ಹೊಸ ಫೀಚರ್ಸ್‍ಗಳನ್ನು ಹೊಂದಲಿದೆ 2020ರ ಹ್ಯುಂಡೈ ಕ್ರೆಟಾ

ಹ್ಯುಂಡೈ ಕಂಪನಿಯು ಇತ್ತೀಚೆಗೆ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಕ್ರೆಟಾ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಇದೀಗ ದೇಶಾದ್ಯಂತವಿರುವ ಹ್ಯುಂಡೈ ಕಂಪನಿಯ ಡೀಲರ್ ಗಳು ಹೊಸ ಕ್ರೆಟಾ ಎಸ್‍ಯುವಿಯನ್ನು ಗ್ರಾಹಕರಿಗೆ ವಿತರಿಸಲು ಆರಂಭಿಸಿದ್ದಾರೆ.

ಹೊಸ ಫೀಚರ್ಸ್‍ಗಳನ್ನು ಹೊಂದಲಿದೆ 2020ರ ಹ್ಯುಂಡೈ ಕ್ರೆಟಾ

2020ರ ಹ್ಯುಂಡೈ ಕ್ರೆಟಾ ಹೊಸ ವಿನ್ಯಾಸವನ್ನು ಹೊಂದಿದೆ. ಮುಂಭಾಗದಲ್ಲಿರುವ ಹ್ಯುಂಡೈನ ಕ್ಯಾಸ್ಕೇಡಿಂಗ್ ಗ್ರಿಲ್ ಹೆಚ್ಚು ಗಮನ ಸೆಳೆದರೂ, ಹೆಡ್‍‍ಲೈಟ್ ಮತ್ತಷ್ಟು ಗಮನ ಸೆಳೆಯುತ್ತದೆ. ಸ್ಪ್ಲಿಟ್ ಹೆಡ್‍‍‍ಲೈಟ್ ಸ್ಲಿಟ್ ರೀತಿಯ ಎಲ್ಇಡಿ ಡಿಆರ್‍ಎಲ್ ಅನ್ನು ಹೊಂದಿದೆ. ಈ ಎಸ್‍ಯುವಿಯ ಹೆಡ್‌ಲೈಟ್ ಕ್ಲಸ್ಟರ್ ಕೆಳಗೆ ಹೊಸ ಲುಕ್‍‍ನ ಫಾಗ್ ಲ್ಯಾಂಪ್‍‍ಗಳಿವೆ. ಬಂಪರ್‍‍ನ ಕೆಳಗೆ ಸ್ಕಫ್ ಪ್ಲೇಟ್‍‍ಗಳಿವೆ. ಸ್ಕ್ವೇರ್ ಶೇಪಿನ ವ್ಹೀಲ್ ಆರ್ಕ್‍‍ಗಳು ಕ್ರೆಟಾಗೆ ಹೆಚ್ಚಿನ ಲುಕ್ ನೀಡುತ್ತವೆ.

ಹೊಸ ಫೀಚರ್ಸ್‍ಗಳನ್ನು ಹೊಂದಲಿದೆ 2020ರ ಹ್ಯುಂಡೈ ಕ್ರೆಟಾ

ಹೊಸ ಕ್ರೆಟಾ ಎಸ್‍ಯುವಿಯ ಬೆಲೆಯು ಭಾರತೀಯ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.99 ಲಕ್ಷ ಬೆಲೆ ಆದರೆ, ಟಾಪ್ ಎಂಡ್ ಮಾದರಿಗೆ ರೂ.17.20 ಲಕ್ಷ ಗಳಾಗಿದೆ. ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಎಸ್‍‍ಯುವಿಯಲ್ಲಿ ಹೊಸ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅಳವಡಿಸಲಾಗಿದೆ. ಈ ಸಿಸ್ಟಂನಲ್ಲಿ ವಾಯ್ಸ್ ಕಮಾಂಡ್ ಹಾಗೂ ಬ್ಲೂಲಿಂಕ್ ಕನೆಕ್ಟಿವಿಟಿ ಫೀಚರ್‍‍ಗಳಿರಲಿವೆ.

ಹೊಸ ಫೀಚರ್ಸ್‍ಗಳನ್ನು ಹೊಂದಲಿದೆ 2020ರ ಹ್ಯುಂಡೈ ಕ್ರೆಟಾ

ಈ ಎಸ್‍‍ಯುವಿಯಲ್ಲಿರುವ ಸನ್‍‍ರೂಫ್ ವಾಯ್ಸ್ ಕಮಾಂಡ್‍‍ನಿಂದ ಚಲಿಸಲಿದೆ. ಆಟೋಮ್ಯಾಟಿಕ್ ಮಾದರಿಗಳಲ್ಲಿ ಪ್ಯಾಡಲ್ ಶಿಫ್ಟ್, ಡ್ಯುಯಲ್ ಹೋಸ್ ಚಿಮ್ನಿ, ರಿಮೋಟ್ ಎಂಜಿನ್ ಸ್ಟಾರ್ಟ್ ಅಪ್, ಕ್ರೂಸ್ ಕಂಟ್ರೋಲ್, ಏರ್ ಪ್ಯೂರಿಫೈಯರ್ ಹಾಗೂ ವೈರ್‍‍ಲೆಸ್ ಚಾರ್ಜರ್‍‍ಗಳಿರಲಿವೆ

