ಹೊಸ ಹ್ಯುಂಡೈ ಐ20 ಎನ್ ಕಾರಿನ ಟೀಸರ್ ಚಿತ್ರ ಬಿಡುಗಡೆ

ಹ್ಯುಂಡೈ ಕಂಪನಿಯು ಹೊಸ ಐ20 ಪ್ರೀಮಿಯಂ ಹ್ಯಾಚ್‍‍ಬ್ಯಾಕ್‍‍ನ ಸ್ಪೋರ್ಟಿಯರ್ ಎನ್ ಆವೃತ್ತಿಯ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಸ್ಪೋರ್ಟಿಯರ್ ಆವೃತ್ತಿಯನ್ನು ಹ್ಯುಂಡೈ ಕಂಪನಿಯು ಈ ವರ್ಷದ ಕೊನೆಯಲ್ಲಿ ಬಿಡುಗಡೆಗೊಳಿಸಬಹುದು.

ಹೊಸ ಹ್ಯುಂಡೈ ಐ20 ಎನ್ ಕಾರಿನ ಟೀಸರ್ ಚಿತ್ರ ಬಿಡುಗಡೆ

ಹೊಸ ಹ್ಯುಂಡೈ ಐ20 ಎನ್ ಕಾರಿನ ಟೀಸರ್ ಬಿಡುಗಡೆಗೊಳಿಸಿರುವುದರಿಂದ ಈ ಆವೃತ್ತಿಯ ಹಲವು ಪ್ರಮುಖ ಮಾಹಿತಿಗಳು ಬಹಿರಂಗವಾಗಿವೆ. ಈ ಮಾಹಿತಿಗಳ ಪ್ರಕಾರ ಐ20 ಎನ್ ಕಾರಿನಲ್ಲಿ ದೊಡ್ಡ ಅಲಾಯ್ ವ್ಹೀಲ್‍‍‍ಗಳನ್ನು ಅಳವಡಿಸಲಾಗಿದೆ. ಈ ಕಾರಿನಲ್ಲಿ ರೂಫ್, ಮೌಂಟಡ್ ಸ್ಪಾಯ್ಲರ್ ಮತ್ತು ಕೆಂಪು ಎಕ್ಸೆಟ್‍‍ಗಳೊಂದಿಗೆ ಸ್ಪೋರ್ಟಿ ಸಿಲ್‍‍ಗಳನ್ನು ಹೊಂದಿದೆ. ಹೊಸ ಹ್ಯುಂಡೈ ಐ20 ಎನ್ ಸ್ಪೋರ್ಟಿಯರ್ ಆವೃತ್ತಿಯು ಆಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಹೊಸ ಹ್ಯುಂಡೈ ಐ20 ಎನ್ ಕಾರಿನ ಟೀಸರ್ ಚಿತ್ರ ಬಿಡುಗಡೆ

ಈ ಹೊಸ ಹ್ಯುಂಡೈ ಎನ್ ಕಾರಿನಲ್ಲಿ 1.6 ಲೀಟರ್ ಡೈರಕ್ಟ್-ಇಂಜೆಕ್ಷನ್ ಟರ್ಬೂ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 200 ಬಿ‍‍ಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಬಹುದು.

ಹೊಸ ಹ್ಯುಂಡೈ ಐ20 ಎನ್ ಕಾರಿನ ಟೀಸರ್ ಚಿತ್ರ ಬಿಡುಗಡೆ

ಹ್ಯುಂಡೈ ಕಂಪನಿಯು ಐ20 ಪೆಟ್ರೋಲ್ ಆವೃತ್ತಿಯನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದೆ. ಈ ಹೊಸ ಹ್ಯುಂಡೈ ಐ20 ಪಟ್ರೋಲ್ ಆವೃತ್ತಿಯನ್ನು ಶೀಘ್ರದಲ್ಲೇ ಹ್ಯುಂಡೈ ಕಂಪನಿಯು ಬಿಡುಗಡೆಗೊಳಿಸುತ್ತದೆ.

ಹೊಸ ಹ್ಯುಂಡೈ ಐ20 ಎನ್ ಕಾರಿನ ಟೀಸರ್ ಚಿತ್ರ ಬಿಡುಗಡೆ

ಸಾಮಾನ್ಯ ಹೊಸ ಹ್ಯುಂಡೈ ಐ20 ಕಾರಿನಲ್ಲಿ ಆಡಿಯೊ ಸಿಸ್ಟಂ, ಕ್ರೂಸ್ ಕಂಟ್ರೋಲ್ ಮತ್ತು ಫುಲ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ ಅನ್ನು ಒಳಗೊಂಡಿದೆ. ಈ ಕಾರಿನಲ್ಲಿ 10.25 ಇಂಚಿನ ಡಿಜಿಟಲ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಈ ಕಾರಿನ ಇಂಟಿರಿಯರ್‍‍ನಲ್ಲಿ ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಹ್ಯುಂಡೈನ ಕನೆಕ್ಟಿವಿಟಿ ಸೂಟ್ ಮತ್ತು ಇತರ ಹಲವಾರು ಫೀಚರ್‍‍ಗಳನ್ನು ಅಳವಡಿಸಲಾಗಿದೆ.

ಹೊಸ ಹ್ಯುಂಡೈ ಐ20 ಎನ್ ಕಾರಿನ ಟೀಸರ್ ಚಿತ್ರ ಬಿಡುಗಡೆ

ಎರಡು ಟೇಲ್‍ ಲ್ಯಾಂಪ್‍‍ಗಳನ್ನು ಅಳವಡಿಸಲಾಗಿದೆ. ವಿಡಬ್ಲ್ಯೂ ಟೈಗನ್‍‍‍ನಲ್ಲಿ ಇರುವಂತಹ ಕೆಂಪು ಇ‍ಲ್‍ಇಡಿ ಡಿಆರ್‍ಎಲ್ ಸ್ಟಾಪ್ ಲೈಟ್ ಹಿಂಭಾಗದಲ್ಲಿ ಟೇಲ್‍‍ಲೈಟ್ ಹೊಂದಿದೆ. ಹೊಸ ಐ20 ಕಾರಿನಲ್ಲಿ 1.2 ಲೀಟರಿನ ಬಿ‍ಎಸ್ 6 ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು.

ಹೊಸ ಹ್ಯುಂಡೈ ಐ20 ಎನ್ ಕಾರಿನ ಟೀಸರ್ ಚಿತ್ರ ಬಿಡುಗಡೆ

ಹೊಸ ಸಾಮಾನ್ಯ ಐ20 ಕಾರಿನಲ್ಲಿ 1.2 ಲೀಟರಿನ ಬಿ‍ಎಸ್ 6 ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 83 ಬಿ‍‍ಹೆಚ್‍‍ಪಿ ಪವರ್ ಹಾಗೂ 114 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಜೊತೆಗೆ ವೆನ್ಯೂ ಕಾರಿನಲ್ಲಿರುವಂತಹ 1.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಸಹ ಅಳವಡಿಸುವ ಸಾಧ್ಯತೆಗಳಿವೆ.

ಹೊಸ ಹ್ಯುಂಡೈ ಐ20 ಎನ್ ಕಾರಿನ ಟೀಸರ್ ಚಿತ್ರ ಬಿಡುಗಡೆ

ಹ್ಯುಂಡೈ ಐ20 ಎನ್ ಕಾರನ್ನು ಮುಂದಿನ ತಿಂಗಳುಗಳಲ್ಲಿ ಜಾಗತಿಕ ಮಟ್ಟದಲ್ಲಿ ಬಿಡುಗಡೆಗೊಳಿಸಬಹುದು. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಐ20 ಎನ್ ಕಾರನ್ನು ಬಿಡುಗಡೆಗೊಳಿಸಬಹುದು.

Article Published On: Friday, March 6, 2020, 11:53 [IST]
English summary
New Hyundai i20 N teased ahead of unveil. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+