ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿ
ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಹೊಸ ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಮೊದಲ ಬಾರಿಗೆ 2018ರ ಬೀಜಿಂಗ್ ಮೋಟಾರ್ ಶೋನಲ್ಲಿ ಕಾನ್ಸೆಪ್ಟ್ ಎಸ್‍ಯುವಿಯಾಗಿ ಪ್ರದರ್ಶಿಸಲಾಗಿತ್ತು.

ಚೀನಾ ದೇಶದಲ್ಲಿ ಉತ್ಪಾದಿಸುವ ಮೊದಲ ಬಿಎಂಡಬ್ಲ್ಯ ಎಲೆಕ್ಟ್ರಿಕ್ ಎಸ್‍ಯುವಿ ಇದಾಗಿದೆ. ಈ ಹೊಸ ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿಯು ಮೂರನೇ ತಲೆಮಾರಿನ ಎಕ್ಸ್3 ಎಸ್‌ಯುವಿಯನ್ನು ಆಧರಿಸಿದೆ. ಈ ಹೊಸ ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ಬಿಎಂಡಬ್ಲ್ಯುನ ಐದನೇ ತಲೆಮಾರಿನ ಇಡ್ರೈವ್ ಸಿಸ್ಟಂ ಅನ್ನು ಹೊಂದಿರಲಿದೆ. ಈ ಎಸ್‍ಯುವಿಯಲ್ಲಿ 286 ಬಿಹೆಚ್‌ಪಿ ಪವರ್ ಉತ್ಪಾದಿಸಬಲ್ಲ ಮೋಟಾರ್ ಅನ್ನು ಅಳವಡಿಸಿದೆ. ಈ ಬಿಎಂಡಬ್ಲ್ಯು ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿಯು ಡಬ್ಲ್ಯುಎಲ್‌ಟಿಪಿ 458 ಕಿ.ಮೀ ರೇಂಜ್ ಅನ್ನು ನೀಡಲಿದೆ.

ಹೊಸ ಬಿಎಂಡಬ್ಲ್ಯು ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿಯು ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಚೀನಾದ ಶೆನ್ಯಾಂಗ್ ಲಿಯಾನಿಂಗ್‌ನಲ್ಲಿರುವ ಬಿಎಂಡಬ್ಲ್ಯು ಮತ್ತು ಚೀನಾದ ಕಾರು ತಯಾರಕ ಕಂಪನಿಯಾದ ಬ್ರಿಲಿಯನ್ಸ್‌ನ ಜಂಟಿ-ಉದ್ಯಮ ಘಟಕದಲ್ಲಿ ಈ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಉತ್ಪಾದಿಸಲಾಗುತ್ತಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಈ ಬಿಎಂಡಬ್ಲ್ಯು ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ಫ್ರಂಟ್ ಗ್ರಿಲ್, ಲಂಬವಾದ ಏರ್ ಡಕ್ಸ್, ಹೊಸ ಸೈಡ್ ಸಿಲ್ಸ್ ಮತ್ತು ಹಿಂಭಾಗದ ಬಂಪರ್ ಅನ್ನು ಒಳಗೊಂಡಿವೆ. ಇನ್ನು ಈ ಎಸ್‍ಯುವಿಯ ಗ್ರಿಲ್, ಸಿಲ್ಸ್ ಮತ್ತು ಹಿಂಭಾಗದ ಬಂಪರ್ ನಲ್ಲಿ ನೀಲಿ ಬಣ್ಣದ ಅಂಶಗಳನ್ನು ಒಳಗೊಂಡಿದೆ.

ಈ ಹೊಸ ಬಿಎಂಡಬ್ಲ್ಯು ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 19 ಇಂಚಿನ ವ್ಹೀಲ್ ಅನ್ನು ಅಳವಡಿಸಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯ ಹಿಂಭಾಗದ ಎಲೆಕ್ಟ್ರಿಕ್ ಮೋಟಾರ್ 286 ಬಿಹೆಚ್‌ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಹೊಸ ಬಿಎಂಡಬ್ಲ್ಯು ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 74 ಕಿ.ವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇನ್ನು ಡಿಸಿ ರ‍್ಯಾಪಿಡ್ ಚಾರ್ಜರ್‌ನೊಂದಿಗೆ ಬ್ಯಾಟರಿಯು 34 ನಿಮಿಷಗಳಲ್ಲಿ 80% ವರೆಗೆ ಚಾರ್ಜ್ ಆಗುತ್ತದೆ.

ಇದರೊಂದಿಗೆ ಬಿಎಂಡಬ್ಲ್ಯು ತನ್ನ 8 ಸೀರಿಸ್ ಗೋಲ್ಡನ್ ಥಂಡರ್ ಕಾರನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಈ ಹೊಸ ಬಿಎಂಡಬ್ಲ್ಯು 8 ಸೀರಿಸ್ ಗೋಲ್ಡನ್ ಥಂಡರ್ ಕಾರನ್ನು ಈ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಬಿಡುಗಡೆಗೊಳಿಸಲಿದೆ.
MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಬಿಎಂಡಬ್ಲ್ಯು ಕಂಪನಿಯು ಜರ್ಮನಿಯ ಡಿಂಗೋಲ್ಫಿಂಗ್ ಸ್ಥಾವರದಲ್ಲಿ ಈ ಗೋಲ್ಡನ್ ಥಂಡರ್ ಮಾದರಿಗಳನ್ನು ತಯಾರಿಸಲಿದೆ. ಈ ಹೊಸ 8 ಸೀರಿಸ್ ಗೋಲ್ಡನ್ ಥಂಡರ್ ಕಾರಿನಲ್ಲಿ ಚಿನ್ನದ ಲೇಪನವನ್ನು ಮಾಡಿದ್ದಾರೆ. ಈ ಕಾರಿನ ಹೆಚ್ಚಿನ ಬಾಡಿವರ್ಕ್ ಫ್ರೋಜನ್ ಬ್ಲ್ಯಾಕ್ ಮೆಟಾಲಿಕ್ ಅಥವಾ ಸಫೈರ್ ಬ್ಲ್ಯಾಕ್ ಮೆಟಾಲಿಕ್ ನಲ್ಲಿ ಫಿನಿಶಿಂಗ್ ಮಾಡಲಾಗಿದೆ.

ಇನ್ನು ಹೊಸ ಬಿಎಂಡಬ್ಲ್ಯು ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿ ಕೇವಲ 6.8 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಈ ಹೊಸ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಎಸ್‍ಯುವಿಯು ಮುಂದಿನ ವರ್ಷದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications