ನಟ ಶಾರುಖ್ ಖಾನ್ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ

ಹ್ಯುಂಡೈ ಇಂಡಿಯಾ ಕಂಪನಿಯು ಮೊನ್ನೆಯಷ್ಟೇ ತನ್ನ ಜನಪ್ರಿಯ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಯಾದ ಕ್ರೆಟಾ ನ್ಯೂ ಜನರೇಷನ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಮೊದಲ ಯುನಿಟ್ ಅನ್ನು ಹ್ಯುಂಡೈ ಕಂಪನಿಯ ರಾಯಭಾರಿ ನಟ ಶಾರುಖ್ ಖಾನ್ ಅವರಿಗೆ ವಿತರಣೆ ಮಾಡಿದೆ.

ನಟ ಶಾರುಖ್ ಖಾನ್ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಹೊಸ ಕ್ರೆಟಾ ಕಾರನ್ನು ಅನಾವರಣಗೊಳಿಸಿದ್ದ ನಟ ಶಾರುಖ್ ಖಾನ್ ಹೊಸ ಕಾರಿನ ಡಿಸೈನ್‌ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ಇದೀಗ ಮೊದಲ ಯನಿಟ್ ಅನ್ನು ತಮ್ಮದಾಗಿಸಿಕೊಂಡಿದ್ದು, ಹೊಸದಾಗಿ ಪರಿಚಯಿಸಲಾಗಿರುವ ಅಧಿಕ ಬಿಎಚ್‌ಪಿ ಪ್ರೇರಿತ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ನಟ ಶಾರುಖ್ ಖಾನ್ ಇಷ್ಟಪಟ್ಟು ಖರೀದಿಸಿದ್ದಾರೆ.

ನಟ ಶಾರುಖ್ ಖಾನ್ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ

ಇನ್ನು ಹೊಸ ಕ್ರೆಟಾ ಕಾರು ಗ್ರಾಹಕರ ಬೇಡಿಕೆಯೆಂತೆ ಒಟ್ಟು 5 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಬಿಎಸ್-6 ವೈಶಿಷ್ಟ್ಯತೆಯ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.

ನಟ ಶಾರುಖ್ ಖಾನ್ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ

ಹೊಸ ಕ್ರೆಟಾ ಕಾರು ದೆಹಲಿ ಎಕ್ಸ್‌ಶೋರೂಂ ಆರಂಭಿಕವಾಗಿ ರೂ. 9.99 ಲಕ್ಷ ಬೆಲೆ ಪಡೆದುಕೊಂಡಿದ್ದು, ಟಾಪ್ ಎಂಡ್ ಮಾದರಿಯು ರೂ. 17.20 ಲಕ್ಷ ಬೆಲೆ ಪಡೆದುಕೊಳ್ಳುವ ಮೂಲಕ ಕಿಯಾ ಸೆಲ್ಟೊಸ್‌ಗೆ ಸರಿಸಮನಾಗಿ ಮಾರುಕಟ್ಟೆ ಪ್ರವೇಶಿಸಿದೆ.

ನಟ ಶಾರುಖ್ ಖಾನ್ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ

ಹೊಸ ಎಂಜಿನ್ ಆಯ್ಕೆಯನ್ನು ಸಹೋದರ ಸಂಸ್ಥೆಯಾದ ಕಿಯಾ ಮೋಟಾರ್ಸ್‌ನಿಂದ ಎರವಲು ಪಡೆಯಲಾಗಿದ್ದು, ಸೆಲ್ಟೊಸ್ ಕಾರಿನಂತೆಯೇ ಕ್ರೆಟಾ ಬಲಿಷ್ಠ ಎಂಜಿನ್ ಹೊಂದಿರುವ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಯಾಗಿದೆ. ಇದರಿಂದ ಕ್ರೆಟಾ ಆವೃತ್ತಿಯಲ್ಲಿ ಈ ಹಿಂದೆ ನೀಡಲಾಗುತ್ತಿದ್ದ 1.6-ಲೀಟರ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಅನ್ನು ತೆಗೆದುಹಾಕಲಾಗಿದ್ದು, ಸಾಮಾನ್ಯ ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಖರೀದಿಸಬಹುದಾಗಿದೆ.

