮೂರು ಘಟಕಗಳಲ್ಲೂ ಕಾರು ಉತ್ಪಾದನೆ ಶುರು ಮಾಡಿದ ಮಾರುತಿ ಸುಜುಕಿ

ದೇಶದ ಅತಿದೊಡ್ಡ ಕಾರು ಉತ್ಪಾದನಾ ಕಂಪನಿ ಮಾರುತಿ ಸುಜುಕಿ ಕೂಡಾ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ ಕಾರು ಉತ್ಪಾದನೆಯನ್ನು ಪುನಾರಂಭಿಸಿದ್ದು, ಮನೆಸಾರ್ ಮತ್ತು ಗುರುಗ್ರಾಮ್‌ನಲ್ಲಿರುವ ಎರಡು ವಾಹನ ಉತ್ಪಾದನಾ ಘಟಕಗಳಲ್ಲೂ ಗರಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳೊಂದಿಗೆ ಉತ್ಪಾದನಾ ಪ್ರಕ್ರಿಯೆಗ ಮರುಚಾಲನೆ ನೀಡಿದೆ. ಇದಕ್ಕಾಗಿಯೇ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸೋಂಕು ಹರಡದಂತೆ ಗರಿಷ್ಠ ಎಚ್ಚರಿಕೆ ವಹಿಸಲಾಗಿದೆ.

ಮನೆಸಾರ್ ಸೇರಿದಂತೆ ಮೂರು ಘಟಕಗಳಲ್ಲೂ ಕಾರು ಉತ್ಪಾದನೆ ಶುರು ಮಾಡಿದ ಮಾರುತಿ ಸುಜುಕಿ

ಉತ್ಪಾದನಾ ಘಟಕಗಳಲ್ಲಿ ಶೇ.50ಕ್ಕಿಂತ ಕಡಿಮೆ ಪ್ರಮಾಣದ ಉದ್ಯೋಗಿಗಳೊಂದಿಗೆ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳಲಾಗಿದ್ದು, ಉದ್ಯೋಗದ ಸ್ಥಳದಲ್ಲಿ ಸಾಮಾಜಿಕ ಅಂತರದ ಜೊತೆಗೆ ಗುಣಮಟ್ಟದ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್ ಮತ್ತು ಹ್ಯಾಂಡ್ ಗ್ಲೌಸ್ ಬಳಕೆಯು ಕಡ್ಡಾಯವಾಗಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಮನೆಸಾರ್ ಸೇರಿದಂತೆ ಮೂರು ಘಟಕಗಳಲ್ಲೂ ಕಾರು ಉತ್ಪಾದನೆ ಶುರು ಮಾಡಿದ ಮಾರುತಿ ಸುಜುಕಿ

ಹಾಗೆಯೇ ಅಧಿಕೃತ ವಾಹನಗಳ ಮಾರಾಟ ಮಳಿಗೆಗಳಲ್ಲೂ ಹೆಚ್ಚಿನ ಮಟ್ಟದ ಸುರಕ್ಷಾ ಕ್ರಮಗಳನ್ನು ತೆಗದುಕೊಳ್ಳಲಾಗುತ್ತಿದ್ದು, ನಿಯಮಿತವಾಗಿ ಟೆಸ್ಟಿಂಗ್ ವಾಹನಗಳ ಸ್ವಚ್ಚತೆ, ಸಿಬ್ಬಂದಿಯ ಆರೋಗ್ಯ ತಪಾಸಣೆ, ಸಿಬ್ಬಂದಿ ನಡುವೆ ಸಾಮಾಜಿಕ ಅಂತರ, ಹ್ಯಾಂಡ್ ಸ್ಯಾನಿಟೈಜ್ ಮತ್ತು ಫೇಸ್ ಶೀಲ್ಡ್ ಕಡ್ಡಾಯ ಬಳಕೆ ಮಾಡಬೇಕಿದೆ.

