ಹೊಸ ಹ್ಯುಂಡೈ ಕ್ರೆಟಾ ಕಾರು ಬಿಡುಗಡೆ ದಿನಾಂಕ ಬಹಿರಂಗ

ಹ್ಯುಂಡೈ ಇಂಡಿಯಾ ಕಂಪನಿಯು ಇತ್ತೀಚೆಗೆ ಹೊಸ ಕ್ರೆಟಾ ಕಾರನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಾಗಿತ್ತು. ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.

ಹೊಸ ಹ್ಯುಂಡೈ ಕ್ರೆಟಾ ಕಾರು ಬಿಡುಗಡೆ ದಿನಾಂಕ ಬಹಿರಂಗ

ಹ್ಯುಂಡೈ ಕ್ರೆಟಾ ಕಾರನ್ನು ಕಳೆದ ವರ್ಷ ಶಾಂಘೈ ಮೋಟಾರ್‍ ಶೋನಲ್ಲಿ ಪ್ರದರ್ಶಿಸಲಾಗಿತ್ತು. ಹ್ಯುಂಡೈ ಕ್ರೆಟಾ ಕಾಂಪ್ಯಾಕ್ಟ್ ಎಸ್‍ಯುವಿಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಕಾಂಪ್ಯಾಕ್ಟ್ ಎಸ್‍‍ಯುವಿಯ ಸೆಗ್‍‍ಮೆಂಟ್‍‍ನಲ್ಲಿ ಹೆಚ್ಚಿನ ಪೈಪೋಟಿ ಇದೆ. ಇದೇ ಕಾರಣದಿಂದ ಹೊಸ ಹ್ಯುಂಡೈ ಕ್ರೆಟಾ ಕಾರು ಹೊಸ ವಿನ್ಯಾಸವನ್ನು ಮತ್ತು ನೂತನ ಪೀಚರ್ಸ್‍‍ಗಳನ್ನು ಅಳವಡಿಸಿದೆ. ಇದೀಗ ಹೊಸ ಹ್ಯುಂಡೈ ಕ್ರೆಟಾ ಕಾರಿನ ಬಿಡುಗಡೆ ದಿನಾಂಕವು ಬಹಿರಂಗವಾಗಿದೆ.

ಹೊಸ ಹ್ಯುಂಡೈ ಕ್ರೆಟಾ ಕಾರು ಬಿಡುಗಡೆ ದಿನಾಂಕ ಬಹಿರಂಗ

ಮುಂದಿನ ಮಾರ್ಚ್ ತಿಂಗಳ 17ರಂದು ಈ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ. ಕೆಲವು ಡೀಲರ್‍‍ಗಳು ಹ್ಯುಂಡೈ ಕ್ರೆಟಾ ಕಾರಿಗಾಗಿ ಅಧಿಕೃತವಾಗಿ ಅಲ್ಲದೆ ಬುಕ್ಕಿಂಗ್ ಅನ್ನು ಸ್ವಿಕರಿಸಲು ಪ್ರಾರಂಭಿಸಿದ್ದಾರೆ. ಕಳೆದ ವರ್ಷ ಹ್ಯುಂಡೈ ಕ್ರೆಟಾ ಕಾರನ್ನು ಚೀನಾದಲ್ಲಿ ಹೊಸ ತಲೆಮಾರಿನ ಐ‍ಎಕ್ಸ್ 25 ಎಂಬ ಹೆಸರಿನಲ್ಲಿ ಅನಾವರಣಗೊಳಿಸಲಾಗಿತ್ತು.

ಹೊಸ ಹ್ಯುಂಡೈ ಕ್ರೆಟಾ ಕಾರು ಬಿಡುಗಡೆ ದಿನಾಂಕ ಬಹಿರಂಗ

ಈ ಹೊಸ ಕ್ರೆಟಾ ಎಸ್‍‍ಯುವಿಯು ಎಕ್ಸ್ ಟಿರಿಯರ್ ಹಾಗೂ ಇಂಟಿರಿಯರ್‍‍ನಲ್ಲಿ ಮಾತ್ರ ಬದಲಾವಣೆಗಳನ್ನು ಹೊಂದದೇ, ಎಂಜಿನ್‍‍ನಲ್ಲಿಯೂ ಬದಲಾವಣೆ ಹೊಂದಿದೆ. ಹೊಸ ಕ್ರೆಟಾ ಎಸ್‍‍ಯುವಿಯಲ್ಲಿ ಬಿ‍ಎಸ್ 6 ಎಂಜಿನ್ ಅಳವಡಿಸಲಾಗಿದೆ.

ಹೊಸ ಹ್ಯುಂಡೈ ಕ್ರೆಟಾ ಕಾರು ಬಿಡುಗಡೆ ದಿನಾಂಕ ಬಹಿರಂಗ

ಹ್ಯುಂಡೈ ಕ್ರೆಟಾ ಹೊಸ ವಿನ್ಯಾಸವನ್ನು ಹೊಂದಿದ್ದು, ಜನರನ್ನು ತನ್ನತ್ತ ಸೆಳೆಯುವ ಲುಕ್ ಅನ್ನು ಹೊಂದಿದೆ. ಮುಂಭಾಗದಲ್ಲಿರುವ ಹ್ಯುಂಡೈನ ಕ್ಯಾಸ್ಕೇಡಿಂಗ್ ಗ್ರಿಲ್ ಹೆಚ್ಚು ಗಮನ ಸೆಳೆದರೂ, ಹೆಡ್‍‍ಲೈಟ್ ಮತ್ತಷ್ಟು ಗಮನ ಸೆಳೆಯುತ್ತದೆ.

ಹೊಸ ಹ್ಯುಂಡೈ ಕ್ರೆಟಾ ಕಾರು ಬಿಡುಗಡೆ ದಿನಾಂಕ ಬಹಿರಂಗ

ಸ್ಪ್ಲಿಟ್ ಹೆಡ್‍‍‍ಲೈಟ್ ಸ್ಲಿಟ್ ರೀತಿಯ ಎಲ್ಇಡಿ ಡಿಆರ್‍ಎಲ್ ಅನ್ನು ಹೊಂದಿದೆ. ಹೆಡ್‌ಲೈಟ್ ಕ್ಲಸ್ಟರ್ ಅನ್ನು ಎಲ್ಇಡಿ ಹೆಡ್‌ಲೈಟ್‌ಗಳಿಂದ ತಯಾರಿಸಲಾಗಿದ್ದು, ಅದರ ಕೆಳಗೆ ಹೊಸ ಲುಕ್‍‍ನ ಫಾಗ್ ಲ್ಯಾಂಪ್‍‍ಗಳಿವೆ. ಬಂಪರ್‍‍ನ ಕೆಳಗೆ ಸ್ಕಫ್ ಪ್ಲೇಟ್‍‍ಗಳಿವೆ.

ಹೊಸ ಹ್ಯುಂಡೈ ಕ್ರೆಟಾ ಕಾರು ಬಿಡುಗಡೆ ದಿನಾಂಕ ಬಹಿರಂಗ

ಸ್ಕ್ವೇರ್ ಶೇಪಿನ ವ್ಹೀಲ್ ಆರ್ಕ್‍‍ಗಳು ಕ್ರೆಟಾಗೆ ಹೆಚ್ಚಿನ ಲುಕ್ ನೀಡುತ್ತವೆ. ಈ ಕಾರಿಗೆ ಡ್ಯುಯಲ್-ಟೋನ್ ಪೇಂಟ್ ಬಣ್ಣವನ್ನು ನೀಡಲಾಗಿದ್ದು, ಸಿಲ್ವರ್ ಬಣ್ಣವನ್ನು ಸಿ ಪಿಲ್ಲರ್‍‍‍ವರೆಗೂ ನೀಡಲಾಗಿದೆ. ಇದರಲ್ಲಿರುವ 17 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್‍‍ಗಳು ಗಮನ ಸೆಳೆಯುತ್ತವೆ.

ಹೊಸ ಹ್ಯುಂಡೈ ಕ್ರೆಟಾ ಕಾರು ಬಿಡುಗಡೆ ದಿನಾಂಕ ಬಹಿರಂಗ

ಹೊಸ ಕ್ರೆಟಾದ ಹಿಂಭಾಗದಲ್ಲಿ ಸ್ಪ್ಲಿಟ್ ಎಲ್‍ಇಡಿ ಟೇಲ್ ಲ್ಯಾಂಪ್‍‍ಗಳಿವೆ. ಹೊಸ ಕ್ರೆಟಾ ಹಳೆಯ ಕ್ರೆಟಾ ಕಾರಿಗಿಂತ ದೊಡ್ಡದಾಗಿದ್ದು, ಉದ್ದವಾದ ವ್ಹೀಲ್‍‍ಬೇಸ್‌ ಹೊಂದಿದೆ. ಹ್ಯುಂಡೈ ಕಂಪನಿಯು ಕ್ರೆಟಾದ ಇಂಟಿರಿಯರ್ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಹೊಸ ಹ್ಯುಂಡೈ ಕ್ರೆಟಾ ಕಾರು ಬಿಡುಗಡೆ ದಿನಾಂಕ ಬಹಿರಂಗ

ಚೀನಾದ ಐ‍ಎಕ್ಸ್25 ಕಾರಿನಲ್ಲಿರುವ ಕ್ಯಾಬಿನ್ ಅನ್ನು ಎಷ್ಟು ಪ್ರಮಾಣದಲ್ಲಿ ಹೊಸ ಕ್ರೆಟಾ ಕಾರಿನಲ್ಲಿ ನೀಡಲಾಗುವುದು ಎಂಬುದನ್ನು ಕಾದುನೋಡಬೇಕಿದೆ. ಚೀನಾ ಮಾರುಕಟ್ಟೆಯಲ್ಲಿರುವ ಐ‍ಎಕ್ಸ್ 25 ಟೆಸ್ಲಾ ಕಾರುಗಳಲ್ಲಿರುವಂತಹ 10.25-ಇಂಚಿನ ಪೋರ್ಟ್ ರೇಟ್ ರೀತಿಯ ಟಚ್‌ಸ್ಕ್ರೀನ್ ಹಾಗೂ ಡಿಜಿಟಲ್ ಡಯಲ್‌ಗಳನ್ನು ಹೊಂದಿದೆ.

ಹೊಸ ಹ್ಯುಂಡೈ ಕ್ರೆಟಾ ಕಾರು ಬಿಡುಗಡೆ ದಿನಾಂಕ ಬಹಿರಂಗ

ಹೊಸ ಕ್ರೆಟಾ ಕಾರಿನಲ್ಲಿ ಕಿಯಾ ಸೆಲ್ಟೋಸ್‍‍ನಲ್ಲಿರುವಂತಹ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 115 ಬಿ‍‍ಹೆಚ್‌ಪಿ ಪವರ್ ಉತ್ಪಾದಿಸುತ್ತದೆ. 1.5-ಲೀಟರಿನ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಹೊಂದಿರಲಿದೆ.

ಹೊಸ ಹ್ಯುಂಡೈ ಕ್ರೆಟಾ ಕಾರು ಬಿಡುಗಡೆ ದಿನಾಂಕ ಬಹಿರಂಗ

ಹ್ಯುಂಡೈ ಕ್ರೆಟಾದ ಇಂಟಿರಿಯರ್ ಹಾಗೂ ಉಳಿದ ವಿವರಗಳನ್ನು ಬಿಡುಗಡೆಗೂ ಮುನ್ನ ಬಹಿರಂಗಗೊಳಿಸಲಾಗುವುದು. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.10ಲಕ್ಷದಿಂದ-ರೂ.16 ಲಕ್ಷಗಳಾಗುವ ಸಾಧ್ಯತೆಗಳಿವೆ. ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕಿಯಾ ಸೆಲ್ಟೋಸ್‍‍ಗೆ ನೇರವಾಗಿ ಪೈಪೋಟಿ ನೀಡುತ್ತದೆ.

Article Published On: Wednesday, February 12, 2020, 11:26 [IST]
English summary
2020 Hyundai Creta launch date is 17 March. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+