ಆಟೋ ಎಕ್ಸ್‌ಪೋ 2020: ಫಾರ್ಚೂನರ್ ಕಾರಿಗೆ ಪೈಪೋಟಿಯಾಗಿ ಎಂಜಿ ಗ್ಲೊಸ್ಟರ್ ಅನಾವರಣ

ಎಂಜಿ ಮೋಟಾರ್ಸ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಹೊಸ ಬದಲಾವಣೆಗೆ ಕಾರಣವಾಗಿದ್ದು, ದೆಹಲಿ ಆಟೋ ಎಕ್ಸ್‌ಪೋದಲ್ಲಿ ಸುಮಾರು 14 ಹೊಸ ಕಾರು ಮಾದರಿಗಳನ್ನು ಪ್ರದರ್ಶನಗೊಳಿಸುವ ಮೂಲಕ ಹೊಸ ಸಂಚಲನ ಸೃಷ್ಠಿಸಿದೆ.

ಫಾರ್ಚೂನರ್ ಕಾರಿಗೆ ಪೈಪೋಟಿಯಾಗಿ ಎಂಜಿ ಗ್ಲೊಸ್ಟರ್ ಅನಾವರಣ

ದೆಹಲಿಯಲ್ಲಿ ನಡೆಯುತ್ತಿರುವ ಆಟೋ ಎಕ್ಸ್‌ಪೋದಲ್ಲಿನ ಮೊದಲನೇ ದಿನ ಮತ್ತು ಎರಡನೇ ದಿನ ವಿವಿಧ ಮಾದರಿಯ ಮಧ್ಯಮ ಗಾತ್ರದ ಎಸ್‌ಯುವಿ, ಎಂಪಿವಿ, ಸೆಡಾನ್ ಮತ್ತು ಎಲೆಕ್ಟ್ರಿಕ್ ಕಾರನ್ನು ಪ್ರದರ್ಶನಗೊಳಿಸಿದ್ದ ಎಂಜಿ ಮೋಟಾರ್ಸ್ ಸಂಸ್ಥೆಯು ಇಂದು ಬಹುನೀರಿಕ್ಷಿತ ಲಗ್ಷುರಿ ಎಸ್‌ಯುವಿ ಆವೃತ್ತಿಯಾದ ಗ್ಲೊಸ್ಟರ್ ಅನಾವರಣಗೊಳಿಸಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಇತರೆ ಫುಲ್ ಸೈಜ್ ಎಸ್‌ಯುವಿ ಮಾದರಿಗಳಿಂತಲೂ ಬಲಿಷ್ಠ ವಿನ್ಯಾಸ ಹೊಂದಿರುವ ಗ್ಲೊಸ್ಟರ್ ಕಾರು ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಫಾರ್ಚೂನರ್ ಕಾರಿಗೆ ಪೈಪೋಟಿಯಾಗಿ ಎಂಜಿ ಗ್ಲೊಸ್ಟರ್ ಅನಾವರಣ

ಹೊಸ ಕಾರಿನ ಗಾತ್ರವು ಟೊಯೊಟಾ ಐಷಾರಾಮಿ ಕಾರು ಆವೃತ್ತಿಯಾಗಿರುವ ಲ್ಯಾಂಡ್ ಕ್ರೂಸರ್ 200 ಆವೃತ್ತಿಗಿಂತಲೂ ಹೆಚ್ಚಿದ್ದು, 5.1 ಮೀಟರ್‌ಗಿಂತಲೂ ಹೆಚ್ಚು ಉದ್ದಳತೆ ಹೊಂದಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಫಾರ್ಚೂನರ್ ಕಾರಿಗೆ ಪೈಪೋಟಿಯಾಗಿ ಎಂಜಿ ಗ್ಲೊಸ್ಟರ್ ಅನಾವರಣ

ಅನಾವರಣಗೊಂಡಿರುವ ಗ್ಲೊಸ್ಟರ್ ಕಾರು ಚೀನಿ ಮಾರುಕಟ್ಟೆಯಲ್ಲಿ ಮ್ಯಾಕ್ಸಸ್ ಡಿ90 ಹೆಸರಿನೊಂದಿಗೆ ಮಾರಾಟವಾಗುತ್ತಿದ್ದು, ಎಂಜಿ ಮಾತೃಸಂಸ್ಥೆಯಾಗಿರುವ ಸೈಕ್ ಇದೀಗ ಮ್ಯಾಕ್ಸಸ್ ಡಿ90 ಕಾರು ಮಾದರಿಯನ್ನು ಹೊಸ ಹೆಸರಿನೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ.

