ಟಾಪ್ 10 ಕಾರು ಮಾರಾಟದಲ್ಲಿ ಮಾರುತಿ ಎಸ್-ಪ್ರೆಸ್ಸೊ ಹೊಸ ಎಂಟ್ರಿ..
ಮಾರುತಿ ಸುಜುಕಿ ನಿರ್ಮಾಣದ ಎಸ್-ಪ್ರೆಸ್ಸೊ ಮೈಕ್ರೊ ಎಸ್‌ಯುವಿ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಭಾರತದಲ್ಲಿ ಮಾರಾಟಗೊಳ್ಳುವ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಮೊದಲ ಬಾರಿಗೆ ಸ್ಥಾನ ಗಿಟ್ಟಿಸಿಕೊಂಡಿದೆ.

ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಮಾರುತಿ ನಿರ್ಮಾಣದ ಏಳು ಕಾರುಗಳು ಸ್ಥಾನ ಪಡೆದಿದ್ದು, ಹ್ಯುಂಡೈ ನಿರ್ಮಾಣದ ಎರಡು ಮತ್ತು ಕಿಯಾ ನಿರ್ಮಾಣದ ಒಂದು ಕಾರು ಟಾಪ್ ಹತ್ತರ ಪಟ್ಟಿಯಲ್ಲಿವೆ. ಇದೀಗ ಎಸ್-ಪ್ರೆಸ್ಸೊ ಕಾರು ಟಾಪ್ ಹತ್ತರ ಪಟ್ಟಿಯಲ್ಲಿ ಹೊಸದಾಗಿ ಎಂಟ್ರಿ ನೀಡಿದ್ದು, ಫೆಬ್ರುವರಿ ಅವಧಿಯ ಕಾರು ಮಾರಾಟದಲ್ಲಿ ಹತ್ತನೇ ಸ್ಥಾನದೊಂದಿಗೆ 9,578 ಯುನಿಟ್ ಬೇಡಿಕೆ ಪಡೆದುಕೊಂಡಿದೆ.

ಈ ಮೂಲಕ ಮಾರುತಿ ಸುಜುಕಿ ಸಂಸ್ಥೆಯು ಫೆಬ್ರುವರಿ ಅವಧಿಯಲ್ಲಿ ಒಟ್ಟು 136,849 ಕಾರುಗಳನ್ನು ಮಾರಾಟಗೊಳಿಸುವ ಮೂಲಕ ಕಾರು ಮಾರಾಟದಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದು, ಹೊಸ ಎಸ್-ಪ್ರೆಸ್ಸೊ ಮಾದರಿಯು ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವುದು ಪ್ರತಿಸ್ಪರ್ಧಿ ಕಾರುಗಳಿಗೆ ಭಾರೀ ಹೊಡೆತ ನೀಡಿದೆ.

ಪ್ರಮುಖವಾಗಿ ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್ ಮಾದರಿಗೆ ಪ್ರಬಲ ಪೈಪೋಟಿಯಾಗಿರುವ ಎಸ್-ಪ್ರೆಸ್ಸೊ ಆವೃತ್ತಿಯು ಆಕರ್ಷಕ ಬೆಲೆ ಮತ್ತು ಉತ್ತಮ ತಾಂತ್ರಿಕ ಸೌಲಭ್ಯಗಳು ಎಂಟ್ರಿ ಲೆವೆಲ್ ಕಾರು ಖರೀದಿದಾರರನ್ನು ಗಮನಸೆಳೆಯುತ್ತಿದ್ದು, ಕ್ವಿಡ್ ಮಾದರಿಯು ಫೆಬ್ರುವರಿ ಅವಧಿಯಲ್ಲಿ 4,187 ಯುನಿಟ್ ಮಾರಾಟಗೊಂಡಿದೆ.

