ಶೀಘ್ರದಲ್ಲೇ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಾರುತಿ ಸುಜುಕಿ

ಕಾರು ಮಾರಾಟದಲ್ಲಿ ಬಹುದಿನಗಳ ನಂತರ ಚೇತರಿಕೆ ಕಂಡಿರುವ ವಿವಿಧ ಆಟೋ ಕಂಪನಿಗಳು ವೆಚ್ಚ ನಿರ್ವಹಣೆಗಾಗಿ ಬೆಲೆ ಹೆಚ್ಚಳದ ಸುಳಿವು ನೀಡಿದ್ದು, ಹೊಸ ವರ್ಷದ ಆರಂಭದಲ್ಲಿ ಹೊರ ದರಪಟ್ಟಿ ಬಿಡುಗಡೆಗೊಳಿಸಲು ಸಿದ್ದಗೊಂಡಿವೆ.

ಶೀಘ್ರದಲ್ಲೇ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಾರುತಿ ಸುಜುಕಿ

ಕಳೆದ ಅಗಸ್ಟ್‌ನಲ್ಲಿ ವಿವಿಧ ವಾಹನ ಮಾದರಿಗಳ ಬೆಲೆ ಹೆಚ್ಚಳ ಮಾಡಿದ್ದ ಬಹುತೇಕ ಆಟೋ ಕಂಪನಿಗಳು ಇದೀಗ ಮತ್ತೆ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ್ದು, ಮಾರುತಿ ಸುಜುಕಿ ಕೂಡಾ 2021ರಿಂದಲೇ ಬೆಲೆ ಹೆಚ್ಚಳ ಮಾಡುವ ನಿರ್ಧಾರ ಪ್ರಕಟಿಸಿದೆ. ಆದರೆ ಯಾವ ಕಾರಿನ ಬೆಲೆಯನ್ನು ಎಷ್ಟು ಹೆಚ್ಚಳ ಮಾಡಲಿದೆ ಎನ್ನುವ ಬಗೆಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲವಾದರೂ ಕಾರುಗಳ ಬೆಲೆಗೆ ಅನುಗುಣವಾಗಿ ಶೇ.1.50 ರಿಂದ ಶೇ.2.50 ರಷ್ಟು ಹೆಚ್ಚಳ ಮಾಡುವ ನೀರಿಕ್ಷೆಗಳಿವೆ.

ಶೀಘ್ರದಲ್ಲೇ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಾರುತಿ ಸುಜುಕಿ

ಶೇ.1.50 ರಿಂದ ಶೇ.2.50 ರಷ್ಟು ಬೆಲೆ ಹೆಚ್ಚಳ ಮಾಡಿದ್ದಲ್ಲಿ ಮಾರುತಿ ಸುಜುಕಿ ಕಾರುಗಳ ಬೆಲೆಯು ರೂ.8 ಸಾವಿರದಿಂದ ರೂ. 20 ಸಾವಿರ ತನಕ ಹೆಚ್ಚಳವಾಗಲಿದ್ದು, ಬೆಲೆ ಹೆಚ್ಚಳವು ಎಕ್ಸ್‌ಶೋರೂಂ ದರದಂತೆ ಅನ್ವಯವಾಗುತ್ತದೆ.

ಶೀಘ್ರದಲ್ಲೇ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಸದ್ಯ ಎಂಟ್ರಿ ಲೆವೆಲ್ ಮಾದರಿಯಾದ ಆಲ್ಟೊ 800 ಮಾದರಿಯಿಂದ ಟಾಪ್ ಎಂಡ್ ಎರ್ಟಿಗಾ ಎಕ್ಸ್ಎಲ್6 ಮಾದರಿಗಳನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.2.95 ಲಕ್ಷದಿಂದ ರೂ. 11.52 ಲಕ್ಷ ಬೆಲೆ ಅಂತರದಲ್ಲಿ ಮಾರಾಟ ಮಾಡುತ್ತಿದೆ.

