ಅನಾವರಣವಾಯ್ತು ಐಷಾರಾಮಿ ಹೊಸ ಬಿಎಂಡಬ್ಲ್ಯು 4 ಸೀರಿಸ್ ಕೂಪೆ

ಬಿಎಂಡಬ್ಲ್ಯೂ ಕಂಪನಿಯು ಹೊಸ 4 ಸೀರಿಸ್ ಕೂಪೆಯನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಬ್ರ್ಯಾಂಡ್‌ನ ಕಾನ್ಸೆಪ್ಟ್ 4 ನಿಂದ ಸ್ಫೂರ್ತಿ ಪಡೆದು ಈ ಹೊಸ ಬಿಎಂಡಬ್ಲ್ಯು 4 ಸೀರಿಸ್ ಕೂಪೆಯನ್ನು ಅಭಿವೃದ್ದಿ ಪಡಿಸಲಾಗಿದೆ.

ಅನಾವರಣವಾಯ್ತು ಐಷಾರಾಮಿ ಹೊಸ ಬಿಎಂಡಬ್ಲ್ಯು 4 ಸೀರಿಸ್ ಕೂಪೆ

ಈ ಹೊಸ ಕಾರಿನ ಫೀಚರ್ ಗಳು ಮತ್ತು ಎಂಜಿನ್ ಆಯ್ಕೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಬಿಎಂಡಬ್ಲ್ಯೂ 4 ಸೀರಿಸ್ ಕೂಪೆ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿದೆ. ಈ ಹೊಸ ಕಾರು ಬೋಲ್ಡ್ ಆಗಿ ಆಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಹೊಸ ಬಿಎಂಡಬ್ಲ್ಯೂ 4 ಸೀರಿಸ್ ಕಾರಿನಲ್ಲಿ ದೊಡ್ಡ ಕಿಡ್ನಿ ಗ್ರಿಲ್ ಅನ್ನು ಅಳವಡಿಸಿದ್ದಾರೆ. ಹೊಸ ಕಿಡ್ನಿ ಗ್ರಿಲ್ ಅನ್ನು ಲೇಸರ್ ಹೈ-ಬೀಮ್ ಮತ್ತು ಇಂಟಿಗ್ರೇಟೆಡ್ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಸಂಪೂರ್ಣವಾಗಿ ಹೊಸ ಎಲ್ಇಡಿ ಹೆಡ್ ಲ್ಯಾಂಪ್ ಗಳಿಂದ ಎರಡೂ ಬದಿಯಲ್ಲಿ ಸುತ್ತುವರಿಯಲಾಗಿದೆ.

ಅನಾವರಣವಾಯ್ತು ಐಷಾರಾಮಿ ಹೊಸ ಬಿಎಂಡಬ್ಲ್ಯು 4 ಸೀರಿಸ್ ಕೂಪೆ

ಈ ಹೊಸ ಕಾರಿನಸೈಡ್ ಮತ್ತು ಹಿಂಭಾಗದ ಫ್ರೊಫೈಲ್ ಗಳನ್ನು ಸಹ ಬದಲಾಯಿಸಲಾಗಿದೆ ಮತ್ತು ಸ್ಲೋಪಿಂಗ್ ರೂಫ್‌ಲೈನ್ ಅನ್ನು ಹೊಂದಿದೆ, ಇನ್ನು ಈ ಕಾರಿನ ಹಿಂಭಾಗದಲ್ಲಿ ಎಲ್-ಆಕಾರದ ಎಲ್ಇಡಿ ಟೇಲ್‌ಲೈಟ್‌ಗಳನ್ನು ಅಳವಡಿಸಲಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು ಐಷಾರಾಮಿ ಹೊಸ ಬಿಎಂಡಬ್ಲ್ಯು 4 ಸೀರಿಸ್ ಕೂಪೆ

ಹೊಸ ಎರಡು-ಡೋರಿನ ಕೂಪ್ ಅದೇ ಕ್ಲಾರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಹೊಸ ಬಿಎಂಡಬ್ಲ್ಯೂ 4 ಸೀರಿಸ್ ಕೂಪೆಯ ಇಂಟಿರಿಯರ್ ನಲ್ಲಿ ಇತ್ತೀಚಿನ ತಲೆಮಾರಿನ 3 ಸೀರಿಸ್ ಮಾದರಿಯಲ್ಲಿದೆ. ಆದರೆ ಇದರಲ್ಲಿ ಹೊಸದಾಗಿ ಎರಡು ಬಣ್ಣಗಳ ಆಯ್ಜೆಯಲ್ಲಿ ಲೆಥೆರೆಟ್ ಹೊಂದಿದೆ. ಡ್ಯಾಶ್ ಬೋರ್ಡ್ ನಲ್ಲಿರುವ ಪ್ರೀಮಿಯಂ ವರ್ನಾಸ್ಕಾ ಏಳು ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ಅನಾವರಣವಾಯ್ತು ಐಷಾರಾಮಿ ಹೊಸ ಬಿಎಂಡಬ್ಲ್ಯು 4 ಸೀರಿಸ್ ಕೂಪೆ

