ಪ್ರೀಮಿಯಂ ಸೌಲಭ್ಯವುಳ್ಳ ಹ್ಯುಂಡೈ ನ್ಯೂ ಜನರೇಷನ್ ಐ20 ವಿಡಿಯೋ ರಿವ್ಯೂ

ಹ್ಯುಂಡೈ ಕಂಪನಿಯು ಪ್ರಮುಖ ಕಾರು ಮಾದರಿಗಳ ಮಾರಾಟದಲ್ಲಿ ಮುಂಚೂಣಿ ಹೊಂದಿದ್ದು, ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಾದ ಐ20 ಮಾರಾಟದಲ್ಲಿ ಹಲವಾರು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಇದೀಗ ಐ20 ಹ್ಯಾಚ್‌ಬ್ಯಾಕ್ ಮಾದರಿಯನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಉನ್ನತೀಕರಿಸಿ ಬಿಡುಗಡೆ ಮಾಡಿದ್ದು, ಭಾರೀ ಬದಲಾವಣೆಗೆಯೊಂದಿಗೆ ರಸ್ತೆಗಿಳಿದಿದೆ.

ಪ್ರೀಮಿಯಂ ಸೌಲಭ್ಯವುಳ್ಳ ಹ್ಯುಂಡೈ ನ್ಯೂ ಜನರೇಷನ್ ಐ20 ವಿಡಿಯೋ ರಿವ್ಯೂ

2008ರಲ್ಲಿ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದ ಹ್ಯುಂಡೈ ಐ20 ಕಾರು ಮಾದರಿಯು ಕಾಲ ಕಾಲಕ್ಕೆ ಹಲವಾರು ಬದಲಾವಣೆಗಳೊಂದಿಗೆ ಗ್ರಾಹಕರ ಆಯ್ಕೆ ಮುಂಚೂಣಿ ಸಾಧಿಸುತ್ತಿದ್ದು, ಇದೀಗ ಮೂರನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ರಸ್ತೆಗಿಳಿದಿದೆ. ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗೆ ವಿವಿಧ ಎಂಜಿನ್ ಆಯ್ಕೆ ಹೊಂದಿರುವ ಹೊಸ ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಆಕರ್ಷಕವಾಗಿದ್ದು, ಬೆಲೆ ಕೂಡಾ ಸ್ಪರ್ಧಾತ್ಮಕವಾಗಿದೆ.

ಆಕರ್ಷಕ ಸ್ಪೋರ್ಟಿ ಲುಕ್ ಮತ್ತು ವಿವಿಧ ಎಂಜಿನ್ ಆಯ್ಕೆಗಳನ್ನು ಹೊಂದಿರುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 11.17 ಲಕ್ಷ ಬೆಲೆ ಹೊಂದಿದ್ದು, ಹ್ಯಾಚ್‌ಬ್ಯಾಕ್ ಪ್ರಿಯರನ್ನು ಮೊದಲ ನೋಟದಲ್ಲೇ ಗಮನಸೆಳೆಯುತ್ತದೆ.

ಪ್ರೀಮಿಯಂ ಸೌಲಭ್ಯವುಳ್ಳ ಹ್ಯುಂಡೈ ನ್ಯೂ ಜನರೇಷನ್ ಐ20 ವಿಡಿಯೋ ರಿವ್ಯೂ

ಹೊಸ ಐ20 ಕಾರಿನಲ್ಲಿ ಹ್ಯುಂಡೈ ಕಂಪನಿಯು ಒಂದು ಡೀಸೆಲ್ ಮತ್ತು ಎರಡು ಪೆಟ್ರೋಲ್ ಎಂಜಿನ್‌ಗಳ ಆಯ್ಕೆ ನೀಡಿದ್ದು, 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮಾದರಿಯು ಡಿಸಿಟಿ ಅಥವಾ ಆರು-ಸ್ಪೀಡಿನ ಐಎಂಟಿ ಟ್ರಾನ್ಸ್ ಮಿಷನ್‌ನೊಂದಿಗೆ 120-ಬಿಹೆಚ್‌ಪಿ ಉತ್ಪಾದಿಸುತ್ತದೆ. 1.2-ಲೀಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಹೊಂದಿರುವ ಎನ್‌ಎ ಕಪ್ಪಾ ಎಂಜಿನ್ ಮಾದರಿಯು ಐದು-ಸ್ಪೀಡಿನ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 83-ಬಿಹೆಚ್‌ಪಿ ಪವರ್ ಉತ್ಪಾದಿಸಲಿದ್ದರೆ, 1.5-ಲೀಟರಿನ ಡೀಸೆಲ್ ಎಂಜಿನ್ ಮಾದರಿಯು ಆರು-ಸ್ಪೀಡಿನ ಮ್ಯಾನ್ಯುವಲ್ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ 100-ಬಿಹೆಚ್‌ಪಿ ಮತ್ತು 240-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಪ್ರೀಮಿಯಂ ಸೌಲಭ್ಯವುಳ್ಳ ಹ್ಯುಂಡೈ ನ್ಯೂ ಜನರೇಷನ್ ಐ20 ವಿಡಿಯೋ ರಿವ್ಯೂ

ಈ ಮೂಲಕ ಸೆಗ್ಮೆಂಟ್ ಇನ್ ಫೀಚರ್ಸ್‌ಗಳಲ್ಲಿ ಪ್ರತಿಸ್ಪರ್ಧಿ ಕಾರುಗಳಿಂತಲೂ ಹೊಸ ಐ20 ಕಾರು ಸಾಕಷ್ಟು ಸುಧಾರಿತ ಅಂಶಗಳನ್ನು ಪಡೆದುಕೊಂಡಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಮಾರುತಿ ಸುಜುಕಿ ಬಲೆನೊ, ಟಾಟಾ ಆಲ್‌ಟ್ರೊಜ್, ಹೋಂಡಾ ಜಾಝ್, ಫೋಕ್ಸ್‌ವ್ಯಾಗನ್ ಪೊಲೊ ಮತ್ತು ರೀಬ್ಯಾಡ್ಜ್ ಮಾದರಿಯಾದ ಟೊಯೊಟಾ ಗ್ಲಾಂಝಾ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.

Article Published On: Thursday, November 12, 2020, 15:19 [IST]
English summary
New Hyundai i20 Review Video Details. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+