ಹೆಚ್ಚಿನ ಮೈಲೇಜ್ ನೀಡಲಿದೆ ಮಾರುತಿ ಸುಜುಕಿ ಕಂಪನಿಯ ಈ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಸಿಎನ್‍ಜಿ ತಂತ್ರಜ್ಞಾನವನ್ನು ಹೊಂದಿರುವ ಬ್ರ್ಯಾಂಡ್ ಗಳಲ್ಲಿ ಮಾರುತಿ ಸುಜುಕಿ ಕೂಡ ಒಂದಾಗಿದೆ. ಮಾರುತಿ ಸುಜುಕಿ ತನ್ನ ವ್ಯಾಗನ್ಆರ್ ಮತ್ತು ಆಲ್ಟೊ ಸೇರಿದಂತೆ ಹಲವಾರು ಜನಪ್ರಿಯ ಮಾದರಿಗಳಲ್ಲಿ ಸಿಎನ್‍ಜಿ ತಂತ್ರಜ್ಞಾನ ವನ್ನು ಅಳವಡಿಸಲಾಗಿದೆ.

ಹೆಚ್ಚಿನ ಮೈಲೇಜ್ ನೀಡಲಿದೆ ಮಾರುತಿ ಸುಜುಕಿ ಕಂಪನಿಯ ಈ ಕಾರು

ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಹೊಸ ವ್ಯಾಗನ್ಆರ್ ಸಿಎನ್‌ಜಿ ಮಾದರಿಯನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಬಿಡುಗಡೆಗೊಳಿಸಿದರು.ಮಾರುತಿ ವ್ಯಾಗನ್ಆರ್ ಸಿಎನ್‌ಜಿ ದೇಶದಲ್ಲಿ ಅತಿ ಹೆಚ್ಚು ಮೈಲೇಜ್ ಅನ್ನು ನೀಡುವ ಮಾದರಿಯಾಗಿದೆ. ಮಾರುತಿ ವ್ಯಾಗನ್ಆರ್ ಬಿಎಸ್ 6 ಸಿಎನ್‌ಜಿ ಮಾದರಿಯು ಅದೇ 1.0-ಲೀಟರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 58 ಬಿಹೆಚ್‌ಪಿ ಮತ್ತು 78 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದನ್ನು ಐದು-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೆಚ್ಚಿನ ಮೈಲೇಜ್ ನೀಡಲಿದೆ ಮಾರುತಿ ಸುಜುಕಿ ಕಂಪನಿಯ ಈ ಕಾರು

ಬಿಎಸ್-6 ವ್ಯಾಗನ್ಆರ್ ಸಿಎನ್‌ಜಿ ಮಾದರಿಯು 32.52 ಕಿ.ಮೀ/ಕೆಜಿ ಮೈಲೇಜ್ ಅನ್ನು ನೀಡುತ್ತದೆ. ಇದು 8.5 ಕೆಜಿ ಸಿಎನ್‌ಜಿ ಟ್ಯಾಂಕ್ ಸಾಮರ್ಥ್ಯದೊಂದಿಗೆ 276 ಕಿ.ಮೀ ಡ್ರೈವಿಂಗ್ ರೇಂಜ್ ನೀಡುತ್ತದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಹೆಚ್ಚಿನ ಮೈಲೇಜ್ ನೀಡಲಿದೆ ಮಾರುತಿ ಸುಜುಕಿ ಕಂಪನಿಯ ಈ ಕಾರು

ಪೆಟ್ರೋಲ್ ಮೋಡ್‌ನಲ್ಲಿರುವ ಅದೇ ಎಂಜಿನ್ ತನ್ನ 32-ಲೀಟರ್ ಇಂಧನ ಟ್ಯಾಂಕ್‌ನಿಂದ 697 ಕಿ.ಮೀ ಡ್ರೈವಿಂಗ್ ರೇಂಜ್ ಮತ್ತು ಪ್ರತಿ ಲೀಟರ್ ಗೆ 21.79 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಹೆಚ್ಚಿನ ಮೈಲೇಜ್ ನೀಡಲಿದೆ ಮಾರುತಿ ಸುಜುಕಿ ಕಂಪನಿಯ ಈ ಕಾರು

ವ್ಯಾಗನ್ಆರ್ ಎಸ್-ಸಿಎನ್‍ಜಿ ಮಾದರಿಯು ಅತ್ಯುತ್ತಮ ಮೈಲೇಜ್ ಹೊಂದಿದ್ದರೆ, ತನ್ನದೆ ಬ್ರ್ಯಾಂಡ್ ನ ಆಲ್ಟೋ ಕಾರು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಮಾರುತಿ ಆಲ್ಟೋ ಕಾರಿನಲ್ಲಿ 800 ಸಿಸಿ ಮೂರು-ಸಿಲಿಂಡರ್ ಎಂಜಿನ್ ಸಿಎನ್‌ಜಿ ಮೋಟಾರ್ ಅನ್ನು ಅಳವಡಿಸಲಾಗಿದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಹೆಚ್ಚಿನ ಮೈಲೇಜ್ ನೀಡಲಿದೆ ಮಾರುತಿ ಸುಜುಕಿ ಕಂಪನಿಯ ಈ ಕಾರು

