ಬಿಡುಗಡೆಯಾಯ್ತು ಬಿಎಸ್-6 ಹೋಂಡಾ ಸಿವಿಕ್ ಡೀಸೆಲ್ ಆವೃತ್ತಿ
ಹೋಂಡಾ ಇಂಡಿಯಾ ಕಂಪನಿಯು ತನ್ನ ಬಿಎಸ್-6 ಸಿವಿಕ್ ಡೀಸೆಲ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಂಡಾ ಕಂಪನಿಯು ಹೊಸ ಸಿವಿಕ್ ಡಿಸೇಲ್ ಆವೃತ್ತಿಯನ್ನು ವಿಎಕ್ಸ್ ಮತ್ತು ಝಡ್ಎಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ಹೊಸ ಹೋಂಡಾ ಸಿವಿಕ್ ಡೀಸೆಲ್ ಆವೃತ್ತಿಯ ಬೇಸ್ ಮಾದರಿಯ ಬೆಲೆಯು ರೂ.20.72 ಲಕ್ಷಗಳಾಗಿದ್ದರೆ, ಹೈ ಎಂಡ್ ಮಾದರಿಯ ಬೆಲೆಯು ರೂ.22.34 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ. ಬಿಎಸ್-6 ಸಿವಿಕ್ ಡೀಸೆಲ್ ಆವೃತ್ತಿಯಲ್ಲಿ 1.5-ಲೀಟರ್ ಐ-ಡಿಟಿಇಸಿ ಟರ್ಬೋಚಾರ್ಜ್ಡ್ ಯುನಿಟ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 4000 ಆರ್‌ಪಿಎಂನಲ್ಲಿ 118 ಬಿಹೆಚ್‌ಪಿ ಮತ್ತು 2000 ಆರ್‌ಪಿಎಂನಲ್ಲಿ 300 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೋಂಡಾ ಸಿವಿಕ್‌ನಲ್ಲಿರುವ ಐ-ಡಿಟಿಇಸಿ ಡೀಸೆಲ್ ಎಂಜಿನ್ ಬ್ರ್ಯಾಂಡ್‌ನ ಅರ್ಥ್ ಡ್ರೀಮ್ ಟೆಕ್ನಾಲಜಿ ಸರಣಿಯ ಭಾಗವಾಗಿದೆ. ಈ ಡೀಸೆಲ್ ಎಂಜಿನ್ ಉತ್ತಮ ಕಾರ್ಯಕ್ಷಮತೆ ಮತ್ತು ಗರಿಷ್ಠ ದಕ್ಷತೆಯನ್ನು ನೀಡುತ್ತದೆ. ಹೊಸ ಹೋಂಡಾ ಸಿವಿಕ್ ಡೀಸೆಲ್ ಆವೃತ್ತಿಯು ಪ್ರತಿ ಲೀಟರ್ ಗೆ 23.9 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌ನ ನಿರ್ದೇಶಕ ರಾಜೇಶ್ ಗೋಯೆಲ್ ಅವರು ಮಾತನಾಡಿ, ಹೋಂಡಾ ತನ್ನ ಇತ್ತೀಚಿನ ಮತ್ತು ಸುಧಾರಿತ ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಒಳಗೊಂಡಿರುವ ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತೇವೆ. ಈ ಸೆಡಾನ್ ಅನ್ನು ಡೀಸೆಲ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಿದ್ದೇವೆ.

ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿರಲಿದೆ. ಈ ಹೊಸ ಸಿವಿಕ್ ಡೀಸೆಲ್ ಆವೃತ್ತಿಯಲ್ಲಿ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಿದ್ದೇವೆ ಎಂದು ಹೇಳಿದರು.
MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಬಿಎಸ್ 6 ಅಪ್‌ಡೇಟ್‌ನ ಹೊರತಾಗಿ ಹೋಂಡಾ ಸಿವಿಕ್‌ನ ಎರಡೂ ರೂಪಾಂತರಗಳಲ್ಲಿ ಕರ್ಟೈನ್ ಏರ್‌ಬ್ಯಾಗ್‌ಗಳೊಂದಿಗೆ ಬಿಡುಗಡೆಗೊಳಿಸಿದೆ. ಈ ಸೆಡಾನ್ ನಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಹೋಂಡಾ ಸಿವಿಕ್ ಡೀಸೆಲ್ ಆವೃತ್ತಿಯ ಎರಡು ರೂಪಾಂತರಗಳಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರುಗಳನ್ನು ಅಳವಡಿಸಲಾಗಿದೆ. ಈ ಹೊಸ ಹೋಂಡಾ ಸಿವಿಕ್ ಡೀಸೆಲ್ ಆವೃತ್ತಿಯಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್‌ಲೈಟ್ ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳನ್ನು ಅಳವಡಿಸಲಾಗಿದೆ.
MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಇನ್ನು ಈ ಹೊಸ ಸಿವಿಕ್ ಡೀಸೆಲ್ ಆವೃತ್ತಿಯಲ್ಲಿ ಇನ್ಫೋಟೈನ್‌ಮೆಂಟ್ ಸಿಸ್ಟಂ, ಡ್ಯುಯಲ್-ಜೋನ್ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ಎಲೆಕ್ಟ್ರಿಕ್ ಸನ್‌ರೂಫ್ ಸೇರಿದಂತೆ ಹಲವಾರು ಫಿಚರುಗಳನ್ನು ಅಳವಡಿಸಲಾಗಿದೆ.

ಹೋಂಡಾ ಸಿವಿಕ್ ಭಾರತೀಯ ಮಾರುಕಟ್ಟೆಯ ಪ್ರೀಮಿಯಂ ಸೆಡಾನ್ ವಿಭಾಗದಲ್ಲಿ ಜನಪ್ರಿಯ ಮಾದರಿಯಾಗಿದೆ. ಈ ಹೊಸ ಹೋಂಡಾ ಸಿವಿಕ್ ಡೀಸೆಲ್ ಆವೃತ್ತಿಯು ಸ್ಕೋಡಾ ಆಕ್ಟೀವಿಯಾ ಕಾರಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications