ದೀಪಾವಳಿ ಸಂಭ್ರಮಕ್ಕಾಗಿ ಸಿಆರ್-ವಿ ಸ್ಪೆಷಲ್ ಎಡಿಷನ್ ಬಿಡುಗಡೆಗೊಳಿಸಿದ ಹೋಂಡಾ

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಪ್ರಮುಖ ಸಿಆರ್-ವಿ ಎಸ್‌ಯುವಿಯ ಹೊಸ ಸ್ಪೆಷಲ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೋಂಡಾ ಸಿಆರ್-ವಿ ಸ್ಪೆಷಲ್ ಎಡಿಷನ್ ಎಸ್‌ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿ ರೂ.29.50 ಲಕ್ಷಗಳಾಗಿದೆ.

ದೀಪಾವಳಿ ಸಂಭ್ರಮಕ್ಕಾಗಿ ಸಿಆರ್-ವಿ ಸ್ಪೆಷಲ್ ಎಡಿಷನ್ ಬಿಡುಗಡೆಗೊಳಿಸಿದ ಹೋಂಡಾ

ಹೊಸ ಹೋಂಡಾ ಸಿಆರ್-ವಿ ಸ್ಪೆಷಲ್ ಎಡಿಷನ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಸೀಮಿತ ಸಂಖ್ಯೆಯಲ್ಲಿ ಲಭ್ಯವಿರುತ್ತದೆ. ಈ ಸ್ಪೆಷಲ್ ಎಡಿಷನ್ ಸಿಆರ್-ವಿ ಪ್ರಸ್ತುತ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿರುವ ಫೇಸ್‌ಲಿಫ್ಟೆಡ್-ಎಸ್‍ಯುವಿಯನ್ನು ಆಧರಿಸಿದೆ. ಹೊಸ ಹೋಂಡಾ ಸಿಆರ್-ವಿ ಸ್ಪೆಷಲ್ ಎಡಿಷನ್ ಎಸ್‌ಯುವಿ ಸ್ವಲ್ಪ ಮರುವಿನ್ಯಾಸಗೊಳಿಸಲಾದ ಮುಂಭಾಗದ ಫಾಸಿಕವನ್ನು ಹೊಂದಿದೆ.

ದೀಪಾವಳಿ ಸಂಭ್ರಮಕ್ಕಾಗಿ ಸಿಆರ್-ವಿ ಸ್ಪೆಷಲ್ ಎಡಿಷನ್ ಬಿಡುಗಡೆಗೊಳಿಸಿದ ಹೋಂಡಾ

ಸಾಮಾನ್ಯ ಮಾದರಿಯಲ್ಲಿ ಕಂಡುಬರುವ ಕ್ರೋಮ್-ಫಿನಿಶಿಂಗ್ ಯುನಿಟ್ ಬದಲಿಸುವ ಹೊಸ ಗ್ಲಾಷ್ ಬ್ಯಾಕ್ ಗ್ರಿಲ್ ಅನ್ನು ಇದು ಒಳಗೊಂಡಿದೆ. ಮುಂಭಾಗದ ಬಂಪರ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ ಮತ್ತು ಇದು ಅಗ್ರೇಸಿವ್ ಲುಕ್ ಅನ್ನು ನೀಡುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ದೀಪಾವಳಿ ಸಂಭ್ರಮಕ್ಕಾಗಿ ಸಿಆರ್-ವಿ ಸ್ಪೆಷಲ್ ಎಡಿಷನ್ ಬಿಡುಗಡೆಗೊಳಿಸಿದ ಹೋಂಡಾ

ಎಸ್‍ಯುವಿಯ ಹಿಂಭಾಗದಲ್ಲಿ ಪ್ರೀಮಿಯಂ ಲುಕ್ ಹೆಚ್ಚಿಸುವ ಬಂಪರ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ. ಇದು ಎಲ್ಇಡಿ ಕಾಂಬಿನೇಶನ್ ಲ್ಯಾಂಪ್‌ಗಳನ್ನು ಮತ್ತು ಬೂಟ್-ಲಿಡ್ ಉದ್ದಕ್ಕೂ ಚಲಿಸುವ ಕ್ರೋಮ್ ಸ್ಟ್ರಿಪ್ ಅನ್ನು ಪಡೆಯುತ್ತದೆ.

