ಡೀಸೆಲ್ ಮುಗಿತು ಇದೀಗ ಪೆಟ್ರೋಲ್ ಆವೃತ್ತಿಯಲ್ಲೂ ಸದ್ದು ಮಾಡಲಿರುವ ಹೊಸ ಬ್ರೆಝಾ ಸ್ಪೆಷಲ್ ಏನು?

ಹೊಸ ಎಮಿಷನ್ ನಿಯಮದಿಂದಾಗಿ ವಾಹನ ಉತ್ಪಾದನೆಯಲ್ಲಿ ಭಾರೀ ಬದಲಾಣೆಯಾಗುತ್ತಿದ್ದು, ಮಾರುತಿ ಸುಜುಕಿ ಸೇರಿದಂತೆ ಹಲವು ವಾಹನ ಉತ್ಪಾದನಾ ಸಂಸ್ಥೆಗಳು ಡೀಸೆಲ್ ಎಂಜಿನ್ ಕಾರುಗಳ ಆಯ್ಕೆಯಲ್ಲಿ ಮಹತ್ವದ ಬದಲಾವಣೆ ಪರಿಚಯಿಸಿರುವುದು ಗಮನಸೆಳೆಯುತ್ತಿದೆ.

ಡೀಸೆಲ್ ಮುಗಿತು ಇದೀಗ ಪೆಟ್ರೋಲ್ ಆವೃತ್ತಿಯಲ್ಲೂ ಸದ್ದು ಮಾಡಲಿರುವ ಹೊಸ ಬ್ರೆಝಾ ಸ್ಪೆಷಲ್ ಏನು?

ಏಪ್ರಿಲ್ 1ರಿಂದ ಜಾರಿಗೆ ಬರುತ್ತಿರುವ ಬಿಎಸ್-6 ನಿಯಮದಿಂದಾಗಿ ಮಾರುತಿ ಸುಜುಕಿ ಸಂಸ್ಥೆಯು ಕಡಿಮೆ ಸಾಮರ್ಥ್ಯದ ಡೀಸೆಲ್ ಕಾರುಗಳಿಗೆ ಗುಡ್‌ಬೈ ಹೇಳಿದ್ದು, ಇದೀಗ ತನ್ನ ಜನಪ್ರಿಯ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಯಾಗಿರುವ ವಿಟಾರಾ ಬ್ರೆಝಾ ಮಾದರಿಯನ್ನು ಪೆಟ್ರೋಲ್ ಎಂಜಿನ್‌ನೊಂದಿಗೆ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದೆ.

ಡೀಸೆಲ್ ಮುಗಿತು ಇದೀಗ ಪೆಟ್ರೋಲ್ ಆವೃತ್ತಿಯಲ್ಲೂ ಸದ್ದು ಮಾಡಲಿರುವ ಹೊಸ ಬ್ರೆಝಾ ಸ್ಪೆಷಲ್ ಏನು?

2017ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ವಿಟಾರಾ ಬ್ರೆಝಾ ಕಾರು ಆವೃತ್ತಿಯಲ್ಲಿ ಇದುವರೆಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ಮಾರಾಟ ಮಾಡುತ್ತಿದ್ದ ಮಾರುತಿ ಸುಜುಕಿ ಇದೀಗ ಮೊದಲ ಬಾರಿಗೆ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡಿದೆ.

ಡೀಸೆಲ್ ಮುಗಿತು ಇದೀಗ ಪೆಟ್ರೋಲ್ ಆವೃತ್ತಿಯಲ್ಲೂ ಸದ್ದು ಮಾಡಲಿರುವ ಹೊಸ ಬ್ರೆಝಾ ಸ್ಪೆಷಲ್ ಏನು?

ಫಿಯೆಟ್‌ನಿಂದ ಎರವಲು ಪಡೆಯಲಾಗುತ್ತಿದ್ದ 1.3-ಲೀಟರ್ ಬೂಸ್ಟರ್ ಜೆಟ್ ಡೀಸೆಲ್ ಎಂಜಿನ್‌‌ಗೆ ಗುಡ್‌ಬೈ ಹೇಳಲಾಗಿದ್ದು, ಇದೀಗ ತನ್ನದೇ ನಿರ್ಮಾಣದ 1.5-ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗಾಗಿ ಸಿದ್ದಗೊಳಿಸಿದೆ.

ಡೀಸೆಲ್ ಮುಗಿತು ಇದೀಗ ಪೆಟ್ರೋಲ್ ಆವೃತ್ತಿಯಲ್ಲೂ ಸದ್ದು ಮಾಡಲಿರುವ ಹೊಸ ಬ್ರೆಝಾ ಸ್ಪೆಷಲ್ ಏನು?

ಸದ್ಯ ಆಟೋ ಎಕ್ಸ್‌ಪೋದಲ್ಲಿ ಹೊಸ ವಿಟಾರಾ ಬ್ರೆಝಾ ಪೆಟ್ರೋಲ್ ಆವೃತ್ತಿಯನ್ನು ಅನಾವರಣಗೊಳಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಮಾರ್ಚ್ 30ರ ಒಳಗಾಗಿ ಹೊಸ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಹೊಸ ವಿಟಾರಾ ಬ್ರೆಝಾದಲ್ಲಿ ಬಳಕೆ ಮಾಡಿರುವ 1.5-ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್‌ ಮಾದರಿಯು ಈಗಾಗಲೇ ಎರ್ಟಿಗಾ ಎಕ್ಸ್ಎಲ್6 ಮತ್ತು ಸಿಯಾಜ್ ಕಾರುಗಳಲ್ಲಿ ಬಳಕೆ ಮಾಡಲಾಗಿದ್ದು, ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ.

ಡೀಸೆಲ್ ಮುಗಿತು ಇದೀಗ ಪೆಟ್ರೋಲ್ ಆವೃತ್ತಿಯಲ್ಲೂ ಸದ್ದು ಮಾಡಲಿರುವ ಹೊಸ ಬ್ರೆಝಾ ಸ್ಪೆಷಲ್ ಏನು?

ಈ ಮೂಲಕ ಹೊಸ ಪೆಟ್ರೋಲ್ ಎಂಜಿನ್ ಮಾದರಿಯು 105-ಬಿಎಚ್‌ಪಿ ಮತ್ತು 138-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ಡೀಸೆಲ್ ಮುಗಿತು ಇದೀಗ ಪೆಟ್ರೋಲ್ ಆವೃತ್ತಿಯಲ್ಲೂ ಸದ್ದು ಮಾಡಲಿರುವ ಹೊಸ ಬ್ರೆಝಾ ಸ್ಪೆಷಲ್ ಏನು?

ಜೊತೆಗೆ ಹೊಸ ಪೆಟ್ರೋಲ್ ಕಾರಿನಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡೀಸೆಲ್ ಆವೃತ್ತಿಗಿಂತಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಮುಂಭಾಗ ಡಿಸೈನ್‌ನಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ.

ಡೀಸೆಲ್ ಮುಗಿತು ಇದೀಗ ಪೆಟ್ರೋಲ್ ಆವೃತ್ತಿಯಲ್ಲೂ ಸದ್ದು ಮಾಡಲಿರುವ ಹೊಸ ಬ್ರೆಝಾ ಸ್ಪೆಷಲ್ ಏನು?

ಹೊಸ ಕಾರಿನ ಅಂಚುಗಳಲ್ಲಿ ಶಾರ್ಪ್ ಡಿಸೈನ್ ನೀಡಲಾಗಿದ್ದು, ಮರುವಿನ್ಯಾಸಗೊಳಿಸಲಾದ ಕ್ರೋಮ್, ಹೆಡ್‌ಲ್ಯಾಂಪ್ ಕ್ಲಸ್ಟರ್, ದೊಡ್ಡದಾದ ಡಿಆರ್‌ಎಲ್ಎಸ್‌ಗಳು ಮತ್ತು ಹೊಸ ಮಾದರಿಯ ಅಲಾಯ್ ವೀಲ್ಹ್ ಸೌಲಭ್ಯವು ಪೆಟ್ರೋಲ್ ಎಂಜಿನ್ ಬ್ರೆಝಾ ಕಾರಿಗೆ ಮತ್ತಷ್ಟು ಪ್ರೀಮಿಯಂ ಲುಕ್ ನೀಡಿದೆ.

ಡೀಸೆಲ್ ಮುಗಿತು ಇದೀಗ ಪೆಟ್ರೋಲ್ ಆವೃತ್ತಿಯಲ್ಲೂ ಸದ್ದು ಮಾಡಲಿರುವ ಹೊಸ ಬ್ರೆಝಾ ಸ್ಪೆಷಲ್ ಏನು?

ಜೊತೆಗೆ ಬ್ರೆಝಾ ಪೆಟ್ರೋಲ್ ಕಾರಿನಲ್ಲಿ ಈ ಬಾರಿ ಮೂರು ಹೊಸ ಡ್ಯುಯಲ್ ಟೋನ್ ಬಣ್ಣದೊಂದಿಗೆ ಖರೀದಿಗೆ ಲಭ್ಯವಿರಲಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಸಿಜ್ಲಿಂಗ್ ರೆಡ್ ಜೊತೆ ಮಿಡ್‌ನೈಟ್ ಬ್ಲ್ಯಾಕ್ ರೂಫ್, ಟಾರ್ಕ್ ಬ್ಲ್ಯೂ ಜೊತೆ ಮಿಡ್‌ನೈಟ್ ಬ್ಲ್ಯಾಕ್ ರೂಫ್ ಮತ್ತು ಗ್ರಾನೈಟ್ ಗ್ರೇ ಜೊತೆ ಅಟಮ್ ಆರೇಂಜ್ ಡ್ಯುಯಲ್ ಟೋನ್ ಖರೀದಿಸಬಹುದಾಗಿದೆ.

ಡೀಸೆಲ್ ಮುಗಿತು ಇದೀಗ ಪೆಟ್ರೋಲ್ ಆವೃತ್ತಿಯಲ್ಲೂ ಸದ್ದು ಮಾಡಲಿರುವ ಹೊಸ ಬ್ರೆಝಾ ಸ್ಪೆಷಲ್ ಏನು?

ಅಂದಾಜು ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಸದ್ಯ ಮಾರುಕಟ್ಟೆಯಲ್ಲಿ ಡೀಸೆಲ್ ಆವೃತ್ತಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರುವ ಬ್ರೆಝಾ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 7.80 ಲಕ್ಷದಿಂದ ಟಾಪ್ ಎಂಡ್ ಮಾದರಿಯು 10.73 ಲಕ್ಷ ಬೆಲೆ ಹೊಂದಿದ್ದು, ಪೆಟ್ರೋಲ್ ಎಂಜಿನ್ ಹೊಂದಿರುವ ಬ್ರೆಝಾ ಮಾದರಿಯು ರೂ. 8 ಲಕ್ಷದಿಂದ ರೂ.11.50 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

Most Read Articles

Kannada
English summary
Here are new things in All new Maruti Vitara Brezza as compared to the outgoing model. Read in Kannada.
Story first published: Saturday, February 8, 2020, 20:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X