ಹೊಸ ವಿನ್ಯಾಸದಲ್ಲಿ ಅನಾವರಣಗೊಂಡ ಹ್ಯುಂಡೈ ಎಲಾಂಟ್ರಾ
ಎಕ್ಸಿಕ್ಯೂಟಿವ್ ಸೆಡಾನ್ ಕಾರು ಸೆಗ್ ಮೆಂಟಿನಲ್ಲಿ ಹ್ಯುಂಡೈ ಕಂಪನಿಯ ಎಲಾಂಟ್ರಾ ಕಾರು ಪ್ರಪಂಚದಾದ್ಯಂತ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಈಗ ಹ್ಯುಂಡೈ ಕಂಪನಿಯು, ಎಲಾಂಟ್ರಾ ಕಾರ್ ಅನ್ನು ಹೊಸ ವಿನ್ಯಾಸದಲ್ಲಿ ಅಭಿವೃದ್ಧಿಪಡಿಸಿದೆ.

ಏಳನೇ ತಲೆಮಾರಿನ ಹೊಸ ಹ್ಯುಂಡೈ ಎಲಾಂಟ್ರಾ ಕಾರ್ ಅನ್ನು ಅಮೇರಿಕಾದಲ್ಲಿ ಅನಾವರಣಗೊಳಿಸಲಾಗಿದೆ. ಈ ಕಾರಿನ ವಿನ್ಯಾಸವು ಹೊಸ ರೀತಿಯಲ್ಲಿದೆ. ಈ ಕಾರ್ ಅನ್ನು ಹ್ಯುಂಡೈ ಕಂಪನಿಯ ಹೊಸ ಕೆ 3 ಪ್ಲಾಟ್‌ಫಾರಂನಲ್ಲಿ ತಯಾರಿಸಲಾಗುತ್ತದೆ. ಈ ಹೊಸ ಕಾರು ಹಳೆಯ ಕಾರಿಗಿಂತ 56 ಎಂಎಂ ಹೆಚ್ಚು ಅಗಲ ಹಾಗೂ 26 ಎಂಎಂ ಹೆಚ್ಚು ಎತ್ತರವನ್ನು ಹೊಂದಿದೆ. ಕಡಿಮೆ ತೂಕದ ಬಿಡಿ ಭಾಗಗಳನ್ನು ಅಳವಡಿಸಿರುವುದರಿಂದ ತೂಕವೂ ಸಹ ಕಡಿಮೆಯಾಗಿದೆ.

ಬಾನೆಟ್, ಗ್ರಿಲ್ ಸಿಸ್ಟಂ, ಬಂಪರ್ ಸಿಸ್ಟಂ, ಹಿಂಭಾಗದ ವಿನ್ಯಾಸಗಳಿಂದ ಈ ಕಾರು ಪೂರ್ತಿಯಾಗಿ ಹೊಸ ಮಾದರಿ ಎಂಬುದನ್ನು ಕಾಣಬಹುದು. ಈ ಕಾರಿನಲ್ಲಿ ಎಲ್‌ಇಡಿ ಹೆಡ್‌ಲೈಟ್, ದೊಡ್ಡ ಗಾತ್ರದ ಗ್ರಿಲ್ ಸಿಸ್ಟಂ, 17 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ಹಾಗೂ ಎಲ್‌ಇಡಿ ಲೈಟ್ ಬಾರ್ ಗಳನ್ನು ಅಳವಡಿಸಲಾಗಿದೆ.

ಹೊಸ ಹ್ಯುಂಡೈ ಎಲಾಂಟ್ರಾ ಕಾರಿನ ಇಂಟಿರಿಯರ್ ಅನ್ನು ಹೆಚ್ಚಿಸಲಾಗಿದೆ. ಈ ಕಾರು ಡ್ಯಾಶ್‌ಬೋರ್ಡ್‌ನಲ್ಲಿ ಎರಡು 10.25 ಇಂಚಿನ ಸ್ಕ್ರೀನ್ ಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ಟಚ್-ಸ್ಕ್ರೀನ್ ಇನ್ಫೋಟೈನ್ಮೆಂಟ್, ಆದರೆ ಮತ್ತೊಂದು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಆಗಿದೆ.

ಈ ಕಾರಿನ ಪ್ರಮುಖವಾದ ಫೀಚರ್ ಗಳೆಂದರೆ 4-ಸ್ಪೋಕ್ ಸ್ಟೀಯರಿಂಗ್ ವ್ಹೀಲ್, ನಾಲ್ಕು ಎಸಿ ವೆಂಟ್ಸ್, ಡ್ರೈವರ್ ಸೀಟ್ ಹಾಗೂ ಫ್ರಂಟ್ ಸೀಟ್ ಪ್ಯಾಸೆಂಜರ್. ಈ ಕಾರಿನಲ್ಲಿ ಅಳವಡಿಸಿರುವ ಬಿಡಿಭಾಗಗಳು ಅತ್ಯುತ್ತಮ ಗುಣಮಟ್ಟವನ್ನು ಹೊಂದಿವೆ. ಹೊಸ ಹ್ಯುಂಡೈ ಕಾರಿನಲ್ಲಿ ಹಲವಾರು ಫೀಚರ್ ಗಳಿದ್ದು, ಇವುಗಳನ್ನು ಬ್ಲೂಲಿಂಕ್ ಪ್ರೊಸೆಸರ್ ಮೂಲಕ ಆಕ್ಸೆಸ್ ಮಾಡಬಹುದು.

ಈ ಸಿಸ್ಟಂ, ವಾಯ್ಸ್ ಕಮಾಂಡ್ ಫೀಚರ್ ಅನ್ನು ಹೊಂದಿದೆ. ಇದರಲ್ಲಿರುವ ಇನ್ಫೋಟೇನ್ ಮೆಂಟ್ ಸಿಸ್ಟಂ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋಗಳನ್ನು ಬೆಂಬಲಿಸುತ್ತದೆ. ಹೊಸ ಕಾರಿನಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್, ಆಂಬಿಯೆಂಟ್ ಲೈಟ್ ಸಿಸ್ಟಂ, ಡಿಜಿಟಲ್ ಕೀ ಸ್ಮಾರ್ಟ್‌ಫೋನ್ ಪ್ರೊಸೆಸರ್, 8 ಸ್ಪೀಕರ್‌ಗಳ ಸೌಂಡ್ ಸಿಸ್ಟಂ, ಎಲೆಕ್ಟ್ರಿಕ್ ಸನ್‌ರೂಫ್ ಗಳಿವೆ.

ಹೊಸ ಹ್ಯುಂಡೈ ಎಲಾಂಟ್ರಾದಲ್ಲಿ ಮೊದಲ ಬಾರಿಗೆ ಹೈಬ್ರಿಡ್ ಟೆಕ್ನಾಲಜಿಯನ್ನು ನೀಡಲಾಗುತ್ತಿದೆ. 1.6-ಲೀಟರ್ ಜಿಟಿಐ ಪೆಟ್ರೋಲ್ ಎಂಜಿನ್ ಅನ್ನು 32 ಕಿ.ವ್ಯಾಟ್ ಎಲೆಕ್ಟ್ರಿಕ್ ಮೋಟರ್ ನೊಂದಿಗೆ ಜೋಡಿಸಲಾಗಿದೆ. ಎಲೆಕ್ಟ್ರಿಕ್ ಮೋಟರ್ 1.32 ಕಿ.ವ್ಯಾನ ಲಿಥಿಯಂ-ಐಯಾನ್ ಬ್ಯಾಟರಿಯಲ್ಲಿ ಚಲಿಸುತ್ತದೆ.

ಈ ಹೈಬ್ರಿಡ್ ಮಾದರಿಯು 139 ಬಿಹೆಚ್‌ಪಿ ಪವರ್ ಹಾಗೂ 264 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡಿನ ಡ್ಯುಯಲ್-ಕ್ಲಚ್ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ. ಈ ಕಾರು ಎಲೆಕ್ಟ್ರಿಕ್ ಮೋಟರ್ ನಲ್ಲಿ ಕೆಲ ದೂರದವರೆಗೆ ಮಾತ್ರ ಚಲಿಸುತ್ತದೆ.

ಮಾರುಕಟ್ಟೆಯಲ್ಲಿರುವ ಕಾರಿನಲ್ಲಿರುವ 2.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಸಹ ಈ ಕಾರಿನಲ್ಲಿ ನೀಡಲಾಗುವುದು. ಈ ಎಂಜಿನ್ ನಲ್ಲಿ ಸಿವಿಟಿ ಗೇರ್ ಬಾಕ್ಸ್ ನೀಡಲಾಗುವುದು. ಭಾರತದಲ್ಲಿ ಬಿಡುಗಡೆಯಾಗುವಾಗ, ಕಿಯಾ ಸೆಲ್ಟೋಸ್ ಕಾರಿನಲ್ಲಿರುವ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ನೀಡಲಾಗುವುದು.

ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್ ಕಾರ್ ಅನ್ನು ಕಳೆದ ವರ್ಷ ಭಾರತದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಹೊಸ ಕಾರು ಮುಂದಿನ ವರ್ಷದ ಮಧ್ಯಭಾಗದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ಕಾರಿನ ಬೆಲೆ ರೂ. 16 ಲಕ್ಷದಿಂದ ರೂ. 23 ಲಕ್ಷಗಳಾಗುವ ಸಾಧ್ಯತೆಗಳಿವೆ.


Click it and Unblock the Notifications