ಅನಾವರಣವಾಗಲಿದೆ ಬಿಎಸ್-6 ಹೋಂಡಾ ಸಿಟಿ ಕಾರು
ಹೋಂಡಾ ಕಂಪನಿಯು ತನ್ನ 2020ರ ಸಿಟಿ ಕಾರನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಹೋಂಡಾ ಕಂಪನಿಯು ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಥಾಯ್‍ಲ್ಯಾಂಡ್‍ನ 2019ರ ಥಾಯ್ ಮೋಟಾರ್ ಎಕ್ಸ್ ಪೋದಲ್ಲಿ ತನ್ನ ಹೊಸ ಸಿಟಿ ಕಾರನ್ನು ಜಾಗತಿಕವಾಗಿ ಬಿಡುಗಡೆಗೊಳಿಸಿತ್ತು.

ಹೋಂಡಾ ಕಂಪನಿಯು 2020ರ ಹೋಂಡಾ ಸಿಟಿ ಕಾರನ್ನು ಮುಂದಿನ ಮಾರ್ಚ್ 16ರಂದು ಭಾರತದಲ್ಲಿ ಅನಾವರಣಗೊಳಿಸಲಿದೆ. ಈ ಹೋಂಡಾ ಸಿಟಿ ಕಾರಿನ ಬುಕ್ಕಿಂಗ್ ಕೂಡ ಅದೇ ದಿನ ಪ್ರಾರಂಭವಾಗುವ ಸಾಧ್ಯತೆಗಳಿದೆ. ಹೋಂಡಾ ಸಿಟಿ ಮಾದರಿಯು ಹೋಂಡಾ ಕಂಪನಿಯ ಸರಣಿಯ ಕಾರುಗಳಲ್ಲಿ ಹಲವು ವರ್ಷಗಳಿಂದ ಹೆಚ್ಚು ಮಾರಾಟವಾಗುವ ಕಾರು ಆಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ, ವರ್ನಾ ಮತ್ತು ಸಿಯಾಜ್ ಒಂದೇ ರೀತಿಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿವೆ.

ಥೈಲ್ಯಾಂಡ್‍ನಲ್ಲಿ ಬಿಡುಗಡೆಗೊಳಿಸಿದ ಕಾರಿನ ಬೆಲೆಯು ರೂ.13.7 ಲಕ್ಷಗಳಾಗಿದೆ. ಹೊಸ ಸಿಟಿ ಕಾರು ಹಿಂದಿನ ತಲೆಮಾರಿನ ಕಾರ್ ಗಿಂತ ದೊಡ್ಡದಾಗಿದೆ. ಈ ಸೆಗ್‍ಮೆಂಟ್‍ನಲ್ಲಿ 2020ರ ಸಿಟಿ 4553 ಎಂಎಂ ಉದ್ದವನ್ನು ಹೊಂದಿರುವ ಕಾರು ಆಗಿದೆ.

ಪ್ರಸುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ವಾಗುತ್ತಿರುವ ಕಾರಗಳಾದ ಸಿಟಿ 4440 ಎಂಎಂ, ವರ್ನಾ 4440 ಎಂಎಂ ಮತ್ತು ಸಿಯಾಜ್ 4490 ಎಂಎಂ ಉದ್ದವನ್ನು ಹೊಂದಿವೆ. ಹೊಸ ಹೋಂಡಾ ಸಿಟಿ ಕಾರು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹೋಂಡಾ ಸಿವಿಕ್ ಮಾದರಿಯ ವಿನ್ಯಾಸವನ್ನು ಹೊಂದಿರಲಿದೆ.

2020ರ ಹೋಂಡಾ ಸಿಟಿ ಶಾರ್ಪರ್ ಹೆಡ್‍ಲ್ಯಾಂಪ್‍ಗಳನ್ನು ಹೊಂದಿರಲಿದೆ. ಇನ್ನೂ ಈ ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಎಲ್‍ಇಡಿ ಯುನಿಟ್‍ಗಳು, ಹೋಂಡಾ ಸಿಗ್ನೇಚರ್ ಕ್ರೋಮ್ ಬಾರ್, ಕೂಪ್ ಸ್ಟೈಲ್ ಸ್ಲೋಪಿಂಗ್ ರೂಫ್‍ಲೈನ್ ಮತ್ತು ದೊಡ್ಡ ಒಆರ್‍ವಿಎಂಗಳಿವೆ.

ಇನ್ನೂ ಹೊಸ ಹೋಂಡಾ ಕಾರಿನಲ್ಲಿ ಶಾರ್ಕ್ ಫಿನ್ ಆಂಟೆನಾ, ಟೇಲ್ ಸೆಗ್‍ಮೆಂಟ್ ಮತ್ತು ಉತ್ತಮವಾದ ಬೂಟ್ ಲಿಡ್‍ಗಳಿವೆ. ಹೊಸ ಹೋಂಡಾ ಸಿಟಿ ಕಾರಿನ ಇಂಟಿರಿಯರ್‍ನಲ್ಲಿ ಡ್ಯುಯಲ್ ಟೋನ್ ಸಿಸ್ಟಂ, ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಹೆಡ್‍ರೆಸ್ಟ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಹೊಸ ಟಚ್‍ಸ್ಕ್ರೀನ್ ಇನ್ಪೋಟೇನ್‍ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಎಂಜಿ ಹೆಕ್ಟರ್ ಮತ್ತು ಕಿಯಾ ಸೆಲ್ಟೋಸ್‍ನಲ್ಲಿ ಕಂಡುಬರುವ ಕನೆಕ್ಟಿವಿಟಿ ತಂತ್ರಜ್ಞಾನಗಳನ್ನು ಅಳವಡಿಸುವ ಸಾಧ್ಯತೆಗಳಿವೆ. ಹೋಂಡಾ ಸಂಸ್ಥೆಯು ಭಾರತ ಸೇರಿದಂತೆ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ತನ್ನ ಜನಪ್ರಿಯ ಸಿಟಿ ಸೆಡಾನ್ ಕಾರ್ ಅನ್ನು ಬಿಡುಗಡೆಗೊಳಿಸಲಿದೆ.

2020ರ ಹೋಂಡಾ ಸಿಟಿ ಕಾರು 1 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 122 ಬಿಹೆಚ್‍ಪಿ ಪವರ್ ಮತ್ತು 173 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಸಿಟಿ ಕಾರು 1.5 ಲೀಟರ್ ಐ-ವಿಟಿಇಸಿ ಬಿಎಸ್ 6 ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 100 ಬಿಹೆಚ್‍ಪಿ ಪವರ್ ಮತ್ತು 200 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜೊತೆಗೆ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 117 ಬಿಹೆಚ್‍ಪಿ ಪವರ್ ಮತ್ತು 145 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ಗಳೊಂದಿಗೆ 6 ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಹೊಂದಿರುತ್ತದೆ.

ಹೋಂಡಾ ಸಿಟಿ ಕಾರು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸಿಯಾಜ್, ಟೊಯೊಟಾ ಯಾರಿಸ್ ಮತ್ತು ಹ್ಯುಂಡೈ ವರ್ನಾ ಕಾರುಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications