ಆರ್ಥಿಕ ಸಂಕಷ್ಟದ ನಡುವೆಯೂ ಮಾರುತಿ ಸುಜುಕಿ ಕಾರು ಉತ್ಪಾದನೆಯಲ್ಲಿ ಭಾರೀ ಹೆಚ್ಚಳ

ಲಾಕ್‌ಡೌನ್ ಅವಧಿಯಲ್ಲಿ ತೀವ್ರ ಕುಸಿತ ಕಂಡಿದ್ದ ಹೊಸ ವಾಹನಗಳ ಮಾರಾಟವು ಇದೀಗ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹಲವು ಆಟೋ ಉತ್ಪಾದನಾ ಕಂಪನಿಗಳ ಮಾರಾಟದಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬಂದಿದೆ.

ಮಾರುತಿ ಸುಜುಕಿ ಕಾರು ಉತ್ಪಾದನೆಯಲ್ಲಿ ಭಾರೀ ಹೆಚ್ಚಳ

ಕರೋನಾ ವೈರಸ್‌ನಿಂದಾಗಿ ಎಪ್ರಿಲ್ ಅವಧಿಯಲ್ಲಿ ವಾಹನ ಮಾರಾಟ ಸ್ಥಗಿತಗೊಳಿಸಿದ ಪರಿಣಾಮ ಭಾರೀ ನಷ್ಟ ಅನುಭವಿಸಿದ್ದ ಆಟೋ ಕಂಪನಿಗಳು ಮೇ, ಜೂನ್ ಮತ್ತು ಜುಲೈ ಅವಧಿಯಲ್ಲೂ ಕನಿಷ್ಠ ಪ್ರಮಾಣದ ವಾಹನ ಮಾರಾಟ ಮಾಡಿದ್ದವು. ತದನಂತರ ಅಗಸ್ಟ್, ಸೆಪ್ಟೆಂಬರ್‌ನಲ್ಲಿ ತುಸು ಸುಧಾರಣೆ ಕಂಡಿದ್ದ ವಾಹನ ಮಾರಾಟವು ದಸರಾ ಸಂಭ್ರಮದ ಹಿನ್ನಲೆಯಲ್ಲಿ ಅಕ್ಟೋಬರ್ ಅವಧಿಯಲ್ಲಿನ ವಾಹನ ಮಾರಾಟವು ಈ ಹಿಂದಿನ ಹಲವು ದಾಖಲೆಗಳನ್ನು ಹಿಂದಿಕ್ಕಿದೆ.

ಮಾರುತಿ ಸುಜುಕಿ ಕಾರು ಉತ್ಪಾದನೆಯಲ್ಲಿ ಭಾರೀ ಹೆಚ್ಚಳ

ಕಳೆದ ಎರಡು ತಿಂಗಳಿನಿಂದ ಹೊಸ ವಾಹನ ಮಾರಾಟ ಸಾಕಷ್ಟು ಬೆಳವಣಿಗೆ ಕಂಡುಬಂದಿದ್ದು, ವಾಹನ ಉತ್ಪಾದನಾ ಪ್ರಮಾಣವು ಕೂಡಾ ಹೆಚ್ಚಳವಾಗಿದೆ. ಮಾರುತಿ ಸುಜುಕಿ ಕಂಪನಿಯು ಕಳೆದ ತಿಂಗಳು ಅಕ್ಟೋಬರ್‌ನಲ್ಲಿ ಬರೋಬ್ಬರಿ 1,82,490 ಯನಿಟ್ ಕಾರು ಉತ್ಪಾದನೆ ಮಾಡಿದ್ದು,ಇದು ಕಳೆದ ವರ್ಷಕ್ಕಿಂತಲೂ ಶೇ. 52.09 ರಷ್ಟು ಅಧಿಕವಾಗಿದೆ.

ಮಾರುತಿ ಸುಜುಕಿ ಕಾರು ಉತ್ಪಾದನೆಯಲ್ಲಿ ಭಾರೀ ಹೆಚ್ಚಳ

2019ರ ಅಕ್ಟೋಬರ್‌ನಲ್ಲಿ 1,19,337 ಕಾರುಗಳನ್ನು ಉತ್ಪಾದಿಸಿದ್ದ ಮಾರುತಿ ಸುಜುಕಿಯು ಇದೀಗ ಅತ್ಯಧಿಕ ಕಾರು ಉತ್ಪಾದನೆಯ ಮೂಲಕ ಭಾರೀ ಪ್ರಮಾಣದ ಪ್ಯಾಸೆಂಜರ್ ಕಾರು ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾಗಿದ್ದು, ಹೊಸದಾಗಿ ಬಿಡುಗಡೆಯಾಗಿರುವ ಬಿಎಸ್-6 ಆಲ್ಟೊ ಮತ್ತು ಎಸ್-ಪ್ರೆಸ್ಸೊ ಕಾರುಗಳು ಭಾರೀ ಪ್ರಮಾಣದಲ್ಲಿ ಉತ್ಪಾದನೆಗೊಳ್ಳುತ್ತಿವೆ.

ಮಾರುತಿ ಸುಜುಕಿ ಕಾರು ಉತ್ಪಾದನೆಯಲ್ಲಿ ಭಾರೀ ಹೆಚ್ಚಳ

ಕರೋನಾ ವೈರಸ್ ಪರಿಣಾಮ ಬಹುತೇಕರು ಸಾರ್ವಜನಿಕ ಸಾರಿಗೆ ಸೌಲಭ್ಯಗಳನ್ನು ಬಳಕೆ ಮಾಡಲು ಹಿಂದೇಟು ಹಾಕುತ್ತಿದ್ದು, ದಿನನಿತ್ಯದ ಓಡಾಟಕ್ಕಾಗಿ ಬಜೆಟ್ ಬೆಲೆಯಲ್ಲಿ ಸ್ವಂತ ವಾಹನಗಳನ್ನು ಖರೀದಿಸುತ್ತಿರುವುದು ಹೊಸ ವಾಹನ ಮಾರಾಟ ಸುಧಾರಣೆಗೆ ಪ್ರಮುಖ ಕಾರಣವಾಗಿದೆ. ಇದೇ ಕಾರಣಕ್ಕಾಗಿ ಸುಜುಕಿ ನಿರ್ಮಾಣದ ಪ್ರಮುಖ ಬಜೆಟ್ ಕಾರುಗಳು ದಸರಾ ಸಂಭ್ರಮ ವೇಳೆ ಹೆಚ್ಚಿನ ಮಟ್ಟದಲ್ಲಿ ಮಾರಾಟಗೊಂಡಿದ್ದು, ದೀಪಾವಳಿ ಹೊತ್ತಿಗೆ ಇನ್ನಷ್ಟು ಬೇಡಿಕೆಯ ನೀರಿಕ್ಷೆಯಿದೆ.

ಮಾರುತಿ ಸುಜುಕಿ ಕಾರು ಉತ್ಪಾದನೆಯಲ್ಲಿ ಭಾರೀ ಹೆಚ್ಚಳ

ಮಾಹಿತಿಗಳ ಪ್ರಕಾರ ಮುಂಬರುವ ದಿನಗಳಲ್ಲಿ ಹೊಸ ವಾಹನಗಳ ಮಾರಾಟವು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಗಳಿದ್ದು, ರೂ.10 ಲಕ್ಷದೊಳಗಿನ ಬಜೆಟ್ ಕಾರುಗಳ ಮಾರಾಟದಲ್ಲಿ ಭಾರೀ ಏರಿಕೆ ಕಂಡಿರುವುದೇ ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಸಾಕಷ್ಟು ಹೆಚ್ಚಳವಾಗಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಮಾರುತಿ ಸುಜುಕಿ ಕಾರು ಉತ್ಪಾದನೆಯಲ್ಲಿ ಭಾರೀ ಹೆಚ್ಚಳ

