ಡೀಲರ್ ಬಳಿ ಕಾಣಿಸಿಕೊಂಡ ಹೊಸ ಹ್ಯುಂಡೈ ಟಕ್ಸನ್ ಫೇಸ್‍‍ಲಿಫ್ಟ್ ಎಸ್‍ಯುವಿ

ಹುಂಡೈ ಕಂಪನಿಯು ತನ್ನ ಹೊಸ ಟಕ್ಸನ್ ಫೇಸ್‍‍ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹ್ಯುಂಡೈ ಟಕ್ಸನ್ ಫೇಸ್‍‍ಲಿಫ್ಟ್ ಎಸ್‍ಯುವಿಯು ಭಾರತದಲ್ಲಿ ಇದೇ ತಿಂಗಳ 14 ರಂದು ಬಿಡುಗಡೆಯಾಗಲಿದೆ.

ಡೀಲರ್ ಬಳಿ ಕಾಣಿಸಿಕೊಂಡ ಹೊಸ ಹ್ಯುಂಡೈ ಟಕ್ಸನ್ ಫೇಸ್‍‍ಲಿಫ್ಟ್ ಎಸ್‍ಯುವಿ

2020ರ ಆಟೋ ಎಕ್ಸ್ ಪೋದಲ್ಲಿ ಎರಡನೇ ತಲೆಮಾರಿನ ಟಕ್ಸನ್ ಫೇಸ್‍‍ಲಿಫ್ಟ್ ಎಸ್‍‍ಯುವಿಯನ್ನು ಪ್ರದರ್ಶಿಸಲಾಗಿತ್ತು. ಹ್ಯುಂಡೈ ಕಂಪನಿಯು ಸಾಂಟಾ ಎಫ್‍‍ಇ ಕಾರ್ ಅನ್ನು ಸ್ಥಗಿತಗೊಳಿಸಿದ ನಂತರ ಟಕ್ಸನ್ ಕಾರು ಹ್ಯುಂಡೈನ ಪ್ರಮುಖ ಎಸ್‍‍ಯುವಿಯಾಗಿದೆ. 2020ರ ಹೊಸ ಹ್ಯುಂಡೈ ಟಕ್ಸನ್ ಎಸ್‍‍ಯುವಿಯ ಬುಕ್ಕಿಂಗ್ ಅನ್ನು ಆರಂಭಿಸಲಾಗಿದೆ. ಇದೀಗ ಈ ಹೊಸ ಹ್ಯುಂಡೈ ಟಕ್ಸನ್ ಫೇಸ್‍‍ಲಿಫ್ಟ್ ಎಸ್‍ಯುವಿಯು ಡೀಲರ್ ಬಳಿ ತಲುಪಲು ಪ್ರಾರಂಭವಾಗಿದೆ. ಯುಟ್ಯೂಬ್ ಚಾನೆಲ್ ಒಂದು ಈ ಹೊಸ ಹ್ಯುಂಡೈ ಟಕ್ಸ್ನ್ ಫೇಸ್‍‍ಲಿಫ್ಟ್ ಎಸ್‍ಯುವಿಯ ವಾಕ್ ರೌಂಡ್ ವೀಡಿಯೋವನ್ನು ಬಿಡುಗಡೆಗೊಳಿಸಿದೆ.

