ಗುರುಗ್ರಾಮ್ ಕಾರು ಉತ್ಪಾದನಾ ಘಟಕವನ್ನು ತೊರೆಯಲಿದೆ ಮಾರುತಿ ಸುಜುಕಿ

ದೇಶದ ಅತಿದೊಡ್ಡ ಕಾರು ಉತ್ಪಾದನಾ ಕಂಪನಿ ಮಾರುತಿ ಸುಜುಕಿಯು ದೇಶದ ವಿವಿಧಡೆ ಒಟ್ಟು ಮೂರು ವಾಹನ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ವಾಹನ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಘಟಕಗಳ ವಿಸ್ತರಣೆಗಾಗಿ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ.

ಗುರುಗ್ರಾಮ್ ಕಾರು ಉತ್ಪಾದನಾ ಘಟಕವನ್ನು ತೊರೆಯಲಿದೆ ಮಾರುತಿ ಸುಜುಕಿ

ಹೌದು, ಮಾರುತಿ ಸುಜುಕಿ ಕಂಪನಿಯು ಮನೆಸಾರ್, ಗುರುಗ್ರಾಮ್‌ ಮತ್ತು ಹನ್ಸಲ್‌ಪುರ್‌ನಲ್ಲಿ ಒಟ್ಟು ಮೂರು ವಾಹನ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಕಾರ್ಪೊರೇಷನ್ ವ್ಯಾಪ್ತಿಯಲ್ಲಿರುವ ಗುರುಗ್ರಾಮ್ ಕಾರು ಉತ್ಪಾದನಾ ಘಟಕದಿಂದ ಹೊರಹೋಗಲು ನಿರ್ಧರಿಸಿದೆ. ನಗರೀಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಾರು ಉತ್ಪಾದನಾ ಘಟಕ ವಿಸ್ತರಣೆಗೆ ಅವಕಾಶವಿಲ್ಲವಾಗಿದ್ದು, ಹೊಸ ಘಟಕ ನಿರ್ಮಾಣಕ್ಕಾಗಿ ಸ್ಥಳ ಬದಲಾವಣೆ ಮಾಡುತ್ತಿದೆ.

ಗುರುಗ್ರಾಮ್ ಕಾರು ಉತ್ಪಾದನಾ ಘಟಕವನ್ನು ತೊರೆಯಲಿದೆ ಮಾರುತಿ ಸುಜುಕಿ

ಸದ್ಯ ಗುರುಗ್ರಾಮ್ ಕಾರು ಉತ್ಪಾದನಾ ಘಟಕವು 300 ಎರಕೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಈ ಘಟಕದಲ್ಲಿ ವಾರ್ಷಿಕವಾಗಿ 7 ಲಕ್ಷ ಕಾರುಗಳನ್ನು ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಆದರೆ ಪ್ಯಾಸೆಂಜರ್ ವಾಹನಗಳ ಬೇಡಿಕೆ ಹೆಚ್ಚುತ್ತಿರುವುದರಿಂದ ಘಟಕ ವಿಸ್ತರಣೆ ಮಾರುತಿ ಸುಜುಕಿ ಕಂಪನಿಗೆ ಅನಿವಾರ್ಯವಾಗಿದೆ.

ಗುರುಗ್ರಾಮ್ ಕಾರು ಉತ್ಪಾದನಾ ಘಟಕವನ್ನು ತೊರೆಯಲಿದೆ ಮಾರುತಿ ಸುಜುಕಿ

ಈ ಹಿನ್ನಲೆಯಲ್ಲಿ 39 ವರ್ಷಗಳಷ್ಟು ಹಳೆಯದಾದ ಕಾರು ಉತ್ಪಾದನಾ ಘಟಕವನ್ನು ತೊರೆಯಲು ಮುಂದಾಗಿರುವ ಮಾರುತಿ ಸುಜುಕಿಯು ಅತಿ ಕಡಿಮೆ ಬಂಡವಾಳದಲ್ಲಿ ದೊರೆಯಬಹುದಾದ ಭೂಮಿ ಹೊಂದಿರುವ ರಾಜ್ಯಗಳತ್ತ ಮುಖಮಾಡಿತ್ತು.