ಈ ಕಾರು ಪ್ರತಿ 31.59 ಕಿಮೀ ಮೈಲೇಜ್ ಅನ್ನು ನೀಡುತ್ತದೆ. ಈ ಕಾರು 8.5 ಕೆಜಿ ಸಿಎನ್‌ಜಿ ಟ್ಯಾಂಕ್‌ನಿಂದ 269 ಕಿ.ಮೀ ಚಲಿಸುತ್ತದೆ. ಮಾರುತಿ ಆಲ್ಟೋ ಕಾರು ಪೆಟ್ರೋಲ್ ಮೋಡ್‌ನಲ್ಲಿ ಅದೇ ಎಂಜಿನ್ ವ್ಯಾಗನ್ಆರ್ ಗಿಂತ ಆಲ್ಟೋ ಹೆಚ್ಚು ಮೈಲೇಜ್ ನೀಡುತ್ತದೆ.

ಹೆಚ್ಚಿನ ಮೈಲೇಜ್ ನೀಡಲಿದೆ ಮಾರುತಿ ಸುಜುಕಿ ಕಂಪನಿಯ ಈ ಕಾರು

ಮಾರುತಿ ಆಲ್ಟೋಕಾರಿನಲ್ಲಿರುವ 800 ಸಿಸಿ ಎಂಜಿನ್ ಪ್ರತಿ ಲೀಟರ್ ಗೆ 22.05 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ತನ್ನ 35-ಲೀಟರ್ ಇಂಧನ ಟ್ಯಾಂಕ್‌ನಿಂದ 772 ಕಿ.ಮೀ. ಸಿಎನ್‌ಜಿ ಮತ್ತು ಪೆಟ್ರೋಲ್ ಮೈಲೇಜ್ ಅಂಕಿಅಂಶಗಳನ್ನು ಸೇರಿಸುವುದರಿಂದ, ಆಲ್ಟೊ ಎಸ್-ಸಿಎನ್‌ಜಿ ಒಟ್ಟು 1000 ಕಿ.ಮೀ ಮೈಲೇಜ್ ನೀಡುತ್ತದೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಹೆಚ್ಚಿನ ಮೈಲೇಜ್ ನೀಡಲಿದೆ ಮಾರುತಿ ಸುಜುಕಿ ಕಂಪನಿಯ ಈ ಕಾರು

ಸಿಎನ್‍ಜಿಯ ಮಾದರಿಯ ಅತಿ ಹೆಚ್ಚು ಮೈಲೇಜ್ ನೀಡುವ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಹ್ಯುಂಡೈ ಸ್ಯಾಂಟ್ರೊ ಕಾರು ಪಡೆದುಕೊಂಡಿದೆ. ಈ ಜನಪ್ರಿಯ ಕಾರಿನಲ್ಲಿ 1.1-ಲೀಟರ್ ಎಂಜಿನ್ ಪ್ರತಿ ಕೆಜಿಗೆ 29.50 ಕಿಮೀ ಮೈಲೇಜ್ ಅನ್ನು ನೀಡುತ್ತದೆ. ಈ ಕಾರು 251 ಕಿ.ಮೀ ಡ್ರೈವಿಂಗ್ ರೇಂಜ್ ಅನ್ನು ಹೊಂದಿದೆ. ಹ್ಯುಂಡೈ ಸ್ಯಾಂಟ್ರೊ ಕಾರು ಪ್ರತಿ ಲೀಟರ್ ಗೆ 20 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಹೆಚ್ಚಿನ ಮೈಲೇಜ್ ನೀಡಲಿದೆ ಮಾರುತಿ ಸುಜುಕಿ ಕಂಪನಿಯ ಈ ಕಾರು

ಮಾರುತಿ ಸುಜುಕಿ ಅತಿ ಹೆಚ್ಚು ಮೈಲೇಜ್ ನೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ. ವ್ಯಾಗನ್ಆರ್ ಮಾರುತಿ ಸುಜುಕಿಯ ಸರಣಿಯಯಲ್ಲಿ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್ ಕೊಡುಗೆಯಾಗಿದೆ. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.5.32 ಲಕ್ಷಗಳಾಗಿದೆ.

Most Read Articles

Kannada
English summary
Maruti WagonR BS6 CNG Mileage Figures Highest Among Its Rivals. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X