ಆಟೋ ಎಕ್ಸ್‌ಪೋ 2020: ಇನೋವಾ ಕ್ರಿಸ್ಟಾ ಮತ್ತು ಎರ್ಟಿಗಾ ಪ್ರತಿಸ್ಪರ್ಧಿ ಎಂಜಿ 360ಎಂ ಅನಾವರಣ

ಎಂಜಿ ಮೋಟಾರ್ ಸಂಸ್ಥೆಯು ಈಗಾಗಲೇ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಮುಂಬರುವ 2 ವರ್ಷಗಳ ಅವಧಿಯಲ್ಲಿ 10ಕ್ಕೂ ಹೆಚ್ಚು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲು ಭರ್ಜರಿ ಸಿದ್ದತೆ ನಡೆಸಿದೆ.

ಇನೋವಾ ಕ್ರಿಸ್ಟಾ ಮತ್ತು ಎರ್ಟಿಗಾ ಪ್ರತಿಸ್ಪರ್ಧಿ ಎಂಜಿ 360ಎಂ ಅನಾವರಣ

ಬ್ರಿಟಿಷ್ ಮೋಟಾರ್ ಸಂಸ್ಥೆಯಾಗಿರುವ ಎಂಜಿ ಮೋಟಾರ್ ಸಂಸ್ಥೆಯು ಚೀನಿ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಸೈಕ್ ಸಂಸ್ಥೆಯ ಅಡಿ ಭಾರತದಲ್ಲಿ ಹೊಸ ಕಾರುಗಳ ಮಾರಾಟವನ್ನು ಆರಂಭಿಸಿದ್ದು, ಹೆಕ್ಟರ್ ಎಸ್‌ಯುವಿ ಮತ್ತು ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೊಳಿಸಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದೀಗ ಎಂಜಿ ಸಂಸ್ಥೆಯು ಮತ್ತಷ್ಟು ಹೊಸ ಬಗೆಯ ಕಾರುಗಳನ್ನು ಬಿಡುಗಡೆಗೆ ಸಿದ್ದತೆ ನಡೆಸಿದ್ದು, ಇನೋವಾ ಕ್ರಿಸ್ಟಾ ಮತ್ತು ಎರ್ಟಿಗಾ ಕಾರಿಗೆ ಪೈಪೋಟಿಯಾಗಿ 360ಎಂ ಎನ್ನುವ ವಿನೂತನ ಎಂಪಿವಿ ಅನಾವರಣಗೊಳಿಸಿದೆ.

ಇನೋವಾ ಕ್ರಿಸ್ಟಾ ಮತ್ತು ಎರ್ಟಿಗಾ ಪ್ರತಿಸ್ಪರ್ಧಿ ಎಂಜಿ 360ಎಂ ಅನಾವರಣ

360ಎಂ ಎಂಪಿವಿ ಆವೃತ್ತಿಯು ಇನೋವಾ ಕ್ರಿಸ್ಟಾ ಕಾರಿಗಿಂತಲೂ ಕೆಳದರ್ಜೆಯ ಕಾರು ಮಾದರಿಯಾಗಿದ್ದು, ಎರ್ಟಿಗಾ ಕಾರಿಗಿಂತಲೂ ಹೆಚ್ಚು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಉತ್ತಮವಾದ ಒಳವಿನ್ಯಾಸ ಹೊಂದಿದೆ.

ಇನೋವಾ ಕ್ರಿಸ್ಟಾ ಮತ್ತು ಎರ್ಟಿಗಾ ಪ್ರತಿಸ್ಪರ್ಧಿ ಎಂಜಿ 360ಎಂ ಅನಾವರಣ

4,615-ಎಂಎಂ ಉದ್ದ, 1,735-ಎಂಎಂ ಅಗಲ, 1,660-ಎಎಂ ಎತ್ತರ, 2,750-ಎಂಎಂ ವೀಲ್ಹ್‌ಬೆಸ್ ಹೊಂದಿದ್ದು, 7 ಸೀಟರ್ ಸೌಲಭ್ಯದೊಂದಿಗೆ 3ನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಉತ್ತಮ ಸ್ಥಳಾವಕಾಶ ಹೊಂದಿದೆ.

