ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಮುಂದಾದ ಹ್ಯುಂಡೈ
ಹ್ಯುಂಡೈ ಮೋಟರ್ ಇಂಡಿಯಾ ಲಿಮಿಟೆಡ್ ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಹ್ಯುಂಡೈ ಕೋನಾವನ್ನು ಕಳೆದ ವರ್ಷದ ಜುಲೈನಲ್ಲಿ ಬಿಡುಗಡೆಗೊಳಿಸಿತ್ತು. ಬಿಡುಗಡೆಯಾದಾಗಿನಿಂದ ಈ ಎಸ್‌ಯುವಿ ಜನಪ್ರಿಯವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ. ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚುವುದರಲ್ಲಿ ಯಾವುದೇ ಸಂಶಯವಿಲ್ಲ.

ಈ ಹಿನ್ನೆಲೆಯಲ್ಲಿ ಹ್ಯುಂಡೈ ಮೋಟರ್ ಇಂಡಿಯಾ ಲಿಮಿಟೆಡ್ ಭಾರತದಲ್ಲಿರುವ ತನ್ನ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯನ್ನು ವಿಸ್ತರಿಸಲು ಮುಂದಾಗಿದೆ. ದಕ್ಷಿಣ ಕೊರಿಯಾ ಮೂಲದ ಕಾರು ತಯಾರಕ ಕಂಪನಿಯು ಭಾರತಕ್ಕಾಗಿ ಮಾಸ್ ಮಾರ್ಕೆಟ್ ಎಲೆಕ್ಟ್ರಿಕ್ ವಾಹನವನ್ನು ಸಿದ್ದಪಡಿಸುತ್ತಿದೆ.

ಈ ವರ್ಷದ ಆರಂಭದಲ್ಲಿ ಈ ಬಗ್ಗೆ ಮಾತನಾಡಿದ್ದ ಹ್ಯುಂಡೈ ಮೋಟರ್ ಇಂಡಿಯಾ ಲಿಮಿಟೆಡ್‌ನ ನಿರ್ದೇಶಕ ಹಾಗೂ ಸಿಇಒ ಆದ ಸಿಯಾನ್ ಸಿಯೋಬ್ ಕಿಮ್, ಕಂಪನಿಯು ಭಾರತದಲ್ಲಿ ಮಾಸ್ ಮಾರ್ಕೆಟ್ ಎಲೆಕ್ಟ್ರಿಕ್ ವಾಹನವನ್ನು ಸಿದ್ದಪಡಿಸುತ್ತಿದ್ದು, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಕಾರುಗಳನ್ನು ಒದಗಿಸಲಿದೆ ಎಂದು ಹೇಳಿದ್ದರು.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಹ್ಯುಂಡೈನ ಪ್ರತಿಸ್ಪರ್ಧಿ ಕಂಪನಿಗಳು ಸಹ ದೇಶಿಯ ಮಾರುಕಟ್ಟೆಗಾಗಿ ಇದೇ ರೀತಿಯ ವಾಹನಗಳನ್ನು ಸಿದ್ದಪಡಿಸುತ್ತಿವೆ. ಮುಂದಿನ ಎರಡು ವರ್ಷಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ಆಲ್-ಎಲೆಕ್ಟ್ರಿಕ್ ವಾಹನವನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಕಿಮ್ ಹೇಳಿದ್ದಾರೆ.

ಬಹುತೇಕ ಎಲ್ಲಾ ಪ್ರಮುಖ ಕಾರು ತಯಾರಕ ಕಂಪನಿಗಳು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಒಂದೇ ಸಮಯದಲ್ಲಿ ಬಿಡುಗಡೆಗೊಳಿಸುವುದರಿಂದ 2022ರ ವರ್ಷವು ಎಲ್ಲಾ ಕಾರು ತಯಾರಕ ಕಂಪನಿಗಳಿಗೆ ಪ್ರಮುಖವಾದ ವರ್ಷವೆಂದು ಪರಿಗಣಿಸಲಾಗಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಹ್ಯುಂಡೈ ಕಂಪನಿಯು ಭಾರತದ ಗ್ರಾಹಕರಿಗೆ ಮೇಡ್ ಇನ್ ಇಂಡಿಯಾ ಅಭಿಯಾನದಡಿಯಲ್ಲಿ ಕಾರನ್ನು ತಯಾರಿಸಲಿದೆ ಎಂದು ಕಿಮ್ ಹೇಳಿದ್ದಾರೆ. ಇಲ್ಲಿ ತಯಾರಿಸುವ ಕಾರುಗಳನ್ನು ವಿದೇಶಕ್ಕೆ ರಫ್ತು ಮಾಡಲಾಗುವುದು. ಅವುಗಳನ್ನು ಅಲ್ಲಿನ ಪರಿಸರಕ್ಕೆ ಅನುಗುಣವಾಗಿ ಬದಲಾಯಿಸಲಾಗುವುದು.

ಮೂಲಗಳ ಪ್ರಕಾರ, ಕಂಪನಿಯ ಈ ಎಲೆಕ್ಟ್ರಿಕ್ ವಾಹನವು ಎಸ್‌ಯುವಿಯಂತಿರಲಿದೆ. ಈ ವಾಹನವನ್ನು ಕಂಪನಿಯ ಆರ್ಕಿಟೆಕ್ಚರ್ ಆಧಾರದ ಮೇಲೆ ತಯಾರಿಸಲಾಗುವುದು. ಈ ಎಲೆಕ್ಟ್ರಿಕ್ ವಾಹನದ ಬೆಲೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಎಲೆಕ್ಟ್ರಿಕ್ ವಾಹನವು ಪೂರ್ತಿಯಾಗಿ ಚಾರ್ಜ್ ಆದ ನಂತರ 200ರಿಂದ 300ಕಿ.ಮೀಗಳ ಚಲಿಸುವ ಸಾಧ್ಯತೆಗಳಿವೆ.


Click it and Unblock the Notifications