ಹೊಸ ಫೀಚರ್ಸ್‍ಗಳನ್ನು ಹೊಂದಲಿದೆ 2020ರ ಹ್ಯುಂಡೈ ಕ್ರೆಟಾ

ಕಿಯಾ ಸೆಲ್ಟೋಸ್ ಎಸ್‍‍ಯುವಿಯಲ್ಲಿರುವಂತಹ ಎಂಜಿನ್ ಆಯ್ಕೆಗಳನ್ನು ಹ್ಯುಂಡೈ ಕ್ರೆಟಾ ಕಾರಿನಲ್ಲಿ ಹೊಂದಿದೆ. ಈ ಎಂಜಿನ್ ಅನ್ನು ಬಿ‍ಎಸ್ 6 ನಿಯಮಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗಿದೆ. ಕ್ರೆಟಾದಲ್ಲಿರುವ 1.5 ಲೀಟರಿನ ಪೆಟ್ರೋಲ್ ಎಂಜಿನ್ 113 ಬಿ‍‍ಹೆಚ್‍‍ಪಿ ಪವರ್ ಮತ್ತು 144 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಫೀಚರ್ಸ್‍ಗಳನ್ನು ಹೊಂದಲಿದೆ 2020ರ ಹ್ಯುಂಡೈ ಕ್ರೆಟಾ

ಇನ್ನು 1.5 ಲೀಟರಿನ ಡೀಸೆಲ್ ಎಂಜಿನ್ 113 ಬಿ‍ಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಕಿಯಾ ಸೆಲ್ಟೋಸ್‍‍ನಲ್ಲಿರುವಂತಹ 1.4 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 138 ಬಿ‍‍ಹೆಚ್‍‍ಪಿ ಪವರ್ ಮತ್ತು 242 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂರು ವಿಧದ ಎಂಜಿನ್‍‍ಗಳಲ್ಲೂ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

ಹೊಸ ಫೀಚರ್ಸ್‍ಗಳನ್ನು ಹೊಂದಲಿದೆ 2020ರ ಹ್ಯುಂಡೈ ಕ್ರೆಟಾ

ಹೊಸ ಹ್ಯುಂಡೈ ಕ್ರೆಟಾ 1.4 ಲೀಟರಿನ ಪೆಟ್ರೋಲ್ ಟರ್ಬೊದೊಂದಿಗೆ ಮೂರು ವಿಭಿನ್ನ ಡ್ರೈವ್ ಮೋಡ್‌ಗಳನ್ನು ನೀಡಲಿದೆ.ಅವುಗಳೆಂದರೆ ಇಕೋ, ಕಂಫರ್ಟ್ ಮತ್ತು ಸ್ಪೋರ್ಟ್ ಮೋಡ್‌ಗಳು ಆಗಿವೆ. ಈ ಕಾರಿನ ಎಂಜಿನ್ ಮತ್ತು ಗೇರ್ ಬಾಕ್ಸ್ ಸೆಟ್ಟೆಂಗ್‍ಗಳೊಂದಿಗೆ ಡಿಜಿಟಲ್ ಸ್ಪೋಡೋಮೀಟರ್ ಅನ್ನು ಅದಕ್ಕೆ ತಕ್ಕಂತೆ ಬದಲಾಯಿಸುತ್ತದೆ.

ಹೊಸ ಫೀಚರ್ಸ್‍ಗಳನ್ನು ಹೊಂದಲಿದೆ 2020ರ ಹ್ಯುಂಡೈ ಕ್ರೆಟಾ

ಇದರೊಂದಿಗೆ ಹೊಸ ಕ್ರೆಟಾ ಎಸ್‍ಯುವಿಯು ಮೂರು ವಿಭಿನ್ನ ಟ್ರಾಕ್ಷನ್ ಕಂಟ್ರೋಲ್ ಮತ್ತು ಟಿಯರಿಯನ್ ಮೋಡ್‌ಗಳನ್ನು ಹೊಂದಲಿದೆ. ಈ ಹೊಸ ತಾಂತ್ರಕ ಸೌಲಭ್ಯದಿಂದಾಗಿ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

ಹೊಸ ಫೀಚರ್ಸ್‍ಗಳನ್ನು ಹೊಂದಲಿದೆ 2020ರ ಹ್ಯುಂಡೈ ಕ್ರೆಟಾ

ಬಿ‍ಎಸ್-6 ಹ್ಯುಂಡೈ ಕ್ರೆಟಾ ಎಸ್‍ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ರೆನಾಲ್ಟ್ ಡಸ್ಟರ್, ಎಂಜಿ ಹೆಕ್ಟರ್ ಹಾಗೂ ಟಾಟಾ ಹ್ಯಾರಿಯರ್‍ ಎಸ್‍ಯುವಿಗಳಿಗೆ ಪೈಪೋಟಿ ನೀಡಲಿದೆ.

Article Published On: Friday, March 27, 2020, 10:33 [IST]
English summary
2020 Hyundai Creta 1.4L Turbo Gets 3 Terrain Modes, 3 Drive Modes As Standard. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+