ನ್ಯೂ ಜನರೇಷನ್ ಥಾರ್ ಕಾರು ಖರೀದಿಗೆ 8 ತಿಂಗಳು ಕಾಯಬೇಕಂತೆ..!
ಮಹೀಂದ್ರಾ ಕಂಪನಿಯು ಅಕ್ಟೋಬರ್ ಮೊದಲ ವಾರದಲ್ಲಿ ತನ್ನ ಬಹುನೀರಿಕ್ಷಿತ ಥಾರ್ ಕಾರು ಮಾದರಿಯನ್ನು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡಿತ್ತು. ಹೊಸ ಕಾರು ಇದುವರೆಗೆ ಬರೋಬ್ಬರಿ 22 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದ್ದು, ಬುಕ್ಕಿಂಗ್ ಸಂಖ್ಯೆ ಹೆಚ್ಚಿದಂತೆ ಗ್ರಾಹಕರ ಕಾಯುವಿಕೆ ಅವಧಿಯಲ್ಲಿ ಮತ್ತಷ್ಟು ಹೆಚ್ಚಳವಾಗಿದೆ.

ದಸರಾ ಮತ್ತು ದೀಪಾವಳಿ ಸಂಭ್ರಮಕ್ಕಾಗಿ ಇದುವರೆಗೆ 1,500 ಯನಿಟ್ ಮಾತ್ರ ವಿತರಣೆ ಮಾಡಿರುವ ಮಹೀಂದ್ರಾ ಕಂಪನಿಯು ಹೊಸ ಕಾರು ಖರೀದಿಗೆ ಬುಕ್ಕಿಂಗ್ ನಂತರ ಕನಿಷ್ಠ 6 ವಾರಗಳಿಂದ ಗರಿಷ್ಠ 30 ವಾರಗಳ ಕಾಲ ಕಾಯಲೇಬೇಕಿದೆ. ಕಾಯುವಿಕೆ ಅವಧಿಯು ವೆರಿಯೆಂಟ್‌ಗಳಿಗೆ ಅನುಗುಣವಾಗಿ ನಿರ್ಧಾರವಾಗಲಿದ್ದು, ಸಾಫ್ಟ್ ಟಾಪ್ ಮಾದರಿಗಳು ಕಡಿಮೆ ಅವಧಿಯಲ್ಲಿ ವಿತರಣೆಯಾಗಲಿದ್ದರೆ ಹಾರ್ಡ್ ಟಾಪ್ ಮಾದರಿಗೆ ಹೆಚ್ಚು ಕಾಯುವಿಕೆಬೇಕಿದೆ.

ಮಹೀಂದ್ರಾ ಡೀಲರ್ಸ್‌ಗಳ ಮಾಹಿತಿಯೆಂತೆ ಸಾಫ್ಟ್ ಟಾಪ್ ಹೊಂದಿರುವ ಥಾರ್ ಕಾರು ವೆರಿಯೆಂಟ್‌ಗಳಿಗೆ ಬುಕ್ಕಿಂಗ್ ನಂತರ ಕನಿಷ್ಠ 6 ರಿಂದ 8 ವಾರಗಳ ಕಾಲ ಕಾಯಬೇಕಿದ್ದು, ಕನ್ವರ್ಟಬಲ್ ಮಾದರಿಗೆ 12 ರಿಂದ 18 ವಾರಗಳು ಮತ್ತು ಹಾರ್ಡ್ ಟಾಪ್ ವೆರಿಯೆಂಟ್‌ಗಳಿಗೆ ಕನಿಷ್ಠ 20ರಿಂದ 30 ವಾರಗಳ ಕಾಲ ಕಾಯಲೇಬೇಕಿದೆ.

ಆಫ್ ರೋಡಿಂಗ್ ವೈಶಿಷ್ಟ್ಯತೆಯೊಂದಿಗೆ ತನ್ನದೆ ಆದ ಜನಪ್ರಿಯೆತೆ ಹೊಂದಿರುವ ಥಾರ್ ಕಾರು ಮಾದರಿಯು ಸಾಮಾನ್ಯ ಕಾರು ಮಾದರಿಗಳಂತೆ ಬೇಡಿಕೆ ಮುಂಚೂಣಿ ಸಾಧಿಸುತ್ತಿದ್ದು, 2020ರ ಥಾರ್ ಖರೀದಿ ಮಾಡಿರುವ ಗ್ರಾಹಕರಲ್ಲಿ ಬಹುತೇಕರು ಹೊಸದಾಗಿ ಆಫ್ ಕೌಶಲ್ಯದ ಆಸಕ್ತಿಯೊಂದಿಗೆ ಥಾರ್ ಮಾಲೀಕತ್ವ ಪಡೆದುಕೊಂಡವರಾಗಿದ್ದಾರೆ.

