2020ರ ಹ್ಯುಂಡೈ ಐ20 ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಹೊಸ ಹ್ಯುಂಡೈ ಐ20 ಕಾರನ್ನು 2020ರ ಜಿನೀವಾ ಮೋಟಾರ್ ಶೋನಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಲಿದೆ. ಇದಕ್ಕೂ ಮೊದಲು ಬಹುನೀರಿಕ್ಷಿತ ಹ್ಯುಂಡೈ ಕಂಪನಿ ಬಹುನಿರೀಕ್ಷಿತ 2020ರ ಐ20 ಕಾರಿನ ಅಧಿಕೃತ ಚಿತ್ರಗಳು ಬಹಿರಂಗವಾಗಿವೆ.

2020ರ ಹ್ಯುಂಡೈ ಐ20 ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಕಳೆದ ವಾರ ಹೊಸ ಐ20 ಕಾರಿನ ಹೊರಭಾಗದ ಚಿತ್ರಗಳು ಬಹಿರಂಗವಾಗಿತ್ತು. ಇದೀಗ ಈ ಕಾರಿನ ಇಂಟಿರಿಯರ್ ಚಿತ್ರಗಳು ಬಹಿರಂಗವಾಗಿದೆ. ಇದರಿಂದಾಗಿ 2020ರ ಹ್ಯುಂಡೈ ಐ20 ಕಾರಿನ ವಿನ್ಯಾಸ ಮತ್ತು ಫೀಚರ್ಸ್‍‍ಗಳ ಮಾಹಿತಿ ಬಹಿರಂಗವಾಗಿದೆ. ಈ ಹೊಸ ಐ20 ಕಾರು ಸಾಕಷ್ಟು ಸ್ಪೋರ್ಟಿಯರ್ ಮತ್ತು ಸ್ಟೈಲಿಶ್ ಲುಕ್ ಅನ್ನು ಹೊಂದಿದೆ. ಐ20 ಹ್ಯುಂಡೈ ಕಂಪನಿಯ ಸರಣಿಯಲ್ಲಿರುವ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.

2020ರ ಹ್ಯುಂಡೈ ಐ20 ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಹೊಸ ಹ್ಯುಂಡೈ ಕಾರಿನ ಇಂಟಿರಿಯರ್‍‍ನಲ್ಲಿ 4 ಸ್ಫೋಕ್ ಸ್ಟೀಟಿಯರಿಂಗ್ ವ್ಹೀಲ್ ಅನ್ನು ಅಳವಡಿಸಲಾಗಿದೆ. ಇದು ಹೊಸ ಹ್ಯುಂಡೈ ಕ್ರೆಟಾ ಕಾರಿನಲ್ಲಿರುವ ಸ್ಟಿಟಿಯರಿಂಗ್ ಮಾದರಿಯಲ್ಲಿದೆ. ಹೊಸ ಹ್ಯುಂಡೈ ಐ20 ಕಾರಿನಲ್ಲಿ ಆಡಿಯೊ ಸಿಸ್ಟಂ, ಕ್ರೂಸ್ ಕಂಟ್ರೋಲ್ ಮತ್ತು ಫುಲ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ ಅನ್ನು ಒಳಗೊಂಡಿದೆ.

2020ರ ಹ್ಯುಂಡೈ ಐ20 ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಈ ಕಾರಿನಲ್ಲಿ 10.25 ಇಂಚಿನ ಡಿಜಿಟಲ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಈ ಕಾರಿನ ಇಂಟಿರಿಯರ್‍‍ನಲ್ಲಿ ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಹ್ಯುಂಡೈನ ಕನೆಕ್ಟಿವಿಟಿ ಸೂಟ್ ಮತ್ತು ಇತರ ಹಲವಾರು ಫೀಚರ್‍‍ಗಳನ್ನು ಹೊಂದಿದೆ. ಯುಎಸ್‌ಬಿ ಪೋರ್ಟ್‌ ಮತ್ತು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಅನ್ನು ಸಹ ಹೊಂದಿದೆ.

