ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಕಾರುಗಳು

ಭಾರತದಲ್ಲಿ ಕಾರು ಖರೀದಿಸುವ ಗ್ರಾಹಕರು ಮೊದಲು ನೋಡುವುದು ಆ ಕಾರು ಎಷ್ಟು ಮೈಲೇಜ್ ನೀಡುತ್ತದೆ ಎಂದು. ಭಾರತೀಯ ಮಾರುಕಟ್ಟೆಯಲ್ಲಿ ಅಧಿಕ ಮೈಲೇಜ್ ನೀಡುವ ಕಾರುಗಳು ಉತ್ತಮವಾಗಿ ಮಾರಾಟವಾಗುತ್ತವೆ.

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಕಾರುಗಳು

ಭಾರತದಲ್ಲಿ ಹೆಚ್ಚಿನ ಗ್ರಾಹಕರು ಮೈಲೇಜ್ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬೇರೆ ಗಗನದೆತ್ತರಕ್ಕೆ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾರು ಖರೀದಿಸುವ ಗ್ರಾಹಕರು ಹೆಚ್ಚು ಮೈಲೇಜ್ ನೀಡುವ ಕಾರಿನ ಕಡೆ ಹೆಚ್ಚು ಒಲವನ್ನು ಹೊಂದಿರುತ್ತಾರೆ. ಭಾರತೀಯ ಮಾರುಕಟ್ಟೆಯಲ್ಲಿ ಮೈಲೇಜ್ ವಿಷಯ ಬಂದಾಗ ಮೊದಲು ಯೋಚನೆ ಬರುವುದು ಮಾರುತಿ ಸುಜುಕಿ ಕಾರುಗಳು. ಮೈಲೇಜ್ ಮತ್ತು ಕಡಿಮೆ ನಿರ್ವಹಣ ವೆಚ್ಚಕ್ಕೆ ಮಾರುತಿ ಸುಜುಕಿ ಕಾರುಗಳು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅತಿ ಹೆಚ್ಚು ಮಲೇಜ್ ನೀಡುವ ಮಾರುತಿ ಸುಜುಕಿ ಕಾರುಗಳ ಮಾಹಿತಿ ಇಲ್ಲಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಕಾರುಗಳು

ಮಾರುತಿ ಸುಜುಕಿ ಡಿಜೈರ್ ಎಎಂಟಿ

ಮಾರುತಿ ಸುಜುಕಿ ಕಂಪನಿಯು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಡಿಜೈರ್ ಮಿಡ್-ಲೈಫ್ ಫೇಸ್‌ಲಿಫ್ಟ್ ಕಾರನ್ನು ಬಿಡುಗಡೆಗೊಳಿಸಿತ್ತು. ಈ ಕಾರಿನಲ್ಲಿ 1.2-ಲೀಟರ್ ಕೆ 12 ಬಿ ಪೆಟ್ರೋಲ್ ಎಂಜಿನ್ ಅನ್ನು 1.2-ಲೀಟರ್ ಕೆ12ಸಿ ಯುನಿಟ್‌ನೊಂದಿಗೆ ಬದಲಾಯಿಸಲಾಗಿದೆ.

MOST READ: ಇನ್ನು ಪಾಕಿಸ್ತಾನದಲ್ಲಿ ಮಾರಾಟವಾಗುವುದಿಲ್ಲ ಜನಪ್ರಿಯ ಮಾರುತಿ ಸಿಯಾಜ್ ಕಾರು

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಕಾರುಗಳು

ಈ ಎಂಜಿನ್ 90 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಎಂಟಿ ಅಥವಾ ಎಎಂಟಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರಲ್ಲಿ ಎಎಂಟಿ ಆವೃತ್ತಿಯು ಪ್ರತಿ ಲೀಟರ್‌ಗೆ ಸರಾಸರಿ 24.12 ಕಿ.ಮೀ. ಮೈಲೇಜ್ ನೀಡುತ್ತದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಕಾರುಗಳು

ಮಾರುತಿ ಸುಜುಕಿ ಬಲೆನೊ

ಮಾರುತಿ ಸುಜುಕಿ ಬಲೆನೊ 1.2-ಲೀಟರ್ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 90 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ ಹೆಚ್ಚುವರಿಯಾಗಿ 12ವಿ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಅನ್ನು ಹೊಂದಿದೆ. ಈ ಕಾರು ಪ್ರತಿ ಲೀಟರ್ ಗೆ 23.87 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಕಾರುಗಳು

ಮಾರುತಿ ಸುಜುಕಿ ಆಲ್ಟೋ

ಮಾರುತಿ ಆಲ್ಟೋ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಮಧ್ಯಮವರ್ಗದ ಜನರ ಮೆಚ್ಚಿನ ಆಯ್ಕೆಯಾಗಿದೆ ಈ ಕಾರು. ಇದರ ಜನಪ್ರಿಯತೆಗೆ ಸಾಟಿಯಿಲ್ಲವೆಂದು ಹೇಳಬಹುದು. ಈ ಕಾರಿನಲ್ಲಿ 0.8-ಲೀಟರ್ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಿದ್ದಾರೆ.

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಕಾರುಗಳು

ಈ ಎಂಜಿನ್ 48 ಬಿಹೆಚ್‍ಪಿ ಪವರ್ ಮತ್ತು 69 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಮಾರುತಿ ಆಲ್ಟೋ ಕಾರಿನ ಎಂಜಿನ್ ಪ್ರತಿ ಲೀಟರ್ ಗೆ 22.05 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಕಾರುಗಳು

ಮಾರುತಿ ಸುಜುಕಿ ವ್ಯಾಗನ್ಆರ್

ಮಾರುತಿ ಆಲ್ಟೋ ಕಾರಿನಂತೆ ವ್ಯಾಗನ್ಆರ್ ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದೆ. ಈ ವ್ಯಾಗನ್ಆರ್ ಟಾಲ್ ಬಾಯ್ ಎಂದೇ ಪ್ರಸಿದ್ದಿಯಾಗಿದೆ. ವ್ಯಾಗನ್ಆರ್ ಕಾರಿನಲ್ಲಿ 1.0-ಲೀಟರ್ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 68 ಬಿಹೆಚ್‍ಪಿ ಪವರ್ ಮತ್ತು 90 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಕಾರಿನ ಎಂಜಿನ್ ಪ್ರತಿ ಲೀಟರ್ ಗೆ 21.79 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಕಾರುಗಳು

ವ್ಯಾಗನ್ಆರ್ ಇತರ ರೂಪಾಂತರದಲ್ಲಿ 1.2-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 83 ಬಿಹೆಚ್‍ಪಿ ಪವರ್ ಮತ್ತು 113 ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಪ್ರತಿ ಲೀಟರ್‌ಗೆ 20.52 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಕಾರುಗಳು

ಮಾರುತಿ ಸುಜುಕಿ ಎಸ್-ಪ್ರೆಸ್ಸೊ

2019ರಲ್ಲಿ ಬಿಡುಗಡೆಯಾದ ಮಾರುತಿ ಎಸ್-ಪ್ರೆಸ್ಸೊ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಭಾರತದ ಈ ಮಿನಿ ಎಸ್‍ಯುವಿಯು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಕಾರುಗಳು

ಎಸ್-ಪ್ರೆಸ್ಸೊ ಮಿನಿ ಎಸ್‍‍ಯು‍ವಿ 998 ಸಿಸಿ ಪೆಟ್ರೋಲ್ ಎಂಜಿನ್‌ ‌67 ಬಿಎಚ್‌ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮಾರುತಿ ಎಸ್-ಪ್ರೆಸ್ಸೊ ಕಾರಿನ ಎಂಜಿನ್ ಪ್ರತಿ ಲೀಟರ್‌ಗೆ 21.79 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ

More from DriveSpark

Article Published On: Monday, May 11, 2020, 10:58 [IST]
English summary
Top 5 Most Fuel Efficient BS6 Maruti Suzuki Cars. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+