ಎಸ್-ಕ್ರಾಸ್ ಪ್ಲಸ್ ವೆರಿಯೆಂಟ್ ಬಿಡುಗಡೆಗೆ ಮುಂದಾದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಎಸ್-ಕ್ರಾಸ್ ಎಸ್‌ಯುವಿ ಮಾದರಿಯನ್ನು ಕಳೆದ ತಿಂಗಳ ಹಿಂದಷ್ಟೇ ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆ ಮಾಡಲಾಗಿದ್ದು, ಇದೀಗ ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆ ಅನುಸಾರವಾಗಿ ಹೊಸ ವೆರಿಯೆಂಟ್ ಒಂದನ್ನು ಬಿಡುಗಡೆ ಮಾಡಲಾಗುತ್ತಿದೆ.

ಎಸ್-ಕ್ರಾಸ್ ಪ್ಲಸ್ ವೆರಿಯೆಂಟ್ ಬಿಡುಗಡೆಗೆ ಮುಂದಾದ ಮಾರುತಿ ಸುಜುಕಿ

ಎಸ್-ಕ್ರಾಸ್ ಕಾರು ಮಾದರಿಯು ಸದ್ಯ ಸಿಗ್ಮಾ, ಡೆಲ್ಟಾ, ಜೆಟಾ ಮತ್ತು ಅಲ್ಫಾ ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಇದೀಗ ಹೊಸದಾಗಿ ಸಿಗ್ಮಾ ಮಾದರಿಯನ್ನು ಆಧರಿಸಿ ಎಸ್-ಕ್ರಾಸ್ ಪ್ಲಸ್ ವೆರಿಯೆಂಟ್ ಬಿಡುಗಡೆ ಮಾಡಲಾಗುತ್ತಿದೆ. ಹೊಸ ವೆರಿಯೆಂಟ್ ಇದೇ ತಿಂಗಳು 11ರಂದು ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಎಸ್-ಕ್ರಾಸ್ ಮಧ್ಯಮ ಕ್ರಮಾಂಕದಲ್ಲಿ ಹೊಸ ವೆರಿಯೆಂಟ್ ಖರೀದಿಗೆ ಲಭ್ಯವಿರಲಿದೆ.

ಎಸ್-ಕ್ರಾಸ್ ಪ್ಲಸ್ ವೆರಿಯೆಂಟ್ ಬಿಡುಗಡೆಗೆ ಮುಂದಾದ ಮಾರುತಿ ಸುಜುಕಿ

ಇನ್ನು ಮಾರುತಿ ಸುಜುಕಿ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಡೀಸೆಲ್ ಎಂಜಿನ್ ಮಾರಾಟವನ್ನು ಸ್ಥಗಿತಗೊಳಿಸಿದ್ದು, ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿದ ಪರಿಣಾಮ ಎಸ್-ಕ್ರಾಸ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಎಂಜಿನ್ ಅನ್ನು ಜೋಡಣೆ ಮಾಡಿ ಬಿಡುಗಡೆಗೊಳಿಸಲಾಗಿದೆ.

ಎಸ್-ಕ್ರಾಸ್ ಪ್ಲಸ್ ವೆರಿಯೆಂಟ್ ಬಿಡುಗಡೆಗೆ ಮುಂದಾದ ಮಾರುತಿ ಸುಜುಕಿ

ವಿಟಾರಾ ಬ್ರೆಝಾ ನಂತರ ಎಸ್-ಕ್ರಾಸ್ ಕಾರು ಮಾದರಿಯಲ್ಲೂ ಪೆಟ್ರೋಲ್ ಎಂಜಿನ್ ಮಾದರಿಯನ್ನು ಬಿಡುಗಡೆ ಮಾಡಿರುವ ಮಾರುತಿ ಸುಜುಕಿಯು ಬಿಎಸ್-6 ಎಮಿಷನ್ ನಿಯಮ ಅನುಸಾರವಾಗಿ ಹೊಸ ಎಂಜಿನ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಎಸ್-ಕ್ರಾಸ್ ಪೆಟ್ರೋಲ್ ಕಾರು ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.39 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.12.39 ಲಕ್ಷ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿದೆ.