ಡೀಲರ್ ಬಳಿ ಕಾಣಿಸಿಕೊಂಡ ಹೊಸ ಹ್ಯುಂಡೈ ಟಕ್ಸನ್ ಫೇಸ್‍‍ಲಿಫ್ಟ್ ಎಸ್‍ಯುವಿ

ಇನ್ನು ಇದು ಫೇಸ್‍‍ಲಿಫ್ಟ್ ಆವೃತ್ತಿಯಾಗಿರುವ ಕಾರಣಕ್ಕೆ ಈ ಎಸ್‍‍ಯುವಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಎಸ್‍‍ಯುವಿಯ ಮುಂಭಾಗ ಹಾಗೂ ಹಿಂಭಾಗದಲ್ಲಿರುವ ಬಂಪರ್‍, ಪೆಂಟಾ ಎಲ್‍ಇ‍‍ಡಿ ಪ್ರೊಜೆಕ್ಟರ್ ಹೆಡ್‍‍ಲೈಟ್ ಯುನಿಟ್, ಎಲ್‍ಇ‍‍ಡಿ ಟೇಲ್‍‍ಲೈಟ್, 18 ಇಂಚಿನ ಡೈಮಂಡ್ ಕಟ್ ವ್ಹೀಲ್‍‍ಗಳನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಡೀಲರ್ ಬಳಿ ಕಾಣಿಸಿಕೊಂಡ ಹೊಸ ಹ್ಯುಂಡೈ ಟಕ್ಸನ್ ಫೇಸ್‍‍ಲಿಫ್ಟ್ ಎಸ್‍ಯುವಿ

ಇನ್ನು ಹೊಸ ಟಕ್ಸನ್ ಫೇಸ್‍‍ಲಿಫ್ಟ್ ಎಸ್‍‍ಯುವಿಯ ಒಳಭಾಗದಲ್ಲಿ 10 ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, 8ವೇ ಪವರ್ಡ್ ಕೋ ಪ್ಯಾಸೆಂಜರ್ ಸೀಟ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಬ್ಲೂ ಲಿಂಕ್ ಕನೆಕ್ಟಿವಿಟಿ, ವೈರ್‍‍ಲೆಸ್ ಚಾರ್ಜಿಂಗ್, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಹೊಂದಿರುವ 8 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂಗಳಿವೆ.

ಡೀಲರ್ ಬಳಿ ಕಾಣಿಸಿಕೊಂಡ ಹೊಸ ಹ್ಯುಂಡೈ ಟಕ್ಸನ್ ಫೇಸ್‍‍ಲಿಫ್ಟ್ ಎಸ್‍ಯುವಿ

ಇದರ ಜೊತೆಗೆ ಹ್ಯುಂಡೈನ ಐಬ್ಲೂ ಹಾಗೂ ವಾಯ್ಸ್ ಕಮಾಂಡ್‍‍ಗಳಿವೆ. ಕ್ಯಾಬಿನ್‍‍ನಲ್ಲಿ ಎಸಿ ವೆಂಟ್‍‍ಗಳನ್ನು ಹೊಂದಿರುವ ಡ್ಯುಯಲ್ ಟೋನ್ ಡ್ಯಾಶ್‍‍ಬೋರ್ಡ್‍‍ಗಳನ್ನು ನೀಡಲಾಗಿದೆ. ಹೊಸ ಎಸ್‍‍ಯುವಿ 360 ಡಿಗ್ರಿಯ ಕ್ಯಾಮರಾ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಹಾಗೂ ಪನೋರಾಮಿಕ್ ಸನ್‍‍ರೂಫ್‍‍ಗಳನ್ನು ಹೊಂದಿದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಡೀಲರ್ ಬಳಿ ಕಾಣಿಸಿಕೊಂಡ ಹೊಸ ಹ್ಯುಂಡೈ ಟಕ್ಸನ್ ಫೇಸ್‍‍ಲಿಫ್ಟ್ ಎಸ್‍ಯುವಿ

ಹೊಸ ಹ್ಯುಂಡೈ ಟಕ್ಸನ್ ಫೇಸ್‍‍ಲಿಫ್ಟ್ ಎಸ್‍‍ಯುವಿಯನ್ನು ಜಿ‍ಎಲ್ 2 ಡಬ್ಲ್ಯುಡಿ, ಜಿ‍ಎಲ್‍ಎಸ್ 2 ಡಬ್ಲ್ಯುಡಿ ಹಾಗೂ ಜಿ‍ಎಲ್‍ಎಸ್ 4 ಡಬ್ಲ್ಯುಡಿ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಜಿಎಲ್ ಹಾಗೂ ಜಿ‍ಎಲ್‍ಎಸ್ ಮಾದರಿಗಳನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ನಲ್ಲಿ ಮಾರಾಟ ಮಾಡಲಾಗುವುದು.

ಡೀಲರ್ ಬಳಿ ಕಾಣಿಸಿಕೊಂಡ ಹೊಸ ಹ್ಯುಂಡೈ ಟಕ್ಸನ್ ಫೇಸ್‍‍ಲಿಫ್ಟ್ ಎಸ್‍ಯುವಿ

ಈ ಎಸ್‍‍ಯುವಿಯಲ್ಲಿ ಇಕೊ, ಸ್ಮಾರ್ಟ್ ಹಾಗೂ ಪ್ರೊ ಎಂಬ ಮೂರು ವಿಧದ ಡ್ರೈವಿಂಗ್ ಮೋಡ್‍‍ಗಳಿವೆ. ಹೊಸ ಟಕ್ಸನ್ ಎಸ್‍‍ಯುವಿ ಪಾರ್ಕಿಂಗ್ ಸೆನ್ಸಾರ್, ಇ‍ಎಸ್‍‍ಸಿ, ಹಿಲ್ ಡಿಸೆಂಟ್ ಕಂಟ್ರೋಲ್, ಹಿಲ್ ಅಸಿಸ್ಟ್, ಪಡಲ್ ಲ್ಯಾಂಪ್, ಕಾರ್ನರಿಂಗ್ ಲ್ಯಾಂಪ್, ಪವರ್ಡ್ ಟೇಲ್‍‍ಗೇಟ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಹಾಗೂ ಡೈನಾಮಿಕ್ ಸ್ಟಾಬಿಲಿಟಿ ಕಂಟ್ರೋಲ್‍‍ನಂತಹ ಹಲವಾರು ಫೀಚರ್‍‍ಗಳನ್ನು ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಡೀಲರ್ ಬಳಿ ಕಾಣಿಸಿಕೊಂಡ ಹೊಸ ಹ್ಯುಂಡೈ ಟಕ್ಸನ್ ಫೇಸ್‍‍ಲಿಫ್ಟ್ ಎಸ್‍ಯುವಿ

2020ರ ಹ್ಯುಂಡೈ ಟಕ್ಸನ್ ಫೇಸ್‍‍ಲಿಫ್ಟ್ 2.0 ಲೀಟರಿನ ಟರ್ಬೊ‍‍ಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 182 ಬಿ‍‍ಹೆಚ್‍‍ಪಿ ಪವರ್ ಹಾಗೂ 400 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು 2.0 ಲೀಟರಿನ ಪೆಟ್ರೋಲ್ ಎಂಜಿನ್ 150 ಬಿ‍‍ಹೆಚ್‍‍ಪಿ ಪವರ್ ಹಾಗೂ 192 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಡೀಲರ್ ಬಳಿ ಕಾಣಿಸಿಕೊಂಡ ಹೊಸ ಹ್ಯುಂಡೈ ಟಕ್ಸನ್ ಫೇಸ್‍‍ಲಿಫ್ಟ್ ಎಸ್‍ಯುವಿ

ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಜೋಡಿಸಲಾಗಿದೆ. ಯಾವುದೇ ಮಾದರಿಗಳಲ್ಲೂ ಮ್ಯಾನುವಲ್ ಟ್ರಾನ್ಸ್ ಮಿಷನ್ ನೀಡುತ್ತಿಲ್ಲ. ಇನ್ನು ಬಿ‍ಎಸ್ 6 ಎಂಜಿನ್ 2020ರ ಹ್ಯುಂಡೈ ಟಕ್ಸನ್ ಫೇಸ್‍‍ಲಿಫ್ಟ್ ಎಸ್‍‍ಯುವಿಯ ಬೆಲೆಯು ಬಿ‍ಎಸ್ 4 ಆವೃತ್ತಿಗೆ ಹೆಚ್ಚಾಗಿರಲಿದೆ ಎಂದು ನಿರೀಕ್ಷಿಸುತ್ತೇವೆ.

Article Published On: Tuesday, July 7, 2020, 10:09 [IST]
English summary
2020 Hyundai Tucson Facelift Arrives At Dealer. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+