ಬಿಎಸ್-6 ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ
ಏಪ್ರಿಲ್ 1ರಿಂದಲೇ ಭಾರತದಲ್ಲಿ ಬಿಎಸ್-6 ಎಮಿಷನ್ ಕಡ್ಡಾಯವಾಗಿ ಜಾರಿ ಬಂದಿದ್ದು, ಮಾರುತಿ ಸುಜುಕಿ ಕಂಪನಿಯು ಹೊಸ ಎಮಿಷನ್ ನಿಯಮ ಅಧಿಕೃತವಾಗಿ ಜಾರಿ ಬರುವುದಕ್ಕೂ ಮುನ್ನವೇ ಹೊಸ ವಾಹನಗಳ ಮಾರಾಟದಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ.

ಬಿಎಸ್-6 ನಿಯಮವು ಜಾರಿಗೆ ಬರುವುದಕ್ಕೆ ಒಂದು ವರ್ಷ ಬಾಕಿ ಇರುವಾಗಲೇ ಹೊಸ ಎಂಜಿನ್ ಪ್ರೇರಿತ ಕಾರು ಮಾರಾಟವನ್ನು ಆರಂಭಿಸಿದ್ದ ಮಾರುತಿ ಸುಜುಕಿ ಕಂಪನಿಯು 2020ರ ಮಾರ್ಚ್ ಅಂತ್ಯಕ್ಕೆ ಒಟ್ಟು 7.50 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ. ವಿಶೇಷತೆ ಅಂದ್ರೆ ಮಾರುತಿ ಸುಜುಕಿಯ ಸದ್ಯ ಬಿಎಸ್-6 ಕಾರುಗಳನ್ನು ಪೆಟ್ರೋಲ್ ಮಾದರಿಯಲ್ಲೇ ಮಾತ್ರವೇ ಮಾಡುತ್ತಿದ್ದು, ಸಾಮಾನ್ಯವಾಗಿ ಬೇಡಿಕೆಯಲ್ಲಿ ಅಗ್ರಸ್ಥಾನದಲ್ಲಿದ್ದ ಡೀಸೆಲ್ ಕಾರುಗಳಿಂತಲೂ ಪೆಟ್ರೋಲ್ ಕಾರುಗಳು ಹೆಚ್ಚು ಮಾರಾಟಗೊಂಡಿವೆ.

ಸದ್ಯ ಮಾರುಕಟ್ಟೆಯಲ್ಲಿ ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ಬಿಎಸ್-6 ನಿಯಮ ಪಾಲನೆ ಸಾಧ್ಯವಿಲ್ಲದ್ದ ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿದ್ದು, ಮಾರುತಿ ಸುಜುಕಿ ಕಂಪನಿಯು ಸಹ ತನ್ನ ಕೆಲವು ಜನಪ್ರಿಯ ಕಾರು ಮಾದರಿಗಳಲ್ಲೂ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿದೆ.

ಬಿಎಸ್-6 ಎಮಿಷನ್‌ನಂತೆ ಪ್ರಯಾಣಿಕರ ಕಾರು ಮಾರಾಟದಲ್ಲಿ ಮಹತ್ವದ ಬದಲಾಣೆಗಳನ್ನು ಪರಿಚಯಿಸಿರುವ ಮಾರುತಿ ಸುಜುಕಿಯು ಬೇಡಿಕೆಯಲ್ಲಿ ಅಗ್ರಸ್ಥಾನದಲ್ಲಿರುವ ಡೀಸೆಲ್ ಎಂಜಿನ್ ಕಾರು ಮಾರಾಟವನ್ನೇ ಸ್ಥಗಿತಗೊಳಿಸಿದೆ.

ಫಿಯೆಟ್ ಕಂಪನಿಯಿಂದ ಎರವಲು ಪಡೆಯಲಾಗುತ್ತಿದ್ದ 1.3-ಡೀಸೆಲ್ ಎಂಜಿನ್ ಮಾದರಿಯು ಹೊಸ ನಿಯಮದಂತೆ ಸಾಕಷ್ಟು ಸುಧಾರಣೆಗೊಳ್ಳಬೇಕಿತ್ತು. ಆದರೆ ಬೆಲೆ ಹೆಚ್ಚಳವಾಗುವ ಕಾರಣದಿಂದ 1.3-ಲೀಟರ್ ಬೂಸ್ಟರ್ ಜೆಟ್ ಡೀಸೆಲ್ ಎಂಜಿನ್ ಅನ್ನು ಉತ್ಪಾದನೆಯಿಂದ ಕೈಬಿಡಲಾಗಿದೆ. 1.3-ಲೀಟರ್ ಬೂಸ್ಟರ್ ಜೆಟ್ ಎಂಜಿನ್ ಅನ್ನು ಮಾರುತಿ ಸುಜುಕಿ ಸೇರಿದಂತೆ ಹಲವು ಕಂಪನಿಗಳಿಗೆ ಪೂರೈಕೆ ಮಾಡಿದ್ದ ಫಿಯೆಟ್ ಸಂಸ್ಥೆಯು ಹಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ಎಂಜಿನ್ ಮಾದರಿಯಾಗಿತ್ತು.

ಆದರೆ ಬೂಸ್ಟರ್ ಜೆಟ್ ಎಂಜಿನ್‌ನಲ್ಲಿ ಬಿಎಸ್-6 ವೈಶಿಷ್ಟ್ಯತೆ ಅಳವಡಿಕೆಯು ಆರ್ಥಿಕವಾಗಿ ಹೊರೆಯಾಗುವ ಕಾರಣಕ್ಕೆ ಮಾರುತಿ ಸುಜುಕಿಯು ಡೀಸೆಲ್ ಎಂಜಿನ್‌ಗೆ ಪರ್ಯಾಯವಾಗಿ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಆಯ್ಕೆಯನ್ನು ಹೆಚ್ಚಿಸಲು ಗಮನಹರಿಸಿದೆ.

ಮಾಹಿತಿಗಳ ಪ್ರಕಾರ, ಮಾರುತಿ ಸುಜುಕಿಯು ಹೈ ಎಂಡ್ ಕಾರು ಮಾದರಿಗಳಲ್ಲಿ ಮಾತ್ರವೇ ಮುಂಬರುವ ದಿನಗಳಲ್ಲಿ ಹೊಸ ಮಾದರಿಯ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಿದ್ದು, ಇನ್ನುಳಿದಂತೆ ಪೆಟ್ರೋಲ್ ಕಾರುಗಳನ್ನು ಈಗಾಗಲೇ ಸಂಪೂರ್ಣವಾಗಿ ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ಮಾರಾಟ ಮಾಡುತ್ತಿದೆ.

ಡಿಜೈರ್ ಫೇಸ್‌ಲಿಫ್ಟ್ ಆವೃತ್ತಿಯ ಸದ್ಯಕ್ಕೆ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಾಗಿದ್ದು, ನ್ಯೂ ಜನರೇಷನ್ ಬಲೆನೊ ಕಾರಿನಲ್ಲಿ ಬಳಕೆ ಮಾಡಲಾಗಿರುವ ಕೆ12ಸಿ ಡ್ಯುಯಲ್ ಜೆಟ್ 1.2-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ.

1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಡಿಜೈರ್ ಫೇಸ್‌ಲಿಫ್ಟ್ ಕಾರು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 90-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದು, ಪೆಟ್ರೋಲ್ ಎಂಜಿನ್ ಮಾದರಿಯಲ್ಲೇ ಡೀಸೆಲ್ ಕಾರುಗಳು ನೀಡುವಷ್ಟು ಮೈಲೇಜ್ ಪ್ರಮಾಣವನ್ನು ಕಾಯ್ದುಕೊಂಡಿರುವುದು ವಿಶೇಷವಾಗಿದೆ.

ಡಿಜೈರ್ ಹೊಸ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ ಮ್ಯಾನುವಲ್ ಆವೃತ್ತಿಯು 23.26 ಕಿ.ಮೀ ಮತ್ತು ಆಟೋಮ್ಯಾಟಿಕ್ ಆವೃತ್ತಿಯು 24.12 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಇಂಧನ ದಕ್ಷತೆಗಾಗಿ ಫಸ್ಟ್ ಇನ್ ಸೆಗ್ಮೆಂಟ್‌ನಲ್ಲಿಯೇ ಐಡೆಲ್ ಸ್ಟಾರ್ಟ್ ಮತ್ತು ಸ್ಟಾಪ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ.


Click it and Unblock the Notifications