ಕರೋನಾ ಎಫೆಕ್ಟ್- ನ್ಯೂ ಜನರೇಷನ್ ಕ್ರೆಟಾ ಬಿಡುಗಡೆಯ ವೇಳಾಪಟ್ಟಿಯಲ್ಲಿ ಬದಲಾವಣೆ

ಚೀನಾ ಸೇರಿದಂತೆ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಕರೋನಾ ವೈರಸ್ ಭಾರೀ ಆತಂಕ ಸೃಷ್ಠಿಸಿದ್ದು, ವೈರಸ್ ಹರಡದಂತೆ ಹಲವಾರು ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ನಡುವೆ ಹ್ಯುಂಡೈ ಸಂಸ್ಥೆಯು ತನ್ನ ಹೊಸ ಕ್ರೆಟಾ ಕಾರಿನ ಬಿಡುಗಡೆ ವಿಚಾರವಾಗಿ ಕೆಲವು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಕಾರು ಬಿಡುಗಡೆಯ ದಿನಾಂಕವನ್ನು ಬದಲಾವಣೆಗೊಳಿಸಿದೆ.

ಕರೋನಾ ಎಫೆಕ್ಟ್- ನ್ಯೂ ಜನರೇಷನ್ ಕ್ರೆಟಾ ಬಿಡುಗಡೆಯ ವೇಳಾಪಟ್ಟಿಯಲ್ಲಿ ಬದಲಾವಣೆ

ಇದೇ ತಿಂಗಳು 17ರಂದು ಹೊಸ ಕ್ರೆಟಾ ಕಾರನ್ನು ಅದ್ಧೂರಿಯಾಗಿ ಬಿಡುಗಡೆಗೊಳಿಸಲು ನಿರ್ಧರಿಸಿದ್ದ ಹ್ಯುಂಡೈ ಸಂಸ್ಥೆಯು ನಿಗದಿತ ದಿನಾಂಕ ಬದಲು ಒಂದು ದಿನ ಮೊದಲೇ ಬಿಡುಗಡೆಗೊಳಿಸಲು ಮುಂದಾಗಿದ್ದು, ಹೊಸ ಕಾರನ್ನು ಅತಿ ಸರಳವಾಗಿ ಬಿಡುಗಡೆಗೊಳಿಸುತ್ತಿದೆ. ಹೊಸ ಕಾರು ಬಿಡುಗಡೆಯ ಸಂದರ್ಭದಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ದೇಶ ಮತ್ತು ವಿದೇಶಿ ಮಾಧ್ಯಮ ಪ್ರತಿನಿಧಿಗಳು ಆಗಮಿಸುವ ನೀರಿಕ್ಷೆಯಿದ್ದು, ಈ ವೇಳೆ ವೈರಸ್ ಹರಡುವ ಸಾಧ್ಯತೆಗಳಿರುತ್ತವೆ.

ಕರೋನಾ ಎಫೆಕ್ಟ್- ನ್ಯೂ ಜನರೇಷನ್ ಕ್ರೆಟಾ ಬಿಡುಗಡೆಯ ವೇಳಾಪಟ್ಟಿಯಲ್ಲಿ ಬದಲಾವಣೆ

ಇದರಿಂದ ಅತಿ ಸರಳವಾಗಿ ಹೊಸ ಕಾರು ಮಾರಾಟಕ್ಕೆ ಅಧಿಕೃತ ಚಾಲನೆ ನೀಡಲು ಸಿದ್ದತೆ ನಡೆಸಿರುವ ಹ್ಯುಂಡೈ ಸಂಸ್ಥೆಯು, ಕ್ರೆಟಾ ನಂತರ ಬಿಡುಗಡೆಯಾಗಬೇಕಿದ್ದ ಟಕ್ಸನ್ ಫೇಸ್‌ಲಿಫ್ಟ್, ವೆರ್ನಾ ಫೇಸ್‌ಲಿಫ್ಟ್ ಮತ್ತು ಎಲಾಂಟ್ರಾ ಫೇಸ್‌ಲಿಫ್ಟ್ ಕಾರುಗಳನ್ನು ಸಹ ಶೀಘ್ರದಲ್ಲೇ ಬಿಡುಗಡೆ ಮಾಡಲು ಸುಳಿವು ನೀಡಿದೆ.

ಕರೋನಾ ಎಫೆಕ್ಟ್- ನ್ಯೂ ಜನರೇಷನ್ ಕ್ರೆಟಾ ಬಿಡುಗಡೆಯ ವೇಳಾಪಟ್ಟಿಯಲ್ಲಿ ಬದಲಾವಣೆ

ಇನ್ನು ದೆಹಲಿ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಕ್ರೆಟಾ ನ್ಯೂ ಜನರೇಷನ್ ಆವೃತ್ತಿಯು ಪ್ರತಿಸ್ಪರ್ಧಿ ಕಾರು ಮಾದರಿಯಾದ ಕಿಯಾ ಸೆಲ್ಟೊಸ್‌ಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಆವೃತ್ತಿಗಿಂತಲೂ ಸಾಕಷ್ಟು ಹೊಸತನದೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಕರೋನಾ ಎಫೆಕ್ಟ್- ನ್ಯೂ ಜನರೇಷನ್ ಕ್ರೆಟಾ ಬಿಡುಗಡೆಯ ವೇಳಾಪಟ್ಟಿಯಲ್ಲಿ ಬದಲಾವಣೆ

ಹೊಸ ಕಾರು ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭವಾದ ಕೇವಲ ಒಂದೇ ವಾರದಲ್ಲಿ 12 ಸಾವಿರಕ್ಕೂ ಹೆಚ್ಚು ಗ್ರಾಹಕರು ರೂ.50 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಸಲ್ಲಿಸಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು ಈ ಬಾರಿ ಒಟ್ಟು 3 ಎಂಜಿನ್‌ನೊಂದಿಗೆ 14 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಬಿಎಸ್-6 ಎಂಜಿನ್ ಹೊಂದಿರುವ ಹೊಸ ಕಾರಿನಲ್ಲಿ ಈ ಬಾರಿ ಸಾಕಷ್ಟು ಬದಲಾವಣೆಗೊಳಿಸಲಾಗಿದ್ದು, ಹೊಸದಾಗಿ ಬಿಡುಗಡೆಯಾಗಿರುವ ಕಿಯಾ ಸೆಲ್ಟೊಸ್‌ನಿಂದ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು 1.4-ಲೀಟರ್ ಪೆಟ್ರೋಲ್ ಟರ್ಬೋ ಎಂಜಿನ್ ಪಡೆದುಕೊಳ್ಳಲಿದೆ.

ಕರೋನಾ ಎಫೆಕ್ಟ್- ನ್ಯೂ ಜನರೇಷನ್ ಕ್ರೆಟಾ ಬಿಡುಗಡೆಯ ವೇಳಾಪಟ್ಟಿಯಲ್ಲಿ ಬದಲಾವಣೆ

ಸ್ಟ್ಯಾಂಡರ್ಡ್ ವೆರಿಯೆಂಟ್‌ಗಳಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಖರೀದಿಗೆ ಲಭ್ಯವಿದ್ದಲ್ಲಿ, ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡಲಾಗುತ್ತಿದೆ.