ಎಸ್-ಕ್ರಾಸ್ ಪ್ಲಸ್ ವೆರಿಯೆಂಟ್ ಬಿಡುಗಡೆಗೆ ಮುಂದಾದ ಮಾರುತಿ ಸುಜುಕಿ

ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು ಪ್ರಮುಖ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಆರಂಭಿಕ ಮಾದರಿಯಾಗಿ ಸಿಗ್ಮಾ ಮತ್ತು ಹೈ ಎಂಡ್ ಮಾದರಿಯಾಗಿ ಅಲ್ಫಾ ಆಟೋಮ್ಯಾಟಿಕ್ ಆವೃತ್ತಿಯು ಮಾರಾಟಗೊಳ್ಳುತ್ತಿದೆ. ಇದೀಗ ಬಿಡುಗಡೆಯಾಗಲಿರುವ ಹೊಸ ಪ್ಲಸ್ ವೆರಿಯೆಂಟ್ ಮಧ್ಯಮ ಕ್ರಮಾಂಕ ಸ್ಥಾನವನ್ನು ಹೊಂದಿರಲಿದೆ.

ಎಸ್-ಕ್ರಾಸ್ ಪ್ಲಸ್ ವೆರಿಯೆಂಟ್ ಬಿಡುಗಡೆಗೆ ಮುಂದಾದ ಮಾರುತಿ ಸುಜುಕಿ

ಬಿಎಸ್-6 ಎಂಜಿನ್ ಹೊಂದಿರುವ ಎಸ್-ಕ್ರಾಸ್ ಪೆಟ್ರೋಲ್ ಮಾದರಿಯು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಣೆಯ 1.5-ಲೀಟರ್ ಕೆ15ಬಿ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಂಡಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಎಸ್-ಕ್ರಾಸ್ ಪ್ಲಸ್ ವೆರಿಯೆಂಟ್ ಬಿಡುಗಡೆಗೆ ಮುಂದಾದ ಮಾರುತಿ ಸುಜುಕಿ

ಬಿಎಸ್-6 ಎಂಜಿನ್ ಹೊಂದಿರುವ ಎಸ್-ಕ್ರಾಸ್ ಪೆಟ್ರೋಲ್ ಮಾದರಿಯು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಣೆಯ 1.5-ಲೀಟರ್ ಕೆ15ಬಿ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಂಡಿದೆ.

ಎಸ್-ಕ್ರಾಸ್ ಪ್ಲಸ್ ವೆರಿಯೆಂಟ್ ಬಿಡುಗಡೆಗೆ ಮುಂದಾದ ಮಾರುತಿ ಸುಜುಕಿ

ಈ ಮೂಲಕ ಹೊಸ ಎಂಜಿನ್ ಮಾದರಿಯು ಮೈಲೇಜ್ ವಿಚಾರದಲ್ಲೂ ಗ್ರಾಹಕರನ್ನು ಸೆಳೆಯುತ್ತಿದ್ದು, ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ ಪೆಟ್ರೋಲ್ ಗರಿಷ್ಠ 18.55ಕಿ.ಮೀ ಮತ್ತು ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀಟರ್‌ಗೆ 18.43 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಎಸ್-ಕ್ರಾಸ್ ಪ್ಲಸ್ ವೆರಿಯೆಂಟ್ ಬಿಡುಗಡೆಗೆ ಮುಂದಾದ ಮಾರುತಿ ಸುಜುಕಿ

ಎಸ್-ಕ್ರಾಸ್ ಕಾರಿನಲ್ಲಿ ಈ ಹಿಂದೆ ನೀಡಲಾಗುತ್ತಿದ್ದ 1.3-ಲೀಟರ್ ಡೀಸೆಲ್ ಮಾದರಿಯು ಪ್ರತಿ ಲೀಟರ್‌ಗೆ 25.01 ಕಿ.ಮೀ ಮೈಲಜ್ ಹೊಂದಿತ್ತು. ಆದರೆ ಬಿಎಸ್-6 ವೈಶಿಷ್ಟ್ಯತೆಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲದ ಹಿನ್ನಲೆಯಲ್ಲಿ ಪೆಟ್ರೋಲ್ ಮಾದರಿಗಳ ಮೇಲೆ ಹೆಚ್ಚು ಗಮನಹರಿಸಲಾಗಿದೆ.

Article Published On: Friday, October 9, 2020, 9:45 [IST]
English summary
Maruti S-Cross New Variant To Be Launch. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+