ಇನ್ನು ಅಕ್ಬೋಬರ್ ಅವಧಿಯಲ್ಲಿ ಬಹುತೇಕ ಆಟೋ ಕಂಪನಿಗಳು ಶೇ. 10ರಿಂದ ಶೇ.60 ರಷ್ಟು ವಾರ್ಷಿಕ ಬೆಳವಣಿಗೆ ಸಾಧಿಸಿದ್ದು, ಕರ್ನಾಟಕದಲ್ಲೂ ದೇಶದ ಇತರೆ ರಾಜ್ಯಗಳಿಂತಲೂ ಹೆಚ್ಚಿನ ಮಟ್ಟದಲ್ಲಿ ಹೊಸ ವಾಹನಗಳನ್ನು ನೋಂದಣಿ ಮಾಡಲಾಗಿದೆ.

MOST READ: ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಕಾರುಗಳಿವು..!

ಮಾರುತಿ ಸುಜುಕಿ ಕಾರು ಉತ್ಪಾದನೆಯಲ್ಲಿ ಭಾರೀ ಹೆಚ್ಚಳ

ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಅವಧಿಯಲ್ಲಿ ಸಾರಿಗೆ ಇಲಾಖೆಯು ಹೊಸ ವಾಹನಗಳ ನೋಂದಣಿಯಿಂದ ರೂ. 1,044 ಕೋಟಿ ತೆರಿಗೆ ಸಂಗ್ರಹಿಸಿದ್ದು, ಇದೇ ಅವಧಿಯಲ್ಲಿ ಕಳೆದ ವರ್ಷ ರೂ. 1,042 ಕೋಟಿ ತೆರಿಗೆ ಸಂಗ್ರಹವಾಗಿತ್ತು.

ಮಾರುತಿ ಸುಜುಕಿ ಕಾರು ಉತ್ಪಾದನೆಯಲ್ಲಿ ಭಾರೀ ಹೆಚ್ಚಳ

ಆದರೆ ಕಳೆದ ವರ್ಷದ ಎಪ್ರಿಲ್‌ನಿಂದ ಅಕ್ಬೋಬರ್ ಅವಧಿಯಲ್ಲಿ ಹೊಸ ವಾಹನಗಳ ನೋಂದಣಿಯಿಂದ ಸುಮಾರು ರೂ. 3,450 ಕೋಟಿ ತೆರಿಗೆ ಸಂಗ್ರಹಿಸಿದ್ದ ಸಾರಿಗೆ ಇಲಾಖೆಯು ಈ ವರ್ಷದ ಏಪ್ರಿಲ್ ನಿಂದ ಅಕ್ಟೋಬರ್ ಅವಧಿಯಲ್ಲಿ ರೂ. 2,409 ಕೋಟಿ ತೆರಿಗೆ ಸಂಗ್ರಹಿಸಿದೆ. ಕರೋನಾ ವೈರಸ್ ಪರಿಣಾಮ ಕೆಲ ತಿಂಗಳು ವಾಹನ ಮಾರಾಟದಲ್ಲಿ ನಷ್ಟ ಉಂಟಾದ ಪರಿಣಾಮ ವಾಹನ ನೋಂದಣಿಯಲ್ಲಿ ಕುಂಠಿತಗೊಂಡಿದ್ದೆ ಆದಾಯ ಇಳಿಕೆಗೆ ಕಾರಣವಾಗಿದ್ದು, ಇದೀಗ ದೀಪಾವಳಿ ಸಂಭ್ರಮದಲ್ಲಿ ಭಾರೀ ಪ್ರಮಾಣದ ಹೊಸ ವಾಹನಗಳ ನೀರಿಕ್ಷೆಯಿದೆ.

Most Read Articles

Kannada
English summary
Maruti Suzuki production increased 53% in October. Read in Kannada.
Story first published: Tuesday, November 10, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X