2020ರ ಹ್ಯುಂಡೈ ಐ20 ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಕಾರಿನ ಮುಂಭಾಗದಲ್ಲಿ ಹೊಸ ಹನಿಕೊಂಬ್ ಗ್ರಿಲ್ ಅನ್ನು ಹೊಂದಿದೆ. ಈ ಕಾರಿನ ಮ್ಯಾಟ್ ಕಪ್ಪು ಬಣ್ಣವನ್ನು ಹೊಂದಿದೆ. ಹೊಸ ಹ್ಯುಂಡೈ ಐ20 ಕಾರಿನಲ್ಲಿ ಹೊಸ ಕ್ರೆಟಾದಲ್ಲಿರುವಂತಹ ಕ್ಯಾಸ್ಕೇಡಿಂಗ್ ಗ್ರಿಲ್‍ ಅನ್ನು ಹೊಂದಿದೆ.

2020ರ ಹ್ಯುಂಡೈ ಐ20 ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಹೊಸ ಹ್ಯುಂಡೈ ಐ20 ಕಾರಿನಲ್ಲಿ ಎಲ್‍ಇಡಿ ಹೆಡ್‍ಲೈಟ್, ಹೊಸ 16 ಡ್ಯುಯಲ್ ಟೋನ್ ಅಲಾಯ್ ವ್ಹೀಲ್‍‍ಗಳು, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‍‍ಗಳೊಂದಿಗೆ ಸ್ಲಿಕ್ ಒಆರ್‍‍ವಿಎಂಗಳು ಮತ್ತು ಶಾರ್ಕ್ ಫಿನ್ ಆಂಟೆನಾವನ್ನು ಕೂಡ ಆಳವಡಿಸಲಾಗಿದೆ.

2020ರ ಹ್ಯುಂಡೈ ಐ20 ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಬಹಿರಂಗವಾಗಿರುವ ಚಿತ್ರದಲ್ಲಿ 2020ರ ಹ್ಯುಂಡೈ ಐ20 ಕಾರು ನೀಲಿ ಬಣ್ಣವನ್ನು ಹೊಂದಿದೆ. ಹೊಸ ಹುಂಡೈ ಐ20 ಕಾರಿನ ಬದಿಯ ಪಿಲ್ಲರ್‍‍ಗಳು ಕಪ್ಪು ಬಣ್ಣವನ್ನು ಹೊಂದಿದೆ. ಎರಡು ಟೇಲ್‍ ಲ್ಯಾಂಪ್‍‍ಗಳನ್ನು ಅಳವಡಿಸಲಾಗಿದೆ. ವಿಡಬ್ಲ್ಯೂ ಟೈಗನ್‍‍‍ನಲ್ಲಿ ಇರುವಂತಹ ಕೆಂಪು ಇ‍ಲ್‍ಇಡಿ ಡಿಆರ್‍ಎಲ್ ಸ್ಟಾಪ್ ಲೈಟ್ ಹಿಂಭಾಗದಲ್ಲಿ ಟೇಲ್‍‍ಲೈಟ್ ಹೊಂದಿದೆ.

2020ರ ಹ್ಯುಂಡೈ ಐ20 ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಹೊಸ ಐ20 ಕಾರಿನಲ್ಲಿ 1.2 ಲೀಟರಿನ ಬಿ‍ಎಸ್ 6 ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 83 ಬಿ‍‍ಹೆಚ್‍‍ಪಿ ಪವರ್ ಹಾಗೂ 114 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಜೊತೆಗೆ ವೆನ್ಯೂ ಕಾರಿನಲ್ಲಿರುವಂತಹ 1.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಸಹ ಅಳವಡಿಸುವ ಸಾಧ್ಯತೆಗಳಿವೆ.

2020ರ ಹ್ಯುಂಡೈ ಐ20 ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಹೊಸ ಹ್ಯುಂಡೈ ಐ20 ಕಾರು ಬಿಡುಗಡೆಯಾದ ನಂತರ ಮಾರುತಿ ಸುಜುಕಿ ಕಂಪನಿಯ ಬಲೆನೊ, ಫೋರ್ಡ್ ಫ್ರೀ‍‍ಸ್ಟೈಲ್, ಟಾಟಾ ಆಲ್ಟ್ರೋಜ್ ಹಾಗೂ ಹೋಂಡಾ ಜಾಜ್‍ ಕಾರುಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Friday, February 28, 2020, 18:18 [IST]
English summary
Next-gen Hyundai i20 features, design details confirmed. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+