ಸತತ 16 ವರ್ಷಗಳಿಂದ ನಂ. 1 ಸ್ಥಾನದಲ್ಲಿ ಮುಂದುವರೆದ ಆಲ್ಟೊ

ಮಾರುತಿ ಸುಜುಕಿ ಕಂಪನಿಯ ಆಲ್ಟೊ ಸತತ 16ನೇ ವರ್ಷವೂ ಹೆಚ್ಚು ಮಾರಾಟವಾದ ಕಾರು ಆಗಿ ಉಳಿದಿದೆ. 2004ರಲ್ಲಿ ಪ್ಯಾಸೆಂಜರ್ ವೆಹಿಕಲ್ ಸೆಗ್‌ಮೆಂಟಿನಲ್ಲಿ ಬಿಡುಗಡೆಯಾದ ಈ ಕಾರು ಅಂದಿನಿಂದ ಇಂದಿನವರೆಗೆ ಈ ಸೆಗ್‌ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಕಾರ್ ಆಗಿದೆ.

ಸತತ 16 ವರ್ಷಗಳಿಂದ ನಂ. 1 ಸ್ಥಾನದಲ್ಲಿ ಮುಂದುವರೆದ ಆಲ್ಟೊ

ಆಕರ್ಷಕ ಫೀಚರ್‌ಗಳನ್ನು ಹೊಂದಿರುವ ಈ ಫ್ಯಾಮಿಲಿ ಕಾರ್ ಪ್ರತಿವರ್ಷದ ಮಾರಾಟದಲ್ಲಿ ತನ್ನ ಪ್ರತಿಸ್ಪರ್ಧಿ ಕಾರುಗಳನ್ನು ಮೀರಿಸುತ್ತದೆ. 2008ರಲ್ಲಿ ಆಲ್ಟೊದ ಒಂದು ಮಿಲಿಯನ್ ಯುನಿಟ್ ಮಾರಾಟವಾಯಿತು. ನಾಲ್ಕು ವರ್ಷಗಳ ನಂತರ, 2012ರಲ್ಲಿ, ಸುಮಾರು ಎರಡು ಮಿಲಿಯನ್ ಯುನಿಟ್‌ಗಳು ಮಾರಾಟವಾದವು.

ಸತತ 16 ವರ್ಷಗಳಿಂದ ನಂ. 1 ಸ್ಥಾನದಲ್ಲಿ ಮುಂದುವರೆದ ಆಲ್ಟೊ

2016ರಲ್ಲಿ ಆಲ್ಟೊ ಕಾರಿನ ಮಾರಾಟವು 3 ಮಿಲಿಯನ್ ಯುನಿಟ್‌ಗಳ ಗಡಿಯನ್ನು ದಾಟಿತು. 2019ರ ನವೆಂಬರ್‌ ವೇಳೆಗೆ ಆಲ್ಟೊ ಕಾರಿನ 39 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. 2019ರಲ್ಲಿ ಆಲ್ಟೊ ಕಾರಿನ 1.50 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸತತ 16 ವರ್ಷಗಳಿಂದ ನಂ. 1 ಸ್ಥಾನದಲ್ಲಿ ಮುಂದುವರೆದ ಆಲ್ಟೊ

ಆಲ್ಟೊ, ಕಾರು ಖರೀದಿಸ ಬಯಸುವ ಲಕ್ಷಾಂತರ ಭಾರತೀಯರ ಕನಸುಗಳನ್ನು ಈಡೇರಿಸುತ್ತಿದೆ ಎಂದು ಮಾರುತಿ ಸುಜುಕಿ ಕಂಪನಿ ಹೇಳಿದೆ. ಸಾಮಾನ್ಯ ಭಾರತೀಯ ಕುಟುಂಬವು ಆಲ್ಟೊ ಕಾರ್ ಅನ್ನು ತಮ್ಮ ಜೀವನದ ಮೊದಲ ಕಾರು ಎಂದು ಆಯ್ಕೆ ಮಾಡುತ್ತದೆ.

