ಬಹುನೀರಿಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಐ20 ಬಿಡುಗಡೆ ಮಾಹಿತಿ ಬಹಿರಂಗ

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಹ್ಯುಂಡೈ ಐ20 ಕಾರು ಮಾದರಿಯು ಶೀಘ್ರದಲ್ಲೇ ಹೊಸ ತಲೆಮಾರಿನ ಆವೃತ್ತಿಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಮುಂದಿನ ತಿಂಗಳು ನವೆಂಬರ್ ಆರಂಭದಲ್ಲಿ ಹೊಸ ಕಾರು ಬಿಡುಗಡೆಯಾಗುವ ಬಗೆಗೆ ಮಾಹಿತಿ ಲಭ್ಯವಾಗಿದೆ.

ಬಹುನೀರಿಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಐ20 ಬಿಡುಗಡೆ ಮಾಹಿತಿ ಬಹಿರಂಗ

ಹ್ಯುಂಡೈ ಪ್ರಮುಖ ಡೀಲರ್ಸ್‌ಗಳಲ್ಲಿ ಈಗಾಗಲೇ ಹೊಸ ಐ20 ಕಾರು ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಿದ್ದು, ವರದಿಗಳ ಪ್ರಕಾರ ಹೊಸ ಐ20 ಕಾರು ಮ್ಯಾಗ್ನಾ, ಸ್ಪೋರ್ಟ್ಜ್, ಅಸ್ಟಾ ಮತ್ತು ಅಸ್ಟಾ ಆಪ್ಷನ್ ಎಂಬ ನಾಲ್ಕು ವೆರಿಯೆಂಟ್‌ಗಳಲ್ಲಿ ಲಭ್ಯವಿರಲಿದೆ ಎನ್ನಲಾಗಿದೆ. ಹೊಸ ಕಾರು ಬಿಡುಗಡೆಗೂ ಹತ್ತಾರು ಬಾರಿ ರೋಡ್ ಟೆಸ್ಟಿಂಗ್ ನಡೆಸಿರುವ ಹ್ಯುಂಡೈ ಕಂಪನಿಯು ಹೊಸ ತಲೆಮಾರಿನ ಮಾದರಿ ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಬಹುನೀರಿಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಐ20 ಬಿಡುಗಡೆ ಮಾಹಿತಿ ಬಹಿರಂಗ

ಐ20 ಹೊಸ ಕಾರು ಮಾದರಿಯು ಟೈಫೂನ್ ಸಿಲ್ವರ್, ಸ್ಟಾರಿ ನೈಟ್, ಟೈಟಾನ್ ಗ್ರೇ, ಫೆರಿ ರೆಡ್, ಪೋಲಾರ್ ವೈಟ್ ಮತ್ತು ಸನ್ ಬರ್ನ್ ಸ್ವೇ ಎಂಬ ಬಣ್ಣಗಳಲ್ಲಿ ಲಭ್ಯವಿರಲಿದ್ದು, ಇದರೊಂದಿಗೆ ಫೆರಿ ರೆಡ್ ಜೊತೆ ಬ್ಲ್ಯಾಕ್ ಮತ್ತು ಟೋನ್ ಬ್ಲ್ಯಾಕ್ ಜೊತೆ ವೈಟ್ ಎಂಬ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ.

ಬಹುನೀರಿಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಐ20 ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಹ್ಯುಂಡೈ ಐ20 ಕಾರು ಮುಂಭಾಗದಲ್ಲಿ ಕ್ಯಾಸ್‌ಕ್ಯಾಡಿಂಗ್ ಗ್ರಿಲ್ ಅನ್ನು ಹೊಂದಿದ್ದು, ಹಿಂದಿನ ಐ20 ಮಾದರಿಗೆ ಹೋಲಿಸಿದರೆ ಹೊಸ ಕಾರಿನ ಹೆಡ್‌ಲ್ಯಾಂಪ್ ಮತ್ತು ಸೈಡ್ ಫ್ರೋಪೈಲ್ ವಿನ್ಯಾಸವನ್ನು ನವೀಕರಿಸುವುದರ ಜೊತೆಗೆ ದೊಡ್ಡ ಕ್ರೀಸ್ ಲೈನ್‌ಗಳನ್ನು ಜೋಡಿಸಲಾಗಿದೆ.

ಬಹುನೀರಿಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಐ20 ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಕಾರಿನ ಪಿಲ್ಲರ್‍‍ಗಳು ಬ್ಲ್ಯಾಕ್ ಬಣ್ಣವನ್ನು ಹೊಂದಿದ್ದು, ವಿಡಬ್ಲ್ಯೂ ಟೈಗನ್‍‍‍ನಲ್ಲಿ ಇರುವಂತಹ ಕೆಂಪು ಇ‍ಲ್‍ಇಡಿ ಡಿಆರ್‍ಎಲ್ ಸ್ಟಾಪ್ ಲೈಟ್ ಹಿಂಭಾಗದಲ್ಲಿ ಇ‍ಲ್‍ಇಡಿ ಟೈಲ್‍‍ಲೈಟ್ ಹೊಂದಿದೆ. ಇನ್ನು ಹೊಸ ಹ್ಯುಂಡೈ ಕಾರಿನ ಇಂಟಿರಿಯರ್‍‍ನಲ್ಲಿ 4 ಸ್ಫೋಕ್ ಸ್ಟೀರಿಂಗ್ ವ್ಹೀಲ್ ಅನ್ನು ಅಳವಡಿಸಲಾಗಿದೆ.

ಬಹುನೀರಿಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಐ20 ಬಿಡುಗಡೆ ಮಾಹಿತಿ ಬಹಿರಂಗ

ಜೊತೆಗೆ ಬಾಷ್ ಸೌಂಡ್ ಸಿಸ್ಟಂ, ಕ್ರೂಸ್ ಕಂಟ್ರೋಲ್ ಮತ್ತು ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದ್ದು, ಇದರೊಂದಿಗೆ 33 ಫೀಚರ್ಸ್‌ವುಳ್ಳ ಬ್ಲೂ ಲಿಂಕ್ ಟೆಕ್ನಾಲಜಿಯನ್ನು ಕೂಡ ಹೊಂದಿರಲಿದೆ.

ಬಹುನೀರಿಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಐ20 ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಕಾರಿನಲ್ಲಿ ಸನ್‌ರೂಫ್ ಮತ್ತು ಡಿಜಿಟಲ್ ಕ್ಲಸ್ಟರ್ ಅನ್ನು ಸಹ ಅಳವಡಿಸಲಾಗಿದ್ದು, ಈ ಕಾರಿನ ಇಂಟಿರಿಯರ್‍‍ನಲ್ಲಿ ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಹ್ಯುಂಡೈ ಕನೆಕ್ಟಿವಿಟಿ ಸೂಟ್, ಯುಎಸ್‌ಬಿ ಪೋರ್ಟ್‌ ಮತ್ತು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಸೇರಿ ಹಲವು ಪ್ರೀಮಿಯಂ ಫೀಚರ್ಸ್‌ಗಳಿವೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಬಹುನೀರಿಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಐ20 ಬಿಡುಗಡೆ ಮಾಹಿತಿ ಬಹಿರಂಗ

ಎಂಜಿನ್ ಮತ್ತು ಪರ್ಫಾಮೆನ್ಸ್

ಹ್ಯುಂಡೈ ಐ20 ಕಾರಿನಲ್ಲಿ ಮೂರು ಎಂಜಿನ್ ಆಯ್ಕೆಗಳನ್ನು ನೀಡಲಾಗುತ್ತಿದ್ದು, ಇದರಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ 82-ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಹೊಂದಿರುತ್ತದೆ.

ಬಹುನೀರಿಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಐ20 ಬಿಡುಗಡೆ ಮಾಹಿತಿ ಬಹಿರಂಗ

ಇದರೊಂದಿಗೆ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಸಹ ಹೊಂದಿದ್ದು, ಈ ಎಂಜಿನ್ 99-ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಮತ್ತು 6-ಸ್ಪೀಡ್ ಐಎಂಟಿ(ಇಂಟೆಲಿಜೆಂಟ್ ಮ್ಯಾನುಯಲ್ ಗೇರ್ ಬಾಕ್ಸ್) ಅನ್ನು ಹೊಂದಿರಲಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಬಹುನೀರಿಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಐ20 ಬಿಡುಗಡೆ ಮಾಹಿತಿ ಬಹಿರಂಗ

ಇನ್ನು 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯು 99-ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸಲಿದ್ದು, ಈ ಎಂಜಿನ್‌ನಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸಬಹುದು ಎಂದು ನಿರೀಕ್ಷಿಸಲಾಗಿದೆ. ಇದರೊಂದಿಗೆ ಹೊಸ ಹ್ಯುಂಡೈ ಐ20 ಕಾರಿನಲ್ಲಿ ಹೊಸ 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‍‍ಗಳು, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‍‍ಗಳೊಂದಿಗೆ ಸ್ಲಿಕ್ ಒಆರ್‍‍ವಿಎಂಗಳು ಮತ್ತು ಶಾರ್ಕ್ ಫಿನ್ ಆಂಟೆನಾವನ್ನು ಕೂಡ ಆಳವಡಿಸಿರುವುದರಿಂದ ಕಾರಿನ ಬೆಲೆ ಕೂಡಾ ತುಸು ದುಬಾರಿಯಾಗಿರಲಿದೆ.

Article Published On: Wednesday, October 21, 2020, 11:27 [IST]
English summary
2020 Hyundai i20 India Launch Expected Timeline Revealed. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+