ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ವಿಶೇಷ ಆವೃತ್ತಿ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಹಬ್ಬದ ಸೀಸನ್‌ನಲ್ಲಿ ಮಾರಾಟವನ್ನು ಹೆಚ್ಚಿಸಲು ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಇದು ಮ್ಯಾಗ್ನಾ ವೆರಿಯೆಂಟ್ ಅನ್ನು ಆಧರಿಸಿದೆ.

ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಮಾದರಿಯು ಒಂದು ವಿಶೇಷ ಆವೃತ್ತಿಯಾಗಿದೆ. ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿರಲಿದೆ. ಇನ್ನು ಈ ವಿಶೇಷ ಆವೃತ್ತಿಯ ಬೆಲೆಯ ಬಗ್ಗೆ ಹೇಳುವುದಾದರೆ, ಡೀಸೆಲ್ ಮಾದರಿಯ ಬೆಲೆಯು ರೂ.7.19 ಲಕ್ಷಗಳಾಗಿದೆ. ಇನ್ನು ಪೆಟ್ರೋಲ್ ಮ್ಯಾನುವಲ್ ಮಾದರಿಯ ಬೆಲೆಯು ರೂ.6.11 ಲಕ್ಷಗಳಾದರೆ, ಎಎಂಟಿ ವೆರಿಯೆಂಟ್ ಬೆಲೆ ರೂ.6.64 ಲಕ್ಷಗಳಾಗಿದೆ.

ಮ್ಯಾಗ್ನಾ ನಿಯೋಸ್‌ನಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಕಾರ್ಪೊರೇಟ್ ಮಾದರಿಯು ಕಾರಿನ ಬಾಡಿ ಕಲರಿನ ಒಆರ್‍ವಿಎಂಗಳನ್ನು ಹೊಂದಿದೆ. ಈ ಒಆರ್‍ವಿಎಂಗಳು ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ ಗಳನ್ನು ಹೊಂದಿವೆ. 14 ಇಂಚಿನ ಸ್ಟೀಲ್ ವ್ಹೀಲ್ ಗಳ ಬದಲಿಗೆ 15 ಇಂಚಿನ ಗನ್‌ಮೆಟಲ್ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಈ ಕಾರಿನ ಹಲವು ಭಾಗಗಳಲ್ಲಿ ಕಾರ್ಪೊರೇಟ್ ಬ್ಯಾಡ್ಜಿಂಗ್ ಅಳವಡಿಸಲಾಗಿದೆ. ಈ ಕಾರಿನ ಇನ್ನಿತರ ಹೊರಭಾಗದ ಅಂಶಗಳನ್ನು ಐ10 ನಿಯೋಸ್ ಮ್ಯಾಗ್ನಾದಿಂದ ಎರವಲು ಪಡೆಯಲಾಗಿದೆ. ಹ್ಯುಂಡೈ ಕಂಪನಿಯು ಕಾರ್ಪೊರೇಟ್ ಮಾದರಿಯಲ್ಲಿ ಹಲವಾರು ಬದಲಾವಣೆಗಳನ್ನು ಹಾಗೂ ಅಪ್ಡೇಟ್ ಗಳನ್ನು ಮಾಡಿದೆ.

ಈ ಕಾರಿನಲ್ಲಿ ಮೂಲ 2 ದಿನ್ ಆಡಿಯೊ ಸ್ಟಿರಿಯೊ ಸಿಸ್ಟಂನ ಬದಲಿಗೆ 6.85 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಅಳವಡಿಸಲಾಗಿದೆ. ಈ ಸಿಸ್ಟಂ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಸ್ಮಾರ್ಟ್ ಫೋನ್ ನ್ಯಾವಿಗೇಷನ್ ಹಾಗೂ ಇನ್ನಿತರ ಫೀಚರ್ ಗಳನ್ನು ಹೊಂದಿದೆ. ಈ ಕಾರು ಈ ಸೆಗ್ ಮೆಂಟಿನಲ್ಲಿ ಯಾಂಟಿ ಬ್ಯಾಕ್ಟೀರಿಯಾ ಹಾಗೂ ಯಾಂಟಿ ವೈರಸ್ ಹೊಂದಿರುವ ಮೊದಲ ಕಾರು ಆಗಲಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇದರ ಜೊತೆಗೆ ಹ್ಯುಂಡೈ ಕಂಪನಿಯು ಈ ಕಾರಿನಲ್ಲಿ ಗೆಸ್ಚರ್ ಕಂಟ್ರೋಲ್ ಹಾಗೂ ಹೆಪಾ ಫಿಲ್ಟರ್‌ನೊಂದಿಗೆ ಏರ್ ಪ್ಯೂರಿಫೈಯರ್ ಅನ್ನು ಸಹ ನೀಡುತ್ತಿದೆ. ಈ ಕಾರಿನಲ್ಲಿ ಮ್ಯಾನುವಲ್ ಒಆರ್‌ವಿಎಂಗಳ ಬದಲಿಗೆ ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಒಆರ್‌ವಿಎಂಗಳನ್ನು ಸಹ ನೀಡಲಾಗಿದೆ. ಇದರ ಹೊರತಾಗಿ ಈ ಕಾರಿನಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಎಂಜಿನ್ ನಲ್ಲಿಯೂ ಯಾವುದೇ ಬದಲಾವಣೆಗಳಾಗಿಲ್ಲ. ಈ ವಿಶೇಷ ಆವೃತ್ತಿಯಲ್ಲಿ 1.2-ಲೀಟರಿನ ಪೆಟ್ರೋಲ್ ಹಾಗೂ 1.2-ಲೀಟರಿನ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಇದರಲ್ಲಿ ಪೆಟ್ರೋಲ್ ಎಂಜಿನ್ 82 ಬಿಹೆಚ್‌ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಡೀಸೆಲ್ ಎಂಜಿನ್ 74 ಬಿಹೆಚ್‌ಪಿ ಪವರ್ ಮತ್ತು 190 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಪೆಟ್ರೋಲ್ ಮಾದರಿಯೊಂದಿಗೆ ಎಎಂಟಿ ಯುನಿಟ್ ಅನ್ನು ಜೋಡಿಸಲಾಗಿದೆ. ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಹಬ್ಬದ ಸೀಸನ್ ನಲ್ಲಿ ಮಾರಾಟವನ್ನು ಹೆಚ್ಚಿಸಲು ನೆರವಾಗುಗಬಹುದು.


Click it and Unblock the Notifications