ಇನೋವಾ ಕ್ರಿಸ್ಟಾ ಮತ್ತು ಎರ್ಟಿಗಾ ಪ್ರತಿಸ್ಪರ್ಧಿ ಎಂಜಿ 360ಎಂ ಅನಾವರಣ

ಈ ಮೂಲಕ ಹೊಸ ಎರ್ಟಿಗಾ ಕಾರಿಗಿಂತಲೂ ಹೆಚ್ಚುವರಿಯಾಗಿ 220-ಎಂಎಂ ಉದ್ದ ಹೊಂದಿದ್ದರೆ ಇನೋವಾ ಕ್ರಿಸ್ಟಾ ಕಾರಿಗಿಂತ 125-ಎಂಎಂ ಕಡಿಮೆ ಉದ್ದಳತೆ ಹೊಂದಿದ್ದು, ಸನ್‌ರೂಫ್, ಆಲ್‌ವೀಲ್ಹ್ ಡಿಸ್ಕ್‌ಬ್ರೇಕ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿದೆ. ಇನ್ನು ಹೊಸ ಕಾರು ಹೆಕ್ಟರ್ ಮಾದರಿಯಲ್ಲೇ ಫಿಯೆಟ್‌ನಿಂದ ಎರವಲು ಪಡೆಯಲಾಗಿರುವ 2.0-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಲಿದೆ.

ಇನೋವಾ ಕ್ರಿಸ್ಟಾ ಮತ್ತು ಎರ್ಟಿಗಾ ಪ್ರತಿಸ್ಪರ್ಧಿ ಎಂಜಿ 360ಎಂ ಅನಾವರಣ

ಇದರಿಂದ ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ರೂ.12 ಲಕ್ಷದಿಂದ ರೂ. 15 ಲಕ್ಷ ಬೆಲೆ ಅಂತರದಲ್ಲಿ ಇನೋವಾ ಕ್ರಿಸ್ಟಾ ಕಾರಿಗೆ ಪೈಪೋಟಿ ನೀಡಬಹುದಾದ ಎಲ್ಲಾ ಫೀಚರ್ಸ್‌ಗಳನ್ನು ಹೊಂದಿದ್ದು, ಹೊಸ ಕಾರು ಮುಂದಿನ ಆರು ತಿಂಗಳ ಅವಧಿಯಲ್ಲಿ ರಸ್ತೆಗಿಳಿಯಲಿದೆ.

ಇನೋವಾ ಕ್ರಿಸ್ಟಾ ಮತ್ತು ಎರ್ಟಿಗಾ ಪ್ರತಿಸ್ಪರ್ಧಿ ಎಂಜಿ 360ಎಂ ಅನಾವರಣ

ಹಾಗೆಯೇ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದರೂ ಮೂರನೇ ಸಾಲಿನಲ್ಲಿ ಅನುಕೂಲಕರ ಸ್ಥಳಾವಕಾಶವಿಲ್ಲದಿರುವ ಮಾರುತಿ ಎರ್ಟಿಗಾ ಕಾರಿಗಿಂತಲೂ ಎಂಜಿ 360ಎಂ ಉತ್ತಮ ವಿನ್ಯಾಸ ಹೊಂದಿದ್ದು, ಹೊಸ ಕಾರಿನ ಕುರಿತಾಗಿ ಸದ್ಯ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.

ಇನೋವಾ ಕ್ರಿಸ್ಟಾ ಮತ್ತು ಎರ್ಟಿಗಾ ಪ್ರತಿಸ್ಪರ್ಧಿ ಎಂಜಿ 360ಎಂ ಅನಾವರಣ

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಾರುಗಳ ಬಿಡುಗಡೆಗೂ ಮುನ್ನ ವಿವಿಧ ಹಂತದ ಅಧ್ಯಯನಗಳನ್ನು ನಡೆಸಲಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಉತ್ತಮ ಬೆಲೆ ಪಟ್ಟಿಯೊಂದಿಗೆ ಎಂಜಿ ಹೊಸ ಎಂಪಿವಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

More from DriveSpark

Article Published On: Wednesday, February 5, 2020, 19:51 [IST]
English summary
MG Motor India has revealed the 360 MPV in India ongoing Auto Expo 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+