ಫಾರ್ಚೂನರ್ ಕಾರಿಗೆ ಪೈಪೋಟಿಯಾಗಿ ಎಂಜಿ ಗ್ಲೊಸ್ಟರ್ ಅನಾವರಣ

ಚೀನಿ ಮಾರುಕಟ್ಟೆಯಲ್ಲಿ ಮ್ಯಾಕ್ಸಸ್ ಸಂಸ್ಥೆಯು ಕೂಡಾ ಸೈಕ್ ಸಂಸ್ಥೆಯ ಅಡಿಯಲ್ಲೇ ಕಾರ್ಯನಿರ್ವಹಣೆ ಮಾಡುತ್ತಿದ್ದು, ಭಾರತೀಯ ಗ್ರಾಹಕರ ಬೇಡಿಕೆಗಳನ್ನು ಅರಿತಿರುವ ಸೈಕ್ ಸಂಸ್ಥೆಯು ಎಂಜಿ ಬ್ಯಾಡ್ಜ್‌ನೊಂದಿಗೆ ಕೆಲವು ಬದಲಾವಣೆಗಳನ್ನು ಮಾಡಿ ಗ್ಲೊಸ್ಟರ್ ಕಾರನ್ನು ಬಿಡುಗಡೆ ಮಾಡುತ್ತಿದೆ. ಫುಲ್ ಸೈಜ್ ಎಸ್‌ಯುವಿ ಆವೃತ್ತಿಯಾಗಿರುವ ಗ್ಲೊಸ್ಟರ್ ಕಾರು ಇದೇ ವಷ್ಯಾಂತ್ಯಕ್ಕೆ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದ್ದು, ಕಾರಿನ ಗಾತ್ರಕ್ಕೆ ತಕ್ಕಂತೆ ಬಲಿಷ್ಠ ಎಂಜಿನ್ ಆಯ್ಕೆಯನ್ನು ಪಡೆದುಕೊಳ್ಳಲಿದೆ.

ಫಾರ್ಚೂನರ್ ಕಾರಿಗೆ ಪೈಪೋಟಿಯಾಗಿ ಎಂಜಿ ಗ್ಲೊಸ್ಟರ್ ಅನಾವರಣ

ಸದ್ಯ ಮಾರುಕಟ್ಟೆಯಲ್ಲಿರುವ ಮಾಕ್ಸಸ್ ಡಿ90 ಕಾರು 2.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರಾಟವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಗ್ಲೊಸ್ಟರ್ ಕಾರು ಕೆಲವು ಬದಲಾವಣೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಫಾರ್ಚೂನರ್ ಕಾರಿಗೆ ಪೈಪೋಟಿಯಾಗಿ ಎಂಜಿ ಗ್ಲೊಸ್ಟರ್ ಅನಾವರಣ

ಇದಲ್ಲದೇ ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಲ್ಯಾಡರ್ ಫ್ರೇಮ್ ಚಾರ್ಸಿ ಮೇಲೆ ನಿರ್ಮಾಣವಾಗಿರುವ ಹೊಸ ಕಾರಿನಲ್ಲಿ ಆಕರ್ಷಕವಾದ ಮಂಭಾಗದ ಗ್ರಿಲ್ ಡಿಸೈನ್, ಸ್ಲಿಮ್ ಹೆಡ್‌ಲ್ಯಾಂಪ್, ಅಡಾಪ್ಟಿವ್ ಹೆಡ್‌ಲೈಟ್ಸ್, ಎಲ್ಇಡಿ ಡಿಆರ್‌ಎಸ್, 18 ಇಂಚಿನ ಅಲಾಯ್ ವೀಲ್ಹ್ ನೀಡಲಾಗಿದೆ.

