ಆಟೋ ಎಕ್ಸ್‌ಪೋ 2020: ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಎ‍ಎಂಜಿ ಎ35 ಕಾರು ಅನಾವರಣ

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಎ-ಕ್ಲಾಸ್ ಸೆಡಾನ್ ಅನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಮರ್ಸಿಡಿಸ್ ಬೆಂಝ್ ತನ್ನ ಎಂಟ್ರಿ ಲೆವೆಲ್ ಕಾರು ಎಎಂಜಿ ಎ35 ಅನ್ನು ಅನಾವರಣಗೊಳಿಸಿದೆ.

ಆಟೋ ಎಕ್ಸ್‌ಪೋ 2020: ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಎ‍ಎಂಜಿ ಎ35 ಕಾರು ಅನಾವರಣ

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಮುಂಭಾಗದಲ್ಲಿ ದೊಡ್ಡ ಗ್ರಿಲ್ ಅನ್ನು ಅಳವಡಿಸಿದೆ. ಇಂಟಿಗ್ರೇಟೆಡ್ ಡಿಆರ್‍ಎಲ್‍‍ಗಳನ್ನು ಹೊಂದಿರುವ ಎಲ್‍ಇಡಿ ಹೆಡ್‍‍ಲ್ಯಾಂಪ್‍‍ಗಳನ್ನು ಹೊಂದಿದೆ. ಐಷಾರಾಮಿ ಸೆಡಾನ್ ಎ-ಕ್ಲಾಸ್‍‍ನಲ್ಲಿ ದೊಡ್ಡ ರೂಫ್ ಅನ್ನು ಹೊಂದಿದೆ. ದೊಡ್ಡದಾದ ಸ್ವೆಫ್ಟ್ ಲೈಟ್ ಮತ್ತು ಹಿಂಭಾಗದಲ್ಲಿ ಆಕರ್ಷಕ ಬಂಪರ್ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಎ‍ಎಂಜಿ ಎ35 ಕಾರು ಅನಾವರಣ

ವಿಶೇಷವಾಗಿ ಎಎಂಜಿ ಎ35 ಕಾರಿನಲ್ಲಿ ಟ್ವೀಕ್ಡ್ ಫ್ರಂಟ್ ಗ್ರಿಲ್ ಮತ್ತು ಬಂಪರ್, ಸ್ಪೋರ್ಟಿಯರ್ ಅಲಾಯ್ ವ್ಹೀಲ್, ಆಗ್ರೆಸಿವ್ ಹಿಂಭಾಗದ ಡಿಫ್ಯೂಸರ್ ಮತ್ತು ವೃತ್ತಕಾರದ ಡ್ಯುಯಲ್ ಟಿಪ್ ಎಕ್ಸಾಸ್ಟ್ ಪೈಪ್‍‍ಗಳನ್ನು ಒಳಗೊಂಡಿದೆ.

ಆಟೋ ಎಕ್ಸ್‌ಪೋ 2020: ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಎ‍ಎಂಜಿ ಎ35 ಕಾರು ಅನಾವರಣ

ಎ-ಕ್ಲಾಸ್ ಸೆಡಾನ್ ಇಂಟಿರಿಯರ್‍‍ನಲ್ಲಿ ದೊಡ್ಡ ಸಲೂನ್‍‍ಗಳನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಎಂಬಿ‍‍ಯುಎಕ್ಸ್ ಸಿಸ್ಟಂ, ವಾಯ್ಸ್ ಕಂಟ್ರೋಲ್‍ ಮತ್ತು ಫ್ರೀಸ್ಟ್ಯಾಂಡಿಂಗ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇನ್ಫೋಟೇನ್‍‍ಮೆಂಟ್ ಡಿಸ್‍‍ಪ್ಲೇ ಸುತ್ತಲೂ ಮೂರು ವೃತ್ತಾಕಾರದ ಕ್ರೋಮ್ ಮತ್ತು ಕ್ರೋಮ್ ಕವರ್ ಆಗಿರುವ ಸ್ಟೀಯರಿಂಗ್ ನಿಂದ ಕಾರಿನ ಇಂಟಿರಿಯರ್ ಐಷಾರಾಮಿ ಲುಕ್ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಎ‍ಎಂಜಿ ಎ35 ಕಾರು ಅನಾವರಣ