ಕರೋನಾ ಎಫೆಕ್ಟ್- ನ್ಯೂ ಜನರೇಷನ್ ಕ್ರೆಟಾ ಬಿಡುಗಡೆಯ ವೇಳಾಪಟ್ಟಿಯಲ್ಲಿ ಬದಲಾವಣೆ

1.5-ಲೀಟರ್ ಪೆಟ್ರೋಲ್ ಮಾದರಿಯು 115-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದಲ್ಲಿ 1.5-ಲೀಟರ್ ಡೀಸೆಲ್ ಮಾದರಿಯು 115-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯು 140-ಬಿಎಚ್‌ಪಿ, 242-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಕರೋನಾ ಎಫೆಕ್ಟ್- ನ್ಯೂ ಜನರೇಷನ್ ಕ್ರೆಟಾ ಬಿಡುಗಡೆಯ ವೇಳಾಪಟ್ಟಿಯಲ್ಲಿ ಬದಲಾವಣೆ

ಇದಲ್ಲದೇ ಹೊಸ ಕಾರಿನ ಮುಂಭಾಗದ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಕಾರಿನ ಉದ್ದಳತೆಯಲ್ಲೂ ಹೆಚ್ಚಳ ಮಾಡಲಾಗಿದೆ. ಹೊಸ ಕಾರು ಈ ಬಾರಿ 4,300-ಎಂಎಂ ಉದ್ದ, 1,790-ಎಂಎಂ ಅಗಲ, 1,622-ಎಂಎಂ ಅಗಲ, 2,610-ಎಂಎಂ ವೀಲ್ಹ್ ಬೆಸ್‌ನೊಂದಿಗೆ 17-ಇಂಚಿನ ಚಕ್ರಗಳನ್ನು ಪಡೆದುಕೊಂಡಿದೆ.

ಕರೋನಾ ಎಫೆಕ್ಟ್- ನ್ಯೂ ಜನರೇಷನ್ ಕ್ರೆಟಾ ಬಿಡುಗಡೆಯ ವೇಳಾಪಟ್ಟಿಯಲ್ಲಿ ಬದಲಾವಣೆ

ಈ ಮೂಲಕ ಹೊಸ ಕಾರಿನಲ್ಲಿ ಸಾಕಷ್ಟು ಸ್ಥಳಾವಕಾಶ ಕಲ್ಪಿಸಿರುವ ಹ್ಯುಂಡೈ ಸಂಸ್ಥೆಯು ಸುಧಾರಿತ ಮಾದರಿಯು ಇಂಟಿರಿಯರ್ ಫೀಚರ್ಸ್‌ಗಳನ್ನು ನೀಡಿದ್ದು, 35ಕ್ಕೂ ಹೆಚ್ಚು ಸೆಫ್ಟಿ ಫೀಚರ್ಸ್‌ಗಳನ್ನು ಒಳಗೊಂಡಿರುವ ಬ್ಯೂ ಲಿಂಕ್ ಟೆಕ್ನಾಲಜಿ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವಾರು ಹೊಸ ಸೌಲಭ್ಯಗಳನ್ನು ನೀಡಲಾಗಿದೆ.

ಕರೋನಾ ಎಫೆಕ್ಟ್- ನ್ಯೂ ಜನರೇಷನ್ ಕ್ರೆಟಾ ಬಿಡುಗಡೆಯ ವೇಳಾಪಟ್ಟಿಯಲ್ಲಿ ಬದಲಾವಣೆ

ಜೊತೆಗೆ ಹೊಸ ಕಾರಿನಲ್ಲಿ ಬಿಎಸ್-6 ಎಂಜಿನ್ ಜೋಡಣೆ ಮಾಡಿರುವ ಇಂಧನ ದಕ್ಷತೆ ಹೆಚ್ಚಳವಾಗಿರುವುದಲ್ಲದೆ ಮಾಲಿನ್ಯ ಹೊರಸೂಸುವಿಕೆ ಸಾಕಷ್ಟು ಸುಧಾರಣೆ ಕಂಡಿದ್ದು, ಕಾರಿನ ನೀಡಲಾಗಿರುವ ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 10.50 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.15.50 ಲಕ್ಷ ಪಡೆದುಕೊಂಡಿರಬಹುದೆಂದು ಅಂದಾಜಿಸಲಾಗಿದೆ.

Article Published On: Thursday, March 12, 2020, 15:47 [IST]
English summary
Hyundai Motor has likely to preponed the new generation Creta SUV's India launch event by a day to March 16. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+