ನೆಕ್ಸಾ ಗ್ರಾಹಕರಿಗಾಗಿ ಡಿಜಿಟಲ್ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್ ತೆರೆದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ತನ್ನ ಪ್ರೀಮಿಯಂ ಕಾರು ಖರೀದಿದಾರರಿಗೆ ಅತಿ ಸರಳ ಸಾಲ ಸೌಲಭ್ಯಗಳನ್ನು ಒದಗಿಸುವ ಸಂಬಂಧ ಒಂದೇ ಸೂರಿನಡಿ ವಿವಿಧ ಬ್ಯಾಂಕ್‌ಗಳ ಸಾಲ ಸೌಲಭ್ಯಗಳ ಮಾಹಿತಿಗಾಗಿ ಡಿಜಿಟಲ್ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್‌ಗೆ ಚಾಲನೆ ನೀಡಿದೆ.

ಡಿಜಿಟಲ್ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್ ತೆರೆದ ಮಾರುತಿ ಸುಜುಕಿ

ದಸರಾ ಮತ್ತು ದೀಪಾವಳಿ ನಂತರ ಇಯರ್ ಎಂಡ್ ಆಫರ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ಆಟೋ ಕಂಪನಿಗಳು ಗ್ರಾಹಕರಿಗೆ ಗರಿಷ್ಠ ಆಫರ್ ನೀಡುತ್ತಿದ್ದು, ಮಾರುತಿ ಸುಜುಕಿ ಸಹ ವಿವಿಧ ಡಿಸ್ಕೌಂಟ್ ಆಫರ್‌ಗಳೊಂದಿಗೆ ಕಾರು ಖರೀದಿಯನ್ನು ಸುಲಭಗೊಳಿಸಲು ಡಿಜಿಟಲ್ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್‌ಗೆ ಚಾಲನೆ ನೀಡಿದೆ. ಆರಂಭಿಕವಾಗಿ ಹೊಸ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್ ಅನ್ನು ನೆಕ್ಸಾದಲ್ಲಿನ ಕಾರು ಖರೀದಿದಾರರಿಗೆ ಮಾತ್ರ ಈ ಸೇವೆ ಲಭ್ಯವಿದ್ದು, ಶೀಘ್ರದಲ್ಲೇ ಅರೆನಾ ಕಾರು ಖರೀದಿದಾರಿಗೂ ಹೊಸ ಹಣಕಾಸು ಸೇವೆಯನ್ನು ವಿಸ್ತರಿಸಲಿದೆ.

ಡಿಜಿಟಲ್ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್ ತೆರೆದ ಮಾರುತಿ ಸುಜುಕಿ

ಮಾರುತಿ ಸುಜುಕಿಯು ವಿವಿಧ ಕಾರು ಮಾದರಿಗಳಿಗೆ ಎರಡು ಮಾದರಿಯ ಮಾರಾಟ ಸೌಲಭ್ಯವನ್ನು ಹೊಂದಿದ್ದು, ಸಾಮಾನ್ಯ ಕಾರು ಮಾದರಿಗಳನ್ನು ಅರೆನಾದಲ್ಲಿ ಮತ್ತು ಪ್ರೀಮಿಯಂ ಕಾರು ಮಾದರಿಗಳನ್ನು ನೆಕ್ಸಾ ಶೋರೂಂಗಳಲ್ಲಿ ಮಾರಾಟ ಮಾಡುತ್ತದೆ.

ಡಿಜಿಟಲ್ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್ ತೆರೆದ ಮಾರುತಿ ಸುಜುಕಿ

ಅರೆನಾದಲ್ಲಿ ಎಸ್-ಪ್ರೆಸ್ಸೊ, ಸ್ವಿಫ್ಟ್, ವಿಟಾರಾ ಬ್ರೆಝಾ, ಆಲ್ಟೊ, ವ್ಯಾಗನ್ಆರ್, ಡಿಸೈರ್, ಇಕೋ, ಸೆಲೆರಿಯೊ, ಎರ್ಟಿಗಾ ಕಾರುಗಳ ಮಾರಾಟ ಹೊಂದಿದ್ದರೆ ನೆಕ್ಸಾದಲ್ಲಿ ಇಗ್ನಿಸ್, ಬಲೆನೊ, ಎರ್ಟಿಗಾ ಎಕ್ಸ್6, ಎಸ್-ಕ್ರಾಸ್ ಮತ್ತು ಸಿಯಾಜ್ ಕಾರುಗಳ ಮಾರಾಟ ಹೊಂದಿದೆ.