ಗುರುಗ್ರಾಮ್ ಕಾರು ಉತ್ಪಾದನಾ ಘಟಕವನ್ನು ತೊರೆಯಲಿದೆ ಮಾರುತಿ ಸುಜುಕಿ

ಆದರೆ ಹರಿಯಾಣದಿಂದ ಮಾರುತಿ ಸುಜುಕಿ ಹೊರಹೋಗುವುದನ್ನು ತಡೆದಿರುವ ಅಲ್ಲಿನ ಸರ್ಕಾರವು ಗುರುಗ್ರಾಮ್ ನಗರಕ್ಕೆ ಹತ್ತಿರುವಾಗ ಭೂಮಿ ನೀಡಲು ಮುಂದಾಗಿದ್ದು, ಹಳೆಯ ಕಾರು ಉತ್ಪಾದನಾ ಘಟಕದಿಂದ ಶೀಘ್ರದಲ್ಲೇ ಹೊಸ ಕಾರು ಉತ್ಪಾದನಾ ಘಟಕಕ್ಕೆ ಸ್ಥಳಾಂತರಗೊಳ್ಳಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಗುರುಗ್ರಾಮ್ ಕಾರು ಉತ್ಪಾದನಾ ಘಟಕವನ್ನು ತೊರೆಯಲಿದೆ ಮಾರುತಿ ಸುಜುಕಿ

ಹೊಸ ಕಾರು ಉತ್ಪಾದನಾ ಘಟಕವು ಸುಮಾರು 700ರಿಂದ 1 ಸಾವಿರ ಎಕರೆ ವ್ಯಾಪ್ತಿ ಹೊಂದಿರಲಿದ್ದು, ಹೊಸ ಕಾರು ಘಟಕ ಸ್ಥಾಪನೆಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಹರಿಯಾಣ ಸರ್ಕಾರವು ಮಾರುತಿ ಸುಜುಕಿಗೆ ಭರವಸೆ ನೀಡಿದೆ.

ಗುರುಗ್ರಾಮ್ ಕಾರು ಉತ್ಪಾದನಾ ಘಟಕವನ್ನು ತೊರೆಯಲಿದೆ ಮಾರುತಿ ಸುಜುಕಿ

ಹೀಗಾಗಿ ಹೊಸ ಕಾರು ಉತ್ಪಾದನಾ ಘಟಕವನ್ನು ಹರಿಯಾಣದಿಂದ ಹೊರ ರಾಜ್ಯಗಳಿಗೆ ಸ್ಥಳಾಂತರಗೊಳ್ಳುವ ಸ್ಪಷ್ಟನೆ ನೀಡಿರುವ ಮಾರುತಿ ಸುಜುಕಿಯು ಹರಿಯಾಣದಲ್ಲೇ ಹೊಸ ಘಟಕದೊಂದಿಗೆ ಮುಂದುವರಿಯಲಿದ್ದು, ಯಾವುದೇ ಕಾರಣಕ್ಕೂ ಹರಿಯಾಣದಿಂದ ಹೊರಹೋಗುವ ಸಂದರ್ಭ ಎದುರಾಗುದಿಲ್ಲ ಎನ್ನುವ ವಿಶ್ವಾಸವಿದೆ ಎಂದು ಮಾರುತಿ ಸುಜುಕಿ ಎಂಡಿ ಆರ್.ಸಿ.ಭಾರ್ಗವ್ ಮಾಧ್ಯಮ ಸಂಸ್ಥೆಯೊಂದರ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಗುರುಗ್ರಾಮ್ ಕಾರು ಉತ್ಪಾದನಾ ಘಟಕವನ್ನು ತೊರೆಯಲಿದೆ ಮಾರುತಿ ಸುಜುಕಿ

ಇನ್ನು ಮಾರುತಿ ಸುಜುಕಿಯು ಮನೆಸಾರ್ ಘಟಕವನ್ನು ಸಹ ವಿಸ್ತರಣೆ ಮಾಡಿದ್ದು, ಮನೆಸಾರ್ ಘಟಕವು ಸದ್ಯ 600 ಎಕರೆ ವಿಸ್ತಿರ್ಣ ಹೊಂದಿದೆ. ಆದರೆ ಗುರುಗ್ರಾಮ್ ಘಟಕದ ವಿಸ್ತರಣೆಯು ಅತಿಅವಶ್ಯವಾಗಿ ಪರಿಣಿಮಿಸಿದ್ದು, ಕಂಪನಿಯ ಪ್ರಮುಖ ಕಾರು ಮಾದರಿಗಳು ಇದೇ ಘಟಕದಲ್ಲೇ ಸಿದ್ದಗೊಳ್ಳುತ್ತಿವೆ.

Article Published On: Friday, August 14, 2020, 8:45 [IST]
English summary
Maruti To Quit Gurugram Plant. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+