ಪಾತಾಳಕ್ಕೆ ಕುಸಿದ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರಿನ ಮಾರಾಟ

ಕಳೆದ ಫೆಬ್ರವರಿ ತಿಂಗಳ ಕಾರು ಮಾರಾಟದ ಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯು ಮುಂಚೂಣಿಯಲ್ಲಿದೆ. ಆದರೆ ಮಾರುತಿ ಕಂಪನಿಯ ಕಾರುಗಳ ಸರಣಿಯಲ್ಲಿ ಕೆಲವು ಕಾರುಗಳ ಮಾರಾಟದಲ್ಲಿ ಗಮನಾರ್ಹ ಕುಸಿತವನ್ನು ಕಂಡಿದೆ.

ಪಾತಾಳಕ್ಕೆ ಕುಸಿದ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರಿನ ಮಾರಾಟ

ಕಳೆದ ಫೆಬ್ರವರಿ ತಿಂಗಳಲ್ಲಿ ಮಾರುತಿ ಸುಜುಕಿ ಕಂಪನಿಯ ಜನಪ್ರಿಯ ಎಸ್-ಕ್ರಾಸ್ ಕಾರಿನ ಒಂದು ಯುನಿಟ್ ಕೂಡ ಮಾರಾಟವಾಗಿಲ್ಲ. ಜನಪ್ರಿಯ ಮಾರುತಿ ಸುಜುಕಿ ಕಂಪನಿಗೆ ಎಸ್-ಕ್ರಾಸ್ ಕಾರಿನ ಒಂದು ಯುನಿಟ್‍ ಅನ್ನು ಕೂಡ ಮಾರಾಟ ಮಾಡಲು ಸಾಧ್ಯವಾಗಿಲ್ಲ. ಡೀಸೆಲ್ ಎಸ್-ಕ್ರಾಸ್ ಕಾರಿನ ಮಾರಾಟದಲ್ಲಿ ಕುಸಿತ ಹಿನ್ನೆಲೆಯಲ್ಲಿ ಕಳೆದ ತಿಂಗಳ ಕೊನೆಯಲ್ಲಿ ಇದನ್ನು ಸ್ಥಗಿತಗೊಳಿಸಲಾಗಿದೆ.

ಪಾತಾಳಕ್ಕೆ ಕುಸಿದ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರಿನ ಮಾರಾಟ

ಇದರಿಂದಾಗಿ ಮಾರುತಿ ಸುಜುಕಿ ಕಂಪನಿಯು ಎಸ್-ಕ್ರಾಸ್ ಕಾರನ್ನು ಪೆಟ್ರೋಲ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ. ಈ ಮಾರುತಿ ಎಸ್-ಕ್ರಾಸ್ ಕಾರ್ ಅನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಹೊಸ ಮಾರುತಿ ಎಸ್-ಕ್ರಾಸ್ ಕಾರನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

ಪಾತಾಳಕ್ಕೆ ಕುಸಿದ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರಿನ ಮಾರಾಟ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಂಪನಿಯು ತನ್ನ ಸರಣಿಯಲ್ಲಿರುವ ಎಲ್ಲಾ ಕಾರುಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುತ್ತಿದೆ. ಕೇಂದ್ರ ಸರ್ಕಾರ ಮಾಲಿನ್ಯವನ್ನು ಕಡಿಮೆಗೊಳಿಸಲು ಹೊಸ ಬಿಎಸ್-6 ಮಾಲಿನ್ಯ ನಿಯಮವನ್ನು ಮುಂದಿನ ವರ್ಷದ ಏಪ್ರಿಲ್ ತಿಂಗಳಿನಿಂದ ಜಾರಿಗೊಳಿಸುತ್ತಿದೆ. ಇದೇ ಕಾರಣದಿಂದ ಮಾರುತಿ ಸುಜುಕಿ ಕಂಪನಿಯು ಡೀಸೆಲ್ ಎಂಜಿನ್ ಹೊಂದಿರುವ ಕೆಲವು ಮಾದರಿಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.

ಪಾತಾಳಕ್ಕೆ ಕುಸಿದ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರಿನ ಮಾರಾಟ

ಹೊಸ ಎಸ್-ಕ್ರಾಸ್ ನಲ್ಲಿ 1.5 ಪೆಟ್ರೋಲ್ ಬಿಎಸ್- ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 103.5 ಬಿ‍ಹೆಚ್‍‍ಪಿ ಪವರ್ ಮತ್ತು 138 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅಥವಾ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಪಾತಾಳಕ್ಕೆ ಕುಸಿದ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರಿನ ಮಾರಾಟ

ಈ ಹೊಸ ಕಾರಿನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಟಚ್ ಸ್ಕ್ರೀನ್ ಇನ್ಪೋಟೇನ್‍‍ಮೆಂಟ್ ಸಿಸ್ಟಂ, ಸ್ಮಾರ್ಟ್‌ಪ್ಲೇ ಸ್ಟುಡಿಯೋ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋವನ್ನು ಹೊಂದಿದೆ.

ಪಾತಾಳಕ್ಕೆ ಕುಸಿದ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರಿನ ಮಾರಾಟ

ಇನ್ನೂ ಎಸಿ ವೆಂಟ್ಸ್, ಸ್ಟಿಯರಿಂಗ್ ಮೌಟೆಂಡ್ ಕಂಟ್ರೋಲ್ ಅನ್ನು ಅಳವಡಿಸಲಿದೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಇದರಲ್ಲಿ ಏರ್‍‍ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಎಸ್ಒ‍ಫಿಕ್ಸ್ ಚೈಲ್ಡ್ ಸೀಟ್, ಸ್ಪೀಡ್ ವಾರ್ನಿಂಗ್ ಸಿಸ್ಟಂ ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್ ಅನ್ನು ಹೊಂದಿರಲಿದೆ.

ಪಾತಾಳಕ್ಕೆ ಕುಸಿದ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರಿನ ಮಾರಾಟ

ಕೇಂದ್ರ ಸರ್ಕಾರದ ಕ್ರ್ಯಾಶ್ ಟೆಸ್ಟ್ ನಿಯಮಗಳಿಗೆ ಅನುಗುಣವಾಗಿ ಹಲವಾರು ಸುರಕ್ಷಾ ಫೀಚರ್‍‍ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಈ ಹೊಸ ಕಾರಿನಲ್ಲಿ ಅಲಾಯ್ ವ್ಹೀಲ್, ಫ್ರಂಟ್ ಗ್ರಿಲ್, ಹೆಡ್‍ ಲ್ಯಾಂಪ್, ಎಲ್‍ಇಡಿ ಡಿಆರ್‍ಎಲ್, ಟರ್ನ್ ಸಿಗ್ನಿಲ್ ಮತ್ತು ಟೇಲ್‍‍ಲೈಟ್‍ಗಳನ್ನು ಹೊಂದಿರಲಿದೆ.

ಪಾತಾಳಕ್ಕೆ ಕುಸಿದ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರಿನ ಮಾರಾಟ

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಎಸ್-ಕ್ರಾಸ್ ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ ಎಂಬ ನಾಲ್ಕು ವಿವಿಧ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿ ಈ ಕಾರು ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ ಮತ್ತು ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Article Published On: Wednesday, March 4, 2020, 19:09 [IST]
English summary
Maruti S Cross February 2020 sales zero. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+