ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಬ್ರೆಝಾ..!

ಬಿಎಸ್-6 ಪೆಟ್ರೋಲ್ ಕಾರು ಮಾದರಿಗಳ ಮಾರಾಟವನ್ನು ಆರಂಭಿಸಿರುವ ಮಾರುತಿ ಸುಜುಕಿ ಸುಜುಕಿ ಸಂಸ್ಥೆಯು ಶೀಘ್ರದಲ್ಲೇ ಬಿಎಸ್-6 ಡೀಸೆಲ್ ಕಾರುಗಳ ಮಾರಾಟಕ್ಕೂ ಚಾಲನೆ ನೀಡಲು ಸಿದ್ದತೆ ನಡೆಸಿದ್ದು, ಇದರೊಂದಿಗೆ ಬ್ರೆಝಾ ಮತ್ತು ಎಸ್-ಕ್ರಾಸ್ ಕಾರುಗಳಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ಆಯ್ಕೆಯನ್ನು ಪರಿಚಯಿಸುತ್ತಿದೆ.

ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಬ್ರೆಝಾ..!

ಹೊಸ ಎಮಿಷನ್ ನಿಯಮದಿಂದಾಗಿ ಎಂಟ್ರಿ ಲೆವಲ್ ಡೀಸೆಲ್ ಎಂಜಿನ್ ಮಾರಾಟವು ಕಾರು ಉತ್ಪಾದನಾ ಸಂಸ್ಥೆಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದು, ಮಾರುತಿ ಸುಜುಕಿ ಸೇರಿದಂತೆ ಹಲವು ಕಾರು ಉತ್ಪಾದನಾ ಸಂಸ್ಥೆಗಳು ಕಡಿಮೆ ಹೊಸ ನಿಯಮದೊಂದಿಗೆ ಉನ್ನತೀಕರಿಸಲು ಸಾಧ್ಯವಾಗದ ಡೀಸೆಲ್ ಎಂಜಿನ್‌ಗಳನ್ನು ಏಪ್ರಿಲ್ 1ರಿಂದ ಸ್ಥಗಿತಗೊಳಿಸಲು ನಿರ್ಧರಿಸಿವೆ. ಇದರ ಪರಿಣಾಮ ಬ್ರೆಝಾ ಮತ್ತು ಎಸ್-ಕ್ರಾಸ್‌ಗಳಲ್ಲಿ ಹೊಸ ತಂತ್ರಜ್ಞಾನ ಪ್ರೇರಿತ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಳ್ಳುತ್ತಿವೆ.

ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಬ್ರೆಝಾ..!

ಕಡಿಮೆ ಸಾಮಾರ್ಥ್ಯದ ಡೀಸೆಲ್ ಎಂಜಿನ್ ಕಾರುಗಳ ಆಯ್ಕೆಯನ್ನು ಕೈಬಿಡುತ್ತಿರುವ ಮಾರುತಿ ಸುಜುಕಿಯು ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರು ಆವೃತ್ತಿಗಳ ಮೇಲೆ ಹೆಚ್ಚಿನ ಗಮನಹರಿಸಿದ್ದು, ಆಯ್ದ ಕಾರು ಮಾದರಿಗಳಲ್ಲಿ ಮಾತ್ರವೇ ಹೊಸ ಮಾದರಿಯ ಡೀಸೆಲ್ ಎಂಜಿನ್ ಅಭಿವೃದ್ದಿಗೊಳಿಸಿದೆ.

ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಬ್ರೆಝಾ..!

ಒಂದು ವೇಳೆ ಬಿಎಸ್-6 ನಿಯಮ ಅನುಸಾರವಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ 1.3-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಉನ್ನತೀಕರಣ ಮಾಡಿದರೂ ಸಹ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದ್ದು, ಇದರಿಂದ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ.

ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಬ್ರೆಝಾ..!

ಹೀಗಾಗಿ ರೂ.10 ಲಕ್ಷದೊಳಗಿನ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯ ಬಗೆಗೆ ಹೆಚ್ಚು ತೆಲೆಕೆಡಿಸಿಕೊಳ್ಳದೇ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳಿಗೆ ವಿಶೇಷ ಗಮನಹರಿಸಲು ನಿರ್ಧರಿಸಲಾಗಿದ್ದು, ಎಂಟ್ರಿ ಲೆವೆಲ್ ಕಾರುಗಳಲ್ಲಿ ಪೆಟ್ರೋಲ್ ಎಂಜಿನ್ ಆಯ್ಕೆ ಮಾತ್ರವೇ ಸಿಗಲಿದೆ. ಎಂಟ್ರಿ ಲೆವಲ್ ಕಾರುಗಳಲ್ಲಿ 1.0-ಲೀಟರ್, 1.2-ಲೀಟರ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಹೈ ಎಂಡ್ ಮಾದರಿಗಳಲ್ಲಿ ಮಾತ್ರ 1.5-ಲೀಟರ್, 1.6-ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಬಿಡುಗಡೆ ಮಾಡಲಿದೆ.

ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಬ್ರೆಝಾ..!

ಮಾಹಿತಿಗಳ ಪ್ರಕಾರ, ಬ್ರೆಝಾ, ಎರ್ಟಿಗಾ, ಸಿಯಾಜ್, ಎಸ್-ಕ್ರಾಸ್ ಕಾರುಗಳಲ್ಲಿ ಹೊಸ 1.5-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 1.5-ಲೀಟರ್ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಗಳಲ್ಲಿ 1.6-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಲಭ್ಯವಾಗಲಿದೆ.

ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಬ್ರೆಝಾ..!

ಮಾರುತಿ ಸುಜುಕಿಯು ಇತ್ತೀಚಿಗಷ್ಟೆ ಹೊಸ ತಂತ್ರಜ್ಞಾನ ಪ್ರೇರಿತ 1.5 ಲೀಟರ್ ಕೆ15 ಪೆಟ್ರೊಲ್ ಎಂಜಿನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಹೊಸ ಪೆಟ್ರೋಲ್ ಎಂಜಿನ್ ಮಾದರಿಯು ಇದೀಗ ಮಾರುತಿ ಸುಜುಕಿ ಅಭಿವೃದ್ದಿಪಡಿಸಿರುವ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ಟೆಕ್ನಾಲಜಿ ಪ್ರೇರಣೆ ಪಡೆದಿರುವುದು ರೋಡ್ ಟೆಸ್ಟಿಂಗ್ ವೇಳೆ ಬಹಿರಂಗವಾಗಿದೆ.

ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಬ್ರೆಝಾ..!

ಹೊಸ ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಬ್ರೆಝಾದಲ್ಲಿ ಮಾತ್ರವಲ್ಲದೇ ಎಸ್ ಕ್ರಾಸ್, ಡಿಜೈರ್ ಸೇರಿದಂತೆ ಇತರೆ ಕೆಲವು ಕಾರು ಮಾದರಿಗಳಲ್ಲೂ ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದ್ದು, 1.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮೂಲಕ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡೀಸೆಲ್ ಮಾದರಿಯಷ್ಟೇ ಮೈಲೇಜ್ ಮತ್ತು ಪರ್ಫಾಮೆನ್ಸ್ ಒದಗಿಸಲಿದೆ.

ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಬ್ರೆಝಾ..!

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯು ವಿಟಾರಾ ಬ್ರೆಝಾ ಮತ್ತು ಎಸ್-ಕ್ರಾಸ್ ಮಾದರಿಗಳಲ್ಲಿ ಕೇವಲ 1.3-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರ ನೀಡಲಾಗುತ್ತಿದ್ದು, 82‍-ಬಿಎಚ್‍‍ಪಿ ಮತ್ತು 200-ಎನ್ಎಂ ಟಾರ್ಕ್ ಅನ್ನು ಉತ್ಪಾದನಾ ಗುಣಹೊಂದಿದೆ.

ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಬ್ರೆಝಾ..!

ಆದರೆ ಬಿಎಸ್-6 ನಿಯಮದ ಪ್ರಕಾರ ಈ 1.3-ಲೀಟರ್ ಡೀಸೆಲ್ ಎಂಜಿನ್ ಮಾದರಿಯು ಸಾಕಷ್ಟು ಸುಧಾರಣೆಯಾಗಬೇಕಿದ್ದು, ಒಂದು ವೇಳೆ ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಉನ್ನತೀಕರಿಸಿದರೂ ಸಹ ದುಬಾರಿ ಬೆಲೆ ಪಡೆದುಕೊಳ್ಳಲಿದೆ. ಇದರಿಂದ ಹೊಸ ಪೆಟ್ರೋಲ್ ಎಂಜಿನ್ ಆಯ್ಕೆಯತ್ತ ಮುಖ ಮಾಡಿರುವ ಮಾರುತಿ ಸುಜುಕಿ ಸಂಸ್ಥೆಯು ಕೆಲವೇ ಆಯ್ದ ಟಾಪ್ ಎಂಡ್ ಕಾರುಗಳಲ್ಲಿ ಮಾತ್ರವೇ ಬಿಎಸ್-6 ಪ್ರೇರಣೆಯ 1.5-ಲೀಟರ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡುತ್ತಿದ್ದು, ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಆಯ್ಕೆ ಹೆಚ್ಚಲಿದೆ.

Most Read Articles

Kannada
English summary
2020 Maruti Brezza petrol SHVS confirmed by new spy shots. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X