2020ರ ಹ್ಯುಂಡೈ ಐ20 ಕಾರಿನ ಚಿತ್ರಗಳು ಬಹಿರಂಗ

ಹೊಸ ಹ್ಯುಂಡೈ ಐ20 ಕಾರನ್ನು 2020ರ ಜಿನೀವಾ ಮೋಟಾರ್ ಶೋನಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಲಿದೆ. ಇದಕ್ಕೂ ಮೊದಲು ಹ್ಯುಂಡೈ ಕಂಪನಿ ಬಹುನಿರೀಕ್ಷಿತ 2020ರ ಐ20 ಕಾರಿನ ಮೊದಲ ಅಧಿಕೃತ ಚಿತ್ರಗಳು ಬಹಿರಂಗವಾಗಿವೆ.

2020ರ ಹ್ಯುಂಡೈ ಐ20 ಕಾರಿನ ಚಿತ್ರಗಳು ಬಹಿರಂಗ

ಹೊಸ ಹ್ಯುಂಡೈ ಐ20 ಹೊಸ ಚಿತ್ರಗಳಲ್ಲಿ ಕಾರಿನ ಹೊರಭಾಗದ ವಿನ್ಯಾಸವನ್ನು ಬಹಿರಂಗಪಡಿಸಿದೆ. ಈ ಹೊಸ ಐ20 ಕಾರು ಸಾಕಷ್ಟು ಸ್ಪೋರ್ಟಿಯರ್ ಮತ್ತು ಸ್ಟೈಲಿಶ್ ಲುಕ್ ಅನ್ನು ಹೊಂದಿದೆ. ಈ ಕಾರಿನ ಮುಂಭಾಗದಲ್ಲಿ ಹುಕ್ ಆಕಾರಾದ ಎಲ್‍ಇಡಿ ಡಿಆರ್‍ಎಲ್‍‍ಗಳು ಮತ್ತು ಹಿಂಭಾಗದಲ್ಲಿ ಝಡ್ ಆಕಾರದ ಎಲ್‍ಇಡಿ ಡಿ‍‍ಆರ್‍ಎಲ್‍‍ಗಳಿವೆ. ಕಾರಿನ ಮುಂಭಾಗ ಆಕರ್ಷಕ ಲುಕ್ ಅನ್ನು ಹೊಂದಿದೆ.

2020ರ ಹ್ಯುಂಡೈ ಐ20 ಕಾರಿನ ಚಿತ್ರಗಳು ಬಹಿರಂಗ

ಕಾರಿನ ಮುಂಭಾಗದಲ್ಲಿ ಹೊಸ ಹನಿಕೊಂಬ್ ಗ್ರಿಲ್ ಅನ್ನು ಹೊಂದಿದೆ. ಈ ಕಾರಿನ ಮ್ಯಾಟ್ ಕಪ್ಪು ಬಣ್ಣವನ್ನು ಹೊಂದಿದೆ. ಹೊಸ ಹ್ಯುಂಡೈ ಐ20 ಕಾರಿನಲ್ಲಿ ಹೊಸ ಕ್ರೆಟಾದಲ್ಲಿರುವಂತಹ ಕ್ಯಾಸ್ಕೇಡಿಂಗ್ ಗ್ರಿಲ್‍ ಅನ್ನು ಹೊಂದಿದೆ.

2020ರ ಹ್ಯುಂಡೈ ಐ20 ಕಾರಿನ ಚಿತ್ರಗಳು ಬಹಿರಂಗ

ಹೊಸ ಹ್ಯುಂಡೈ ಐ20 ಕಾರಿನಲ್ಲಿ ಎಲ್‍ಇಡಿ ಹೆಡ್‍ಲೈಟ್, ಹೊಸ 16 ಡ್ಯುಯಲ್ ಟೋನ್ ಅಲಾಯ್ ವ್ಹೀಲ್‍‍ಗಳು, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‍‍ಗಳೊಂದಿಗೆ ಸ್ಲಿಕ್ ಒಆರ್‍‍ವಿಎಂಗಳು ಮತ್ತು ಶಾರ್ಕ್ ಫಿನ್ ಆಂಟೆನಾವನ್ನು ಆಳವಡಿಸಲಾಗಿದೆ.