ಬೆಲೆ ಮತ್ತು ತಾಂತ್ರಿಕ ಸೌಲಭ್ಯಗಳ ವಿಭಾಗದಲ್ಲಿ ನೇರ ಪೈಪೋಟಿಯಾಗಿರುವ ರೆನಾಲ್ಟ್ ಕ್ವಿಡ್ ಮತ್ತು ಮಾರುತಿ ಎಸ್-ಪ್ರೆಸ್ಸೊ ಕಾರುಗಳು ಎಂಟ್ರಿ ಲೆವಲ್ ಕಾರು ಖರೀದಿದಾರರಿಗೆ ಉತ್ತಮ ಆಯ್ಕೆಯಾಗಿದ್ದು, ಕ್ವಿಡ್ ಮಾರಾಟವು ಫೆಬ್ರುವರಿ ಅವಧಿಯಲ್ಲಿ ಕುಸಿತ ಕಂಡರೂ ಸಹ ರೆನಾಲ್ಟ್ ಕಾರುಗಳ ಒಟ್ಟಾರೆ ಮಾರಾಟವು ಶೇ.34ರಷ್ಟು ಬೆಳವಣಿಗೆ ಕಂಡಿದೆ. ರೆನಾಲ್ಟ್ ಸಂಸ್ಥೆಯು ಹೊಸ ಟ್ರೈಬರ್ ಕಾರಿನ ಮೂಲಕ ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, ಎಂಟ್ರಿ ಲೆವಲ್ ಎಂಪಿವಿ ಕಾರುಗಳಲ್ಲಿ ಟ್ರೈಬರ್ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಇನ್ನು ಆರ್ಥಿಕ ಹಿಂಜರಿತದಿಂದಾಗಿ ಹೊಸ ಕಾರು ಮಾರಾಟದಲ್ಲಿ ಸತತ ಹಿನ್ನಡೆ ಅನುಭವಿಸಿದ್ದ ಮಾರುತಿ ಸುಜುಕಿ ಸಂಸ್ಥೆಗೆ ಎಸ್-ಪ್ರೆಸ್ಸೊ ಕಾರು ಮಾರಾಟವು ಬಲತುಂಬಿದ್ದು, ಅವಧಿಗೂ ಮುನ್ನವೇ ಬಿಎಸ್-6 ಕಾರುಗಳನ್ನು ಬಿಡುಗಡೆ ಮಾಡಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಎಸ್-ಪ್ರೆಸ್ಸೊ ಕಾರು ಸದ್ಯ ಪ್ರಮುಖ ಆರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್ ಆಯ್ಕೆ ಮಾಡಬಹುದಾಗಿದೆ. ಇದರಲ್ಲಿ ಆರಂಭಿಕ ವೆರಿಯೆಂಟ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.3.69 ಲಕ್ಷ ಖರೀದಿಗೆ ಲಭ್ಯವಿದ್ದಲ್ಲಿ ಟಾಪ್ ಎಂಡ್ ವೆರಿಯೆಂಟ್ ಬೆಲೆಯನ್ನು ರೂ. 4.91 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಆಲ್ಟೊ ಕೆ10 ಮತ್ತು ವ್ಯಾಗನ್ಆರ್ ಮಧ್ಯದ ಕಾರು ಆವೃತ್ತಿಯಾಗಿ ಎಸ್-ಪ್ರೆಸ್ಸೊ ಮಾರಾಟಗೊಳ್ಳುತ್ತಿದ್ದು, ಹೊಸ ಕಾರು ಕೇವಲ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ಹೊಂದಿದೆ. ಬಿಎಸ್-6 ನಿಯಮದಂತೆ ಎಸ್ ಪ್ರೆಸ್ಸೊ ಕಾರಿನ ಎಂಜಿನ್ ಅನ್ನು ಅಭಿವೃದ್ದಿಗೊಳಿಸಲಾಗಿದ್ದು, ಆರಂಭಿಕ ಆವೃತ್ತಿಗಳಲ್ಲಿ ಮ್ಯಾನುವಲ್ ಮತ್ತು ಹೈ ಎಂಡ್ ಕಾರುಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

ಎಸ್-ಪ್ರೆಸ್ಸೊ ಕಾರು 998 ಸಿಸಿ ತ್ರಿ-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ 68-ಬಿಎಚ್‌ಪಿ ಮತ್ತು 90-ಎನ್ಎಂ ಟಾರ್ಕ್ ಉತ್ಪಾದನೆ ಮೂಲಕ ಉತ್ತಮ ಇಂಧನ ಕಾರ್ಯಕ್ಷಮತೆ ಪಡೆದಿದೆ. ಆರಂಭಿಕ ಕಾರು ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಹೈ ಎಂಡ್ ಮಾದರಿಯಲ್ಲಿ 5-ಸ್ಪೀಡ್ ಆಟೋ ಗೇರ್ ಶಿಫ್ಟ್(ಎಜಿಎಸ್) ಆಯ್ಕೆ ಲಭ್ಯವಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 21.7 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತೆ.

ಹಾಗೆಯೇ ಹೊಸ ಕಾರು ಮೈಕ್ರೋ ಎಸ್‌ಯುವಿ ವಿನ್ಯಾಸದೊಂದಿಗೆ ಆಕರ್ಷಕ ಗ್ರೌಂಡ್ ಕ್ಲಿಯೆರೆನ್ಸ್, 14-ಇಂಚಿನ ಸ್ಟೀಲ್ ವೀಲ್ಹ್, ಸ್ಲಿಕ್ ಫ್ರಂಟ್ ಗ್ರಿಲ್, ಕ್ರೋಮ್ ಇನ್ಸರ್ಟ್, ಆಯತಾಕಾರದ ಹೆಡ್‌ಲ್ಯಾಂಪ್, ವಿಸ್ತರಿತ ಸೆಂಟರ್ ಏರ್ ಇನ್‌ಟೆಕ್, ಸಿ ಶೇಫ್ ಟೈಲ್‌ಗೆಟ್ ಸೌಲಭ್ಯವು ಕಾರಿನ ಅಂದಕ್ಕೆ ಮತ್ತಷ್ಟು ಮೆರಗು ನೀಡಿವೆ.


Click it and Unblock the Notifications








