ಮತ್ತಷ್ಟು ತಡವಾಗಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ ಬಿಡುಗಡೆ

ಹೋಂಡಾ ಕಂಪನಿಯು ತನ್ನ ಹೊಸ ತಲೆಮಾರಿನ ಹೆಚ್‌ಆರ್-ವಿ ಮಧ್ಯಮ ಗಾತ್ರದ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೋಂಡಾ ಕಂಪನಿಯು ಹೆಚ್‌ಆರ್-ವಿ ಎಸ್‍ಯುವಿಯ ಬಿಡುಗಡೆಯನ್ನು ಮುಂದೂಡಿಕೆ ಮಾಡಲಾಗಿದೆ.

ಮತ್ತಷ್ಟು ತಡವಾಗಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ ಬಿಡುಗಡೆ

ಹೋಂಡಾ ಕಂಪನಿಯು ಹೊಸ ಹೆಚ್‌ಆರ್-ವಿ ಎಸ್‍ಯುವಿಯನ್ನು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದ್ದರು. ಆದರೆ ಇದೀಗ ಈ ಎಸ್‍ಯುವಿಯ ಬಿಡುಗಡೆಯನ್ನು ಮುಂದಿನ ವರ್ಷದ ಮೇ ತಿಂಗಳಿಗೆ ಮುಂದೂಡಲಾಗಿದೆ. ಆದರೆ ಈ ಎಸ್‍ಯುವಿಯ ಬಿಡುಗಡೆಯನ್ನು ಮುಂದೂಡಿಕೆ ಮಾಡಿರುವುದರ ಹಿಂದಿನ ಕಾರಣವು ಇನ್ನು ತಿಳಿದುಬಂದಿಲ್ಲ. ಈ ಹೊಸ ಹೆಚ್‌ಆರ್-ವಿ ಎಸ್‍ಯುವಿಯು 4,400 ಎಂಎಂ ಉದ್ದ, 1,790 ಎಂಎಂ ಅಗಲ ಮತ್ತು 1,590 ಎಂಎಂ ಎತ್ತರವನ್ನು ಹೊಂದಿದೆ.

ಮತ್ತಷ್ಟು ತಡವಾಗಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ ಬಿಡುಗಡೆ

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹೆಚ್‌ಆರ್-ವಿ ಎಸ್‍ಯುವಿ 4,320 ಎಂಎಂ ಉದ್ದ, 1,770 ಎಂಎಂ ಅಗಲ ಮತ್ತು 1,580 ಎತ್ತರವನ್ನು ಹೊಂದಿದೆ, ಇನ್ನು 2,610 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಮತ್ತಷ್ಟು ತಡವಾಗಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ ಬಿಡುಗಡೆ

ಹೊಸ ಹೆಚ್‌ಆರ್-ವಿ ಎಸ್‍ಯುವಿ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದರೊಂದಿಗೆ ಮೈಲ್ಡ್ -ಹೈಬ್ರಿಡ್ ತಂತ್ರಜ್ಞಾನದ ಆಯ್ಕೆಯನ್ನು ನೀಡಲಾಗಿದೆ. ಹೋಂಡಾ ಕಾರುಗಳ ಸರಣಿಯಲ್ಲಿ ಹೆಚ್‌ಆರ್-ವಿ ಎಸ್‍ಯುವಿಯು ಸಿಆರ್-ವಿ ಗಿಂತ ಕೆಳಗಿನ ಸ್ಥಾನದಲ್ಲಿರುತ್ತದೆ.

ಮತ್ತಷ್ಟು ತಡವಾಗಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ ಬಿಡುಗಡೆ

ಇನ್ನು ಹೋಂಡಾ ಕಂಪನಿಯು ತನ್ನ ಬಹುನಿರೀಕ್ಷಿತ 2020ರ ಸಿಟಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ.ಭಾರತದಲ್ಲಿ ಕರೋನಾ ಭೀತಿಯಿಂದ ದೇಶಾದ್ಯಂತ ಲಾಕ್‍ಡೌನ್ ಮುಂದುವರಿಸಿರುವುದರಿಂದ ಹೊಸ ಹೋಂಡಾ ಸಿಟಿ ಕಾರಿನ ಬಿಡುಗಡೆಯು ಮತ್ತಷ್ಟು ತಡವಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಮತ್ತಷ್ಟು ತಡವಾಗಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ ಬಿಡುಗಡೆ

ಆದರೆ ಈ ಹೊಸ ಕಾರನ್ನು ಭಾರತೀಯ ಮಾರುಕಟ್ಟೆಯಲಿ ಈ ತಿಂಗಳು ಬಿಡುಗಡೆಗೊಳಿಸುವ ಸಾದ್ಯತೆಗಳಿದೆ. ಹೊಸ ಹೋಂಡಾ ಸಿಟಿ 4,549 ಎಂಎಂ ಉದ್ದ, 1,748 ಎಂಎಂ ಅಗಲ, 1,489 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. 2020ರ ಹೋಂಡಾ ಸಿಟಿ ಪ್ರಸ್ತುತ ಮಾದರಿಗಿಂತ ಹೆಚ್ಚು ಉದ್ದ ಮತ್ತು ಅಗಲವನ್ನು ಹೊಂದಿದೆ.

ಮತ್ತಷ್ಟು ತಡವಾಗಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ ಬಿಡುಗಡೆ

ಹೊಸ ಹೋಂಡಾ ಸಿಟಿ ಕಾರಿನಲ್ಲಿ 1.5 ಎಲ್ ಐ-ವಿಟಿಇಸಿ ಡಿಒಹೆಚ್‌ಸಿ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 600 ಆರ್‌ಪಿಎಂನಲ್ಲಿ 121 ಬಿಹೆಚ್‌ಪಿ ಪವರ್ ಮತ್ತು 4,300 ಆರ್‌ಪಿಎಂನಲ್ಲಿ 145 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಹೊಸ 7-ಸ್ಪೀಡ್ ಆಟೋಮ್ಯಾಟಿಕ್ ಸಿವಿಟಿ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

MOST READ: ಹೊಸ ಬಣ್ಣಗಳ ಆಯ್ಕೆಯನ್ನು ಹೊಂದಿದ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್

ಮತ್ತಷ್ಟು ತಡವಾಗಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ ಬಿಡುಗಡೆ

ಇನ್ನು ಹೊಸ ಹೋಂಡಾ ಸಿಟಿ ಕಾರಿನಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 99 ಬಿಹೆಚ್‍ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ.

ಮತ್ತಷ್ಟು ತಡವಾಗಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ ಬಿಡುಗಡೆ

ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯು ಭಾರತೀಯ ರಸ್ತೆಗಳಲ್ಲಿ ಒಂದೆರಡು ಬಾರಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಈ ಹೆಚ್‌ಆರ್-ವಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ನಿಸ್ಸಾನ್ ಕಿಕ್ಸ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

More from DriveSpark

Article Published On: Friday, June 26, 2020, 16:31 [IST]
English summary
New-Gen Honda HR-V Debut Postponed To May 2021. Read In Kannada.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+