ವಿಂಟರ್ ಕೇರ್ ಅಭಿಯಾನವನ್ನು ಆರಂಭಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಜಿನಿಯನ್ ಪಾರ್ಟ್ಸ್ ಅಂಡ್ ಆಕ್ಸೆಸರೀಸ್ ಇಂದಿನಿಂದ ವಿಂಟರ್ ಕೇರ್ ಅಭಿಯಾನವನ್ನು ಆರಂಭಿಸಿದೆ. ಈ ಮೂಲಕ ಕಂಪನಿಯು ಈ ಚಳಿಗಾಲದಲ್ಲಿ ಹೆಚ್ಚು ಬಳಸಿದ ಬಿಡಿಭಾಗ ಹಾಗೂ ಆಕ್ಸೆಸರೀಸ್'ಗಳ ಸರಿಯಾದ ನಿರ್ವಹಣೆಯ ಬಗ್ಗೆ ಗಮನ ಸೆಳೆಯಲು ಮುಂದಾಗಿದೆ.

ವಿಂಟರ್ ಕೇರ್ ಅಭಿಯಾನವನ್ನು ಆರಂಭಿಸಿದ ಮಾರುತಿ ಸುಜುಕಿ

ಈ ಮೂಲಕ ಗ್ರಾಹಕರಿಗೆ ಚಳಿಗಾಲದಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಬಯಸಿದೆ. ಈ ಸೌಲಭ್ಯ ಹಾಗೂ ಎಲ್ಲಾ ಆಕ್ಸೆಸರಿಸ್'ಗಳನ್ನು ಕಂಪನಿಯ 2733 ಡೀಲರ್'ಶಿಪ್ ಗಳಲ್ಲಿ ಹಾಗೂ ದೇಶಾದ್ಯಂತವಿರುವ 758 ಟಚ್ ಪಾಯಿಂಟ್‌ಗಳಲ್ಲಿ ನೀಡಲಾಗುವುದು.

ವಿಂಟರ್ ಕೇರ್ ಅಭಿಯಾನವನ್ನು ಆರಂಭಿಸಿದ ಮಾರುತಿ ಸುಜುಕಿ

ಫಾಗ್ ಲೈಟ್, ಹೆಡ್‌ಲ್ಯಾಂಪ್‌ಗಳಂತಹ ಬಿಡಿ ಭಾಗಗಳನ್ನು ರಸ್ತೆಯಲ್ಲಿರುವ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಬಳಸಲಾಗುತ್ತದೆ. ಜೊತೆಗೆ ವೈಪರ್‌ ಹಾಗೂ ಬ್ರೇಕ್‌ಗಳನ್ನು ಸಹ ಹೆಚ್ಚು ಬಾರಿ ಬಳಸಲಾಗುತ್ತದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ವಿಂಟರ್ ಕೇರ್ ಅಭಿಯಾನವನ್ನು ಆರಂಭಿಸಿದ ಮಾರುತಿ ಸುಜುಕಿ

ಈ ಕಾರಣಕ್ಕೆ ಈ ಭಾಗಗಳನ್ನು ಕಾಲಕಾಲಕ್ಕೆ ಬದಲಿಸುವ ಅಗತ್ಯವಿದೆ. ಇದರಿಂದ ಅಪಾಯಕಾರಿ ಪರಿಸ್ಥಿತಿಯನ್ನು ತಪ್ಪಿಸಬಹುದು. ಇದರೊಂದಿಗೆ, ಕಾರ್ ಐಯಾನೈಜರ್, ಏರ್ ಪ್ಯೂರಿಫೈಯರ್, ಕ್ಯಾಬಿನ್ ಏರ್ ಫಿಲ್ಟರ್ ಪಿಎಂ 2.5 ಸೇರಿದಂತೆ ಮಾಲಿನ್ಯದ ವಿರುದ್ಧ ಹೋರಾಡಲು ಸಹ ಬಿಡಿಭಾಗಗಳನ್ನು ನೀಡಲಾಗಿದೆ.

ವಿಂಟರ್ ಕೇರ್ ಅಭಿಯಾನವನ್ನು ಆರಂಭಿಸಿದ ಮಾರುತಿ ಸುಜುಕಿ

ಇದರ ಜೊತೆಗೆ ಎನ್ 95 ಮಾಸ್ಕ್ / ಜರ್ಮ್ ಬಸ್ಟರ್, ಎಸಿ ಡಿಸ್ ಇನ್ಫೆಕ್ಟೆಂಟ್, ಬಾಡಿ ಕವರ್'ಗಳನ್ನು ನೀಡಲಾಗುತ್ತದೆ. ಕೋವಿಡ್ 19 ಹರಡುವುದನ್ನು ತಡೆಗಟ್ಟಲು ಇವುಗಳನ್ನು ಎಲ್ಲಾ ಡೀಲರ್'ಗಳ ಬಳಿ ಲಭ್ಯವಾಗುವಂತೆ ಮಾಡಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ವಿಂಟರ್ ಕೇರ್ ಅಭಿಯಾನವನ್ನು ಆರಂಭಿಸಿದ ಮಾರುತಿ ಸುಜುಕಿ

ಕಂಪನಿಯು ತನ್ನ ಗ್ರಾಹಕರಿಗಾಗಿ ಜಿನಿಯನ್ ಪಾರ್ಟ್ ಹಾಗೂ ಆಕ್ಸೆಸರಿಸ್'ಗಳನ್ನು ಮಾತ್ರ ಮಾರಾಟ ಮಾಡುತ್ತದೆ. ಚಳಿಗಾಲದಲ್ಲಿ ಕಾರನ್ನು ಸುಸ್ಥಿತಿಯಲ್ಲಿಡಲು ಕಾಲ ಕಾಲಕ್ಕೆ ತಪಾಸಣೆ ನಡೆಸುವುದು ಅವಶ್ಯಕ.

ವಿಂಟರ್ ಕೇರ್ ಅಭಿಯಾನವನ್ನು ಆರಂಭಿಸಿದ ಮಾರುತಿ ಸುಜುಕಿ

ಕಾರು ಹಾಗೂ ಅದರ ಬಿಡಿ ಭಾಗಗಳನ್ನು ಕಾಲಕಾಲಕ್ಕೆ ಪರಿಶೀಲಿಸಿದರೇ ದೊಡ್ಡ ಸಮಸ್ಯೆಯಾಗುವುದನ್ನು ತಪ್ಪಿಸಬಹುದು. ಚಳಿಗಾಲದಲ್ಲಿ ತಾಪಮಾನವು ಟಯರ್'ಗಳ ಹೆಚ್ಚು ಪರಿಣಾಮ ಬೀರುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ವಿಂಟರ್ ಕೇರ್ ಅಭಿಯಾನವನ್ನು ಆರಂಭಿಸಿದ ಮಾರುತಿ ಸುಜುಕಿ

ಈ ಕಾರಣಕ್ಕೆ ಸಮಯಕ್ಕೆ ಸರಿಯಾಗಿ ಟಯರ್ ಸೇರಿದಂತೆ ಕಾರಿನ ಎಲ್ಲಾ ಬಿಡಿ ಭಾಗಗಳನ್ನು ಪರಿಶೀಲಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಕಂಪನಿಯು ತನ್ನ ಗ್ರಾಹಕರಿಗಾಗಿ ಈ ಅಭಿಯಾನವನ್ನು ಆರಂಭಿಸಿದೆ.

Most Read Articles

Kannada
English summary
Maruti Suzuki starts winter care campaign for its customers. Read in Kannada.
Story first published: Friday, December 11, 2020, 19:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X