ಶೇ.57ರಷ್ಟು ಗ್ರಾಹಕರು ಹೊಸದಾಗಿ ಆಫ್ ರೋಡಿಂಗ್ ಕಾರು ಖರೀದಿ ಮಾಡುತ್ತಿರುವ ಗ್ರಾಹಕರಾಗಿದ್ದು, ಮ್ಯಾನುವಲ್‌ಗಿಂತಲೂ ಹೆಚ್ಚು ಆಟೋಮ್ಯಾಟಿಕ್ ಮಾದರಿಗಳಿಗೆ ಹೆಚ್ಚು ಬೇಡಿಕೆ ಹರಿದುಬಂದಿದೆ. ಹೊಸ ಥಾರ್ ಕಾರು ಮಾದರಿಯು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎಎಕ್ಸ್ ಮತ್ತು ಎಲ್ಎಕ್ಸ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.

ಗ್ರಾಹಕರ ಬೇಡಿಕೆಯೆಂತೆ ಥಾರ್ ಆರಂಭಿಕ ಆವೃತ್ತಿಗಳಾದ ಎಎಕ್ಸ್ ಪೆಟ್ರೋಲ್ ಸ್ಟ್ಯಾಂಡರ್ಡ್ ಸಿಕ್ಸ್ ಸೀಟರ್, ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಟಾಪ್ ಮತ್ತು ಎಎಕ್ಸ್ ಸಿಕ್ಸ್ ಸೀಟರ್ ಡೀಸೆಲ್ ಸಾಫ್ಟ್ ಟಾಪ್ ಮಾದರಿಗಳನ್ನು ಸ್ಥಗಿತಗೊಳಿಸಿರುವ ಕಂಪನಿಯು ಹೈ ಎಂಡ್ ಮಾದರಿಗಳ ಮಾರಾಟದ ಮೇಲೆ ಹೆಚ್ಚು ಗಮನಹರಿಸಿದೆ.

ಥಾರ್ ಎಎಕ್ಸ್ ವೆರಿಯೆಂಟ್‌ನಲ್ಲಿ ಮೊದಲ ಮೂರು ಮಾದರಿಗಳ ಮಾಹಿತಿಯನ್ನು ಈಗಾಗಲೇ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದ್ದು, ಥಾರ್ ಕಾರಿನ ಆರಂಭಿಕ ಮಾದರಿಯು ಬೆಲೆಯು ಇದೀಗ ಆರಂಭಿಕವಾಗಿ ರೂ. 9.80 ಲಕ್ಷದಿಂದ ರೂ.11.90 ಲಕ್ಷಕ್ಕೆ ಏರಿಕೆಯಾಗಿದೆ.

ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಸ್ಟ್ಯಾಂಡರ್ಡ್ ಟಾಪ್ ಪೆಟ್ರೋಲ್ ಮ್ಯಾನುವಲ್, ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಟಾಪ್ ಪೆಟ್ರೋಲ್ ಮ್ಯಾನುವಲ್ ಮತ್ತು ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಟಾಪ್ ಡೀಸೆಲ್ ಮ್ಯಾನುವಲ್ ಆವೃತ್ತಿಗಳ ಸ್ಥಗಿತ ನಂತರದ ಎಎಕ್ಸ್ ಫೋರ್ ಸೀಟರ್ ಕನ್ವರ್ಟಿಬಲ್ ಡೀಸೆಲ್ ಮ್ಯಾನುವಲ್ ಮಾದರಿಯು ಆರಂಭಿಕ ಮಾದರಿಯಾಗಿದೆ. ಟಾಪ್ ಮಾದರಿಯು ರೂ. 12.95 ಲಕ್ಷ ಬೆಲೆ ಪಡೆದುಕೊಂಡಿದ್ದು, ಅತ್ಯುತ್ತಮ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ಹೊಸ ಕಾರಿನ ಹೊರಭಾಗದ ವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸಲಾಗಿದೆ.

ಹೊಸ ಥಾರ್ ಕಾರು ಮಾದರಿಯಲ್ಲಿ ಬಿಎಸ್-6 ಎಂಜಿನ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಎರಡು ಎಂಜಿನ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಥಾರ್ ಡೀಸೆಲ್ ಮಾದರಿಯು 132-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಪೆಟ್ರೋಲ್ ಮಾದರಿಯು 152-ಬಿಎಚ್‌ಪಿ, 320-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಈ ಮೂಲಕ ಪ್ರಯಾಣಿಕರ ಸುರಕ್ಷತೆಯಲ್ಲೂ ಗಮನಸೆಳೆಯಲಿದೆ.


Click it and Unblock the Notifications








