Just In
Don't Miss!
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Sports
ಭಾರತೀಯರ ನಿಂದಿಸಿದ ಕಿಡಿಗೇಡಿಗಳ ಕಂಡುಹಿಡಿಯುವಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ವಿಫಲ
- News
ಶಶಿಕಲಾ ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿ
- Movies
ಎಸ್ಎಸ್ ರಾಜಮೌಳಿ ನಿರ್ಧಾರಕ್ಕೆ ಬೇಸರಗೊಂಡ ನಿರ್ಮಾಪಕ ಬೋನಿ ಕಪೂರ್
- Finance
ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್- ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು?
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕ್ರಾಶ್ ಟೆಸ್ಟ್'ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ಹೋಂಡಾ ಜಾಝ್ ಕಾರು
ಸುರಕ್ಷತೆಗೆ ಸಂಬಂಧಿಸಿದ ಪರೀಕ್ಷೆಯಲ್ಲಿ ಹೋಂಡಾ ಕಂಪನಿಯ ಹೊಸ ತಲೆಮಾರಿನ ಜಾಝ್ ಕಾರು 5 ಸ್ಟಾರ್ ರೇಟಿಂಗ್ ಪಡೆದಿದೆ ಎಂದು ವರದಿಯಾಗಿದೆ. ಇದರಿಂದಾಗಿ ಹೊಸ ಜಾಝ್ ಕಾರು ಸುರಕ್ಷತೆಗಾಗಿ ಅತ್ಯಂತ ಸೂಕ್ತವಾದ ಕಾರು ಎಂದು ಕಂಡು ಬಂದಿದೆ.

ಯುರೋ ಎನ್‌ಸಿಎಪಿ, ಹೋಂಡಾ ಜಾಝ್ ಕಾರಿನ ಸುರಕ್ಷತೆಯ ಬಗ್ಗೆ ಪ್ರಮಾಣಪತ್ರವನ್ನು ನೀಡಿದೆ. ಕಾರುಗಳು ಡಿಕ್ಕಿ ಹೊಡೆಯುವ ವಿಷಯದ ಬಗ್ಗೆ ಯುರೋ ಎನ್‌ಸಿಎಪಿ ಪರೀಕ್ಷೆ ನಡೆಸುತ್ತದೆ. ಸಂಸ್ಥೆ ಇತ್ತೀಚೆಗೆ ವಿಶ್ವದ ಪ್ರಮುಖ ಕಂಪನಿಗಳ ಹೊಸ ಕಾರುಗಳ ಅಪಘಾತ ಪರೀಕ್ಷೆಯನ್ನು ನಡೆಸಿತು.

ಇವುಗಳಲ್ಲಿ ಹೋಂಡಾ ಜಾಝ್ ಕಾರು ಸಹ ಸೇರಿತ್ತು. ಜಾಝ್ ಕಾರು ಈ ಪರೀಕ್ಷೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿದೆ. ಹೋಂಡಾ ಜಾಝ್ ವಯಸ್ಕರ ಸುರಕ್ಷತೆಯಲ್ಲಿ 38 ಪಾಯಿಂಟ್‌ಗಳಲ್ಲಿ 33.1 ಪಾಯಿಂಟ್ ಹಾಗೂ ಮಕ್ಕಳ ಸುರಕ್ಷತೆಯಲ್ಲಿ 24 ಪಾಯಿಂಟ್‌ಗಳಲ್ಲಿ 22.4 ಪಾಯಿಂಟ್‌ಗಳನ್ನು ಗಳಿಸಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕ್ರಾಶ್ ಟೆಸ್ಟ್ ವೇಳೆಯಲ್ಲಿ ಯುರೋ ಎನ್‌ಸಿಎಪಿ ಕಾರಿನ ಮುಂಭಾಗ ಹಾಗೂ ಹಿಂಭಾಗವನ್ನು ಪರಿಶೀಲಿಸಿದೆ. ಇವುಗಳ ಆಧಾರದ ಮೇಲೆ ಹೋಂಡಾ ಜಾಝ್ ಕಾರು ಮೇಲೆ ತಿಳಿಸಿದ ಪಾಯಿಂಟ್'ಗಳನ್ನು ಪಡೆದಿದೆ.

ಇವುಗಳ ಜೊತೆಗೆ ಪಾದಚಾರಿ ಸುರಕ್ಷತೆಯಲ್ಲಿಯೂ ಈ ಕಾರು ಉತ್ತಮ ರೇಟಿಂಗ್ ಪಡೆದಿದೆ. ಈ ಸುರಕ್ಷತೆಯಲ್ಲಿ ಜಾಝ್ ಕಾರು 36 ಪಾಯಿಂಟ್‌ಗಳಲ್ಲಿ 28.3 ಪಾಯಿಂಟ್‌ಗಳನ್ನು ಪಡೆದಿದೆ. ಈ ಪಾಯಿಂಟ್‌ಗಳು ಸಹ 5 ಸ್ಟಾರ್ ರೇಟಿಂಗ್ ಪಡೆಯಲು ನೆರವಾಗಿವೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್
ಹೋಂಡಾ ಜಾಝ್ ಕಾರನ್ನು ಯುರೋಪಿಯನ್ ಮಾರುಕಟ್ಟೆಗಳಿಗೆ ಅನುಸಾರವಾಗಿ ಈ ಪರೀಕ್ಷೆಗಳಿಗೆ ಒಳಪಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ 1.5 ಹೈಬ್ರಿಡ್ ಎಲಿಗೆಂಟ್ ಎಲ್'ಕೆಟಿ ಮಾದರಿಯು ಭಾಗಿಯಾಗಿತ್ತು. ಈ ಮಾದರಿಯಲ್ಲಿ ಚಾಲಕನ ಪಾದಗಳನ್ನು ರಕ್ಷಿಸಲು ಕ್ರ್ಯಾಶ್ ಪ್ರೊಟೆಕ್ಷನ್, ಏರ್‌ಬ್ಯಾಗ್, ಸೀಟ್ ಬೆಲ್ಟ್‌ಗಳು ಹಾಗೂ ಏರ್‌ಬ್ಯಾಗ್‌ಗಳಂತಹ ಸುರಕ್ಷತಾ ಫೀಚರ್'ಗಳನ್ನು ನೀಡಲಾಗಿದೆ.

ಇದರ ಜೊತೆಗೆ ಈ ಕಾರು ಏರೋಸ್ಪೇಸ್ ಸೀಟ್ ಮೌಂಟ್'ಗಳನ್ನು ಹೊಂದಿದೆ. ಮಕ್ಕಳ ಸುರಕ್ಷತೆಗಾಗಿ ಎಇಪಿ, ಸ್ಪೀಡ್ ಅಸಿಸ್ಟೆಂಟ್ಸ್, ಲಾನಾಸ್ ಅಸಿಸ್ಟ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ. ಈ ಕಾರು ಮಲ್ಟಿ ಫೇಸ್ಡ್ ಶೀಲ್ಟ್'ಗಳನ್ನು ಸಹ ಹೊಂದಿದೆ.