ದೀಪಾವಳಿ ಸಂಭ್ರಮಕ್ಕಾಗಿ ಸಿಆರ್-ವಿ ಸ್ಪೆಷಲ್ ಎಡಿಷನ್ ಬಿಡುಗಡೆಗೊಳಿಸಿದ ಹೋಂಡಾ

ಈ ಸಿಆರ್-ವಿ ಸ್ಪೆಷಲ್ ಎಡಿಷನ್ ಎಸ್‍ಯುವಿಯಲ್ಲಿ 18 ಇಂಚಿನ ಡ್ಯುಯಲ್-ಟೋನ್ ಡೈಮಂಡ್-ಕಟ್ ಅಲಾಯ್ ವ್ಹೀಲ್‌ಗಳನ್ನು ಸಹ ಹೊಂದಿದೆ. ಈ ಸ್ಪೆಷಲ್ ಎಡಿಷನ್ ಮಾದರಿಯಲ್ಲಿ ಮಾಡಿದ ಎಲ್ಲಾ ಹೊರಭಾಗದ ಬದಲಾವಣೆಗಳ ಹೊರತಾಗಿಯೂ ಓವರ್ ಸಿಲೂಯೆಟ್ ಸ್ಟ್ಯಾಂಡರ್ಡ್ ಮಾದರಿಯಿಂದ ಬದಲಾಗದೆ ಉಳಿದಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ದೀಪಾವಳಿ ಸಂಭ್ರಮಕ್ಕಾಗಿ ಸಿಆರ್-ವಿ ಸ್ಪೆಷಲ್ ಎಡಿಷನ್ ಬಿಡುಗಡೆಗೊಳಿಸಿದ ಹೋಂಡಾ

ಸಿಆರ್-ವಿ ಸ್ಪೆಷಲ್ ಎಡಿಷನ್ ಮಾದರಿಯಲ್ಲಿ ತನ್ನ ಬೋಲ್ಡ್ ಮತ್ತು ಬುಚ್ ನಿಲುವನ್ನು ಮುಂದುವರಿಸಿದೆ. ಇನ್ನು ಸಿಆರ್-ವಿ ಸ್ಪೆಷಲ್ ಎಡಿಷನ್ ಮಾದರಿಯ ಇಂಟಿರಿಯರ್ ನಲ್ಲಿ ಸಿಆರ್-ವಿ ಸ್ಟ್ಯಾಂಡರ್ಡ್ ರೂಪಾಂತರದ ಮೇಲೆ ಒಂದೆರಡು ಹೆಚ್ಚುವರಿ ಫೀಚರ್ ಗಳನ್ನು ಪಡೆಯುತ್ತದೆ.

ದೀಪಾವಳಿ ಸಂಭ್ರಮಕ್ಕಾಗಿ ಸಿಆರ್-ವಿ ಸ್ಪೆಷಲ್ ಎಡಿಷನ್ ಬಿಡುಗಡೆಗೊಳಿಸಿದ ಹೋಂಡಾ

ಇದರಲ್ಲಿ ಕಾರ್ನರಿಂಗ್ ಲೈಟ್ಸ್, ಮುಂಭಾಗದ ಪಾರ್ಕಿಂಗ್ ಸೆನಾಸ್ಸ್, 4-ವೇ ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಪ್ಯಾಸಂಜರ್ ಸೀಟುಗಳು, ಹ್ಯಾಂಡ್ಸ್-ಫ್ರೀ ಟೈಲ್‌ಗೇಟ್ ಮತ್ತು ಆಟೋಮ್ಯಾಟಿಕ್ ಒಆರ್‌ವಿಎಂಗಳು ಒಳಗೊಂಡಿದೆ. ಉಳಿದಂತೆ ಸ್ಟ್ಯಾಂಡರ್ಡ್ ಮಾದರಿಯಿಂದ ಹಲವು ಫೀಚರ್ ಗಳನ್ನು ಎರವಲು ಪಡೆಯಲಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ದೀಪಾವಳಿ ಸಂಭ್ರಮಕ್ಕಾಗಿ ಸಿಆರ್-ವಿ ಸ್ಪೆಷಲ್ ಎಡಿಷನ್ ಬಿಡುಗಡೆಗೊಳಿಸಿದ ಹೋಂಡಾ

ಇದರಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋವನ್ನು ಹೊಂದಿರುವ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ನೋರಮಿಕ್ ಸನ್‌ರೂಫ್, ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್, ಡ್ಯುಯಲ್-ಜೋನ್ ಕ್ಲೈಮೆಂಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ರಿಮೋಟ್ ಎಂಜಿನ್ ಸ್ಟಾರ್ಟ್ ಮತ್ತು ಇತರ ಫೀಚರ್ ಗಳನ್ನು ಹೊಂದಿದೆ.

ದೀಪಾವಳಿ ಸಂಭ್ರಮಕ್ಕಾಗಿ ಸಿಆರ್-ವಿ ಸ್ಪೆಷಲ್ ಎಡಿಷನ್ ಬಿಡುಗಡೆಗೊಳಿಸಿದ ಹೋಂಡಾ

ಸಿಆರ್-ವಿ ಸ್ಪೆಷಲ್ ಎಡಿಷನ್ ಎಸ್‍ಯುವಿಯಲ್ಲಿ 2.0-ಲೀಟರ್, ನಾಲ್ಕು ಸಿಲಿಂಡರ್, ಎಸ್‌ಒಹೆಚ್‌ಸಿ ಐ-ವಿಟಿಇಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6,500 ಆರ್‌ಪಿಎಂನಲ್ಲಿ 154 ಬಿಹೆಚ್‌ಪಿ ಪವರ್ ಮತ್ತು 4,300 ಆರ್‌ಪಿಎಂನಲ್ಲಿ 189 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಇದರೊಂದಿಗೆ ಸಿವಿಟ್ ಯುನಿಟ್ ಅನ್ನು ಜೋಡಿಸಲಾಗಿದೆ.

ದೀಪಾವಳಿ ಸಂಭ್ರಮಕ್ಕಾಗಿ ಸಿಆರ್-ವಿ ಸ್ಪೆಷಲ್ ಎಡಿಷನ್ ಬಿಡುಗಡೆಗೊಳಿಸಿದ ಹೋಂಡಾ

ಹೋಂಡಾ ಸಿಆರ್-ವಿ ಸ್ಪೆಷಲ್-ಎಡಿಷನ್ ಮಾದರಿಯು ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ಕಾಸ್ಮೆಟಿಕ್ ಅಪ್ಡೇಟ್ ಗಳನ್ನು ಪಡೆದುಕೊಂಡಿದೆ. ಕಂಪನಿಯು ಈ ಹೋಂಡಾ ಸಿಆರ್-ವಿ ಸ್ಪೆಷಲ್-ಎಡಿಷನ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುತ್ತದೆ. ಹಬ್ಬದ ಸೀಸನ್ ನಲ್ಲಿ ಮಾರಟವನ್ನು ಹೆಚ್ಚಿಸಲು ಸಿಆರ್-ವಿ ಎಸ್‌ಯುವಿಯ ಹೊಸ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆಗೊಳಿಸಲಾಗಿದೆ.

Most Read Articles

Kannada
Read more on ಹೋಂಡಾ honda
English summary
Honda CR-V Special Edition Launched In India. Read In Kannada.
Story first published: Wednesday, October 28, 2020, 13:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X