2020ರ ಹ್ಯುಂಡೈ ಐ20 ಕಾರಿನ ಚಿತ್ರಗಳು ಬಹಿರಂಗ

ಬಹಿರಂಗವಾಗಿರುವ ಚಿತ್ರದಲ್ಲಿ 2020ರ ಹ್ಯುಂಡೈ ಐ20 ಕಾರು ನೀಲಿ ಬಣ್ಣವನ್ನು ಹೊಂದಿದೆ. ಹೊಸ ಹುಂಡೈ ಐ20 ಕಾರಿನ ಬದಿಯ ಪಿಲ್ಲರ್‍‍ಗಳು ಕಪ್ಪು ಬಣ್ಣವನ್ನು ಹೊಂದಿದೆ. ಎರಡು ಟೇಲ್‍ ಲ್ಯಾಂಪ್‍‍ಗಳನ್ನು ಅಳವಡಿಸಲಾಗಿದೆ. ವಿಡಬ್ಲ್ಯೂ ಟೈಗನ್‍‍‍ನಲ್ಲಿ ಇರುವಂತಹ ಕೆಂಪು ಇ‍ಲ್‍ಇಡಿ ಡಿಆರ್‍ಎಲ್ ಸ್ಟಾಪ್ ಲೈಟ್ ಹಿಂಭಾಗದಲ್ಲಿ ಟೇಲ್‍‍ಲೈಟ್ ಹೊಂದಿದೆ.

2020ರ ಹ್ಯುಂಡೈ ಐ20 ಕಾರಿನ ಚಿತ್ರಗಳು ಬಹಿರಂಗ

ಒಳಾಂಗಣವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ, ಪತ್ತೇದಾರಿ ಚಿತ್ರಗದಲ್ಲಿ ಮತ್ತು ಇತರ ಮಾಹಿತಿಗಳ ಪ್ರಕಾರ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ ಮತ್ತು ನವೀಕರಿಸಿದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿರಲಿದೆ.

2020ರ ಹ್ಯುಂಡೈ ಐ20 ಕಾರಿನ ಚಿತ್ರಗಳು ಬಹಿರಂಗ

ಇದರೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಬ್ಲೂಲಿಂಕ್ ಇಂಟರ್‍‍ನೆಟ್ ಕನೆಕ್ಟಿವಿಟಿ ಕಾರು ತಂತ್ರಜ್ಞಾನ ಮತ್ತು ಕ್ರೂಸ್ ಕಂಟ್ರೋಲ್, ಕ್ಲೈಮೇಟ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ರೇನ್ ಸೆನ್ಸಿಂಗ್ ವೈಪರ್ಸ್ ಮತ್ತು ಸ್ವಯಂಚಾಲಿತ ಹೆಡ್‌ಲ್ಯಾಂಪ್‌ಗಳು.

2020ರ ಹ್ಯುಂಡೈ ಐ20 ಕಾರಿನ ಚಿತ್ರಗಳು ಬಹಿರಂಗ

ಹೊಸ ಐ20 ಕಾರಿನಲ್ಲಿ 1.2 ಲೀಟರಿನ ಬಿ‍ಎಸ್ 6 ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 83 ಬಿ‍‍ಹೆಚ್‍‍ಪಿ ಪವರ್ ಹಾಗೂ 114 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಜೊತೆಗೆ ವೆನ್ಯೂ ಕಾರಿನಲ್ಲಿರುವಂತಹ 1.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಸಹ ಅಳವಡಿಸುವ ಸಾಧ್ಯತೆಗಳಿವೆ.

2020ರ ಹ್ಯುಂಡೈ ಐ20 ಕಾರಿನ ಚಿತ್ರಗಳು ಬಹಿರಂಗ

ಹೊಸ ಹ್ಯುಂಡೈ ಐ20 ಕಾರ್ ಅನ್ನು ಭಾರತದಲ್ಲಿ 2020ರ ಜೂನ್‍‍ನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಬಿಡುಗಡೆಯಾದ ನಂತರ ಹೊಸ ಹ್ಯುಂಡೈ ಐ20 ಕಾರು ಮಾರುತಿ ಸುಜುಕಿ ಕಂಪನಿಯ ಬಲೆನೊ, ಫೋರ್ಡ್ ಫ್ರೀ‍‍ಸ್ಟೈಲ್, ಟಾಟಾ ಆಲ್ಟ್ರೋಜ್ ಹಾಗೂ ಹೋಂಡಾ ಜಾಜ್‍ ಕಾರುಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Tuesday, February 18, 2020, 12:19 [IST]
English summary
2020 Hyundai i20 first official images revealed ahead of launch. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+