ಡಿಜಿಟಲ್ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್ ತೆರೆದ ಮಾರುತಿ ಸುಜುಕಿ

ಮಾರುತಿ ಸುಜುಕಿಯು ಪರಿಚಯಿಸಿರುವ ಹೊಸ ಡಿಜಿಟಲ್ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್ ಸೇವೆಗಳು ನೆಕ್ಸಾದಲ್ಲಿನ ಕಾರು ಮಾದರಿಗಳಿಗೆ ಮಾತ್ರ ಲಭ್ಯವಿದ್ದು, ಹೊಸ ಕಾರು ಖರೀದಿದಾರರಿಗೆ ಎಂಡ್-ಟು-ಎಂಡ್ ಮತ್ತು ಲೈವ್ ಕಾರ್ ಫೈನಾನ್ಸ್ ಒದಗಿಸುವ ಗುರಿ ಹೊಂದಿದೆ. ಕಾರ್ ಫೈನಾನ್ಸ್ ಆಯ್ಕೆಯನ್ನು ಸರಳಗೊಳಿಸುವ ಉದ್ದೇಶದಿಂದ ಸಂಪೂರ್ಣ ಆಟೋ ಫೈನಾನ್ಸ್ ಅಗತ್ಯಗಳಿಗಾಗಿ ‘ಒನ್ ಸ್ಟಾಪ್ ಶಾಪ್' ಒದಗಿಸಲಾಗಿದ್ದು, ಗ್ರಾಹಕರು ತಮ್ಮ ಅಗತ್ಯತೆ ಮತ್ತು ಅನುಕೂಲಕ್ಕೆ ತಕ್ಕಂತೆ ಫೈನಾನ್ಸ್ ಆಯ್ಕೆಗಳನ್ನು ಪಡೆದುಕೊಳ್ಳಬಹುದು.

ಡಿಜಿಟಲ್ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್ ತೆರೆದ ಮಾರುತಿ ಸುಜುಕಿ

ಕಾರುಗಳ ಖರೀದಿಗೆ ಸುಲಭವಾದ ಸಾಲಸೌಲಭ್ಯ ಯಾವುದು? ಯಾವ ಬ್ಯಾಂಕ್ ಸಾಲದಿಂದ ಎಷ್ಟು ಲಾಭ? ಯಾವ ಮಾದರಿಯು ಸಾಲ ಸೌಲಭ್ಯ ಮರುಪಾವತಿಗೆ ಸರಳವಾಗಿರುತ್ತೆ ಎನ್ನುವುದನ್ನು ಡಿಜಿಟಲ್ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್ ಅತಿ ಸುಲಭವಾಗಿ ವಿವರಿಸುತ್ತದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಡಿಜಿಟಲ್ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್ ತೆರೆದ ಮಾರುತಿ ಸುಜುಕಿ

ಮಾರುತಿ ಸುಜುಕಿಯು ಸದ್ಯ ಎಚ್‌ಡಿಎಫ್‌ಸಿ ಬ್ಯಾಂಕ್, ಯೆಸ್ ಬ್ಯಾಂಕ್, ಐಸಿಸಿಐ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಚೋಳಮಂಡಲಂ ಫೈನಾನ್ಸ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಮಹೀಂದ್ರಾ ಫೈನಾನ್ಸ್ ಮತ್ತು ಕೊಟಕ್ ಮಹೀಂದ್ರಾ ಪ್ರೈಮ್ ಜೊತೆ ಪಾಲುದಾರಿಕೆ ಹೊಂದಿದ್ದು, ಸಾಕಷ್ಟು ಹಣಕಾಸು ಆಯ್ಕೆಗಳು ಗ್ರಾಹಕರಿಗೆ ಲಭ್ಯವಿದೆ.

ಡಿಜಿಟಲ್ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್ ತೆರೆದ ಮಾರುತಿ ಸುಜುಕಿ

ಈ ಮೂಲಕ ಡಿಜಿಟಲ್ ಸೇವೆಯು ಸುಲಭವಾಗಿ ಹಣಕಾಸಿನ ನೆರವು ಆಯ್ಕೆಗಳನ್ನು ನೀಡುವುದ ಜೊತೆಗೆ ಸಾಲ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಸಂಪೂರ್ಣವಾಗಿ ಪಾರದರ್ಶಕವಾಗಸಿಲು ಸಹಕಾರಿಯಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಡಿಜಿಟಲ್ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್ ತೆರೆದ ಮಾರುತಿ ಸುಜುಕಿ

ಡಿಜಿಟಲ್ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್ ಸೇವೆಯನ್ನು ಸದ್ಯ ದೆಹಲಿ, ಗುರುಗ್ರಾಮ್, ಲಕ್ನೋ, ಜೈಪುರ್, ಮುಂಬೈ, ಪುಣೆ, ಅಹಮದಾಬಾದ್, ಚೆನ್ನೈ, ಬೆಂಗಳೂರು, ಹೈದರಾಬಾದ್, ಇಂದೋರ್, ಕೋಲ್ಕತಾ, ಕೊಚ್ಚಿ, ಗುವಾಹಟಿ, ಗೋವಾ, ಭುವನೇಶ್ವರ, ಭೋಪಾಲ್, ಕೊಯಮತ್ತೂರು, ಸೂರತ್, ವಡೋದರಾ, ರಾಂಚಿ, ರಾಯ್‌ಪುರ್, ಕಾನ್ಪುರ್, ವಿಜಯವಾಡ ಮತ್ತು ಡೆಹ್ರಾಡೂನ್ ನಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ಅರೆನಾ ಶೋರೂಂಗಳಿಗೂ ಹೊಸ ಹಣಕಾಸು ಸೇವೆಯು ವಿಸ್ತರಣೆಗೊಳ್ಳಲಿದೆ.

Most Read Articles

Kannada
English summary
Maruti Rolls Out Digital Finance Platform For Nexa Customers. Read in Kannada.
Story first published: Thursday, December 10, 2020, 12:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X