ಫಾರ್ಚೂನರ್ ಕಾರಿಗೆ ಪೈಪೋಟಿಯಾಗಿ ಎಂಜಿ ಗ್ಲೊಸ್ಟರ್ ಅನಾವರಣ

ಹಾಗೆಯೇ ಹೊಸ ಕಾರಿನ ಒಳಭಾಗದಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿದ್ದು, ಸಂಜ್ಞೆ ಮೂಲಕ ನಿಯಂತ್ರಣ ಮಾಡಬಹುದಾದ ಡ್ಯಾಶ್‌ಬೋರ್ಡ್ ಮತ್ತು ಟೈಲ್‌ಗೆಟ್, ಆ್ಯಂಬಿಯೆಂಟ್ ಲೈಟಿಂಗ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೊಲ್, 8-ಇಂಚಿನ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, 12.3-ಇಂಚಿನ ಟಚ್ ‌ಸ್ಕ್ರೀನ್ ಇನ್ಪೊಟೈನ್‌ಮೆಂಟ್ ಸಿಸ್ಟಂ, ವೆಂಟಿಲೆಟೆಡ್ ಲೆದರ್ ಸೀಟುಗಳು, ಹಿಟೆಡ್ ವಿಂಗ್ ಮಿರರ್, ಪನೊರಮಿಕ್ ಸನ್‌ರೂಫ್ ಸೌಲಭ್ಯವಿದೆ.

ಫಾರ್ಚೂನರ್ ಕಾರಿಗೆ ಪೈಪೋಟಿಯಾಗಿ ಎಂಜಿ ಗ್ಲೊಸ್ಟರ್ ಅನಾವರಣ

7 ಸೀಟರ್ ಸೌಲಭ್ಯ ಹೊಂದಿರುವ ಹೊಸ ಗ್ಲೊಸ್ಟರ್ ಕಾರಿನಲ್ಲಿ 2+2+3 ಮಾದರಿಯಲ್ಲಿ ಸೌಲಭ್ಯವನ್ನು ಜೋಡಿಸಲಾಗಿದ್ದು, ಮಧ್ಯದಲ್ಲಿರುವ ಕ್ಯಾಪ್ಟನ್ ಆಸನದಲ್ಲಿ ಹಲವಾರು ಕಾರ್ ಕನೆಕ್ಟೆಡ್ ಸೌಲಭ್ಯಗಳೊಂದಿಗೆ ಅರಾಮಾದಾಯಕ ಪ್ರಯಾಣಕ್ಕಾಗಿ ಮಸಾಜ್ ಫೀಚರ್ಸ್ ನೀಡಲಾಗಿದೆ.

ಫಾರ್ಚೂನರ್ ಕಾರಿಗೆ ಪೈಪೋಟಿಯಾಗಿ ಎಂಜಿ ಗ್ಲೊಸ್ಟರ್ ಅನಾವರಣ

ಬಿಡುಗಡೆ ಮತ್ತು ಅಂದಾಜು ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಗ್ಲೊಸ್ಟರ್ ಎಸ್‌ಯುವಿ ಆವೃತ್ತಿಯು ಇದೇ ವರ್ಷ ಅಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ಬಿಡುಗಡೆ ಮಾಡುವುದಾಗಿ ಸುಳಿವು ನೀಡಿರುವ ಎಂಜಿ ಸಂಸ್ಥೆಯ ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 30 ಲಕ್ಷದಿಂದ ರೂ.35 ಲಕ್ಷ ಬೆಲೆ ಅಂತರದೊಂದಿಗೆ ಫಾರ್ಚೂನರ್ ಕಾರಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

More from DriveSpark

Article Published On: Friday, February 7, 2020, 11:59 [IST]
English summary
MG Gloster SUV Unveiled at Auto Expo. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+