ಮನೆಸಾರ್ ಸೇರಿದಂತೆ ಮೂರು ಘಟಕಗಳಲ್ಲೂ ಕಾರು ಉತ್ಪಾದನೆ ಶುರು ಮಾಡಿದ ಮಾರುತಿ ಸುಜುಕಿ

ವೈರಸ್ ಭೀತಿಯಿಂದಾಗಿ ವಾಹನಗಳನ್ನು ನೇರವಾಗಿ ಶೋರೂಂನಲ್ಲಿ ಮಾರಾಟ ವ್ಯವಹಾರವನ್ನು ಕೈಬಿಟ್ಟಿರುವ ವಾಹನ ಕಂಪನಿಗಳು ಸುರಕ್ಷಾ ಮಾರ್ಗಸೂಚಿಯೆಂತೆ ಆನ್‌ಲೈನ್ ಬುಕ್ಕಿಂಗ್ ಪಡೆದುಕೊಂಡು ಗ್ರಾಹಕರ ಮನೆ ಬಾಗಿಲಿಗೆ ಉತ್ಪನ್ನಗಳನ್ನು ತಲುಪಿಸುತ್ತಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಮನೆಸಾರ್ ಸೇರಿದಂತೆ ಮೂರು ಘಟಕಗಳಲ್ಲೂ ಕಾರು ಉತ್ಪಾದನೆ ಶುರು ಮಾಡಿದ ಮಾರುತಿ ಸುಜುಕಿ

ಇನ್ನು ಮಾಹಾಮಾರಿ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸ್ಪಂದಿಸಿರುವ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಧನಸಹಾಯದ ಜೊತೆ ವೈದ್ಯಕೀಯ ಉಪಕರಣಗಳನ್ನು ಉತ್ಪಾದನೆ ಮಾಡಿ ಪೂರೈಕೆ ಮಾಡುತ್ತಿವೆ.

ಮನೆಸಾರ್ ಸೇರಿದಂತೆ ಮೂರು ಘಟಕಗಳಲ್ಲೂ ಕಾರು ಉತ್ಪಾದನೆ ಶುರು ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕೂಡಾ ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ತನ್ನದೆ ಪಾತ್ರವಹಿಸುತ್ತಿದ್ದು, ತನ್ನ ಸಹಭಾಗಿತ್ವದ ಸಂಸ್ಥೆಗಳ ಜೊತೆಗೂಡಿ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್, ವೈದ್ಯರ ಬಳಸುವ ಪ್ರೊಟೆಕ್ವಿವ್ ಕ್ಲಾಥ್ ಸೇರಿ ಪ್ರತಿ ತಿಂಗಳು 10 ಸಾವಿರ ವೆಂಟಿಲೇಟರ್‌ಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದೆ.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಮನೆಸಾರ್ ಸೇರಿದಂತೆ ಮೂರು ಘಟಕಗಳಲ್ಲೂ ಕಾರು ಉತ್ಪಾದನೆ ಶುರು ಮಾಡಿದ ಮಾರುತಿ ಸುಜುಕಿ

ಹಾಗೆಯೇ ಲಾಕ್‌ಡೌನ್ ಅವಧಿಯಲ್ಲಿ ಯಾವುದೇ ಆದಾಯವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವರರ ನೆರವಿಗೂ ಬಂದಿರುವ ಮಾರುತಿ ಸುಜುಕಿ ದಿನಂಪ್ರತಿ ದೇಶದ ವಿವಿಧಡೆ 7 ಸಾವಿರ ಜನರಿಗೆ ಊಟದ ಪೊಟ್ಟಣಗಳ ವಿತರಣೆ ಜೊತೆಗೆ ದಿನಬಳಕೆಯ ಆಹಾರ ಪದಾರ್ಥಗಳ ಪೊಟ್ಟಣಗಳನ್ನು ವಿತರಿಸುತ್ತಿದೆ.

Most Read Articles

Kannada
English summary
Maruti Suzuki restarts production details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X