ಶೀಘ್ರದಲ್ಲೇ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಾರುತಿ ಸುಜುಕಿ

ಉತ್ಪಾದನಾ ವೆಚ್ಚದಲ್ಲಿ ನಿರಂತರವಾಗಿ ಹೆಚ್ಚಳ ಮತ್ತು ಹೊಸ ಮಾದರಿಯ ತಾಂತ್ರಿಕ ಅಂಶಗಳ ಜೋಡಣೆಗಾಗಿ ಬೆಲೆ ಏರಿಕೆ ಅನಿವಾರ್ಯ ಎಂದಿರುವ ಮಾರುತಿ ಸುಜುಕಿಯು ಶೀಘ್ರದಲ್ಲೇ ಹೊಸ ದರಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಮಾರುತಿ ಸುಜುಕಿ ಜೊತೆ ಹಲವು ಕಾರು ಉತ್ಪಾದನಾ ಕಂಪನಿಗಳು ಸಹ ಬೆಲೆ ಹೆಚ್ಚಳಕ್ಕಾಗಿ ಸಿದ್ದವಾಗಿದ್ದು, ಹೊಸ ವರ್ಷದ ಆರಂಭದಲ್ಲಿ ವಾಹನ ಖರೀದಿದಾರರಿಗೆ ಬೆಲೆ ಏರಿಕೆಯ ಬಿಸಿತಟ್ಟಲಿದೆ.

ಶೀಘ್ರದಲ್ಲೇ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಾರುತಿ ಸುಜುಕಿ

ಇನ್ನು ಟಾಪ್ 10 ಕಾರು ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ ನಿರ್ಮಾಣದ 7 ಕಾರುಗಳು ಸ್ಥಾನ ಪಡೆದುಕೊಂಡಿದ್ದು, ಮಾರುತಿ ಸುಜುಕಿ ನಿರ್ಮಾಣದ ಬಹುತೇಕ ಕಾರುಗಳು ಪ್ರತಿ ಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಶೀಘ್ರದಲ್ಲೇ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಾರುತಿ ಸುಜುಕಿ

ಬಿಎಸ್-6 ಎಮಿಷನ್ ಕಡ್ಡಾಯದ ನಂತರ ತನ್ನ ಪ್ರಮುಖ ಕಾರುಗಳ ಮಾರಾಟದಲ್ಲಿ ಹಲವಾರು ಮಹತ್ವದ ಬದಲಾವಣೆಗಳನ್ನು ಪರಿಚಯಿಸಿರುವ ಮಾರುತಿ ಸುಜುಕಿಯು ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಪ್ರಮುಖ ಕಾರುಗಳಲ್ಲಿ ಹೊಸ ಪೆಟ್ರೋಲ್ ಎಂಜಿನ್ ಮಾದರಿಯನ್ನು ಪರಿಚಯಿಸಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಶೀಘ್ರದಲ್ಲೇ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಾರುತಿ ಸುಜುಕಿ

ಹೊಸ ಎಮಿಷನ್ ನಿಯಮದಿಂದಾಗಿ ಹಲವು ಕಾರು ಕಂಪನಿಗಳು ವಿವಿಧ ಮಾದರಿಯ ಕಾರುಗಳಲ್ಲಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿದ್ದು, ಮಾರುತಿ ಸುಜುಕಿ ಕೂಡಾ ಬ್ರೆಝಾ ಕಾರಿನಲ್ಲಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವೇ ಮಾರಾಟ ಮಾಡುತ್ತಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಶೀಘ್ರದಲ್ಲೇ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಾರುತಿ ಸುಜುಕಿ

ಈ ಹಿಂದೆ ನೀಡಲಾಗುತ್ತಿದ್ದ 1.3-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದ ಮಾರುತಿ ಸುಜುಕಿ ನಿರ್ಮಾಣದ ಬಹುತೇಕ ಕಾರುಗಳು ಇದೀಗ ಸ್ಥಗಿತಗೊಂಡಿದ್ದು, ಡೀಸೆಲ್ ಆಯ್ಕೆಯ ಬದಲಾಗಿ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಆಯ್ಕೆಯನ್ನು ಹೆಚ್ಚಿಸಲಾಗುತ್ತಿದೆ.

Most Read Articles

Kannada
English summary
Maruti Suzuki To Hike Prices Of Its Entire Lineup From January 2021. Read in Kannada.
Story first published: Thursday, December 10, 2020, 18:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X