ಹೊಸ ಬಿಎಂಡಬ್ಲ್ಯೂ 4 ಸೀರಿಸ್ ಕೂಪೆ 8.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು 5.1-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಅನ್ನು ಕೂಡ ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಇದರೊಂದಿಗೆ ದೊಡ್ಡದಾದ 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು 10.3-ಇಂಚಿನ ಇನ್ಸ್ಟ್ರುಮೆಂಟ್ ಕನ್ಸೋಲ್‌ಗೆ ಅಪ್‌ಗ್ರೇಡ್ ಮಾಡುವ ಆಯ್ಕೆಯೂ ಕೂಡ ಇದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಅನಾವರಣವಾಯ್ತು ಐಷಾರಾಮಿ ಹೊಸ ಬಿಎಂಡಬ್ಲ್ಯು 4 ಸೀರಿಸ್ ಕೂಪೆ

ಹಳೆಯ 4 ಸೀರಿಸ್ ಸೆಡಾನ್‌ಗೆ ಹೋಲಿಸಿದರೆ, ಹೊಸ ಕೂಪೆ 128 ಎಂಎಂ ಉದ್ದ ಮತ್ತು 2,851 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಹೊಸ ಕೂಪೆ ಹಿಂದಿನ ಮಾದರಿಗಿಂತ 27 ಎಂಎಂ ಅಗಲವಿದೆ, ಆದರೆ ಅದರ ಟ್ರ್ಯಾಕ್ ನ ಮುಂಭಾಗದಲ್ಲಿ 28 ಎಂಎಂ ಮತ್ತು ಹಿಂಭಾಗದಲ್ಲಿ 14 ಎಂಎಂ ಹೆಚ್ಚಿಸಲಾಗಿದೆ.

ಅನಾವರಣವಾಯ್ತು ಐಷಾರಾಮಿ ಹೊಸ ಬಿಎಂಡಬ್ಲ್ಯು 4 ಸೀರಿಸ್ ಕೂಪೆ

2021ರ ಬಿಎಂಡಬ್ಲ್ಯೂ 4 ಸೀರಿಸ್ ನಲ್ಲಿ ಎರಡು ಸೆಟ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿವೆ. ಇದರಲ್ಲಿ 2.0 ಲೀಟರ್ ಟರ್ಬೊ ಪೆಟ್ರೋಲ್ 255 ಬಿಹೆಚ್‌ಪಿ ಪವರ್ ಮತ್ತು 400 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಅನಾವರಣವಾಯ್ತು ಐಷಾರಾಮಿ ಹೊಸ ಬಿಎಂಡಬ್ಲ್ಯು 4 ಸೀರಿಸ್ ಕೂಪೆ

ಇನ್ನು 3.0-ಲೀಟರ್ ಆರು ಸಿಲಿಂಡರ್ ಪೆಟ್ರೋಲ್-ಹೈಬ್ರಿಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 382 ಬಿಹೆಚ್‌ಪಿ ಪವರ್ ಮತ್ತು 500 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಡೀಸೆಲ್ ಎಂಜಿನ್ ಆಯ್ಕೆಗಳು ಸೌಮ್ಯ-ಹೈಬ್ರಿಡ್ ಸಿಸ್ಟಂ ಅನ್ನು ಹೊಂದಿದೆ. ಈ 2,0-ಲೀಟರ್ ಯುನಿಟ್ 190 ಬಿಹೆಚ್‌ಪಿ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ಐಷಾರಾಮಿ ಹೊಸ ಬಿಎಂಡಬ್ಲ್ಯು 4 ಸೀರಿಸ್ ಕೂಪೆ

ಭಾರತೀಯ ಮಾರುಕಟ್ಟೆಯಲ್ಲಿ ಈ ಹೊಸ ಬಿಎಂಡಬ್ಲ್ಯೂ 4 ಸೀರಿಸ್ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಬಿಎಂಡಬ್ಲ್ಯೂ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ 2 ಸೀರಿಸ್ ಕೂಪೆಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

Most Read Articles

Kannada
English summary
2021 BMW 4 Series Coupe Unveiled Globally. Read In Kannada.
Story first published: Wednesday, June 3, 2020, 17:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X