ಸತತ 16 ವರ್ಷಗಳಿಂದ ನಂ. 1 ಸ್ಥಾನದಲ್ಲಿ ಮುಂದುವರೆದ ಆಲ್ಟೊ

ಇದಕ್ಕಾಗಿ ಮಾರುತಿ ಸುಜುಕಿ ಕಂಪನಿಯು ಈ ಕಾರನ್ನು ಕೈಗೆಟುಕುವಂತೆ ಮಾಡುವುದರ ಜೊತೆಗೆ ವರ್ಷದಿಂದ ವರ್ಷಕ್ಕೆ ಅನೇಕ ಹೊಸ ಹೊಸ ಫೀಚರ್‌ಗಳನ್ನು ನೀಡುತ್ತಿದೆ. ಇದರಿಂದಾಗಿ ಗ್ರಾಹಕರಿಗೆ ಈ ಕಾರಿನ ಮೇಲೆ ನಂಬಿಕೆ ಹೆಚ್ಚಾಗುತ್ತದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಸತತ 16 ವರ್ಷಗಳಿಂದ ನಂ. 1 ಸ್ಥಾನದಲ್ಲಿ ಮುಂದುವರೆದ ಆಲ್ಟೊ

ಮಾರುತಿ ಆಲ್ಟೊದ ಹೊಸ ಕಾರುಗಳಲ್ಲಿ ಏರೋ ಎಡ್ಜ್ ಡಿಸೈನ್, ಏರ್‌ಬ್ಯಾಗ್, ಎಬಿಎಸ್, ಇಬಿಡಿ ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಹೈಸ್ಪೀಡ್ ಅಲರ್ಟ್ ಸಿಸ್ಟ , ಸೀಟ್ ಬೆಲ್ಟ್ ರಿಮ್ಯಾಂಡರ್ ಸೇರಿದಂತೆ ಹಲವಾರು ಫೀಚರ್‌ಗಳನ್ನು ನೀಡಲಾಗಿದೆ. ಮಾರುತಿ ಸುಜುಕಿ ಸ್ವಿಫ್ಟ್ ಕಾರು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದರೂ, ಸಣ್ಣ ಕಾರುಗಳಲ್ಲಿ ಆಲ್ಟೊ ತನ್ನದೇ ಆದ ಪ್ರಾಬಲ್ಯವನ್ನು ಹೊಂದಿದೆ.

ಸತತ 16 ವರ್ಷಗಳಿಂದ ನಂ. 1 ಸ್ಥಾನದಲ್ಲಿ ಮುಂದುವರೆದ ಆಲ್ಟೊ

ಕಳೆದ ವರ್ಷ ಮಾರುತಿ ಸುಜುಕಿ ಕಂಪನಿಯು ಆಲ್ಟೊ ಕಾರ್ ಅನ್ನು ಬಿಎಸ್ 6 ಹಾಗೂ ಸಿಎನ್‌ಜಿ ಆವೃತ್ತಿಗಳಲ್ಲಿ ಬಿಡುಗಡೆಗೊಳಿಸಿತ್ತು. ಹೊಸ ಹೊಸ ಫೀಚರ್‌ಗಳೊಂದಿಗೆ ಅಪ್‌ಡೇಟ್ ಆಗುತ್ತಿರುವುದರಿಂದ ಈ ಕಾರು ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸುತ್ತಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಸತತ 16 ವರ್ಷಗಳಿಂದ ನಂ. 1 ಸ್ಥಾನದಲ್ಲಿ ಮುಂದುವರೆದ ಆಲ್ಟೊ

ಆಲ್ಟೊ ಕಾರ್ ಅನ್ನು ಹೊರತುಪಡಿಸಿದರೆ ರೆನಾಲ್ಟ್ ಕಂಪನಿಯ ಕ್ವಿಡ್ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ರೆನಾಲ್ಟ್ ಕ್ವಿಡ್ ಆಲ್ಟೊಗಿಂತ ದೊಡ್ಡ ಗಾತ್ರ ಹಾಗೂ ಉತ್ತಮ ವಿನ್ಯಾಸವನ್ನು ಹೊಂದಿದ್ದರೂ ಆಲ್ಟೊ ಕಾರಿಗೆ ಪೈಪೋಟಿ ನೀಡುವಲ್ಲಿ ಹಿಂದುಳಿದಿದೆ.

Most Read Articles

Kannada
English summary
Maruti Suzuki's Alto is India's best selling car from past 16 years. Read in Kannada.
Story first published: Monday, June 15, 2020, 17:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X