ನಟ ಶಾರುಖ್ ಖಾನ್ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ

1.5-ಲೀಟರ್ ಪೆಟ್ರೋಲ್ ಆವೃತ್ತಿಯು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.5-ಲೀಟರ್ ಡೀಸೆಲ್ ಮಾದರಿಯು ಸಹ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ನಟ ಶಾರುಖ್ ಖಾನ್ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ

ಇನ್ನು 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯು 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್‌ನೊಂದಿಗೆ 140-ಬಿಎಚ್‌ಪಿ ಉತ್ಪಾದನೆ ಮಾಡಲಿದ್ದು, ಕ್ರೆಟಾ ಆವೃತ್ತಿಯಲ್ಲೇ ಇದು ಹೈ ಎಂಡ್ ಆವೃತ್ತಿಯಾಗಿ ಮಾರಾಟಗೊಳ್ಳಲಿದೆ.

ನಟ ಶಾರುಖ್ ಖಾನ್ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ

ಇದರೊಂದಿಗೆ ಹೊಸ ಕ್ರೆಟಾ ಕಾರಿನಲ್ಲಿ ಈ ಬಾರಿ ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಬದಲಾವಣೆಗೊಳಿಸಲಾಗಿದ್ದು, ಹೊಸದಾಗಿ ವಿನ್ಯಾಸಗೊಳಿಸಲಾದ ಕಾಸ್‌ಕ್ಲಾಡಿಂಗ್ ಗ್ರಿಲ್, ಮರುವಿನ್ಯಾಸಗೊಳಿಸಿದ ಎಲ್ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ಸ್ ಜೊತೆ ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಫಾಗ್ ಲ್ಯಾಂಪ್ ಒಳಗೊಂಡಿರುವ ಫ್ರಂಟ್ ಬಂಪರ್ ಮತ್ತು ಬಂಪರ್ ಸುರಕ್ಷತೆಗಾಗಿ ಸಿಲ್ವರ್ ಸ್ಕಫ್ ಪ್ಲೇಟ್ ಜೋಡಿಸಲಾಗಿದೆ.

ನಟ ಶಾರುಖ್ ಖಾನ್ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ

ಇದರೊಂದಿಗೆ ಹ್ಯುಂಡೈ ಸಂಸ್ಥೆಯು ಹೊಸ ಕಾರಿನಲ್ಲಿ 35ಕ್ಕೂ ಹೆಚ್ಚು ಫೀಚರ್ಸ್ ಒಂದೇ ಸೂರಿನಡಿ ನಿಯಂತ್ರಿಸಬಲ್ಲ ಬ್ಲ್ಯೂ ಲಿಂಕ್ ತಂತ್ರಜ್ಞಾನವನ್ನು ಜೋಡಿಸಲಾಗಿದ್ದು, ವೈರ್‌ಲೆಸ್ ಚಾರ್ಜರ್, ವೆಂಟಿಲೆಟೆಡ್ ಫ್ರಂಟ್ ಸೀಟುಗಳು, ಕೀ ಲೆಸ್ ಎಂಟ್ರಿ, ಫುಶ್ ಬಟನ್ ಸ್ಟಾರ್ಟ್/ಸ್ಟಾಪ್, ಪನಾರೊಮಿಕ್ ಸನ್‌ರೂಫ್, ಆ್ಯಂಬಿಯೆಂಟ್ ಲೈಟಿಂಗ್ಸ್ ನೀಡಲಾಗಿದೆ.

ನಟ ಶಾರುಖ್ ಖಾನ್ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ

ಕ್ರೆಟಾ ಹೊಸ ಆವೃತ್ತಿಯಲ್ಲಿ ಪ್ರೀಮಿಯಂ ಫೀಚರ್ಸ್‌ಗಳ ಜೊತೆಗೆ ಪ್ರಯಾಣಿಕ ಸುರಕ್ಷತೆ ಹೆಚ್ಚಿನ ಒತ್ತು ನೀಡಲಾಗಿದ್ದು, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, 4 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಪೆಡಲ್ ಶಿಫ್ಟರ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಸೆನ್ಸಾರ್, ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಸೌಲಭ್ಯವಿದೆ.

Most Read Articles

Kannada
English summary
New Hyundai Creta delivery starts SRK is the first owner details, Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X