ಈ ಕಾರಿನಲ್ಲಿ 2.0 ಲೀಟರ್, ನಾಲ್ಕು ಸಿಲಿಂಡರ್, ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 306 ಬಿ‍‍ಹೆಚ್‍ಪಿ ಪವರ್ ಮತ್ತು 400 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. 4 ಮ್ಯಾಟಿಕ್ ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಅನ್ನು ಕೂಡ ಅಳವಡಿಸಲಾಗಿದೆ. ಈ ಎಎಂಜಿ ಎ35 ಕಾರು ಕೇವಲ 4.8 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ಆಟೋ ಎಕ್ಸ್‌ಪೋ 2020: ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಎ‍ಎಂಜಿ ಎ35 ಕಾರು ಅನಾವರಣ

ಮರ್ಸಿಡಿಸ್‍ ಬೆಂಝ್ ಎ-ಕ್ಲಾಸ್ ಎಎಂಜಿ 35 ಕಾರು ಎಂಎಫ್ಎ 2 ಪ್ಲಾಟ್‍‍ಫಾರ್ಮ್‍ ಅನ್ನು ಆಧರಿಸಿದೆ. ಈ ಕಾರುಗಳನ್ನು ನಾಕ್ ಡೌ‍‍ನ್(ಸಿಕೆಡಿ) ಮೂಲಕ ಭಾರತಕ್ಕೆ ತರಲಾಗುತ್ತದೆ.

ಆಟೋ ಎಕ್ಸ್‌ಪೋ 2020: ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಎ‍ಎಂಜಿ ಎ35 ಕಾರು ಅನಾವರಣ

ಚೀನಾ ಮಾರುಕಟ್ಟೆಯಲ್ಲಿ ಈ ಸೆಡಾನ್ ಉದ್ದವಾದ ವ್ಹೀಲ್ ಬೇಸ್‍‍ನಲ್ಲಿ ಮಾರಾಟವಾಗುತ್ತಿದೆ. ಭಾರತದಲ್ಲಿ ಈ ಸೆಡಾನ್ 2,729 ಎಂಎಂ ವ್ಹೀಲ್‍‍ಬೇಸ್ ಅನ್ನು ಹೊಂದಿದೆ. ಈ ಕಾರಿಗೆ ಎ-ಕ್ಲಾಸ್ ನಿಂದ ಪ್ರತ್ಯೇಕಿಸಲು ಮರ್ಸಿಡಿಸ್ ಸೆಡಾನ್ ಎ-ಕ್ಲಾಸ್ ಲಿಮೋಸಿನ್ ಎಂಬ ನಾಮಕರಣ ಮಾಡಲು ಮರ್ಸಿಡಿಸ್ ಕಂಪನಿ ನಿರ್ಧರಿಸಿದೆ.

ಆಟೋ ಎಕ್ಸ್‌ಪೋ 2020: ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಎ‍ಎಂಜಿ ಎ35 ಕಾರು ಅನಾವರಣ

ಈ ಎ-ಕ್ಲಾಸ್ ಎಎಂಜಿ 35 ಸೆಡಾನ್‍‍ನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.32 ಲಕ್ಷ ದಿಂದ 40 ಲಕ್ಷದವರೆ ಇರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಐಷಾರಾಮಿ ಸೆಡಾನ್ ಭಾರತದಲ್ಲಿ ಬಿಡುಗಡೆಯಾದ ಬಳಿಕ ಆಡಿ ಎ‍3 ಮತ್ತು ಮುಂಬರುವ ಬಿ‍ಎಂಡಬ್ಲೂ 2 ಸೀರಿಸ್ ಕಾರಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Mercedes-Benz A-Class sedan makes India debut in AMG A35 guise. Read in Kannada.
Story first published: Friday, February 7, 2020, 18:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more